ಬುಮ್ರಾ ಕುಂ* ಸಖತ್‌ ಆಗಿದೆ ಎಂದು ಪೋಸ್ಟ್‌ ಮಾಡಿದ ಪತ್ನಿ ಸಂಜನಾ ಗಣೇಶನ್‌!

By Santosh Naik  |  First Published Nov 22, 2024, 10:42 PM IST

ಜಸ್‌ಪ್ರೀತ್‌ ಬುಮ್ರಾ ಅವರ ಪತ್ನಿ ಸಂಜನಾ ಗಣೇಶನ್‌, ಬುಮ್ರಾ ಬೌಲಿಂಗ್‌ ಬಗ್ಗೆ ಮಾಡಿರುವ ಕಾಮೆಂಟ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಬುಮ್ರಾ ಅವರ ಫೋಟೋ ಹಂಚಿಕೊಂಡು 'ಗ್ರೇಟ್‌ ಬೌಲರ್‌, ಇವನ್‌ ಗ್ರೇಟರ್‌ ಬೂಟಿ' ಎಂದು ಬರೆದುಕೊಂಡಿದ್ದಾರೆ.


ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್‌ ಗವಾಸ್ಕರ್‌ ಟ್ರೋಫಿಯ ಪರ್ತ್‌ ಟೆಸ್ಟ್‌ನ ಮೊದಲ ದಿನ ಜಸ್‌ಪ್ರೀತ್‌ ಬುಮ್ರಾ ಅವರ ಬೌಲಿಂಗ್‌ ಸ್ಪೆಲ್‌ಗೆ ದಿಗ್ಗಜ ಕ್ರಿಕೆಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆದರೆ, ಸೋಶಿಯಲ್‌ ಮೀಡಿಯಾದಲ್ಲಿ ಜಸ್‌ಪ್ರೀತ್‌ ಬುಮ್ರಾಗಿಂತ ಹೆಚ್ಚಾಗಿ ಅವರ ಪತ್ನಿ ಹಾಗೂ ಸ್ಪೋರ್ಟ್ಸ್‌ ಬ್ರಾಡ್‌ಕಾಸ್ಟರ್‌ ಸಂಜನಾ ಗಣೇಶನ್‌ ಅವರು ಪತಿಯ ಬಗ್ಗೆ ಮಾಡಿರುವ ಕಾಮೆಂಟ್‌ ಸಖತ್‌ ವೈರಲ್‌ ಆಗಿದೆ. ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಪರ್ತ್‌ ಟೆಸ್ಟ್‌ನ ಮೊದಲ ದಿನ ಭಾರತ 150 ರನ್‌ಗೆ ಆಲೌಟ್‌ ಆದರೆ, ಕೇವಲ 17 ರನ್‌ಗೆ 4 ವಿಕೆಟ್‌ ಉರುಳಿಸಿರುವ ಬುಮ್ರಾ ಬೌಲಿಂಗ್‌ ಸಾಹಸದಿಂದ ಭಾರತ ತಂಡ ಮೇಲುಗೈ ಕಂಡಿದೆ. ಬುಮ್ರಾ ಸಾಹಸಿಕ ಬೌಲಿಂಗ್‌ನಿಂದ ಆಸೀಸ್‌ ತಂಡ 67 ರನ್‌ಗೆ 7 ವಿಕೆಟ್‌ ಕಳೆದುಕೊಂಡಿದೆ. ರೋಹಿತ್‌ ಶರ್ಮ ಅನುಪಸ್ಥಿತಿಯಲ್ಲಿ ಜಸ್‌ಪ್ರೀತ್‌ ಬುಮ್ರಾ ನಾಯಕರಾಗಿ ಅದ್ಭುತ ನಿರ್ವಹಣೆ ತೋರಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.

ಬುಮ್ರಾ ಬೌಲಿಂಗ್‌ ನೋಡಿ ವಾಸಿಮ್‌ ಅಕ್ರಮ್‌ ಭಾರೀ ಮೆಚ್ಚುಗೆ ತೋರಿದ್ದರೆ, ಲಸಿತ್‌ ಮಾಲಿಂಗ, ಜಸ್‌ಪ್ರೀತ್‌ ಬೆಸ್ಟ್‌ ಇನ್‌ ದ ವರ್ಲ್ಡ್‌ ಬುಮ್ರಾ ಎಂದು ಹೇಳಿದ್ದಾರೆ. ಆದರೆ, ಬುಮ್ರಾ ಬೌಲಿಂಗ್‌ಗೆ ಇವರೆಲ್ಲರ ರಿಯಾಕ್ಷನ್‌ಗಿಂತ ಹೆಚ್ಚಾಗಿ ಸಂಜನಾ ಗಣೇಶನ್‌ ಮಾಡಿರುವ ಪೋಲಿ ಕಾಮೆಂಟ್‌ ಸಖತ್‌ ವೈರಲ್‌ ಆಗಿದೆ. ತಮ್ಮ ಇನ್ಸ್‌ಟಾಗ್ರಾಮ್‌ ಹ್ಯಾಂಡಲ್‌ನ ಸ್ಟೋರಿಯಲ್ಲಿ ಬುಮ್ರಾ ಫೋಟೋವನ್ನು ಹಂಚಿಕೊಂಡಿರುವ ಜಸ್‌ಪ್ರೀತ್‌ ಬುಮ್ರಾ, 'ಗ್ರೇಟ್‌ ಬೌಲರ್‌, ಇವನ್‌ ಗ್ರೇಟರ್‌ ಬೂಟಿ' ಎಂದು ಬರೆದಿದ್ದಾರೆ. ಇದರರ್ಥ, ಶ್ರೇಷ್ಠ ಬೌಲರ್‌, ಅದಕ್ಕಿಂತ ಶ್ರೇಷ್ಠ ಪೃಷ್ಠ' ಎನ್ನುವುದಾಗಿದೆ.

Tap to resize

Latest Videos

undefined

ಸಂಜನಾ ಗಣೇಶನ್‌ ಅವರ ಪೋಸ್ಟ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದಲ್ಲದೆ, ಕಾಡ್ಗಿಚ್ಚಿನಂತೆ ಹರಡಿದೆ. 2021ರ ಮಾರ್ಚ್‌ನಲ್ಲಿ ಮದುವೆಯಾಗಿದ್ದ ಸಂಜನಾ ಹಾಗೂ ಜಸ್‌ಪ್ರೀತ್‌ಗೆ ಅಂಗದ್‌ ಹೆಸರಿನ ಪುತ್ರನಿದ್ದಾನೆ. ಬುಮ್ರಾ ಕುರಿತಾಗಿ ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಸಂಜನಾ ಗಣೇಶನ್‌ ಎಂದಿಗೂ ನಾಚಿಕೆ ಪಟ್ಟುಕೊಂಡಿಲ್ಲ.

ಸುಮ್ಮನೆ ಊಹಿಸಿಕೊಳ್ಳಿ. ಇಂಥದ್ದೇ ಪೋಸ್ಟ್‌ಅನ್ನು ಬುಮ್ರಾ ಹಂಚಿಕೊಂಡು, ಇದೇ ಮಾತನ್ನು ಸಂಜನಾ ಫೋಟೋಗೆ ಅವರು ಹೇಳಿದ್ದರೆ ಏನಾಗುತ್ತಿತ್ತು. ಎಲ್ಲಾ ಸೋಶಿಯಲ್‌ ಮೀಡಿಯಾಗಳು ಬುಮ್ರಾರನ್ನು ವಿಲನ್‌ ಮಾಡಿರುತ್ತಿದ್ದವು. ಇದೇ ಕೆಲವನ್ನು ಮಹಿಳೆ ಮಾಡಿದರೆ, ಯಾರೂ ಕೂಡ ಈ ಬಗ್ಗೆ ಮಾತನಾಡೋದಿಲ್ಲ ಎಂದು ಬರೆದಿದ್ದಾರೆ.

ಇನ್ನೂ ಕೆಲವರು ಬೂಟಿ ಅನ್ನೋದರ ಅರ್ಥವೇನು ಅಂತಲೂ ಪ್ರಶ್ನೆ ಮಾಡಿದ್ದಾರೆ. 'ಭಾಬಿ ನೀವು ಆಸ್ಟ್ರೇಲಿಯಾದಲ್ಲಿ ಇಲ್ಲದೆ ಇದ್ದರೆ ಒಳ್ಳೆಯದು. ಈ ಪೋಸ್ಟ್‌ ನೋಡಿದ್ರೆ ಬುಮ್ರಾ ಇವತ್ತು ನಿಮ್ಮನ್ನು ಬಿಡಲಿಕ್ಕಿಲ್ಲ' ಎಂದು ಕಾಮೆಂಟ್‌ ಮಾಡಿದ್ದಾರೆ. ಬುಮ್ರಾ ಪತ್ನಿಯ ಈ ಮಾತುಗಳನ್ನು ನೋಡಿದರೆ, ಬೌಲಿಂಗ್‌ನಲ್ಲಿ ಬುಮ್ರಾ ಇಷ್ಟು ಅಕ್ಯೂರಿಸಿ ಕಾಪಾಡಿಕೊಳ್ಳಲು ಹೇಗೆ ಸಾಧ್ಯ ಅನ್ನೋದು ಗೊತ್ತಾಗುತ್ತಿದೆ' ಎಂದು ಬರೆದಿದ್ದಾರೆ.

Viral Video: 'ನನ್ನ ಚಪ್ಪಲಿ ಸೈಜ್‌ 41..' ಪ್ರಖ್ಯಾತ ಹೀರೋಗೆ ಹೇಗೆ ಹೇಳಿದ್ಯಾಕೆ ನಟಿ ಖುಷ್ಭು ಸುಂದಂರ್‌!

'ಭಾಬಿ ಸ್ವಲ್ಪ ಭಾವನೆಗಳನ್ನು ಹಿಡಿದಿಟ್ಟುಕೊಳ್ಳಿ..' 'ಭಾಬಿ ಇಂದು ರಾತ್ರಿ ಯಾರಿಗೂ ಒಬ್ಬರಿಗೆ ಕೂರಲು ಕೂಡ ಬಿಡೋದಿಲ್ಲ','ಹಮಾರಿ ಭಾಬಿ ಕೈಸೀ ಹೋ, ಸಂಜನಾ ಭಾಬಿ ಜೈಸಿ ಹೋ', 'ಅದಾನಿ ವಿಷಯ ಮೀಡಿಯಾಗಳಿಗೆ ಮರೆತು ಹೋಗುತ್ತೆ. ನಾಳೆಯಿಂದ ಬುಮ್ರಾ ಬೂಟಿ ಬಗ್ಗೆಯೇ ಚರ್ಚೆ ಆಗಲಿದೆ' ಎನ್ನುವ ಕಾಮೆಂಟ್‌ಗಳು ಬಂದಿವೆ.

ಸೀರೆಯುಟ್ಟು ಓಡಿ ಬಂದ ನಿವೇದಿತಾ ಗೌಡ, 'ಸಿಂಗಲ್ಸ್‌ಗಳ ಜನ್ಮ ಹಾಳ್‌ ಮಾಡ್ತಿದ್ದೀರಾ' ಅನ್ನೋದಾ?

click me!