ಒತ್ತಡ ದೂರ ಮಾಡಬೇಕೇ? ಹಾಗಿದ್ರೆ ಯಾರನ್ನಾದ್ರೂ ಹಗ್ ಮಾಡಿ ಸಾಕು

First Published | Mar 4, 2023, 2:50 PM IST

ಬಿಡುವಿಲ್ಲದ ಲೈಫ್ ಸ್ಟೈಲ್ ಮತ್ತು ನಿರಂತರ ಒತ್ತಡವು ರಾತ್ರಿಯ ನಿದ್ರೆಯ ಮೇಲೆ ಪರಿಣಾಮ ಬೀರುತ್ತೆ, ಇದು ನಮ್ಮ ಮೆದುಳಿನ ಸಾಮರ್ಥ್ಯದ ಮೇಲೆ ವೇಗವಾಗಿ ಪರಿಣಾಮ ಬೀರುತ್ತೆ. ನಾವು ಸಣ್ಣ ವಿಷಯಗಳನ್ನು ಮರೆಯಲು ಪ್ರಾರಂಭಿಸುತ್ತೇವೆ ಮತ್ತು ಕೆಲವೊಮ್ಮೆ ಖಿನ್ನತೆಗೆ ಬಲಿಯಾಗುತ್ತೇವೆ. ರಾತ್ರಿ ನಾವು ಹೇಗೆ ಚೆನ್ನಾಗಿ ನಿದ್ರೆ ಮಾಡಬಹುದು ಮತ್ತು ನಮ್ಮ ಮೆದುಳನ್ನು ಉತ್ತಮ ರೀತಿಯಲ್ಲಿ ವಿಶ್ರಾಂತಿ ಹೇಗೆ ಪಡೆಯಬಹುದು ಎಂದು ತಿಳಿಯೋಣ.

ಈಗಿನ ಬ್ಯುಸಿ ದಿನಗಳಲ್ಲಿ ರಾತ್ರಿ ನಿದ್ದೆ ಬಾರದಿರುವ ಸಮಸ್ಯೆ(Sleeplessness) ಸಾಮಾನ್ಯವಾಗಿದೆ. ಎಲ್ಲಾ ಪ್ರಯತ್ನಗಳ ನಂತರವೂ ಕೆಲವು ಜನರಿಗೆ ರಾತ್ರಿಯ ನಿದ್ರೆ ಸರಿಯಾಗಿ ಸಿಗುತ್ತಿಲ್ಲ. ರಾತ್ರಿ ಸಾಕಷ್ಟು ನಿದ್ರೆಯ ಕೊರತೆಯಿಂದಾಗಿ, ನಮ್ಮ ದಿನದ ಮೇಲೆ ಪರಿಣಾಮ ಬೀರುತ್ತೆ ಮತ್ತು  ಎಲ್ಲಾ ಸಮಯದಲ್ಲೂ ದಣಿವು ಮತ್ತು ನಿರಾಶೆಯನ್ನು ಅನುಭವಿಸಬೇಕಾಗುತ್ತೆ.  ಹೆಚ್ಚು ದಿನಗಳವರೆಗೆ ರಾತ್ರಿಯಲ್ಲಿ ಉತ್ತಮವಾಗಿ ನಿದ್ರೆ ಮಾಡಲು ಸಾಧ್ಯವಾಗದಿದ್ದರೆ, ಈ ಕಾರಣದಿಂದಾಗಿ ಖಿನ್ನತೆ, ಆತಂಕದಂತಹ ಮಾನಸಿಕ ಸಮಸ್ಯೆಗಳಿಗೆ ಬಲಿಯಾಗಬಹುದು.

ಸಾಕಷ್ಟು ನಿದ್ರೆ ಪಡೆಯೋದು ಏಕೆ ಮುಖ್ಯ?: ರಾತ್ರಿ ಸಾಕಷ್ಟು ನಿದ್ರೆ ಮಾಡದಿದ್ದರೆ, ಅದು ನಮ್ಮ ಮೆದುಳಿನ ಗ್ರಹಿಕೆಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತೆ, ಇದರಿಂದಾಗಿ ದಿನವಿಡೀ ಕಲಿತ ವಿಷಯಗಳು ಉತ್ತಮವಾಗಿ ಪ್ರೋಸೆಸ್ ಆಗೋದಿಲ್ಲ, ಇದರಿಂದಾಗಿ ವಿಷಯಗಳನ್ನು ನೆನಪಿಟ್ಟುಕೊಳ್ಳೋದು ಕಷ್ಟ. ಈ ಕಾರಣದಿಂದಾಗಿ, ಅಧಿಕ ರಕ್ತದೊತ್ತಡ, ಮೈಗ್ರೇನ್, ಖಿನ್ನತೆ (Depression) ಮುಂತಾದ ಸಮಸ್ಯೆಗಳು ಉಂಟಾಗಬಹುದು.

Latest Videos


ಉತ್ತಮ ನಿದ್ರೆಗಾಗಿ ಈ ಟ್ರಿಕ್ಸ್ ಅನುಸರಿಸಿ: ಬಾಡಿ ಸ್ಕ್ಯಾನ್ ತಂತ್ರವನ್ನು(Body scan technique) ಅಳವಡಿಸಿಕೊಳ್ಳಿ
ಬಾಡಿ ಸ್ಕ್ಯಾನ್ ಒಂದು ರೀತಿಯ ಮೈಂಡ್ ಫುಲ್ ಮೆಡಿಟೇಶನ್. ಇದನ್ನು ಮಾಡಲು, ಚಾಪೆಯ ಮೇಲೆ ಆರಾಮವಾಗಿ ಮಲಗಿ. ನಂತರ ಕಣ್ಣುಗಳನ್ನು ಮುಚ್ಚಿಕೊಳ್ಳಿ ಮತ್ತು ನಿಮ್ಮನ್ನು ಶಾಂತಗೊಳಿಸಲು ಪ್ರಯತ್ನಿಸಿ. 

ಈಗ ನಿಮ್ಮ ದೇಹವನ್ನು ಕೈಗಳು, ಎದೆ, ಸೊಂಟ, ಮೊಣಕಾಲುಗಳು, ಕಾಲ್ಬೆರಳುಗಳವರೆಗೆ ಸ್ಕ್ಯಾನರ್ ನಂತೆ ಯೋಚಿಸಿ ಮತ್ತು ನಂತರ ಕಾಲ್ಬೆರಳುಗಳಿಂದ ತಲೆಯವರೆಗೆ. ಇದನ್ನು 5 ರಿಂದ 6 ಬಾರಿ ಮಾಡಿ. ಇದರಿಂದಾಗಿ ಉತ್ತಮ ನಿದ್ರೆಗಾಗಿ(Good sleep) ನಿಮ್ಮನ್ನು ನೀವು ಸಿದ್ಧಪಡಿಸಿಕೊಳ್ಳಲು ಸಾಧ್ಯವಾಗುತ್ತೆ.

10 ಬಾರಿ ಆಳವಾದ ಉಸಿರಾಟ (Breathing) ತೆಗೆದುಕೊಳ್ಳೋದು ಮುಖ್ಯ
ನೇರವಾಗಿ ಹಾಸಿಗೆಯ ಮೇಲೆ ಮಲಗಿ ಆಳವಾದ ಉಸಿರನ್ನು ತೆಗೆದುಕೊಳ್ಳಿ. ನೀವು ಇದನ್ನು 10 ಅಥವಾ ಅದಕ್ಕಿಂತ ಹೆಚ್ಚು ಬಾರಿ ಮಾಡಬಹುದು. ಇದನ್ನು ಮಾಡೋದರಿಂದ, ನಿಮ್ಮ ಮನಸ್ಸು ಶಾಂತವಾಗುತ್ತೆ ಮತ್ತು ಹೃದಯ ಬಡಿತವನ್ನು ನಿಯಂತ್ರಿಸಬಹುದು.

ಈ ಕಾರಣದಿಂದಾಗಿ ನೀವು ನಿಮ್ಮ ಮೆದುಳಿಗೆ ವಿಶ್ರಾಂತಿ ನೀಡಲು ಮತ್ತು ನಕಾರಾತ್ಮಕ (Negative) ಆಲೋಚನೆಯನ್ನು ನಿಲ್ಲಿಸಲು ಸಾಧ್ಯವಾಗುತ್ತೆ. ಇದು ಅಂಗ್ಸೈಟಿ ಮತ್ತು ಸ್ಟ್ರೆಸ್ ಹಾರ್ಮೋನುಗಳನ್ನು ನಿಯಂತ್ರಣಕ್ಕೆ ತರುತ್ತೆ.
 

ಆಕ್ಯುಪ್ರೆಷರ್ (Accupressure) ಪ್ರಯತ್ನಿಸಿ: ಇದು ಚೀನೀ ವಿಧಾನವಾಗಿದ್ದು, ಇದರ ಸಹಾಯದಿಂದ ನೀವು ಉತ್ತಮ ನಿದ್ರೆಯನ್ನು ಪಡೆಯಬಹುದು. ಮೊದಲನೆಯದಾಗಿ, ಮಲಗಿ ಮತ್ತು ಬೆರಳುಗಳ ಸಹಾಯದಿಂದ ಕಿವಿಯ ಹಿಂಭಾಗದಲ್ಲಿ ತಲೆಯ ಮೂಳೆಗಳನ್ನು ಒತ್ತಿ. ಈ ಪಾಯಿಂಟ್ ಗಳನ್ನು ಒತ್ತುವ ಮೂಲಕ, ರಾತ್ರಿಯಲ್ಲಿ ನಿದ್ರಾಹೀನತೆಯ ರೋಗವನ್ನು ಸಹ ಗುಣಪಡಿಸಬಹುದು.

ಹಗ್ ಥೆರಪಿ (Hug therapy) ಪರಿಣಾಮಕಾರಿ: ರಾತ್ರಿ ಮಲಗುವ ಮೊದಲು ನೀವು ಯಾರನ್ನಾದರೂ ತಬ್ಬಿಕೊಂಡರೆ, ಅದು ದೇಹದಲ್ಲಿ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತತ್ತೆ , ಅದು ಅಂಗ್ಸೈಟಿ ಉತ್ಪಾದಿಸುವ ಹಾರ್ಮೋನ್ 'ಕಾರ್ಟಿಸೋಲ್' ಅನ್ನು ನಿಯಂತ್ರಿಸುತ್ತೆ. ನೀವು ಒಬ್ಬಂಟಿಯಾಗಿದ್ದರೆ, ದಿಂಬನ್ನು ಗಟ್ಟಿಯಾಗಿ ಅಪ್ಪಿಕೊಳ್ಳುವ ಮೂಲಕ ಮಲಗಬಹುದು. 

click me!