ವಯಸ್ಸು ಹೆಚ್ಚಾದಂತೆ ಟೆಸ್ಟೋಸ್ಟೆರಾನ್ ಮಟ್ಟ ಇಳಿಯುತ್ತಾ ಹೋಗುತ್ತದೆ. ಆದರೆ ಅದಕ್ಕೆ ಮುಖ್ಯ ಕಾರಣ ನೀವು, ಅಂದ್ರೆ ನೀವು ರೂಢಿಸಿಕೊಂಡಿರುವ ಅಭ್ಯಾಸಗಳು ಅನ್ನೋದು ನಿಮಗೆ ಗೊತ್ತಾ? ಈ ಸಮಸ್ಯೆ ನಿವಾರಿಸಲು ಈ ಜೀವನಶೈಲಿ ಅಭ್ಯಾಸಗಳನ್ನು ತ್ಯಜಿಸಿ. ಹೀಗೆ ಮಾಡೋದ್ರಿಂದ ವಾರಗಳಲ್ಲಿ ನಿಮ್ಮ ಮನಸ್ಥಿತಿ, ಶಕ್ತಿ ಮತ್ತು ದೇಹದ ಆಕಾರ ಸುಧಾರಿಸುವುದು ಖಚಿತಾ.
ನಮ್ಮ ಟೆಸ್ಟೋಸ್ಟೆರಾನ್ ಮಟ್ಟಗಳು 30 ವರ್ಷದ ನಂತರ ನೈಸರ್ಗಿಕವಾಗಿ ವರ್ಷಕ್ಕೆ ಸುಮಾರು 1% ರಷ್ಟು ಇಳಿಯುತ್ತವೆ. ಆದರೆ ನಮ್ಮ ಕೊಳಕು ಜೀವನಶೈಲಿ ಅಭ್ಯಾಸಗಳು ಟೆಸ್ಟೋಸ್ಟೆರಾನ್ ಅನ್ನು ಇರಬೇಕಾದುದಕ್ಕಿಂತ ಕಡಿಮೆ ಮಾಡುತ್ತವೆ. ಹೀಗೆ ಆದರೆ 40 ದಾಟುತ್ತಿದ್ದಂತೆ, ನಿಮ್ಮ ದೇಹದಲ್ಲಿ ಟೆಸ್ಟೋಸ್ಟೆರಾನ್ ಮಟ್ಟ (Testosterone level ) 60 ವಯಸ್ಸಿನವರಂತೆ ಆಗಿ, ಬೇಗ ಕುಸಿಯಬಹುದು. ಇದರಿಂದ ಹಲವಾರು ಸಮಸ್ಯೆಗಳು ಸಹ ಕಾಡಬಹುದು. ಅವುಗಳ ಬಗ್ಗೆ ತಿಳಿಯೋಣ.
ಟೆಸ್ಟೋಸ್ಟೆರಾನ್ ಮಟ್ಟ ಕುಸಿದರೆ ಏನೆಲ್ಲಾ ಸಮಸ್ಯೆ ಕಾಡುತ್ತೆ?
ಮೂಡ್ ಸ್ವಿಂಗ್ ಆಗುತ್ತದೆ, ದೇಹದಲ್ಲಿ ಶಕ್ತಿ ಕೂಡ ಕಡಿಮೆಯಾಗುತ್ತೆ, ಜೊತೆಗೆ ಕಾಮಾಸಕ್ತಿ ಕೂಡ ಕಡಿಮೆಯಾಗುತ್ತೆ.
ಎದೆ ಮತ್ತು ಹೊಟ್ಟೆಯಾದ್ಯಂತ ತೂಕ ಹೆಚ್ಚಾಗುತ್ತದೆ (weight gain).
ಸ್ನಾಯು ನಷ್ಟವಾಗಿ ನೀವು ತುಂಬಾ ವೀಕ್ ಆದಂತೆ ತೋರುವಿರಿ.
ಕೆಲಸ ಮಾಡಲು ಯಾವುದೇ ಮಹತ್ವಾಕಾಂಕ್ಷೆ ಅಥವಾ ಪ್ರೇರಣೆ ಇರೋದಿಲ್ಲ.
ಈ ರೀತಿಯ ಸಮಸ್ಯೆ ಕಾಡಬಾರದು ಅನ್ನೋದಾದ್ರೆ ನಿಮ್ಮ ಟೆಸ್ಟೋಸ್ಟೆರಾನ್ ಮಟ್ಟ ಕಡಿಮೆಯಾಗಲು ಕಾರಣವಾಗುವ ಕೆಲಸಗಳನ್ನು ಮಾಡುವುದನ್ನು ನೀವು ಮೊದಲು ನಿಲ್ಲಿಸಬೇಕು.ಅಂತಹ ಅಭ್ಯಾಸಗಳು ಯಾವುವು? ಅವುಗಳನ್ನು ನಿಲ್ಲಿಸೋದರಿಂದ ದೇಹದಲ್ಲಿ ಏನೆಲ್ಲಾ ಬದಲಾವಣೆಯಾಗುತ್ತೆ? ಅನ್ನೋದನ್ನು ನೋಡೋಣ.
ಸನ್ಯಾಸಿಯಂತೆ ಮನೆಯೊಳಗೆ ಇರೋದನ್ನು ನಿಲ್ಲಿಸಿ
ಸಾಂಕ್ರಾಮಿಕ ರೋಗವು ಅಪ್ಪಳಿಸಿದಾಗಿನಿಂದ ಮತ್ತು ಮನೆಯಿಂದ ಕೆಲಸ ಮಾಡುವುದು ಹೆಚ್ಚು ಸಾಮಾನ್ಯವಾದಾಗಿನಿಂದ, ನಮ್ಮಲ್ಲಿ ಲಕ್ಷಾಂತರ ಜನರು ಪ್ರತಿದಿನ ಮನೆಯಿಂದ ಹೊರಗೆ ಬರೋದೆ ಇಲ್ಲ. ಆರಂಭದಲ್ಲಿ ಇದು ಅದ್ಭುತವಾಗಿತ್ತು, ಆದರೆ ಈವಾಗ ಎಲ್ಲವೂ ಸರಿಯಾಗಿಯೇ ಇರುವಾಗ ಮನೆಯಿಂದ ಹೊರ ಬರೋದನ್ನು ಮರೆಯಬೇಡಿ.
ವರ್ಕ್ ಫ್ರಮ್ ಹೋಮ್ ಮಾಡುವಾಗ ಏನಾಗುತ್ತೆ? ಬೆಳಗ್ಗೆ ತಡವಾಗಿ ಎದ್ದೇಳುತ್ತೀರಿ. ಫ್ರೆಶ್ ಆಗಿ ಏನೋ ತಿಂದು, ಮತ್ತೆ ಬೆಡ್ ರೂಮ್ ನಲ್ಲಿ ಹಾಸಿಗೆ ಮೇಲೆ ಲೇಝಿಯಾಗಿ ಬಿದ್ದುಕೊಂಡು ಕೆಲಸ ಮಾಡುವಿರಿ. ಇದಾದ ಬಳಿಕ ಮತ್ತೆ ಲಿವೀಂಗ್ ರೂಮ್ ಸೋಫಾದ ಮೇಲೆ ಸೋಮಾರಿಯಂತೆ ಬಿದ್ದುಕೊಳ್ಳುವಿರಿ, ರಾತ್ರಿ ಮತ್ತೆ ಬೆಡ್ ಗೆ. ಇವಿಷ್ಟೇ ಕೆಲಸವಾಗಿರೋದರಿಂದ ವಿಟಮಿನ್ ಡಿ (Vitamin D) ಕೂಡ ಸಿಗೋದಿಲ್ಲ. ಆದರೆ ಕಚೇರಿಯಲ್ಲಿ ನೀವು ಊಟ ಮಾಡಲು ವಾಕಿಂಗ್ ಮಾಡಬೇಕಾಗುತ್ತದೆ. ಅಥವಾ ಸಹೋದ್ಯೋಗಿಗಳೊಂದಿಗೆ ಚಾಟ್ ಮಾಡಲು ಹೊರಗೆ ಕುಳಿತುಕೊಳ್ಳಬೇಕಾಗುತ್ತದೆ. ಆದರೆ ಈಗ ಅದು ಸಾಧ್ಯ ಇಲ್ಲದೇ ಇರೋದರಿಂದ ಮನೆಯಲ್ಲಿಯೇ ಒಂದು 15- 20 ನಿಮಿಷಗಳ ಕಾಲ ಪ್ರತಿದಿನ ವಾಕ್ ಮಾಡೋದನ್ನು ಮರೆಯಬೇಡಿ.
ಕಾಫಿ ಕುಡಿಯುವಾಗ ವಾಕಿಂಗ್ ಗೆ ಮಾಡಿ (walking)
ಫೋನ್ ನಲ್ಲಿ ಮಾತನಾಡುವಾಗ ವಾಕಿಂಗ್ ಮಾಡಿ.
ನೀವು ಕೆಲವು ಇಮೇಲ್ ಗಳಿಗೆ ಉತ್ತರಿಸುವಾಗ ಹೊರಗೆ ಸೂರ್ಯನ ಬಿಸಿಲಿಗೆ ಕುಳಿತುಕೊಳ್ಳೋದು ಮುಖ್ಯ.
ನಡಿಗೆಯ ಮೂಲಕ ಸಣ್ಣಪುಟ್ಟ ಕೆಲಸಗಳನ್ನು ಮಾಡಿ.
ಪ್ರತಿದಿನ ಸ್ವಲ್ಪ ಸಮಯದವರೆಗೆ ಹೊರಗೆ ಇರಿ, ಮತ್ತು ನಿಮ್ಮ ದೇಹವು ನೈಸರ್ಗಿಕವಾಗಿ ಎಷ್ಟು ಸಾಧ್ಯವೋ ಅಷ್ಟು ಟೆಸ್ಟೋಸ್ಟೆರಾನ್ (Testosterone level ) ಅನ್ನು ಉತ್ಪಾದಿಸಲು ಅವಕಾಶ ನೀಡಿ.
ಕನಿಷ್ಠ ಎಂಟುಗಂಟೆಗಳ ನಿದ್ರೆ ಮಾಡೋದನ್ನು ಮರೆಯಬೇಡಿ
ನಾವು ಸಾಮಾನ್ಯವಾಗಿ ಸಂಜೆ ಅಥವಾ ರಾತ್ರಿ ಹೊತ್ತು ಸಾಧ್ಯವಾದಷ್ಟು ಟಿವಿ ವೀಕ್ಷಣೆ, ಫೋನ್ ಸ್ಕ್ರೋಲಿಂಗ್ ಮತ್ತು ಇಂಟರ್ನೆಟ್ ನಲ್ಲಿ ಏನಾದರೊಂದು ಮಾಡುತ್ತಲೇ ಇರುತ್ತೇವೆ. ನಮ್ಮ ಕಣ್ಣುಗಳು ಭಾರವಾಗಿದ್ದರೆ ನಾವು ಸೋಲನ್ನು ಒಪ್ಪಿಕೊಂಡು ಮಲಗಬಹುದು. ಇಲ್ಲವಾದರೆ ಈ ಮೊಬೈಲ್, ಮೂವಿ, ಗೇಮ್ ನೋಡುತ್ತಾ, ನೋಡುತ್ತಾ, ನಿದ್ರೆಯನ್ನೇ ಮರೆಯುತ್ತೇವೆ.
ಹೆಚ್ಚು ಮನರಂಜನೆಯ ಬದಲು ಹೆಚ್ಚು ನಿದ್ರೆಗಾಗಿ ಹಂಬಲಿಸಲು ಕಲಿತರೆ (get good sleep), ನಮ್ಮ ಜೀವನವು ಆರೋಗ್ಯದಿಂದಿರಲು ಸಾಧ್ಯವಾಗುತ್ತದೆ. ಹಾಸಿಗೆಯಲ್ಲಿ ಹೆಚ್ಚು ಹೊತ್ತು ಕುಳಿತು, ಪುಸ್ತಕದೊಂದಿಗೆ ಅಥವಾ ಸಂಗಾತಿಯೊಂದಿಗೆ ಹರಟೆ ಹೊಡೆಯಿರಿ. ಜೊತೆಗೆ ಸರಿಯಾಗಿ ಎಂಟು ಗಂಟೆಗಳ ನಿದ್ರೆ ಮಾಡಿ. ಹೀಗೆ ಮಾಡಿದರೆ ಚಯಾಪಚಯ, ಮನಸ್ಥಿತಿ, ಶಕ್ತಿ, ಜೀರ್ಣಕ್ರಿಯೆ, ಕಾಮಾಸಕ್ತಿ, ಸ್ನಾಯು ಚೇತರಿಕೆ ಕೂಡ ಆಗುತ್ತೆ. ಇದರಿಂದ ಟೆಸ್ಟೋಸ್ಟೆರಾನ್ ಮಟ್ಟವೂ ಸುಧಾರಿಸುತ್ತೆ.
ಒತ್ತಡವನ್ನು ಸಾಮಾನ್ಯವೆಂದು ಸ್ವೀಕರಿಸೋ ತಪ್ಪು ಮಾಡಬೇಡಿ
ಕಾರ್ಟಿಸೋಲ್ ಮಟ್ಟಗಳು (stress hormone) ಅಪಾಯಕಾರಿಯಾಗಿರೋದ್ರಿಂದ, ಇವು ಟೆಸ್ಟೋಸ್ಟೆರಾನ್ ಮಟ್ಟದ ಮೇಲೆ ಪರಿಣಾಮ ಬೀರೋದ್ರಿಂದ ನೀವು ಸಾಧ್ಯವಾದಷ್ಟು ಒತ್ತಡವನ್ನು ಇಗ್ನೋರ್ ಮಾಡೋದನ್ನು ನಿಲ್ಲಿಸಬೇಕು, ಒತ್ತಡ ನಿವಾರಣೆಯಾದರೆ ಆರೋಗ್ಯ ಉತ್ತಮವಾಗಿರುತ್ತೆ. ಹಲವಾರು ಕಾರಣಗಳಿಂದ ಒತ್ತಡ ಉಂಟಾಗಬಹುದು. ಇದರಿಂದ ಟೆಸ್ಟೋಸ್ಟೆರಾನ್ ಮಟ್ಟ ಕಡಿಮೆಯಾಗುತ್ತೆ, ಮತ್ತು ಇದರಿಂದ ಇನ್ಸುಲಿನ್ ಪ್ರತಿರೋಧ ಮತ್ತು ಟೈಪ್ 2 ಮಧುಮೇಹಕ್ಕೂ ಕಾರಣವಾಗಬಹುದು. ಮತ್ತು ಹೆಚ್ಚಿನ ಕಾರ್ಟಿಸೋಲ್ ಕಡಿಮೆ ಟೆಸ್ಟೋಸ್ಟೆರಾನ್ ಗೆ ಪ್ರಮುಖ ಕಾರಣವಾಗಿದೆ.
10 ವರ್ಷದ ಮಗುವಿನಂತೆ ತಿನ್ನುವುದನ್ನು ಮತ್ತು ಕುಡಿಯುವುದನ್ನು ನಿಲ್ಲಿಸಿ
10 ವರ್ಷದ ಮಗು ಫಿಜಿ ಡ್ರಿಂಕ್ಸ್, ಮೈಕ್ರೋವೇವ್ ಬರ್ಗರ್, ಪಾಪ್ಕಾರ್ನ್ ಮತ್ತು ಸಿಹಿತಿಂಡಿಗಳನ್ನು ತಿನ್ನೋದನ್ನು ಇಷ್ಟಪಡುತ್ತೆ. ಆದರೆ ನೀವು ಅದೇ ಅಭ್ಯಾಸವನ್ನು ಪಾಲಿಸಬೇಡಿ. ಇದರಿಂದ ಟೆಸ್ಟೋಸ್ಟೆರಾನ್ ಲೆವೆಲ್ ಕುಸಿಯುತ್ತದೆ. ಅದರ ಬದಲಾಗಿ ಆರೋಗ್ಯಯುತ ಆಹಾರಗಳನ್ನು (healthy food) ಸೇವಿಸಲು ಪ್ರಾರಂಭಿಸಿ.
ನಿಮ್ಮ ದೇಹವನ್ನು ಒಣಗಿಸಬೇಡಿ
ವಯಸ್ಸಾದಂತೆ ದೇಹ ದುರ್ಬಲವಾಗುತ್ತಾ ಹೋಗುತ್ತದೆ. ಇದನ್ನು ಆಗಲು ಬಿಡಬೇಡಿ. ಯಾಕೆಂದರೆ ಇದರಿಂದ ಟೆಸ್ಟೋಸ್ಟೆರಾನ್ ಮಟ್ಟ ಕುಸಿಯುತ್ತದೆ. ಅದಕ್ಕಾಗಿ ನೀವು ಮನೆಯ ವ್ಯಾಯಾಮ (exercises) ಅಂದರೆ ದೇಹದ ತೂಕದ ತರಬೇತಿ ಅಥವಾ ಜಿಮ್ ಸೆಷನ್ ಗಳು ಸಾಕಷ್ಟು ಟೆಸ್ಟೋಸ್ಟೆರಾನ್ ಉತ್ಪಾದಿಸುವ ಮೂಲಕ ವಯಸ್ಸಾದರೂ ಯಂಗ್ ಎನರ್ಜಿ ನಿಮ್ಮಲ್ಲಿರುತ್ತೆ.