25 ಕೆಜಿ ಚಿನ್ನ ಕಳ್ಳ ಸಾಗಾಣೆ ಮಾಡುವಾಗ ಸಿಕ್ಕಿಬಿದ್ರೂ ಬಂಧನವಾಗದ ಅಫ್ಘಾನ್‌ ರಾಯಭಾರಿ!

By Santosh NaikFirst Published May 4, 2024, 5:49 PM IST
Highlights

ಬರೋಬ್ಬರಿ 25 ಕೆಜಿ ಚಿನ್ನವನ್ನು ಕಳ್ಳಸಾಗಾಣೆ ಮಾಡುವಾಗ ಅಫ್ಘಾನಿಸ್ತಾನದ ರಾಯಭಾರಿ ಮುಂಬೈ ಏರ್ಪೋರ್ಟ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ. ಹಾಗಿದ್ದರೂ ಅವರನ್ನು ಬಂಧಿಸಲು ಭಾರತದ ಅಧಿಕಾರಿಗಳಿಗೆ ಸಾಧ್ಯವಾಗಲಿಲ್ಲ.
 

ಮುಂಬೈ (ಮೇ.4): ಇಸ್ಲಾಮಿಕ್ ರಿಪಬ್ಲಿಕ್ ಆಫ್ ಅಫ್ಘಾನಿಸ್ತಾನದ ಕಾನ್ಸಲ್ ಜನರಲ್ ಝಕಿಯಾ ವಾರ್ಡಕ್ ಅವರು ದುಬೈನಿಂದ ಭಾರತಕ್ಕೆ ₹ 18.6 ಕೋಟಿ ಮೌಲ್ಯದ 25 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿರುವಾಗ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ) ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಏಪ್ರಿಲ್ 25 ರಂದು ಮುಂಬೈ ವಿಮಾನ ನಿಲ್ದಾಣದಲ್ಲಿ ವಾರ್ಡಕ್ ಸಿಕ್ಕಿಬಿದ್ದ ಘಟನೆ ನಡೆದಿದೆ. ವರದಿಯ ಪ್ರಕಾರ, DRI ಅಧಿಕಾರಿಗಳು ವಾರ್ಡಕ್ ಚಿನ್ನ ಕಳ್ಳ ಸಾಗಾಣೆ ಮಾಡುತ್ತಿರುವ ಬಗ್ಗೆ ನಿರ್ದಿಷ್ಟ ಮಾಹಿತಿಯನ್ನು ಪಡೆದಿದ್ದರು. ನಂತರ ಅವರನ್ನು ಹಿಡಿಯುವ ಸಲುವಾಗಿಯೇ ವಿಮಾನ ನಿಲ್ದಾಣದಲ್ಲಿ ಹಲವಾರು ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದರು. ಅಫ್ಘಾನ್ ರಾಜತಾಂತ್ರಿಕ ಅಧಿಕಾರಿಯಾಗಿರುವ ಝಕಿಯಾ ವಾರ್ಡಕ್‌, ಸಂಜೆ 5:45 ರ ಸುಮಾರಿಗೆ ತನ್ನ ಮಗನೊಂದಿಗೆ ಎಮಿರೇಟ್ಸ್ ವಿಮಾನದಲ್ಲಿ ದುಬೈನಿಂದ ಮುಂಬೈಗೆ ಪ್ರಯಾಣ ಮಾಡಿದ್ದರು. ತಾಯಿ-ಮಗ ಜೋಡಿಯು ವಿಮಾನ ನಿಲ್ದಾಣದಲ್ಲಿ ಗ್ರೀನ್‌ ಚಾನೆಲ್‌ಅನ್ನು ಬಳಸಿಕೊಂಡಿದ್ದರು. ಗ್ರೀನ್‌ ಚಾನೆಲ್‌ ಬಳಸಿಕೊಂಡು ಪ್ರಯಾಣ ಮಾಡಿದಲ್ಲಿ, ಅವರು ಕಸ್ಟಮ್ಸ್‌ ಅಧಿಕಾರಿಗೆ ಘೋಷಿಸಬೇಕಾದ ಯಾವುದೇ ಸಾಮಾನುಗಳನ್ನು ಸಾಗಿಸುತ್ತಿಲ್ಲ ಎಂದು ಸೂಚನೆ ನೀಡುತ್ತದೆ.

ಇಬ್ಬರ ಲಗೇಜ್‌ಗಳಲ್ಲಿ ಐದು ಟ್ರಾಲಿ ಬ್ಯಾಗ್‌ಗಳು, ಒಂದು ಕೈಚೀಲ, ಒಂದು ಸ್ಲಿಂಗ್ ಬ್ಯಾಗ್ ಮತ್ತು ಕುತ್ತಿಗೆಯ ದಿಂಬುಅನ್ನು ಪರೀಕ್ಷೆ ಮಾಡಿ ತೆರವುಗೊಳಿಸಲಾಗಿತ್ತು. ಆದಾಗ್ಯೂ, ಸ್ವಲ್ಪ ಸಮಯದ ನಂತರ, DRI ಅಧಿಕಾರಿಗಳು ತಮ್ಮೊಂದಿಗೆ ಯಾವುದೇ ಸುಂಕದ ಸರಕು ಅಥವಾ ಚಿನ್ನವನ್ನು ಸಾಗಿಸುತ್ತಿದ್ದಾರೆಯೇ ಎಂದು ಕೇಳಲು ಅವರನ್ನು ತಡೆದರು, ಆದರೆ ಇಬ್ಬರೂ ಅದನ್ನು ನಿರಾಕರಿಸಿದರು.

ಇದರ ನಂತರ, ಮಹಿಳಾ ಅಧಿಕಾರಿಯೊಬ್ಬರು ವಾರ್ಡಕ್ ಅವರನ್ನು ದೈಹಿಕ ಪರೀಕ್ಷೆಗಾಗಿ ಪ್ರತ್ಯೇಕ ಕೋಣೆಗೆ ಕರೆದೊಯ್ದರು. ಈ ಸಮಯದಲ್ಲಿ DRI ಅಧಿಕಾರಿಗಳು ಆಕೆಯ ಜಾಕೆಟ್, ಲೆಗ್ಗಿಂಗ್ಸ್, ಮೊಣಕಾಲು ಕ್ಯಾಪ್ಗಳು ಮತ್ತು ಸೊಂಟದ ಬೆಲ್ಟ್ನಲ್ಲಿ ಚಿನ್ನದ ಕಡ್ಡಿಗಳನ್ನು ಇದ್ದಿದ್ದನ್ನು ಪತ್ತೆ ಮಾಡಿದ್ದಾರೆ. ಅಧಿಕಾರಿಗಳು ಆಕೆಯ ಮಗನನ್ನೂ ಪರಿಶೀಲನೆ ಮಾಡಿದ್ದಾರೆ. ಆದರೆ, ಆತನ ಬಳಿ ಏನೂ ಕಂಡುಬಂದಿಲ್ಲ ಎಂದು ವರದಿ ತಿಳಿಸಿದೆ.

Viral Video: ಹೂವಿಗೆ ಮತ ಹಾಕ್ತೇನೆ ಎಂದ ಅಜ್ಜಿಯ ಕೆನ್ನೆಗೆ ಹೊಡೆದ ಕಾಂಗ್ರೆಸ್‌ ಅಭ್ಯರ್ಥಿ!

ಆಫ್ಘನ್‌ ರಾಜತಾಂತ್ರಿಕರಿಗೆ ಚಿನ್ನದ ಕಾನೂನುಬದ್ಧ ಸ್ವಾಧೀನವನ್ನು ಸಾಬೀತುಪಡಿಸುವ ದಾಖಲೆಗಳನ್ನು ನೀಡುವಂತೆ ಕೇಳಲಾಯಿತು, ಆದರೆ ಅವರು ಅದನ್ನು ನೀಡಲು ಸಾಧ್ಯವಾಗಲಿಲ್ಲ. ವರದಿಯ ಪ್ರಕಾರ, ಅಧಿಕಾರಿಗಳು ‘ಪಂಚನಾಮ’ ಅಡಿಯಲ್ಲಿ ಚಿನ್ನವನ್ನು ವಶಪಡಿಸಿಕೊಂಡರು ಮತ್ತು ಅಫ್ಘಾನ್ ರಾಜತಾಂತ್ರಿಕರ ವಿರುದ್ಧ ಕಸ್ಟಮ್ಸ್ ಆಕ್ಟ್, 1962 ರ ಅಡಿಯಲ್ಲಿ ಚಿನ್ನದ ಕಳ್ಳಸಾಗಣೆ ಪ್ರಕರಣವನ್ನು ದಾಖಲು ಮಾಡಿದ್ದಾರೆ. ಇದರ ಹೊರತಾಗಿಯೂ, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಅಫ್ಘಾನಿಸ್ತಾನದಿಂದ ವಾರ್ಡಕ್ ರಾಜತಾಂತ್ರಿಕ ವಿನಾಯಿತಿ ಹೊಂದಿರುವ ಕಾರಣ ಅವರನ್ನು ಬಂಧಿಸಲಾಗಿಲ್ಲ. ಇದರ ನಡುವೆ, ವಾರ್ದಕ್‌ ಅವರು ಚಿನ್ನದ ಕಳ್ಳಸಾಗಣೆ ಆರೋಪಗಳಿಂದ "ಆಶ್ಚರ್ಯ" ಮತ್ತು "ಚಿಂತಿತರಾಗಿದ್ದಾನೆ' ಎಂದು ಹೇಳಿದ್ದಾರೆ.

ಪ್ರಜ್ವಲ್‌ ರೇವಣ್ಣಗೆ ಬ್ಲ್ಯೂ ಕಾರ್ನರ್‌ ನೋಟಿಸ್‌ ಇಶ್ಯು ಮಾಡಲಿರುವ ಸಿಬಿಐ?

click me!