ಪರ್ಸನಲ್ ಹೈಜಿನ್‌ಗಾಗಿ ಮಳೆಗಾಲದಲ್ಲಿ ಮಹಿಳೆಯರು ಇದನ್ನ ಮಾಡ್ಲೇಬೇಕು

First Published | Jul 28, 2024, 5:50 PM IST

ಮಳೆಗಾಲದಲ್ಲಿ ಮಹಿಳೆಯರು ತಮ್ಮ ಪರ್ಸನಲ್ ಹೈಜಿನ್ ಬಗ್ಗೆ ತುಂಬಾನೆ ಗಮನ ಹರಿಸಬೇಕು ಇಲ್ಲಾಂದ್ರೆ, ಇಂಟಿಮೇಟ್ ಆರೋಗ್ಯ ಸಮಸ್ಯೆಗಳು ಕಾಡೋದಕ್ಕೆ ಶುರುವಾಗುತ್ತೆ ಹುಷಾರು. 
 

ಮಳೆಗಾಲದಲ್ಲಿ (Rainy season) ಬಟ್ಟೆ ಒಣಗದಿರೋದು ಒಂದು ದೊಡ್ಡ ಸಮಸ್ಯೆ ಆಗಿದೆ. ಕೆಲವೊಮ್ಮೆ ಬಟ್ಟೆಗಳು ಒಣಾಗಿದ ಮೇಲೂ ಅದ್ರಿಂದ ವಾಸನೆ ಬರೋದಿಕ್ಕೆ ಶುರುವಾಗುತ್ತೆ. ಇದ್ರಿಂದ ಕೀಟಾಣುಗಳು ಹರಡುವ ಸಾಧ್ಯತೆ ಇದೆ. ಕೀಟಾಣುಗಳಿಂದಾಗಿ ಇನ್ಫೆಕ್ಷನ್ ಹೆಚ್ಚಾಗಿ ಅನೇಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ಕೂಡ ಹೆಚ್ಚಾಗುತ್ತೆ.  ಮಳೆಗಾಲದಲ್ಲಿ ತಮ್ಮ ಇಂಟಿಮೆಟ್ ಹೈಜಿನ್ (intimate hygiene) ಬಗ್ಗೆ ಮಹಿಳೆಯರು ಗಮನ ಹರಿಸೋದು ತುಂಬಾನೆ ಮುಖ್ಯ. ಅದಕ್ಕಾಗಿ ಏನು ಮಾಡಬೇಕು ಅನ್ನೋದನ್ನ ನೋಡೋಣ. 
 

ಕಾಟನ್ ಅಂಡರ್ ವೇರ್ ಬಳಸಿ
ಎಕ್ಸ್’ಪರ್ಟ್ ಗಳ ಅನುಸಾರ ಮಹಿಳೆಯರು ತಮ್ಮ ಅಂಡರ್ ವೇರ್ ಖರೀದಿ ಮಾಡುವಾಗ ಸರಿಯಾಗಿ ಯೋಚನೆ ಮಾಡಿ ಖರೀದಿಸಬೇಕು. ಮುಖ್ಯವಾಗಿ ಕಾಟನ್ ಇನ್ನರ್ ವೇರ್ (cotton underwear) ಖರೀದಿಸಬೇಕು. ಇದರಿಂದ ಗಾಳಿ ಸುಲಭವಾಗಿ ಪಾಸ್ ಆಗುತ್ತೆ, ಹಾಗಾಗಿ ಇನ್ನರ್ ವೇರ್ ಒದ್ದೆಯಾಗಿ ಬ್ಯಾಕ್ಟೀರಿಯಾ ಉಂಟಾಗುವ ಸಾಧ್ಯತೆ ಕಡಿಮೆ. 

Latest Videos


ಮೈಲ್ಡ್ ಡಿಟರ್ಜೆಂಟ್ ಬಳಸಿ 
ಒಳ ಉಡುಪುಗಳನ್ನು ವಾಶ್ ಮಾಡೋವಾಗ ಮೈಲ್ಡ್ ಡಿಟರ್ಜೆಂಟ್ (mild detergent)ಬಳಸಿ. ಅದನ್ನ ಬೇರೆಯಾಗಿಯೇ ವಾಶ್ ಮಾಡೋದು ಒಳ್ಳೆದು. ಹೆಚ್ಚಿನ ಡೀಟರ್ಜೆಂಟ್ ಬಳಸೋದ್ರಿಂದ ಅಂಡರ್ ವೇರ್ ನಿಂದಾಗಿ ಸೂಕ್ಷ್ಮ ಭಾಗಗಳಲ್ಲಿ ತುರಿಕೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಜೊತೆಗೆ ಒಳ ಉಡುಪುಗಳನ್ನು ವಾಶ್ ಮಾಡೋವಾಗ ಯಾವುದೇ ಪರಿಮಳಯುಕ್ತ ಲಿಕ್ವಿಡ್ ಬಳಕೆ ಬೇಡ. 

ಎಕ್ಸರ್ ಸೈಜ್ ಬಳಿಕ ಒಳ ಉಡುಪುಗಳನ್ನ ಬದಲಿಸಿ
ತುಂಬಾ ಹೊತ್ತು ವ್ಯಾಯಾಮ, ಜಿಮ್ ಮಾಡಿದ ನಂತರ ಮೈಯೆಲ್ಲಾ ಬೆವರುತ್ತದೆ. ಹಾಗಾಗಿ ಎಕ್ಸರ್ಸೈಜ್ ಮಾಡಿದ ಕೂಡ್ಲೇ ಒಳ ಉಡುಪುಗಳನ್ನ ಬದಲಿಸಿ, ಇಂಟಿಮೇಟ್ ಏರಿಯಾಗಳನ್ನ ಸ್ವಚ್ಚ ಮಾಡಿ ಆಮೇಲೆ ಸ್ನಾನ ಮಾಡಿ. ಇದರಿಂದ ಯಾವುದೇ ರೀತಿಯ ಸೋಂಕು ಉಂಟಾಗೋದಿಲ್ಲ. 

ಟೈಟ್ ಆಗಿರೋ ಒಳ ಉಡುಪು, ಪ್ಯಾಂಟ್ ಬೇಡ
ಸ್ಟೈಲ್ ಹೆಸರಲ್ಲಿ ಟೈಟ್ ಆಗಿರೋ ಇನ್ನರ್ ವೇರ್, ಪ್ಯಾಂಟ್, ಲೆಗ್ಗಿಂಗ್ಸ್ (leggings) ಧರಿಸಬೇಡಿ. ಇವುಗಳನ್ನ ಧರಿಸೋದ್ರಿಂದ ಗಾಳಿಯಾಡಲೂ ಜಾಗವಿಲ್ಲದೆ ವಿಪರೀತ ಬೆವರುತ್ತದೆ. ಇದರಿಂದ ಯೀಸ್ಟ್ ಅಥವಾ ಬ್ಯಾಕ್ಟೀರಿಯ ಬೆಳೆಯುತ್ತದೆ. ಇದರಿಂದ ಸೋಂಕು ಹೆಚ್ಚುವ ಸಾಧ್ಯತೆ ಇದೆ. 

ಪ್ಯಾಂಟಿಗೆ ಡಿಯೋ ಅಥವಾ ಪರ್ಫ್ಯೂಮ್ ಹಾಕಬೇಡಿ
ಕೆಲವೊಮ್ಮೆ ಹುಡುಗಿಯರು ಯೋನಿಯ ವಾಸನೆಯಿಂದ ಬಚಾವ್ ಆಗೋದಕ್ಕೆ ಪರ್ಫ್ಯೂಮ್ ಅಥವಾ ಡಿಯೋ ಬಳಕೆ ಮಾಡ್ತಾರೆ. ಆದರೆ ಇದರಿಂದ ಯೋನಿಯ ಸುತ್ತಮುತ್ತಲೂ ರ್ಯಾಶಸ್, ಅಲರ್ಜಿ ಉಂಟಾಗುತ್ತೆ. 
 

ಪಿರಿಯಡ್ಸ್ ಸಮಯದಲ್ಲಿ ಪ್ರತಿ ನಾಲ್ಕು ಗಂಟೆಗೊಮ್ಮೆ ಪ್ಯಾಡ್ ಬದಲಿಸಿ
ಪಿರಿಯಡ್ಸ್ ಸಮಯದಲ್ಲಿ ಮಹಿಳೆಯರು ಪ್ರತಿ ನಾಲ್ಕರಿಂದ ಆರು ಗಂಟೆಗೊಮ್ಮೆ ಪ್ಯಾಡ್ ಬದಲಿಸಬೇಕು. ಇಲ್ಲವಾದರೆ ಸೋಂಕು ಉಂಟಾಗುತ್ತೆ. ಇದರ ಬದಲು ಟ್ಯಾಂಪೂನ್, ಮೆನ್ಸ್ಟ್ರುವಲ್ ಕಪ್ ಬಳಕೆ ಮಾಡಬಹುದು.

ಇಂಟಿಮೇಟ್ ಏರಿಯಾವನ್ನು ಉಗುರುಬಿಸಿ ನೀರಿನಲ್ಲಿ ಕ್ಲೀನ್ ಮಾಡಿ
ವಜೈನಾ ಸುತ್ತಮುತ್ತ ಕ್ಲೀನ್ ಮಾಡೋವಾಗ ಮೈಲ್ಡ್ ಸೋಪ್ ಮತ್ತು ಉಗುರುಬಿಸಿ ನೀರು ಬಳಸಿ. ಹೆಚ್ಚಿನ ಪರಿಮಳ ಹೊಂದಿರೋ ಸೋಪ್ ಬಳಕೆ ಮಾಡೋದು ಬೇಡ. ಇದರಿಂದ ವಜೈನಾದ ಪಿಎಚ್ ಮಟ್ಟ (ph level) ಕುಸಿಯುತ್ತದೆ. 

click me!