Thyroid in Men: ಧೂಮಪಾನ ಮಾಡಿದರೆ ಕಾಡುತ್ತೆ ರೋಗ, ಜೋಪಾನ!

First Published Dec 3, 2021, 6:18 PM IST

ಥೈರಾಯ್ಡ್ ಸಮಸ್ಯೆ (Thyroid problem) ಇಂದು ಹೆಚ್ಚಿನ ಜನರಿಗಿದೆ. ಮಹಿಳೆಯರು ಮತ್ತು ಪುರುಷರು ಇಬ್ಬರಲ್ಲೂ ಕಂಡು ಬರುವ ರೋಗದ ಅನೇಕ ಲಕ್ಷಣಗಳಿವೆ, ಆದರೆ ಕೆಲವು ರೋಗಲಕ್ಷಣಗಳು ಪುರುಷರಲ್ಲಿ ಮಾತ್ರ ಕಂಡುಬರುತ್ತವೆ. ಈ ಸಮಸ್ಯೆಯನ್ನು ಆರಂಭಿಕ ಹಂತದಲ್ಲಿ ನಿಯಂತ್ರಿಸದಿದ್ದರೆ ಮತ್ತೆ ಸಮಸ್ಯೆಗಳು ಕಂಡು ಬರುತ್ತವೆ. 

ಹೈಪೋಥೈರಾಯ್ಡಿಸಮ್ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ (Testosterone hormone) ಕೊರತೆ, ಕಳಪೆ ಏಕಾಗ್ರತೆ ಮತ್ತು ಸ್ನಾಯು ನೋವಿಗೆ ಕಾರಣವಾಗಬಹುದು. ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸುವುದು ರೋಗ ಉಲ್ಬಣಕ್ಕೆ ಕಾರಣವಾಗಬಹುದು ಮತ್ತು ರೋಗವು ನಿಯಂತ್ರಣದಲ್ಲಿರುವುದಿಲ್ಲ. 

ಥೈರಾಯ್ಡ್ ಹಾರ್ಮೋನ್ (thyroid harmone) ಅಸಮತೋಲನಗೊಂಡಾಗ, ಅದು ವಿವಿಧ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಅಸಮತೋಲನ ಹಾರ್ಮೋನುಗಳು ಹೆಚ್ಚಿನ ಕೊಲೆಸ್ಟ್ರಾಲ್, ತೂಕ ಹೆಚ್ಚಳ, ಹೈಪರ್ ಥೈರಾಯ್ಡಿಸಮ್ ಮತ್ತು ಹೈಪೋಥೈರಾಯ್ಡಿಸಮ್ ಗೆ ಕಾರಣವಾಗಬಹುದು.

ಪುರುಷರಲ್ಲಿ ಥೈರಾಯ್ಡ್ ನ ಲಕ್ಷಣಗಳು 
ಥೈರಾಯ್ಡ್ ಪುರುಷರಲ್ಲಿ ಸ್ನಾಯು ನೋವು, ಆಯಾಸ ಮತ್ತು ದೌರ್ಬಲ್ಯ, ನಿರಂತರ ತೂಕ ಹೆಚ್ಚಳ ಅಥವಾ ನಷ್ಟ, ಕಡಿಮೆ ಟೆಸ್ಟೋಸ್ಟೆರಾನ್ ಹಾರ್ಮೋನ್ ಮಟ್ಟಗಳು, ಆತಂಕ, ಖಿನ್ನತೆ(Depression), ಕೂದಲು ಉದುರುವಿಕೆ ಮತ್ತು ಹೆಚ್ಚಿನ ಕೊಲೆಸ್ಟ್ರಾಲ್ ಸಮಸ್ಯೆಗಳನ್ನು ಉಂಟುಮಾಡಬಹುದು.

ತ್ವರಿತವಾಗಿ ತಿನ್ನಬೇಡಿ 
ಬೇಗ ಊಟ (Food) ಮಾಡಬೇಡಿ. ನಿಧಾನವಾಗಿ ಚೆನ್ನಾಗಿ ಅಗಿಯಿರಿ. ಇದು ಥೈರಾಯ್ಡ್ ಗ್ರಂಥಿಯು ಆಹಾರವನ್ನು ಶಕ್ತಿಯಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ ಮತ್ತು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ಇದರಿಂದ ಆರೋಗ್ಯವೂ ಉತ್ತಮವಾಗಿರುತ್ತದೆ. 

ಧೂಮಪಾನವನ್ನು ತಪ್ಪಿಸಿ ( do not smoke)
ಸಿಗರೇಟುಗಳಲ್ಲಿ ಥಿಯೋಸಿನೇಟ್ ಮತ್ತು ನಿಕೋಟಿನ್ ಇರುತ್ತದೆ. ಇದು ಅಯೋಡಿನ್ ಹೊರ ಸೂಸುವಿಕೆಯನ್ನು ಹೆಚ್ಚಿಸುತ್ತದೆ, ಇದು ಥೈರಾಯ್ಡ್ ನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಆದುದರಿಂದ ಧೂಮಪಾನವನ್ನು ತಪ್ಪಿಸಿ. ಇಲ್ಲವಾದರೆ ಮತ್ತೆ ಪರಿತಪಿಸಬೇಕಾದಿತು. 

ಕೆಫೀನ್ ಸೇವಿಸಬೇಡಿ (avoid caffeine) 
ಥೈರಾಯ್ಡ್ ರೋಗಿಗಳು ಚಹಾ ಮತ್ತು ಕಾಫಿಯಂತಹ ಕೆಫೀನ್ ಯುಕ್ತ ಪಾನೀಯಗಳನ್ನು ಸೇವಿಸುವುದನ್ನು ತಪ್ಪಿಸಬೇಕು. ಕೆಫೀನ್ ಸೇವನೆಯು ಥೈರಾಯ್ಡ್ ಹಾರ್ಮೋನುಗಳನ್ನು ಅಸಮತೋಲನಗೊಳಿಸಬಹುದು. ಇದರ ಬಲಲು ಹರ್ಬಲ್ ಟೀ ಸೇವನೆ ಮಾಡುವುದು ಉತ್ತಮ. 

ವಿಟಮಿನ್ ಎ( Vitamin A) ಸಮೃದ್ಧವಾದ ವಸ್ತುಗಳನ್ನು ತಿನ್ನಿ
ಥೈರಾಯ್ಡ್ ಅನ್ನು ನಿಯಂತ್ರಿಸಲು ವಿಟಮಿನ್ ಎ ಅತ್ಯುತ್ತಮ ಮಾರ್ಗವಾಗಿದೆ. ಪೌಷ್ಟಿಕಾಂಶ ತಜ್ಞರ ಸಲಹೆಯ ಮೇರೆಗೆ ವಿಟಮಿನ್ ಎ ಸಮೃದ್ಧ ಆಹಾರಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ.  ಮೊಟ್ಟೆ, ಏಪ್ರಿಕಾಟ್, ಪಾಲಕ್ ಮತ್ತು ಕ್ಯಾರೆಟ್ ವಿಟಮಿನ್ ಎ ನ ಉತ್ತಮ ಮೂಲಗಳಾಗಿವೆ.

ನಿಯಮಿತ ಯೋಗ ಮತ್ತು ವ್ಯಾಯಾಮ (Yoga & Exercise) 
ನಿಯಮಿತ ಯೋಗ ಮತ್ತು ವ್ಯಾಯಾಮವು ಥೈರಾಯ್ಡ್ ರೋಗಿಗಳಿಗೆ ಪ್ರಯೋಜನಕಾರಿ. ಥೈರಾಯ್ಡ್ ಸಂಬಂಧಿತ ಸಮಸ್ಯೆಗಳನ್ನು ತಪ್ಪಿಸಲು ಪ್ರತಿದಿನ ಯೋಗ ಮಾಡಿ. ದಿನ ಅರ್ಧಗಂಟೆಗಳ ಕಾಲ ಯೋಗ ಮಾಡಿದರೆ ಆರೋಗ್ಯ ಉತ್ತಮವಾಗಿರಲು ನೆರವಾಗುತ್ತದೆ. 

click me!