ರಾಜಸ್ಥಾನದ ಧೋಲ್ಪುರ್ ಜಿಲ್ಲೆಯ ಸರ್ಮಥುರಾದಿಂದ ಸ್ಯಾಂಡ್‌ಸ್ಟೋನ್, ರಾಜಸ್ಥಾನದ ಜೈಸಲ್ಮೇರ್‌ನ ಲಾಖಾ ಗ್ರಾಮದ ಗ್ರಾನೈಟ್ ಕಲ್ಲುಗಳನ್ನು ಹೊಸ ಸಂಸತ್ತಿನ ವಿವಿಧ ರಚನೆಗಳ ಬಾಹ್ಯ ಮತ್ತು ಆಂತರಿಕ ಪದರವನ್ನು ಅಭಿವೃದ್ಧಿಪಡಿಸಲು ಬಳಸಲಾಗಿದೆ.
ಹೊಸ ಸಂಸತ್ತಿಗೆ ಬಳಸಲಾಗಿರುವ ಮರಗಳನ್ನು ಬಹುತೇಕ ನಾಗ್ಪುರದಿಂದ ತರಲಾಗಿದೆ. ಮತ್ತು ಮರದ ವಾಸ್ತುಶಿಲ್ಪದ ವಿನ್ಯಾಸವನ್ನು ಮುಂಬೈ, ಮಹಾರಾಷ್ಟ್ರದ ಕುಶಲಕರ್ಮಿಗಳು ಮಾಡಿದ್ದಾರೆ. ಆಯಾ ರಾಜ್ಯಗಳ ಮರಗಳ ಕರಕುಶಲತೆಯನ್ನು ಇವರು ಮಾಡಿದ್ದಾರೆ.
ಹೊಸ ಸಂಸತ್ತಿನ ಕಟ್ಟಡದ ನೆಲಕ್ಕೆ ಉತ್ತರ ಪ್ರದೇಶದ ಭದೋಹಿಯಿಂದ ಕೈಯಿಂದಲೇ ಗಂಟುಹಾಕಿ ರಚಿತವಾದ ಕಾರ್ಪೆಟ್‌ಗಳನ್ನು ಹಾಸಲಾಗಿದೆ. ಸುಂದರವಾದ ಕೈಯಿಂದ ಗಂಟು ಹಾಕಿದ ರತ್ನಗಂಬಳಿಗಳಿಗೆ ಈ ಪ್ರದೇಶ ಜನಪ್ರಿಯವಾಗಿದೆ, ಇದನ್ನು 'ಕಾರ್ಪೆಟ್ ಸಿಟಿ' ಎಂದೇ ಕರೆಯಲಾಗುತ್ತದೆ.
2026ರಲ್ಲಿ ದೇಶದಲ್ಲಿ ಲೋಕಸಭಾ ಸೀಟುಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಹಳೆದ ಸಂಸತ್ ಭವನದಲ್ಲಿ ಕೇವಲ 545 ಸದಸ್ಯರಿಗಷ್ಟೇ ಆಸನಗಳ ವ್ಯವಸ್ಥೆ ಇದೆ. ಆದರೆ, ಭವಿಷ್ಯದ ದೃಷ್ಟಿಯಲ್ಲಿಟ್ಟುಕೊಂಡು ಹೊಸ ಭವನದಲ್ಲಿ ಸೀಟುಗಳ ಸಂಖ್ಯೆಯನ್ನು ಗಣನೀಯವಾಗಿ ಏರಿಲಾಗಿದೆ.
ಹೊಸ ಸಂಸತ್ ಭವನಕ್ಕಾಗಿ ಒಟ್ಟು 74,033 ಮೆಟ್ರಿಕ್ ಟನ್‌ಗಳಷ್ಟು ಸ್ಟೀಲ್‌ಗಳನ್ನು ಬಳಸಿಕೊಳ್ಳಲಾಗಿದ್ದು, ಟಾಟಾ ಪ್ರಾಜೆಕ್ಟ್ಸ್ ಇದರ ನಿರ್ಮಾಣ ಮಾಡಿದೆ.
ಬಿಮಲ್ ಪಟೇಲ್ ಹೊಸ ಸಂಸತ್ತಿನ ಮುಖ್ಯ ವಿನ್ಯಾಸಕಾರ. ಹೊಸ ಸಂಸತ್ ಭವನ ತ್ರಿಭುಜಾಕೃತಿಯಲ್ಲಿದ್ದು, ಕಳೆದ ಸಂಸತ್ ಭವನಕ್ಕಿಂತ ಶೇ. 10ರಷ್ಟು ಚಿಕ್ಕದಾಗಿದೆ.
ಹೊಸ ಸಂಸತ್ ಭವನದಲ್ಲಿ ಒಟ್ಟು 1272 ಸೀಟ್‌ಗಳು ಇರಲಿವೆ. ಲೋಕಸಭೆಗೆ 888 ಸ್ಥಾನಗಳು ಮೀಸಲಾಗಿದ್ದರೆ, ರಾಜ್ಯಸಭೆಗೆ 384 ಸ್ಥಾನ ಮೀಸಲಾಗಿದೆ.
ಒಟ್ಟಾರೆ ಹೊಸ ಸಂಸತ್ ಭವನವನ್ನು ಕಟ್ಟಲು ಕೇಂದ್ರ ಸರ್ಕಾರ 862 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಮುಂದಿನ 150 ವರ್ಷ ಇದು ಬಳಕೆಗೆ ಯೋಗ್ಯವಾಗುವಂತೆ ನಿರ್ಮಾಣವಾಗಿದೆ.
20 ಸಾವಿರ ಕೋಟಿ ರೂಪಾಯಿಯ ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್‌ನಲ್ಲಿ ಈಗಾಗಲೇ ಕರ್ತವ್ಯಪಥ ನವೀಕರಣ, ಹೊಸ ಸಂಸತ್ ಕಟ್ಟಡ ನಿರ್ಮಾಣ ಪೂರ್ತಿಯಾಗಿದೆ. ಸಂಯಕ್ತ ಕೇಂದ್ರ ಕಾರ್ಯಾಲಯ, ರಾಷ್ಟ್ರೀಯ ಮ್ಯೂಸಿಯಂ, ನ್ಯಾಷನಲ್ ಆರ್ಕೈವ್ಸ್ ಆಫ್ ಇಂಡಿಯಾ ಹಾಗೂ ಇಗ್ನಾದ ಕೆಲಸಗಳು ಇನ್ನೂ ಬಾಕಿ ಉಳಿದಿದೆ.