ಈ ದಿನಗಳಲ್ಲಿ ಹದಗೆಡುತ್ತಿರುವ ಜೀವನಶೈಲಿ(Lifestyle) ಮತ್ತು ಹೆಚ್ಚುತ್ತಿರುವ ಕೆಲಸದ ಹೊರೆಯಿಂದಾಗಿ, ಜನರು ನಿರಂತರವಾಗಿ ಅನೇಕ ರೀತಿಯ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ. ಜನಸಾಮಾನ್ಯರಿಂದ ಹಿಡಿದು ವಿಶೇಷ ಚೇತನರವರೆಗೆ ಎಲ್ಲರೂ ಈ ದಿನಗಳಲ್ಲಿ ಅನೇಕ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದಾರೆ.
ಟಿವಿ ರಿಯಾಲಿಟಿ ಶೋ ಶಾರ್ಕ್ ಇಂಡಿಯಾ 2 ನಲ್ಲಿ(Shark tank India 2) ತೀರ್ಪುಗಾರರಾಗಿ ಕಾಣಿಸಿಕೊಂಡ ಶುಗರ್ ಕಾಸ್ಮೆಟಿಕ್ಸ್ ಸಿಇಒ ವಿನಿತಾ ಸಿಂಗ್(Vanitha Singh) ಅವರು ಈಜು ಸ್ಪರ್ಧೆಯಲ್ಲಿ ಭಾಗವಹಿಸುವಾಗ ಪ್ಯಾನಿಕ್ ಅಟ್ಯಾಕ್ ಗೆ ಒಳಗಾಗಿದ್ದರು ಎಂದು ಬಹಿರಂಗಪಡಿಸಿದರು. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಪ್ಯಾನಿಕ್ ಅಟ್ಯಾಕ್ ಎಂಬುದು ಯಾವುದೇ ಸಮಯದಲ್ಲಿ ಇದ್ದಕ್ಕಿದ್ದಂತೆ ಸಂಭವಿಸಬಹುದಾದ ಸಮಸ್ಯೆ. ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಈ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದಾರೆ. ಜನರು ಅದರ ಬಗ್ಗೆ ತಿಳಿದುಕೊಳ್ಳೋದು ಮುಖ್ಯ. ಆದ್ದರಿಂದ ಪ್ಯಾನಿಕ್ ಅಟ್ಯಾಕ್ ಎಂದರೇನು, ಅದರ ರೋಗ ಲಕ್ಷಣ (Symptoms) ಮತ್ತು ಅದನ್ನು ತಪ್ಪಿಸುವ ಮಾರ್ಗಗಳನ್ನು ತಿಳಿದುಕೊಳ್ಳೋಣ-
ಪ್ಯಾನಿಕ್ ಅಟ್ಯಾಕ್ (Panic attack) ಎಂದರೇನು?
ಪ್ಯಾನಿಕ್ ಅಟ್ಯಾಕ್ ಎಂಬುದು ಯಾವುದೇ ವ್ಯಕ್ತಿಯನ್ನು ಯಾವುದೇ ಸಮಯದಲ್ಲಿ ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಸಮಸ್ಯೆ. ಸಾಮಾನ್ಯವಾಗಿ ಈ ಸಮಸ್ಯೆ ಕೆಲವು ಭಯದಿಂದ ಉದ್ಭವಿಸುತ್ತೆ. ಪ್ಯಾನಿಕ್ ಅಟ್ಯಾಕ್ ಬಹಳ ವೇಗವಾಗಿ ಸಂಭವಿಸುತ್ತೆ ಮತ್ತು ಕೆಲವೊಮ್ಮೆ ಇದು ಒಂದು ರೀತಿಯ ಭಯದಿಂದಾಗಿರಬಹುದು.
ಪ್ಯಾನಿಕ್ ಅಟ್ಯಾಕ್ ಯಾವುದೇ ಸಮಯದಲ್ಲಿ ಎಲ್ಲಿಯಾದರೂ ಇದ್ದಕ್ಕಿದ್ದಂತೆ ಬರಬಹುದು. ರಿಪಿಟೇಡ್ ಪ್ಯಾನಿಕ್ ಅಟ್ಯಾಕ್ ಗಳು ಪ್ಯಾನಿಕ್ ಡಿಸಾರ್ಡರ್ ಗೆ(Panic disorder) ಕಾರಣವಾಗಬಹುದು. ಈ ಸಮಸ್ಯೆಯು ಗಂಭೀರ ರೂಪವನ್ನು ತೆಗೆದುಕೊಳ್ಳಬಹುದು, ಏಕೆಂದರೆ ಇದು ನಮ್ಮ ಹೃದಯದ ಮೇಲೆ ನೇರ ಪರಿಣಾಮ ಬೀರುತ್ತೆ.
ಈ ರೋಗಲಕ್ಷಣಗಳಿಂದ ನೀವು ಪ್ಯಾನಿಕ್ ಅಟ್ಯಾಕ್ ಗುರುತಿಸಬಹುದು.
ಪ್ರಜ್ಞಾಹೀನತೆ
ಭಯದ ಭಾವನೆ
ಹೃದಯ ಬಡಿತ ಹೆಚ್ಚಾಗುವುದು
ಉಸಿರುಗಟ್ಟಿದ ಅನುಭವ
ಬಿಸಿ ಶಾಖವನ್ನು ಅನುಭವಿಸೋದು
ದೇಹದಾದ್ಯಂತ ನಡುಕ
ಹಠಾತ್ ಉಸಿರಾಟದ ತೊಂದರೆ
ಎದೆ ನೋವು ಮತ್ತು ಅಸ್ವಸ್ಥತೆ
ಹೃದಯಾಘಾತದಂತೆ ಭಾಸವಾಗುವುದು
ಫಾಸ್ಟ್ ಮತ್ತು ಕಡಿಮೆ ಉಸಿರಾಟ
ವಾಂತಿ ಮತ್ತು ಹೊಟ್ಟೆ ನೋವು(Stomach pain)
ಪ್ಯಾನಿಕ್ ಅಟ್ಯಾಕ್ ಗೆ ಕಾರಣಗಳು
ಪ್ಯಾನಿಕ್ ಅಟ್ಯಾಕ್ ಸಮಸ್ಯೆ ಕೆಲವೊಮ್ಮೆ ಜೆನೆಟಿಕ್ಸ್(Genetics) ಕಾರಣಗಳಿಂದಾಗಿರಬಹುದು.
ಹಠಾತ್ ಭಯದಿಂದಾಗಿ ಕೂಡ ಪ್ಯಾನಿಕ್ ಅಟ್ಯಾಕ್ ಸಂಭವಿಸಬಹುದು.
ನೀವು ಸಾಕಷ್ಟು ಒತ್ತಡ ಅಥವಾ ಭಯದಲ್ಲಿದ್ದರೂ, ಇದು ಪ್ಯಾನಿಕ್ ಅಟ್ಯಾಕ್‌ಗೆ ಕಾರಣವಾಗಬಹುದು.
ಸ್ವಭಾವತಃ ಅತ್ಯಂತ ಸೂಕ್ಷ್ಮ ಜನರು ಸಹ ಈ ಸಮಸ್ಯೆಗೆ ಬಲಿಯಾಗಬಹುದು.
ಸಣ್ಣ ವಿಷಯಗಳಿಗೆ ಒತ್ತು ನೀಡೋದು ಪ್ಯಾನಿಕ್ ಅಟ್ಯಾಕ್ ಗೆ ಮುಖ್ಯ ಕಾರಣವಾಗಬಹುದು.
ಪ್ಯಾನಿಕ್ ಅಟ್ಯಾಕ್ ನಿರ್ವಹಿಸೋದು ಹೇಗೆ?
ಪ್ಯಾನಿಕ್ ಅಟ್ಯಾಕ್ ಸಂಭವಿಸಿದಾಗ, ಅದು ಅಪಾಯಕಾರಿಯಲ್ಲ, ಕೇವಲ ಅಲ್ಪಾವಧಿಯ ಆತಂಕ ಎಂದು ನಿಮಗೆ ನೀವೇ ಮನವರಿಕೆ ಮಾಡಿಕೊಳ್ಳಿ.
ಮೂಗಿನ ಮೂಲಕ ಸಾಧ್ಯವಾದಷ್ಟು ನಿಧಾನವಾಗಿ ಮತ್ತು ಆಳವಾಗಿ ಉಸಿರಾಡಿ.
ಬಾಯಿಯ ಸಹಾಯದಿಂದ ನಿಧಾನವಾಗಿ ಮತ್ತು ಆಳವಾಗಿ ಉಸಿರನ್ನು ಹೊರಹಾಕಿ.
ನಿಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ನಿಮ್ಮ ಉಸಿರಾಟದ(Breathing) ಬಗ್ಗೆ ಗಮನ ಹರಿಸಿ.
ಅಗತ್ಯವಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ನಿಯಮಿತವಾಗಿ ಯೋಗ ಮಾಡಿ ಮತ್ತು ಆರೋಗ್ಯಕರ ಆಹಾರ ತೆಗೆದುಕೊಳ್ಳಿ.
ಸಾಧ್ಯವಾದಷ್ಟು ಒತ್ತಡದಿಂದ ದೂರವಿರಿ.