Health Tips: ಹೃದ್ರೋಗಿ ಮೊಟ್ಟೆ ತಿನ್ನೋದು ಒಳ್ಳೇದೋ, ಅಲ್ವೋ?

First Published | Oct 18, 2022, 4:26 PM IST

ಹೆಚ್ಚಿನ ಮನೆಗಳಲ್ಲಿ, ಬ್ರೇಕ್ ಫಾಸ್ಟ್ ಮೊಟ್ಟೆಯನ್ನು ಒಳಗೊಂಡಿರುತ್ತೆ. ಮೊಟ್ಟೆಗಳಿಂದ ಅನೇಕ ರುಚಿಕರವಾದ ತಿನಿಸುಗಳನ್ನು ತಯಾರಿಸಲಾಗುತ್ತೆ. ವಿಶೇಷವಾಗಿ ಚಳಿಗಾಲದಲ್ಲಿ, ಜನರು ಮೊಟ್ಟೆಗಳನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಇದರಿಂದ ದೇಹದಲ್ಲಿ ಶಾಖ ಉತ್ಪತ್ತಿಯಾಗುತ್ತೆ. ಆರೋಗ್ಯದಿಂದ ಇರಲು ಸಹ ಇದು ಸಹಾಯ ಮಾಡುತ್ತೆ. ಕೆಲವು ಅಧ್ಯಯನಗಳು ಮೊಟ್ಟೆ ತಿನ್ನೋದ್ರಿಂದ ಹೃದ್ರೋಗ ಸಮಸ್ಯೆ ಉಂಟಾಗುತ್ತದೆಯೇ ಅನ್ನೋದನ್ನು ತಿಳಿಸಿದೆ. ಅವುಗಳ ಬಗ್ಗೆ ತಿಳಿಯೋಣ. 

ಪ್ರತಿದಿನ 1-2 ಮೊಟ್ಟೆಗಳನ್ನು(Egg) ತಿನ್ನಬೇಕು. ಆದರೆ ಪ್ರತಿದಿನ ಮೊಟ್ಟೆಗಳನ್ನು ತಿನ್ನೋದು ಹೃದಯಕ್ಕೆ ಒಳ್ಳೆಯದೇ? ಮೊಟ್ಟೆ ತಿನ್ನೋದರಿಂದ ಹೃದಯದ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆಯೇ? ನೀವು ಹೃದ್ರೋಗಿಗಳಾಗಿದ್ದಲ್ಲಿ, 1 ದಿನದಲ್ಲಿ ನೀವು ಎಷ್ಟು ಮೊಟ್ಟೆಗಳನ್ನು ತಿನ್ನಬೇಕು? ಎಂದು ತಿಳಿಯೋಣ. 

ಎನ್ಸಿಬಿಐ ವರದಿಯ ಪ್ರಕಾರ, 1 ದಿನದಲ್ಲಿ 2 ಮೊಟ್ಟೆಗಳನ್ನು ತಿನ್ನೋದರಿಂದ ಬೊಜ್ಜು ಕಡಿಮೆಯಾಗುತ್ತೆ. ಪ್ರತಿದಿನ ಮೊಟ್ಟೆ ತಿನ್ನೋದರಿಂದ ದೇಹದಲ್ಲಿ ಕೆಂಪು ರಕ್ತ ಕಣಗಳು ಹೆಚ್ಚಾಗುತ್ತವೆ. ಮೊಟ್ಟೆಗಳನ್ನು ತಿನ್ನುವ ಮೂಲಕ, ದೇಹವು ಪ್ರೋಟೀನ್(Protein) ಮತ್ತು ವಿಟಮಿನ್ಸ್ಗಳನ್ನು ಪಡೆಯುತ್ತೆ. ಇದು ದೀರ್ಘಕಾಲದವರೆಗೆ ಹಸಿವನ್ನು ನೀಗಿಸುತ್ತೆ. 

Latest Videos


ಆರೋಗ್ಯವಂತ ವ್ಯಕ್ತಿ ಪ್ರತಿದಿನ 2 ಮೊಟ್ಟೆಗಳನ್ನು ತಿನ್ನಬೇಕು ಎಂದು ಅನೇಕ ಸಂಶೋಧನೆಗಳು ಹೇಳಿವೆ. ಆದರೆ, ಮೊಟ್ಟೆಗಳು ಇತರ ಆಹಾರಗಳಿಗಿಂತ ಹೆಚ್ಚಿನ ಕೊಲೆಸ್ಟ್ರಾಲ್(Cholesterol)  ಹೊಂದಿರುತ್ತವೆ ಎಂದು ಅನೇಕ ವರದಿಗಳು ಹೇಳಿವೆ. ಇದರಿಂದ ಏನೆಲ್ಲಾ ಸಮಸ್ಯೆ ಉಂಟಾಗುತ್ತೆ? ಆರೋಗ್ಯಕ್ಕೆ ಯಾವ ರೀತಿಯ ಪ್ರಯೋಜನಗಳಿವೆ ಅನ್ನೋದನ್ನು ತಿಳಿಯೋಣ.

ಮೊಟ್ಟೆಗಳಲ್ಲಿ ಯಾವ ಪೋಷಕಾಂಶಗಳು ಕಂಡುಬರುತ್ತವೆ?
1 ಮೊಟ್ಟೆಯಲ್ಲಿ ಸುಮಾರು 75 ಕ್ಯಾಲೋರಿ, 5 ಗ್ರಾಂ ಕೊಬ್ಬು, 6 ಗ್ರಾಂ ಪ್ರೋಟೀನ್, 0 ಕಾರ್ಬೋಹೈಡ್ರೇಟ್ಗಳು, 70 ಗ್ರಾಂ ಸೋಡಿಯಂ(Sodium), 67 ಮಿಗ್ರಾಂ ಪೊಟ್ಯಾಸಿಯಮ್ ಮತ್ತು 210 ಮಿಗ್ರಾಂ ಕೊಲೆಸ್ಟ್ರಾಲ್ ಇದೆ. 

ಮೊಟ್ಟೆಗಳು ವಿಟಮಿನ್ ಎ(Vitamin A), ವಿಟಮಿನ್ ಡಿ ಮತ್ತು ವಿಟಮಿನ್ ಬಿ 12 ರ ಉತ್ತಮ ಮೂಲವಾಗಿದೆ. ಕೋಲಿನ್ ಮೊಟ್ಟೆಗಳಲ್ಲಿಯೂ ಕಂಡುಬರುತ್ತೆ, ಇದು ಚಯಾಪಚಯ ಕ್ರಿಯೆಗೆ ಸಹಾಯ ಮಾಡುತ್ತೆ. ಪ್ರತಿದಿನ ಒಂದು ಮೊಟ್ಟೆ ತಿನ್ನೋದ್ರಿಂದ ಉತ್ತಮ ಆರೋಗ್ಯ ಕಾಪಾಡಲು ಸಹಾಯವಾಗುತ್ತೆ ಎನ್ನಲಾಗುತ್ತೆ.
 

ಮೊಟ್ಟೆ ತಿನ್ನೋದರಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತೆ 
ಅಧಿಕ ಕೊಲೆಸ್ಟ್ರಾಲ್ ಹೃದಯದ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತೆ, ಇದು ನಿಮ್ಮ ಜೀವವನ್ನು ಅಪಾಯಕ್ಕೆ ಸಿಲುಕಿಸಬಹುದು. ಆದರೆ, ಮೊಟ್ಟೆಗಳಲ್ಲಿ ಕಂಡುಬರುವ ಕೊಲೆಸ್ಟ್ರಾಲ್(Cholestrol) ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರೋವುದಿಲ್ಲ ಎಂದು ಅನೇಕ ಸಂಶೋಧನೆಗಳಲ್ಲಿ ಕಂಡುಬಂದಿದೆ. 

ಹೌದು,  ಮೊಟ್ಟೆಗಳನ್ನು ಹೇಗೆ ತಿನ್ನುತ್ತೀರಿ ಎಂಬುದನ್ನು ಗಮನಿಸೋದು ಮುಖ್ಯ. ಇದನ್ನು ಸಾಕಷ್ಟು ಎಣ್ಣೆ ಅಥವಾ ಬೆಣ್ಣೆ (Butter)ಸೇರಿಸಿ ತಿನ್ನುತ್ತಿದ್ದರೆ, ಈ ಎರಡು ವಸ್ತುಗಳು ಒಟ್ಟಾಗಿ ಹಾನಿಯನ್ನುಂಟು ಮಾಡಬಹುದು.  ಆದರೆ ಮೊಟ್ಟೆಯನ್ನು ಹಾಗೇ ತಿನ್ನೋದರಿಂದ ಕೊಲೆಸ್ಟ್ರಾಲ್ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ತಿಳಿದು ಬಂದಿದೆ.
 

ಹೃದ್ರೋಗಿಗಳು(Heart patients) ಹೇಗೆ ಮತ್ತು ಎಷ್ಟು ಮೊಟ್ಟೆಗಳನ್ನು ತಿನ್ನಬೇಕು
ಹೃದ್ರೋಗಿಗಳು ವಾರಕ್ಕೆ 7 ಮೊಟ್ಟೆಗಳನ್ನು ಅಂದರೆ ಪ್ರತಿದಿನ ಒಂದು ಮೊಟ್ಟೆಯನ್ನು ತಿನ್ನಬಹುದು. ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ತಿನ್ನಲು ಪ್ರಯತ್ನಿಸಿ. ಇದು ಕೊಲೆಸ್ಟ್ರಾಲ್  ತಪ್ಪಿಸುತ್ತೆ ಮತ್ತು ದೇಹವು ಪ್ರೋಟೀನ್ ಅನ್ನು ಪಡೆಯುತ್ತೆ.

ನೀವು ಪ್ರತಿದಿನ ಎರಡಕ್ಕಿಂತ ಹೆಚ್ಚು ಮೊಟ್ಟೆಗಳನ್ನು ಸೇವಿಸಿದರೆ, ಮೊಟ್ಟೆಯ ಹಳದಿಯನ್ನು(Yellow) ತಿನ್ನಬೇಡಿ. ಮೊಟ್ಟೆಗಳನ್ನು ಬೇಯಿಸಿ ತಿನ್ನಲು ಪ್ರಯತ್ನಿಸಿ ಅಥವಾ ಅವುಗಳನ್ನು ತುಂಬಾ ಕಡಿಮೆ ಬೆಣ್ಣೆಯಲ್ಲಿ ತಿನ್ನಲು ಪ್ರಯತ್ನಿಸಿ. ಹೀಗೆ ತಿನ್ನೋದ್ರಿಂದ ಯಾವುದೇ ಹಾನಿ ಉಂಟಾಗೋದಿಲ್ಲ. ಅಲ್ಲದೇ ಮೊಟ್ಟೆಗಳು ಹೃದಯಕ್ಕೆ ಹಾನಿಕಾರಕ ಎಂಬ ಕಲ್ಪನೆ ಕೂಡ ತಪ್ಪು.  

click me!