ಪೋಷಕಾಂಶ ದೇಹಕ್ಕೆ ಆಮ್ಲಜನಕದಷ್ಟೇ ಮುಖ್ಯ, ಹೆಲ್ದೀಯಾಗಿರಬೇಕಾದ್ರೆ ಇವೆಲ್ಲಾ ತಿನ್ಬೇಕು

First Published | Oct 16, 2022, 2:53 PM IST

2022ರ ವಿಶ್ವ ಆಹಾರ ದಿನದಂದು, ದೇಹಕ್ಕೆ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ಪಡೆಯಲು ಯಾವ ಆಹಾರಗಳನ್ನು ಸೇವಿಸಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ಕೊಲೆಸ್ಟ್ರಾಲ್, ಮಧುಮೇಹ ಮತ್ತು ಹೃದ್ರೋಗದಂತಹ ಮಾರಣಾಂತಿಕ ಕಾಯಿಲೆಗಳಿಂದ ನಿಮ್ಮನ್ನು ದೂರವಿರಿಸಲು ಈ ಆರೋಗ್ಯಕರ ಆಹಾರಗಳು ಸಹಾಯ ಮಾಡುತ್ತವೆ. ಹಾಗಾದ್ರೆ ಅಂತಹ ಆಹಾರಗಳು ಯಾವುವು? ಅವುಗಳನ್ನು ಸೇವಿಸೋದ್ರಿಂದ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದನ್ನು ತಿಳಿಯೋಣ.

 2022ರ ವಿಶ್ವ ಆಹಾರ ದಿನವನ್ನು (world food day) ಪ್ರತಿ ವರ್ಷ ಅಕ್ಟೋಬರ್ 16ರಂದು ಆಚರಿಸಲಾಗುತ್ತೆ. ಜಗತ್ತಿನಲ್ಲಿ ಅಪೌಷ್ಟಿಕತೆಯನ್ನು ಸಂಪೂರ್ಣವಾಗಿ ತೊಡೆದುಹಾಕುವುದು ಇದರ ಪ್ರಮುಖ ಉದ್ದೇಶವಾಗಿದೆ. ಉತ್ತಮ ಆರೋಗ್ಯಕ್ಕಾಗಿ ಪ್ರೋಟೀನ್, ವಿಟಮಿನ್ ಡಿ, ವಿಟಮಿನ್ ಬಿ 12 ನಂತಹ ಅನೇಕ ಪೋಷಕಾಂಶಗಳು ದೇಹಕ್ಕೆ ಬಹಳ ಮುಖ್ಯ. ಈ ಪೋಷಕಾಂಶಗಳು ಅಪೌಷ್ಟಿಕತೆಯಿಂದ ರಕ್ಷಿಸಲು ಸಹಾಯ ಮಾಡುತ್ತವೆ. ಇದರೊಂದಿಗೆ, ಮಧುಮೇಹ, ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಯೂರಿಕ್ ಆಮ್ಲದಂತಹ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತೆ . ಆದರೆ ದೇಹಕ್ಕೆ ಅತ್ಯಂತ ಪ್ರಮುಖ ಜೀವಸತ್ವಗಳು ಮತ್ತು ಖನಿಜಗಳನ್ನು ಪಡೆಯಲು ಏನು ತಿನ್ನಬೇಕು? ಅನ್ನೋದರ ಬಗ್ಗೆ ನಾವು ನಿಮಗೆ ಹೇಳುತ್ತೇವೆ, ಆದರೆ ಅದಕ್ಕೂ ಮೊದಲು 2022 ರ ವಿಶ್ವ ಆಹಾರ ದಿನವನ್ನು ಆಚರಿಸಲು ಕಾರಣವೇನೆಂದು ತಿಳಿಯೋಣ.

ವಿಶ್ವ ಆಹಾರ ದಿನ ಆಚರಣೆ ಮಾಡೋದು ಯಾಕೆ? ಮತ್ತು 2022 ರ ಥೀಮ್ ಏನು?
ವಿಶ್ವಸಂಸ್ಥೆಯ ಪ್ರಕಾರ, ವಿಶ್ವದ ಲಕ್ಷಾಂತರ ಜನರು ಆರೋಗ್ಯಕರ ಆಹಾರ ಮತ್ತು ಅಗತ್ಯ ಪೌಷ್ಟಿಕಾಂಶವನ್ನು ಪಡೆಯುತ್ತಿಲ್ಲ. ಈ ಸಮಸ್ಯೆಯನ್ನು ಬೇರುಸಹಿತ ಕಿತ್ತೊಗೆಯಲು, ವಿಶ್ವಸಂಸ್ಥೆಯು ಅಕ್ಟೋಬರ್ 16, 1945 ರಂದು ಆಹಾರ ಮತ್ತು ಕೃಷಿ ಸಂಸ್ಥೆಯನ್ನು ಸ್ಥಾಪಿಸಿತು. ಅಂದಿನಿಂದ, ಈ ದಿನವನ್ನು ವಿಶ್ವ ಆಹಾರ ದಿನವಾಗಿ ಅಂದರೆ ವಿಶ್ವ ಆಹಾರ ದಿನವಾಗಿ ಆಚರಿಸಲಾಗುತ್ತದೆ. 2022 ರ ವಿಶ್ವ ಆಹಾರ ದಿನದ ಥೀಮ್ ‘ಲೀವ್ ನೋ ಒನ್ ಬಿಹೈಂಡ್’ (leave no one behind). ಇದರರ್ಥ 'ಯಾರನ್ನೂ ಹಿಂದೆ ಉಳಿಯಲು ಬಿಡಬಾರದು'.

Tap to resize

ನಮಗೆ ಪ್ರೋಟೀನ್ ಏಕೆ ಬೇಕು?
ಮೆಡಿಕಲ್ ನ್ಯೂಸ್ ಟುಡೇ ಪ್ರೋಟೀನ್ ಮ್ಯಾಕ್ರೋನ್ಯೂಟ್ರಿಯಂಟ್ ಎಂದು ಹೇಳುತ್ತದೆ. ದೇಹದ ಪ್ರತಿಯೊಂದು ಜೀವಕೋಶವು ಕೆಲಸ ಮಾಡಲು ಪ್ರೊಟೀನ್ ಅಗತ್ಯವಿದೆ. ಸ್ನಾಯುಗಳು, ಮೂಳೆಗಳು, ಕೂದಲು, ಚರ್ಮ ಸೇರಿದಂತೆ ದೇಹದ ಪ್ರತಿಯೊಂದು ಭಾಗದ ಬೆಳವಣಿಗೆಗೆ ಇದು ಅಗತ್ಯವಾಗಿದೆ.

ಪ್ರೋಟೀನ್ ಪಡೆಯಲು ಏನು ತಿನ್ನಬೇಕು?
ನಮ್ಮ ದೇಹಕ್ಕೆ ಅಗತ್ಯವಾಗಿ ಪ್ರೊಟೀನ್ ಸಿಗಲು ನಾವು ನಿಯಮಿತವಾಗಿ ಮೊಟ್ಟೆ, ದ್ವಿದಳ ಧಾನ್ಯಗಳು, ಬೇಳೆಕಾಳುಗಳು, ಸೋಯಾ, ಬಾದಾಮಿ, ಕ್ವಿನೋವಾ, ಚಿಕನ್, ಮೀನು, ಹಾಲು, ಕುಂಬಳಕಾಯಿ ಬೀಜಗಳು, ಕಡಲೆಕಾಯಿ ಮತ್ತು ಪೀ ನಟ್ ಬಟರ್ ನಂತಹ ಪ್ರೋಟೀನ್ ಆಹಾರಗಳನ್ನು (protein rich foods) ಸೇವಿಸಬೇಕು.

ನಮಗೆ ವಿಟಮಿನ್ ಡಿ ಏಕೆ ಬೇಕು ?
ವಿಟಮಿನ್ ಡಿ (vitamin D) ಕೊಬ್ಬಿನಲ್ಲಿ ಕರಗುವ ಪೋಷಕಾಂಶವಾಗಿದೆ. ಮಾನಸಿಕ ಆರೋಗ್ಯ, ಮೂಳೆಗಳು, ಹಲ್ಲುಗಳು, ಪ್ರತಿರಕ್ಷಣಾ ವ್ಯವಸ್ಥೆ, ದೇಹದ ತೂಕವನ್ನು ಆರೋಗ್ಯಕರವಾಗಿಡಲು ವಿಟಾಮಿನ್ ಡಿ ತುಂಬಾನೆ ಅಗತ್ಯವಾಗಿದೆ. ವಿಟಮಿನ್ ಡಿ ಕೊರತೆಯಿಂದಾಗಿ ಮೂಳೆಗಳು ಟೊಳ್ಳಾಗಬಹುದು. ಇದರಿಂದ ನೀವು ದುರ್ಬಲರಾಗಬಹುದು.

ವಿಟಮಿನ್ ಡಿ ಪಡೆಯಲು ಏನು ತಿನ್ನಬೇಕು ?
ವಿಟಮಿನ್ ಡಿ ಪಡೆಯಲು ಅತ್ಯುತ್ತಮ ಮಾರ್ಗವೆಂದರೆ ಸೂರ್ಯನ ಬೆಳಕು. ಆದರೆ ಇದಲ್ಲದೆ, ಮೊಟ್ಟೆಯ ಹಳದಿ ಭಾಗ, ಸಾಲ್ಮನ್ ಮೀನು, ಅಣಬೆಗಳು, ಫೋರ್ಟಿಫೈಡ್ ಹಾಲು, ಫೋರ್ಟಿಫೈಡ್ ಧಾನ್ಯಗಳನ್ನು ತಿನ್ನುವ ಮೂಲಕ ವಿಟಮಿನ್-ಡಿ ತೆಗೆದುಕೊಳ್ಳಬಹುದು. ಇದರಿಂದ ಆರೋಗ್ಯವೂ ಉತ್ತಮವಾಗಿರುತ್ತೆ.

ವಿಟಮಿನ್ ಬಿ -12 ಏಕೆ ಮುಖ್ಯ ?
ಹಾರ್ವರ್ಡ್ ಪ್ರಕಾರ, ದೇಹದ ಕೆಂಪು ರಕ್ತ ಕಣಗಳು, ಡಿಎನ್ಎ, ಮೆದುಳು ಮತ್ತು ನರವ್ಯೂಹಕ್ಕೆ ವಿಟಮಿನ್ ಬಿ -12 (vitamin B 12) ಬಹಳ ಮುಖ್ಯ. ಇದರ ಕೊರತೆಯು ಯಾವಾಗಲೂ ಆಯಾಸ, ದೌರ್ಬಲ್ಯ, ದೇಹವು ಹಳದಿಯಾಗುವುದು, ತಲೆನೋವು, ಖಿನ್ನತೆ, ಊತ, ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.

ವಿಟಮಿನ್ ಬಿ 12 ಪಡೆಯಲು ಏನು ತಿನ್ನಬೇಕು ?
ಪ್ರಾಣಿಗಳ ಯಕೃತ್ತು, ಮೀನು, ಮೊಟ್ಟೆ, ಹಾಲು, ಚಿಕನ್, ಸೋಯಾ ಹಾಲು, ಅಕ್ಕಿ ಹಾಲು, ಫೋರ್ಟಿಫೈಡ್ ಉಪಾಹಾರ ಮುಂತಾದ ಆಹಾರಗಳಿಂದ ವಿಟಮಿನ್ ಬಿ 12 ಪಡೆಯಬಹುದು. ಇವು ನಿಮ್ಮನ್ನು ಆರೋಗ್ಯವಂತರನ್ನಾಗಿ ಬಾಳುವಂತೆ ಮಾಡುತ್ತದೆ. ಆದುದರಿಂದ ಇದನ್ನು ನಿಯಮಿತವಾಗಿ ಸೇವನೆ ಮಾಡೋದನ್ನು ಮರೆಯಬೇಡಿ.

ಆರೋಗ್ಯಕರ ಕೊಬ್ಬುಗಳು ಏಕೆ ಮುಖ್ಯ ?
ಎಲ್ಲಾ ರೀತಿಯ ಕೊಬ್ಬು ಕೆಟ್ಟದಲ್ಲ. ಶಕ್ತಿಗಾಗಿ ದೇಹಕ್ಕೆ ಆರೋಗ್ಯಕರ ಕೊಬ್ಬುಗಳ (healthy fats) ಅಗತ್ಯವಿದೆ. ಇದು ದೇಹವನ್ನು ಒಳಗಿನಿಂದ ಬೆಚ್ಚಗಿಡಲು ಮತ್ತು ಕೋಶಗಳು ಚೆನ್ನಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಮೊನೊಸ್ಯಾಚುರೇಟೆಡ್ ಮತ್ತು ಪಾಲಿಅನ್ ಸ್ಯಾಚುರೇಟೆಡ್ ಕೊಬ್ಬುಗಳನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್, ಮಧುಮೇಹ, ಹೃದ್ರೋಗದಂತಹ ಮಾರಣಾಂತಿಕ ರೋಗಗಳನ್ನು ದೂರವಿಡಬಹುದು. 

ಆರೋಗ್ಯಕರ ಕೊಬ್ಬುಗಳನ್ನು ಪಡೆಯಲು ಏನು ತಿನ್ನಬೇಕು?
ಆರೋಗ್ಯಕರ ಕೊಬ್ಬು ಸಹ ನಮ್ಮ ದೇಹಕ್ಕೆ ಅತ್ಯಗತ್ಯ. ಇದನ್ನು ಪಡೆಯಲು ಸೂರ್ಯಕಾಂತಿ ಎಣ್ಣೆ, ಆಲಿವ್ ಎಣ್ಣೆ, ಕಾರ್ನ್ ಆಯಿಲ್, ಸೋಯಾ ಎಣ್ಣೆಯಂತಹ ಸಸ್ಯಜನ್ಯ ಎಣ್ಣೆಗಳೊಂದಿಗೆ ಬೀಜಗಳು, ನಟ್ಸ್ ಮತ್ತು ಮೀನುಗಳನ್ನು ಆಹಾರದಲ್ಲಿ ತಿನ್ನಬಹುದು. ಇದರಿಂದ ದೇಹವು ಒಳಗಿನಿಂದಲೇ ಆರೋಗ್ಯವಾಗಿರುತ್ತೆ. 

Latest Videos

click me!