Sesame seeds : ಹೃದಯ ರೋಗದಿಂದ, ಕ್ಯಾನ್ಸರ್ ವರೆಗೂ ಎಳ್ಳನ್ನು ಸೇವಿಸಿದ್ರೆ ಲಾಭ ಹಲವು

First Published | Dec 1, 2021, 12:08 AM IST

ಎಳ್ಳನ್ನು ಅನೇಕ ಆಹಾರ ಪದಾರ್ಥಗಳಲ್ಲಿ ಬಳಸಲಾಗುತ್ತದೆ, ಆದರೆ ಎಳ್ಳು ಕೂಡ ಅನೇಕ ರೋಗಗಳಿಂದ ರಕ್ಷಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಎಳ್ಳುಗಳಲ್ಲಿ ಮೊನೊ ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳಿವೆ, ಇದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಹೃದ್ರೋಗಗಳಿಂದ (heart problem) ಹಿಡಿದು ಅನೇಕ ರೋಗಗಳಲ್ಲಿ ಎಳ್ಳಿನ ಸೇವನೆ ಪ್ರಯೋಜನಕಾರಿಯಾಗಲಿದೆ.

ಎಳ್ಳಿನಲ್ಲಿ ಸೆಸ್ಮೈನ್ ಎಂಬ ಆಂಟಿ ಆಕ್ಸಿಡೆಂಟ್ ಇದೆ. ಇದು ಕ್ಯಾನ್ಸರ್ ಕೋಶಗಳು (cancer cells)ಬೆಳೆಯದಂತೆ ತಡೆಯುತ್ತದೆ. ನಿಯಮಿತವಾಗಿ ಎಳ್ಳಿನ ಸೇವನೆಯಿಂದ ಹೊಟ್ಟೆಯ ಕ್ಯಾನ್ಸರ್, ಲ್ಯುಕೇಮಿಯಾ, ಶ್ವಾಸಕೋಶದ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಒತ್ತಡವನ್ನು ಕಡಿಮೆ ಮಾಡುತ್ತದೆ (stress relief): ಎಳ್ಳಿನಲ್ಲಿರುವ ಪೋಷಕಾಂಶಗಳು ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರ ಸೇವನೆ ಖಿನ್ನತೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ನಿಯಮಿತವಾಗಿ ಒಂದು ಚಮಚ ಎಳ್ಳು ಸೇವಿಸಿ. ಇದರಿಂದ ಒತ್ತಡ ನಿವಾರಣೆಯಾಗುತ್ತದೆ. 

Tap to resize

ಹೃದಯ ಆರೋಗ್ಯ  (healthy heart): ಎಳ್ಳಿನಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ಸತು ಮತ್ತು ಸೆಲೆನಿಯಂನಂತಹ ಅಂಶಗಳು ಕಂಡುಬರುತ್ತವೆ. ಹೃದಯದ ಸ್ನಾಯುಗಳನ್ನು ಸಕ್ರಿಯವಾಗಿ ಕೆಲಸ ಮಾಡಲು ಅವು ಸಹಾಯಕವಾಗಿವೆ. ಇದರಿಂದ ಹೃದಯದ ಆರೋಗ್ಯವು ಉತ್ತಮವಾಗಿರುತ್ತದೆ. 
 

ಮೂಳೆಗಳಿಗೆ (healthy bone): ಎಳ್ಳಿನಲ್ಲಿರುವ ಆಹಾರದ ಪ್ರೋಟೀನ್ ಗಳು ಮತ್ತು ಅಮೈನೋ ಆಮ್ಲಗಳು ಮೂಳೆಗಳನ್ನು ಬಲವಾಗಿರಿಸುತ್ತದೆ. ಇದನ್ನು ಜ್ಯೂಸ್ ಮಾಡಿ ಸೇವಿಸಬಹುದು ಅಥವಾ ಸಲಾಡ್ ನ ಮೇಲೆ  ಎಳ್ಳನ್ನು ಸಿಂಪಡಿಸಬಹುದು ಅಥವಾ ಚಳಿಗಾಲದಲ್ಲಿ ನೇರವಾಗಿ ಅದನ್ನು ಸೇವಿಸಬಹುದು. 

ಎಳ್ಳೆಣ್ಣೆ ಮಸಾಜ್ (oil massage): ಆಯುರ್ವೇದದ ಪ್ರಕಾರ, ಎಳ್ಳೆಣ್ಣೆಯಿಂದ ಮಸಾಜ್ ಮಾಡುವುದು ಸಹ ನಿಮ್ಮ ಮೂಳೆಗೆ ಪ್ರಯೋಜನಕಾರಿಯಾಗಿದೆ. ಸ್ವಲ್ಪ ಬೆಚ್ಚಗಿನ ಎಳ್ಳೆಣ್ಣೆಯನ್ನು ತೆಗೆದುಕೊಂಡು ಅದನ್ನು ನಿಮ್ಮ ದೇಹದ ಮೇಲೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಬೇಕು. ನಂತರ ಅರ್ಧ ಒಂದು ಗಂಟೆ ಬಿಟ್ಟು ಬಿಸಿ ನೀರಿನಲ್ಲಿ ಸ್ನಾನ ಮಾಡಬೇಕು. 

ಚರ್ಮ (skin care): ಎಳ್ಳೆಣ್ಣೆಯ ಸೇವನೆಯೂ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ. ಇದನ್ನು ನಿಯಮಿತವಾಗಿ ಬಳಸುವುದರಿಂದ ಚರ್ಮಕ್ಕೆ ಪೋಷಣೆ ಮತ್ತು  ಚರ್ಮವು ಆರೋಗ್ಯಕರವಾಗಿರುತ್ತದೆ. ಎಳ್ಳೆಣ್ಣೆಯ ಮಸಾಜ್ ಮಾಡುವುದರಿಂದ ಚರ್ಮಕ್ಕೆ ಹೆಚ್ಚು ಹೊಳಪು ಸಿಗುತ್ತದೆ. ಜೊತೆಗೆ ಮಾಯಿಶ್ಚರೈಸ್ ಮಾಡುತ್ತದೆ. 

ಪಿರಿಯಡ್ಸ್ ಕ್ರಮಬದ್ಧಗೊಳಿಸುತ್ತದೆ (regulate periods) : 1 ಟೀ ಚಮಚ ಎಳ್ಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ, ಬೆಳಿಗ್ಗೆ ಅದರ ಪೇಸ್ಟ್ ತಯಾರಿಸಿ ಬೆಲ್ಲದೊಂದಿಗೆ ಸೇವಿಸಬೇಕು. ಇದರಿಂದ ಋತುಚಕ್ರದ ಸಮಸ್ಯೆ ನಿವಾರಣೆಯಾಗುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಗೆ ಇದನ್ನು ಸೇವಿಸಿದರೆ ಉತ್ತಮ ಎಂದು ಹೇಳಲಾಗುತ್ತದೆ. 

ರಕ್ತದೊತ್ತಡವನ್ನು ಕಡಿಮೆ ಮಾಡುತ್ತೆ : ಅಧಿಕ ರಕ್ತದೊತ್ತಡವು (blood pressure) ಹೃದ್ರೋಗ ಮತ್ತು ಪಾರ್ಶ್ವವಾಯುವಿಗೆ ಪ್ರಮುಖ ಅಪಾಯದ ಅಂಶವಾಗಿದೆ. ಎಳ್ಳಿನಲ್ಲಿ ಮೆಗ್ನೀಸಿಯಮ್ ಅಧಿಕವಾಗಿದೆ, ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಎಳ್ಳು ಬೀಜಗಳಲ್ಲಿನ ಲಿಗ್ನಾನ್ ಗಳು, ವಿಟಮಿನ್ ಇ ಮತ್ತು ಇತರ ಉತ್ಕರ್ಷಣ ನಿರೋಧಕಗಳು ನಿಮ್ಮ ಅಪಧಮನಿಗಳಲ್ಲಿ ಪ್ಲೇಕ್ ನಿರ್ಮಾಣವನ್ನು ತಡೆಯಲು ಸಹಾಯ ಮಾಡಬಹುದು. 

Latest Videos

click me!