ಮಧ್ಯರಾತ್ರಿಯಲ್ಲಿ ಏನಾದರೂ ತಿನ್ನಲೇಬೇಕೆಂಬ ಕಡು ಬಯಕೆ ಹೆಚ್ಚಾಗೋದು ಯಾಕೆ ಗೊತ್ತಾ?

First Published | May 24, 2023, 6:00 PM IST

ರಾತ್ರಿಯಲ್ಲಿ ಇದ್ದಕ್ಕಿದ್ದಂತೆ ನಿಮಗೆ ತುಂಬಾನೆ ಹಸಿವಾಗ್ತಿದೆಯೇ?  ಫಾಸ್ಟ್ ಫುಡ್, ಚಿಪ್ಸ್ ಮತ್ತು ಚಾಕೊಲೇಟ್ಗಳನ್ನು ತಿನ್ನುವ ಮೂಲಕ ನಿಮ್ಮ ಹಸಿವನ್ನು ಪೂರೈಸಿಕೊಳ್ಳುತ್ತೀರಾ? ಇದು ತಪ್ಪು. ರಾತ್ರಿಯಲ್ಲಿ ಹಸಿವಾಗಲು ಒಂದು ದೊಡ್ಡ ಕಾರಣವಿದೆ, ಅದರ ಬಗ್ಗೆ ನೀವು ತಿಳಿದುಕೊಳ್ಳಲು ಬಯಸುವಿರಾ?

ರಾತ್ರಿ 1-2 ಗಂಟೆಯ ನಡುವೆ ಇದ್ದಕ್ಕಿದ್ದಂತೆ, ನೀವು ಎಚ್ಚರಗೊಳ್ಳುತ್ತೀರಿ ಮತ್ತು ನಿಮಗೆ ಹಸಿವಾಗಲು (starving at midnight) ಪ್ರಾರಂಭಿಸುತ್ತದೆ. ಈ ರೀತಿ ನಿಮಗೂ ನಡೆದಿದೆ ಅಲ್ವಾ?  ಅನೇಕ ಬಾರಿ ಊಟ ಮಾಡಿದ ನಂತರವೂ, ನಾವು ಹಸಿವನ್ನು ಅನುಭವಿಸಲು ಪ್ರಾರಂಭಿಸುತ್ತೇವೆ ಮತ್ತು ನಂತರ ನಾವು ಫ್ರಿಡ್ಜ್ನಲ್ಲಿ ಅಥವಾ ಅಡುಗೆ ಮನೆಯಲ್ಲಿ ಏನಾದ್ರೂ ತಿನ್ನೋದಕ್ಕೆ ಇದೆಯೇ ಎಂದು ನೋಡ್ತೀವಿ.ರಾತ್ರಿ ವೇಳೆ ತಿನ್ನೋ ಬಯಕೆ ಇದ್ದಕ್ಕಿದ್ದಂತೆ ಹೆಚ್ಚಾಗುತ್ತವೆ. ಇದು ಏಕೆ ಸಂಭವಿಸುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ದಿನವಿಡೀ ಸಕ್ರಿಯರಾಗಿದ್ದ ನಂತರ, ಊಟ ಮಾಡಿದ ನಂತರ ತಡರಾತ್ರಿಯಲ್ಲಿ ನಮಗೆ ಏಕೆ ಹಸಿವಾಗುತ್ತದೆ?

ಚಿಕಾಗೋ ವಿಶ್ವವಿದ್ಯಾಲಯದ ವರ್ತನೆಯ ನರವಿಜ್ಞಾನಿ ಎರಿನ್ ಹನ್ಲಾನ್ ನಡೆಸಿದ ಅಧ್ಯಯನದ ಪ್ರಕಾರ, ನಿದ್ರೆಯ ಕೊರತೆ ಅಥವಾ ನಿದ್ರೆಯ ಅಸ್ವಸ್ಥತೆಗಳು ಇದಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತೆ. ಜಂಕ್ ಫುಡ್ (junk food) ಅಥವಾ ಸಿಹಿತಿಂಡಿಗಳನ್ನು ತಿನ್ನುವ ರಾತ್ರಿಯ ಕಡುಬಯಕೆ ಕಳಪೆ ನಿದ್ರೆಯ ಪರಿಣಾಮವಾಗಿದೆ. ಇದಲ್ಲದೆ, ಮಧ್ಯರಾತ್ರಿಯಲ್ಲಿ ನಾವು ಹೆಚ್ಚು ಹಸಿವನ್ನು ಅನುಭವಿಸಲು ಕೆಲವು ಕಾರಣಗಳಿವೆ.
 

Latest Videos


ಉಪಾಹಾರವನ್ನು ಸರಿಯಾಗಿ ಸೇವಿಸದ ಕಾರಣ ಹೀಗಾಗುತ್ತೆ (skipping breakfast): ಬೆಳಗಿನ ಉಪಾಹಾರವು ದಿನವಿಡೀ ಇಂಧನವಾಗಿ ಕಾರ್ಯನಿರ್ವಹಿಸುತ್ತೆ, ಇದು ದಿನವಿಡೀ ಕೆಲಸ ಮಾಡಲು ನಮಗೆ ಶಕ್ತಿ ನೀಡುತ್ತದೆ. ನಾವು ಬೆಳಿಗ್ಗಿನ ಆಹಾರ ಮಿಸ್ ಮಾಡಿದ್ರೆ, ದೇಹದಲ್ಲಿ ಯಾವುದೇ ಶಕ್ತಿ ಇರೋದಿಲ್ಲ. ನಿಮ್ಮ ದೇಹಕ್ಕೆ ಪೌಷ್ಠಿಕಾಂಶ ಸಿಗದಿದ್ದಾಗ, ನೀವು ರಾತ್ರಿಯಲ್ಲಿ ಹೆಚ್ಚು ತಿನ್ನುತ್ತೀರಿ ಅಥವಾ ನಿಮ್ಮ ಕಡುಬಯಕೆ ಹೆಚ್ಚಾಗುತ್ತದೆ. ಇದು ಇನ್ಸುಲಿನ್ ಸ್ಪೈಕ್ ಗೆ ಕಾರಣವಾಗಬಹುದು.

ಒತ್ತಡದಿಂದಲೂ ಉಂಟಾಗುತ್ತವೆ (stress): ರಾತ್ರಿ ಹಸಿವಾಗೋದಕ್ಕೆ ಆತಂಕ ಮತ್ತು ಒತ್ತಡವು ಎರಡು ಸಾಮಾನ್ಯ ಕಾರಣಗಳಾಗಿವೆ. ಒತ್ತಡದಿಂದಾಗಿ, ಕಾರ್ಟಿಸೋಲ್ ಮಟ್ಟವು ಹೆಚ್ಚಾಗುತ್ತದೆ ಮತ್ತು ಇನ್ಸುಲಿನ್ ಸಹ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ, ಕೆಲವು ಜನರು ಅತಿಯಾಗಿ ತಿನ್ನುವುದು ಮತ್ತು ಇತರ ಸಮಸ್ಯೆಗಳು ಸಹ ಹೊಂದಿರುತ್ತಾರೆ.

ಪ್ರೋಟೀನ್ ಕೊರತೆ (proteine): ಪ್ರೋಟೀನ್ ಹಸಿವನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ, ಇದರಿಂದಾಗಿ ನೀವು ದಿನವಿಡೀ ಕಡಿಮೆ ಕ್ಯಾಲೊರಿಗಳನ್ನು ತಿನ್ನುತ್ತೀರಿ. ಇದು ಹಾರ್ಮೋನುಗಳ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ, ಅದು ನಿಮಗೆ ಹೊಟ್ಟೆ ತುಂಬಿದ ಅನುಭ ನೀಡುತ್ತೆ, ಜೊತೆಗೆ ಹಸಿವನ್ನು ಉತ್ತೇಜಿಸುವ ಹಾರ್ಮೋನುಗಳ ಮಟ್ಟವನ್ನು ಕಡಿಮೆ ಮಾಡುತ್ತದೆ. ನೀವು ಕಡಿಮೆ ಪ್ರೋಟೀನ್ ಆಹಾರ ತೆಗೆದುಕೊಳ್ಳುತ್ತಿದ್ದರೆ, ನಿಮಗೆ ಮತ್ತೆ ಮತ್ತೆ ಹಸಿವಾಗುವ ಸಾಧ್ಯತೆಯಿದೆ.

ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಗಳ ಸೇವನೆ (carbohydrates food): ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಗಳು ಫೈಬರ್ ಅನ್ನು ಹೊಂದಿರೋದಿಲ್ಲ, ಇದು ರಕ್ತದಲ್ಲಿನ ಸಕ್ಕರೆಯಲ್ಲಿ ಏರಿಳಿತಗಳಿಗೆ ಕಾರಣವಾಗುತ್ತೆ. ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಗಳಲ್ಲಿ ಫೈಬರ್ ಹೆಚ್ಚಾಗಿರದ ಕಾರಣ, ದೇಹವು ಅವುಗಳನ್ನು ಬೇಗನೆ ಜೀರ್ಣಿಸುತ್ತದೆ. ಪಾಸ್ತಾ, ಕ್ಯಾಂಡಿಗಳು, ಬರ್ಗರ್ ಗಳು ಇತ್ಯಾದಿಗಳನ್ನು ತಿಂದ ನಂತರ ನಿಮಗೆ ಮತ್ತೆ ಹಸಿವಾಗಲು ಇದು ಕಾರಣವಾಗಿದೆ.

ಸಾಕಷ್ಟು ನೀರು ಕುಡಿಯದಿರೋದು (drinking less water): ಸಾಕಷ್ಟು ನೀರು ಕುಡಿಯದಿದ್ದರೆ, ನೀವು ಯಾವಾಗಲೂ ಹಸಿವಿನಿಂದ ಬಳಲಬಹುದು. ನೀರು ಹಸಿವನ್ನು ಕಡಿಮೆ ಮಾಡುವ ಗುಣಗಳನ್ನು ಸಹ ಹೊಂದಿದೆ. ಅನೇಕ ಬಾರಿ ಜನರು ಬಾಯಾರಿಕೆಯಾದಾಗ ತಂಪು ಪಾನೀಯಗಳು, ಜ್ಯೂಸ್ ಇತ್ಯಾದಿಗಳನ್ನು ಕುಡಿಯುತ್ತಾರೆ. ಇದರಿಂದ ಹೊಟ್ಟೆಯೂ ತುಂಬುತ್ತದೆ. ಹಾಗಾಗಿ ಸಾಕಷ್ಟು ನೀರು ಕುಡಿಯೋದು ಸಹ ಮುಖ್ಯ. 

ನಿದ್ರೆಯ ಕೊರತೆಯಿಂದಾಗಿ (sleeplessness): ಗ್ರೆಲಿನ್ ಹಸಿವಿನೊಂದಿಗೆ ನಿಕಟ ಸಂಬಂಧ ಹೊಂದಿದೆ ಮತ್ತು ಲೆಪ್ಟಿನ್ ನಿಮಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ. ಈ ರೀತಿಯಾಗಿ, ನಿಮ್ಮ ನಿದ್ರೆ ಪೂರ್ಣಗೊಳ್ಳದಿದ್ದಾಗ ಅಥವಾ ನಿಮ್ಮ ನಿದ್ರೆಯ ವಿಧಾನ ತಪ್ಪಿದಾಗ, ಗ್ರೆಲಿನ್ ಮಟ್ಟವು ಹೆಚ್ಚಾಗುತ್ತದೆ ಮತ್ತು ಈ ನಿದ್ರೆಯ ಕೊರತೆಯು ಲೆಪ್ಟಿನ್ ಮಟ್ಟವನ್ನು ಕಡಿಮೆ ಮಾಡುತ್ತದೆ, ಅಷ್ಟೇ ಅಲ್ಲ ಆಹಾರದ ಬಗ್ಗೆ ನಾವು ಹೇಗೆ ಯೋಚಿಸುತ್ತೇವೆ ಎಂಬುದನ್ನು ನಿರ್ಧರಿಸುವ ಮೆದುಳಿನ ಭಾಗಗಳ ಮೇಲೂ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿಯೇ ನಾವು ಆಗಾಗ್ಗೆ ರಾತ್ರಿಯಲ್ಲಿ ಹಸಿವನ್ನು ಅನುಭವಿಸುತ್ತೇವೆ ಮತ್ತು ಹೆಚ್ಚು ಜಂಕ್ ಫುಡ್ ತಿನ್ನುವಂತೆ ಮಾಡುತ್ತೆ.

click me!