ಸಾಸಿವೆ ಎಣ್ಣೆ(Mustard oil) ಅಡುಗೆಗೆ ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾನೆ ಉತ್ತಮವಾಗಿದೆ. ತಂಪಾದ ವಾತಾವರಣದಲ್ಲಿ ಸಾಸಿವೆ ಎಣ್ಣೆಯಿಂದ ಮಸಾಜ್ ಮಾಡೋದು ತುಂಬಾ ಪ್ರಯೋಜನಕಾರಿ. ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತೆ. ಸಾಸಿವೆ ಎಣ್ಣೆಯಿಂದ ಮಸಾಜ್ ಮಾಡೋದರಿಂದಾಗುವ ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿಯೋಣ.
ಸಾಸಿವೆ ಎಣ್ಣೆಯು ಅನೇಕ ಔಷಧೀಯ ಗುಣಗಳಿಂದ(Medicinal value) ಸಮೃದ್ಧವಾಗಿದೆ. ಇದು ಆರೋಗ್ಯಕರ ಕೊಬ್ಬುಗಳ ಉತ್ತಮ ಮೂಲವಾಗಿದೆ. ಇದು ಮೊನೊಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳು (MUFA) ಮತ್ತು ಪಾಲಿಅನ್ ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳಿಂದ (PUFA) ಸಮೃದ್ಧವಾಗಿದೆ. ಇದಲ್ಲದೆ, ಇದು ಉತ್ಕರ್ಷಣ ನಿರೋಧಕ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣಲಕ್ಷಣ ಮತ್ತು ಒಮೆಗಾ -3 ಮತ್ತು 6 ರಲ್ಲಿ ಸಮೃದ್ಧವಾಗಿದೆ. ಈ ಕಾರಣದಿಂದಾಗಿ ಇದನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎನ್ನಲಾಗಿದೆ.
ನೀವು ಸಾಸಿವೆ ಎಣ್ಣೆಯಿಂದ ದೇಹವನ್ನು ಮಸಾಜ್ ಮಾಡಿದರೆ, ಅದು ಅದ್ಭುತ ಪ್ರಯೋಜನಗಳನ್ನು ನೀಡುತ್ತೆ. ಸಾಸಿವೆ ಎಣ್ಣೆಯಿಂದ ಮಸಾಜ್ ಮಾಡೋದು ಹೇಗೆ ಎಂದು ಅನೇಕ ಜನರು ಆಗಾಗ್ಗೆ ಕೇಳುತ್ತಾರೆ? ಇಲ್ಲಿ ಸಾಸಿವೆ ಎಣ್ಣೆಯಿಂದ ಮಸಾಜ್ (Massage)ಮಾಡುವ ಪ್ರಯೋಜನಗಳ ಬಗ್ಗೆ ಮತ್ತು ಸಾಸಿವೆ ಎಣ್ಣೆಯಿಂದ ಬಾಡಿ ಮಸಾಜ್ ಮಾಡೋದು ಹೇಗೆಂದು ತಿಳಿಯೋಣ.
ಸಾಸಿವೆ ಎಣ್ಣೆಯ ಬಾಡಿ ಮಸಾಜ್ ನ ಪ್ರಯೋಜನಗಳು
1. ದೇಹಕ್ಕೆ ಶಾಖ ಬರುತ್ತೆ
ಸಾಸಿವೆ ಎಣ್ಣೆಯಿಂದ ದೇಹವನ್ನು ಮಸಾಜ್ ಮಾಡಿದರೆ, ಅದು ದೇಹಕ್ಕೆ ಶಾಖವನ್ನು ತರುತ್ತೆ. ಏಕೆಂದರೆ ಸಾಸಿವೆ ಎಣ್ಣೆ ಬಿಸಿಯಾಗಿರುತ್ತೆ(Heat) . ಇದು ಶೀತ ಹವಾಮಾನದಲ್ಲೂ ಸಹ ಬೆಚ್ಚಗಿನ ಅನುಭವವನ್ನು ನೀಡುತ್ತೆ. ಹೆಚ್ಚಿನ ಚಳಿಯನ್ನು ತಡೆಯುವ ಶಕ್ತಿ ಸಾಸಿವೆ ಎಣ್ಣೆಯಿಂದ ಸಿಗುತ್ತೆ.
2. ರಕ್ತ ಪರಿಚಲನೆಯನ್ನು(Blood circulation) ಸುಧಾರಿಸುತ್ತೆ
ಇದು ನಿಮ್ಮ ದೇಹದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸಲು ಮತ್ತು ರಕ್ತದ ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತೆ. ಈ ಕಾರಣದಿಂದಾಗಿ ರಕ್ತ ಮತ್ತು ಪೋಷಣೆಯು ದೇಹದ ಇತರ ಅಂಗಗಳನ್ನು ಉತ್ತಮವಾಗಿ ತಲುಪುತ್ತೆ. ಹಾಗೆಯೇ ನರಗಳ ಆರೋಗ್ಯವೂ ಉತ್ತಮವಾಗಿರುತ್ತೆ.
3. ಸ್ನಾಯು ಮತ್ತು ಕೀಲುಗಳ ಬಿಗಿತವನ್ನು ತೆಗೆದುಹಾಕಲು
ಶೀತ ಹೆಚ್ಚಾದಂತೆ, ಸ್ನಾಯು ಮತ್ತು ಕೀಲುಗಳಲ್ಲಿ ಬಿಗಿತದ ಸಮಸ್ಯೆ ಪ್ರಾರಂಭವಾಗುತ್ತೆ. ಕೆಲವು ಜನರಿಗೆ ಅದರಿಂದ ನೋವು (Pain)ಸಹ ಉಂಟಾಗುತ್ತೆ. ಆದರೆ ಸಾಸಿವೆ ಎಣ್ಣೆಯಿಂದ ಮಸಾಜ್ ಮಾಡೋದರಿಂದ ಈ ಸಮಸ್ಯೆ ನಿವಾರಣೆಯಾಗುತ್ತೆ. ಇದು ಆರಾಮ ನೀಡುತ್ತದೆ.
4. ಮೂಳೆಗಳನ್ನು ಬಲಪಡಿಸಲು
ನೀವು ಇಡೀ ದೇಹದ ಮೂಳೆ, ಸ್ನಾಯು ಮತ್ತು ಕೀಲುಗಳನ್ನು ನಿಯಮಿತ ಸಾಸಿವೆ ಎಣ್ಣೆಯಿಂದ ಚೆನ್ನಾಗಿ ಮಸಾಜ್ ಮಾಡಿದಾಗ, ಮೂಳೆಗಳು ಬಲವಾಗಿರುತ್ತವೆ, ಮತ್ತು ಅವುಗಳಲ್ಲಿ ಮುರಿತದ ಅಪಾಯವೂ ಕಡಿಮೆಯಾಗುತ್ತೆ. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಮೂಳೆಗಳನ್ನು ಸ್ಟ್ರಾಂಗ್(Strong) ಆಗಿಡಲು ನೀವು ಇದನ್ನು ಬಳಕೆ ಮಾಡಬಹುದು.
5. ದೇಹವನ್ನು ವಿಶ್ರಾಂತಿಗೊಳಿಸುತ್ತೆ (Rest)
ಸಾಸಿವೆ ಎಣ್ಣೆಯಿಂದ ಮಸಾಜ್ ಮಾಡೋದರಿಂದ ಸ್ನಾಯುವಿನ ಒತ್ತಡ ಕಡಿಮೆಯಾಗುತ್ತೆ ಮತ್ತು ನೀವು ಶಾಂತರಾಗುತ್ತೀರಿ. ಇದು ಆರಾಮದಾಯಕ ಅನುಭವ ನೀಡುತ್ತೆ. ಇದು ಆತಂಕ ಮತ್ತು ಒತ್ತಡದಂತಹ ಮಾನಸಿಕ ಪರಿಸ್ಥಿತಿ ಮತ್ತು ನಿದ್ರಾಹೀನತೆಯಂತಹ ಸಮಸ್ಯೆಗಳನ್ನು ಸಹ ತೆಗೆದುಹಾಕುತ್ತೆ.
6. ಹೊಟ್ಟೆ(Stomach) ಆರೋಗ್ಯಕರವಾಗಿರುತ್ತೆ
ದೇಹವನ್ನು ಮಸಾಜ್ ಮಾಡೋದರಿಂದ ವಾತ ದೋಷದ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತೆ. ಹೆಚ್ಚಿನ ಹೊಟ್ಟೆಯ ಸಮಸ್ಯೆ ವಾತದ ಅತಿಯಾದ ಅಥವಾ ಅಸಮತೋಲನದಿಂದ ಉಂಟಾಗುತ್ತೆ. ಸಾಸಿವೆ ಎಣ್ಣೆಯಿಂದ ಮಸಾಜ್ ಮಾಡೋದರಿಂದ ಜೀರ್ಣಕ್ರಿಯೆ ಸುಧಾರಿಸುತ್ತೆ ಮತ್ತು ಅಜೀರ್ಣ, ಹೊಟ್ಟೆ ಉಬ್ಬರ, ಮಲಬದ್ಧತೆ, ಹೊಟ್ಟೆ ಉಬ್ಬರ, ಗ್ಯಾಸ್ ಇತ್ಯಾದಿಗಳನ್ನು ತೊಡೆದುಹಾಕುತ್ತೆ.
ಸಾಸಿವೆ ಎಣ್ಣೆಯಿಂದ ದೇಹವನ್ನು ಮಸಾಜ್ ಮಾಡೋದು ಹೇಗೆ ?
ಬಾಡಿ ಮಸಾಜ್ ಗಾಗಿ(Body massage), ಮೊದಲು ಸಾಸಿವೆ ಎಣ್ಣೆಯನ್ನು ಬಿಸಿ ಮಾಡಬೇಕು, ಬೇಕಿದ್ದರೆ, ಬೆಳ್ಳುಳ್ಳಿಯನ್ನು ಸೇರಿಸಿ ಸಹ ಅದನ್ನು ಬಿಸಿ ಮಾಡಬಹುದು. ಎಣ್ಣೆಯನ್ನು ಚೆನ್ನಾಗಿ ಬಿಸಿ ಮಾಡಿ ಮತ್ತು ನಂತರ ಅದನ್ನು ತಣ್ಣಗಾಗಿಸಿ. ಉಗುರು ಬೆಚ್ಚಗಿದ್ದಾಗ, ಇಡೀ ದೇಹವನ್ನು ಎಣ್ಣೆಯಿಂದ ಚೆನ್ನಾಗಿ ಮಸಾಜ್ ಮಾಡಿ. ಬೆಳಿಗ್ಗೆ ಮಸಾಜ್ ಮಾಡೋದರಿಂದ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತೆ.