Yoga for Kidney Health: ಈ ಆಸನ ಮಾಡಿದ್ರೆ, ಮೂತ್ರಪಿಂಡಕ್ಕೊಳಿತು

First Published | Dec 2, 2021, 6:42 PM IST

ಕಿಡ್ನಿ ಕಾಯಿಲೆಯಿಂದ (Kidney problem)  ಪ್ರತಿವರ್ಷ ಲಕ್ಷಾಂತರ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮೂತ್ರಪಿಂಡವು ರಕ್ತವನ್ನು ಸ್ವಚ್ಛಗೊಳಿಸುವ ಮತ್ತು ದೇಹದಿಂದ ವಿಷವನ್ನು ತೆಗೆದು ಹಾಕುವ ಪ್ರಮುಖ ಅಂಗ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡವು ಮೂತ್ರಪಿಂಡದ ಕಾಯಿಲೆಯ ಅಪಾಯವನ್ನು ಉಂಟುಮಾಡುತ್ತದೆ. 
 

ಯೋಗದ ಸಹಾಯದಿಂದ ಮೂತ್ರಪಿಂಡಗಳನ್ನು ಯಾವಾಗಲೂ ಆರೋಗ್ಯವಾಗಿಡಬಹುದು. ವಿಚಿತ್ರ ಸಂಗತಿಯೆಂದರೆ ನೀವು ಮಲಗಿ ಈ ಯೋಗಾಸನಗಳನ್ನು ಮಾಡಬೇಕು. ಮೂತ್ರಪಿಂಡಗಳಿಗೆ ಪ್ರಯೋಜನಕಾರಿಯಾದ ಯೋಗಾಸನಗಳ (yogasana)  ಬಗ್ಗೆ  ತಿಳಿಯೋಣ. ಜೊತೆಗೆ ಅವುಗಳನ್ನು ಅನುಸರಿಸಿ ಆರೋಗ್ಯದಿಂದಿರಿ. 

ಕಿಡ್ನಿ ಆರೋಗ್ಯಕ್ಕೆ ಯೋಗ: ಕಿಡ್ನಿ ಬಲಪಡಿಸಲು ಯೋಗಾಸನಗಳು
ಈ ಯೋಗಾಸನಗಳು ದೇಹವನ್ನು ಸಡಿಲಗೊಳಿಸಿ ಹೊಟ್ಟೆಯ ಆಂತರಿಕ ಅಂಗಗಳ ಮೇಲೆ ಪರಿಣಾಮ ಬೀರುವ ಮೂಲಕ ಬಲಪಡಿಸುತ್ತದೆ. ಇದು ಮೂತ್ರಪಿಂಡವನ್ನು ವಿಶ್ರಾಂತಿ ಮತ್ತು ಶಕ್ತಿಯುತವಾಗಿಸುತ್ತದೆ ಮತ್ತು ಅದರ ಕೆಲಸವನ್ನು ಉತ್ತಮವಾಗಿ ಮಾಡಬಹುದು.

Tap to resize

1. ಭುಜಂಗಾಸನ (bhujangasana)
ಭುಜಂಗಾಸನವು ಒಂದು ಸುಲಭವಾದ ಯೋಗಾಸನವಾಗಿದ್ದು, ಇದನ್ನು ಮಲಗಿ ಮಾಡಲಾಗುತ್ತದೆ. ಇದು ಕಿಬ್ಬೊಟ್ಟೆಯ ಅಂಗಗಳನ್ನು ಸಕ್ರಿಯಗೊಳಿಸುತ್ತದೆ ಮತ್ತು ಅವುಗಳಿಂದ ಒತ್ತಡ ಮತ್ತು ಆಯಾಸವನ್ನು ನಿವಾರಿಸುತ್ತದೆ. ಭುಜಂಗಾಸನವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹ ಸಹಾಯಕವಾಗಿದೆ.

ಭುಜಂಗಾಸನವನ್ನು ಮಾಡಲು ಯೋಗ ಚಾಪೆಯ ಮೇಲೆ ಹೊಟ್ಟೆಯ ಮೇಲೆ ನೇರವಾಗಿ ಮಲಗಿ.
ನಿಮ್ಮ ಕಾಲ್ಬೆರಳುಗಳನ್ನು ಹಿಂದಕ್ಕೆ ಇರಿಸಿ.
ಈಗ ಎರಡೂ ಅಂಗೈಗಳನ್ನು ಭುಜದ ಕೆಳಗೆ ನೆಲದ ಮೇಲೆ ವಿಶ್ರಮಿಸಿ.
ಈಗ ಕುತ್ತಿಗೆಯನ್ನು ಬೆನ್ನು ಮುಖ ಮತ್ತು ಹೊಟ್ಟೆಯನ್ನು ಮೇಲೆತ್ತಿ. ಸೊಂಟ, ಕಾಲು ನೆಲದ ಮೇಲೆ ಇರಲಿ . 

ಸಲಂಬ ಭುಜಂಗಾಸನ
ಸಲಂಬ ಭುಜಂಗಾಸನವೂ ಹೆಚ್ಚಾಗಿ ಭುಜಂಗಾಸನದಂತೆ. ಅಲ್ಲದೇ ಮೂತ್ರಪಿಂಡಗಳಂತೆ (kidney) ಹೊಟ್ಟೆಯ ಆಂತರಿಕ ಅಂಗಗಳನ್ನು ಬಲಗೊಳಿಸಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದನ್ನು ಪ್ರತಿದಿನ ಮಾಡುವುದರಿಂದ ಉತ್ತಮ ಆರೋಗ್ಯವು ನಿಮ್ಮದಾಗುತ್ತದೆ. 


ಮೊದಲು ಸಲಂಬ ಭುಜಾಸನ ಮಾಡಲು  ಹೊಟ್ಟೆಯ ಮೇಲೆ ಯೋಗ ಚಾಪೆಯ ಮೇಲೆ ಮಲಗಿ.
ಈಗ ಭುಜಂಗಾಸನದಂತೆ ಕಾಲನ್ನು ಹಿಂದಕ್ಕೆ ಸಡಿಲಗೊಳಿಸಿ.
ಈಗ ನೀವು ಎರಡೂ ಅಂಗೈಗಳನ್ನು ಭುಜಗಳ ಮುಂಭಾಗದಲ್ಲಿ ನೆಲದ ಮೇಲೆ ಇರಿಸುವುದು ಮತ್ತು ಮೊಣಕೈಗಳು ಸಹ ನೆಲದ ಮೇಲೆ ವಿಶ್ರಾಂತಿ ಪಡೆಯಬೇಕಾಗುತ್ತದೆ.

ನಂತರ ದೇಹವನ್ನು ಸಾಧ್ಯವಾದಷ್ಟು ಹಿಂದಕ್ಕೆ ಎತ್ತಲು ಪ್ರಯತ್ನಿಸಿ.
ಇದೇ ಪರಿಸ್ಥಿತಿಯಲ್ಲಿ ಸ್ವಲ್ಪ ಸಮಯ ದೀರ್ಘವಾಗಿ ಉಸಿರೆಳೆದುಕೊಂಡು ನಂತರ ವಿಶ್ರಮಿಸಿ
ಇದೆ ಭಂಗಿಯನ್ನು ಮತ್ತೆ ಮತ್ತೆ ಮುಂದುವರೆಸಿ. 
ಹೀಗೆ ಮಾಡುವುದರಿಂದ ಮೂತ್ರ ಕೋಶಗಳು ಬಲಪಡೆಯುತ್ತವೆ, ಜೊತೆಗೆ ಆರೋಗ್ಯದಿಂದ ಇರಲು ಸಾಧ್ಯವಾಗುತ್ತವೆ. 

ಭುಜಂಗಾಸನ ಮಾಡುವುದರಿಂದ ಹಲವು ಲಾಭಗಳಿವೆ 
ಇದರಿಂದ ಬೆನ್ನು, ಎದೆ, ಹೊಟ್ಟೆಯ ಭಾಗದ ನರ ಬಲವಾಗುತ್ತದೆ.  ಸೊಂಟ ನೋವು ಇರುವವರು ಈ ಆಸನ ಅಭ್ಯಾಸ ಮಾಡುವುದು ಒಳ್ಳೆಯದು.ಇದರಿಂದ ಮುಟ್ಟಿನ ಸಮಸ್ಯೆಗಳು (Menstrual problem) ಸಹ ನಿವಾರಣೆಯಾಗುತ್ತವೆ. ಆದುದರಿಂದ ಭುಜಂಗಾಸನವನ್ನು ತಪ್ಪದೆ ಮಾಡಿ. 

Latest Videos

click me!