ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯದ (mental health) ಬಗ್ಗೆಯೂ ಗಮನ ಹರಿಸುವುದು ಮುಖ್ಯ. ಅದನ್ನು ನಿರ್ಲಕ್ಷಿಸಿದರೆ ನೀವು ಆರೋಗ್ಯವಾಗಿರಲು ಸಾಧ್ಯವಿಲ್ಲ. ಕೋಪ, ಒತ್ತಡವು ಮಾನಸಿಕ ಆರೋಗ್ಯದ ಶತ್ರುವಾಗಿದೆ, ಆದರೆ ಇತರರನ್ನು ಸಂತೋಷಪಡಿಸುವ ಅಭ್ಯಾಸವು ನಿಮ್ಮನ್ನು ಮಾನಸಿಕ ಸಮಸ್ಯೆಗಳಿಗೆ ಬಲಿಪಶುವಾಗಿಸುತ್ತದೆ ಎಂದು ನಿಮಗೆ ತಿಳಿದಿದೆಯೇ. ಇಂದು ನಾವು ಇದರ ಬಗ್ಗೆ ಮತ್ತು ಅದರಿಂದ ಹೊರಬರುವ ಮಾರ್ಗಗಳನ್ನು ತಿಳಿಸುತ್ತೇವೆ.
ಕೆಲವು ವ್ಯಕ್ತಿಗಳು ಹೇಗಿರುತ್ತಾರೆ ಅಂದ್ರೆ, ಅವರು ಇತರರನ್ನು ಖುಷಿಯಾಗಿಡೋದ್ರಲ್ಲೇ ಸಂತಸ (make other happy)ಕಾಣುತ್ತಾರೆ. ಆದರೆ ಅವರಿಗೇ ಗೊತ್ತಿಲ್ಲದೇ ಅವರು ತಮ್ಮ ಈ ಅಭ್ಯಾಸದಿಂದ ತೊಂದರೆಗೀಡಾಗಿದ್ದಾರೆ, ಆದರೆ ಆ ಅಭ್ಯಾಸವನ್ನು ಮಾತ್ರ ಅವರು ಬಿಡೋದಕ್ಕೆ ಒಪ್ಪೋದಿಲ್ಲ. ಅಂತಹ ಜನರನ್ನು ನೀವು ಮನೆ, ನೆರೆಹೊರೆ ಮತ್ತು ಕಚೇರಿಯಲ್ಲಿ ಎಲ್ಲೆಡೆ ಕಾಣಬಹುದು.
ಜನರನ್ನು ಮೆಚ್ಚಿಸುವ ಉದ್ದೇಶವು ಇತರರನ್ನು ನೋಯಿಸುವುದು ಅಲ್ಲದಿದ್ದರೂ, ಕೆಲವು ಸಂದರ್ಭಗಳಲ್ಲಿ ಅವರ ಸ್ವಂತ ಸ್ವಾರ್ಥವೂ ಅದರ ಹಿಂದೆ ಅಡಗಿದೆ. ಬಾಲ್ಯದ ಘಟನೆ, ಭಾವನಾತ್ಮಕ ನೋವು, ವಿಷಯಗಳನ್ನು ತ್ವರಿತವಾಗಿ ಪಡೆಯಲು ಮೊಂಡುತನದಂತಹ ಅನೇಕ ವಿಷಯಗಳು ಇದಕ್ಕೆ ಕಾರಣವಾಗಬಹುದು. ಕಾರಣ ಏನೇ ಇರಲಿ, ಈ ಅಭ್ಯಾಸದಿಂದ, ಇತರರನ್ನು ಸಂತೋಷಪಡಿಸುವ ವ್ಯಕ್ತಿ, ತಾನು ತುಂಬಾನೆ ನೊಂದುಕೊಂಡಿರುತ್ತಾನೆ ಅನ್ನೋದು ನಿಜ.
ಮತ್ತೊಬ್ಬರನ್ನು ಮೆಚ್ಚಿಸಲು ಅಥವಾ ಸಂತೋಷಪಡಿಸಲು ಹೋಗಿ ನೀವು ನೋವು ಅನುಭವಿಸುವಾದ ಉಂಟಾಗುವ ಒತ್ತಡ, ಕೋಪವು ನಿಮ್ಮನ್ನು ಮಾನಸಿಕ ಅಸ್ವಸ್ಥರನ್ನಾಗಿ (effect on mental health) ಮಾಡುತ್ತದೆ, ಇದು ದೊಡ್ಡ ಸಮಸ್ಯೆಯಾಗಿದೆ. ನಿಮ್ಮ ಈ ಅಭ್ಯಾಸದಿಂದ ನೀವು ತೊಂದರೆಗೀಡಾಗಿದ್ದರೆ ಮತ್ತು ಅದರಿಂದ ಹೊರಬರಲು ಬಯಸಿದರೆ, ಇಲ್ಲಿ ನೀಡಲಾದ ಪರಿಹಾರಗಳು ಸಹಾಯ ಮಾಡಬಹುದು.
NO ಎಂದು ಹೇಳಲು ಕಲಿಯಿರಿ: ಪ್ರತಿನಿತ್ಯದ ಜೀವನದಲ್ಲಿ ಜನರು ಇಲ್ಲ ಎಂದು ಹೇಳೋದಕ್ಕೆ ಹೆದರುತ್ತಾರೆ. ನಾನು NO ಅಂದ್ರೆ ಎದುರಿಗಿದ್ದವರು ಏನು ಅಂದುಕೊಳ್ಳುವರು, ಅವರಿಗೆ ಬೇಜಾರಾದ್ರೆ ಎಂದು ನಾವು ನಮಗಿಷ್ಟವೇ ಇಲ್ಲದಿದ್ದರೂ ಸಹ ಯೆಸ್, ಓಕೆ ಅಂದುಬಿಡುತ್ತೇವೆ. ಆದರೆ ನೀವು ಇಲ್ಲ ಎಂದು ಹೇಳಲು ಕಲಿಯಬೇಕು, ಆಗ ಮಾತ್ರ ನೀವು ಈ ಅಭ್ಯಾಸದಿಂದ ಹೊರಬರಲು ಸಾಧ್ಯವಾಗುತ್ತದೆ., ಇದು ಕಷ್ಟಕರವಾಗಬಹುದು ನಿಜಾ, ಆದರೆ ನೀವು ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ಯೋಚಿಸಬೇಕು. ಹಾಗಾಗಿ ಇದನ್ನು ಪ್ರಾರಂಭಿಸಲೇಬೇಕು.
ನಿಮ್ಮ ಆದ್ಯತೆಗಳನ್ನು ಅರ್ಥಮಾಡಿಕೊಳ್ಳಿ: ಇತರರಿಗಿಂತ ಮೊದಲು ನಿಮ್ಮ ಬಗ್ಗೆ ಯೋಚಿಸಿ. ಜನರನ್ನು ಮೆಚ್ಚಿಸಲು ನೀವು ನಿಮ್ಮ ಆದ್ಯತೆಗಳನ್ನೇ ಮರೆತುಬಿಡುತ್ತೀರಿ. ಅದರ ಬದಲಾಗಿ ನಿಮ್ಮ ಅಗತ್ಯಗಳು, ಉದ್ದೇಶಗಳು ಮತ್ತು ಯೋಗಕ್ಷೇಮವನ್ನು ಆದ್ಯತೆಯಾಗಿರಿಸಿಕೊಳ್ಳಿ. ಇದರರ್ಥ ನೀವು ಸ್ವಾರ್ಥಿಗಳು ಎಂದಲ್ಲ, ಆದರೆ ನಿಮ್ಮನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಿರಿಸಿಕೊಳ್ಳುವ ಮೂಲಕ, ನೀವು ಇತರರಿಗೆ ಉತ್ತಮ ರೀತಿಯಲ್ಲಿ ಸಹಾಯ ಮಾಡಬಹುದು.
ನಿಮಗೆ ನೀವೆ ಬಾರ್ಡರ್ ಹಾಕಿ: ಇತರರನ್ನು ಸಂತೋಷಪಡಿಸುವ ಪ್ರಕ್ರಿಯೆಯಲ್ಲಿ ನೀವು ಒಳಗೆ ಕೋಪಗೊಳ್ಳುತ್ತಿದ್ದರೆ ಮತ್ತು ಆ ಕೆಲಸವನ್ನು ಇಷ್ಟವಿಲ್ಲದೆ ಮಾಡುತ್ತಿದ್ದರೆ, ನೀವು ಅದರಲ್ಲಿ ನಿಮಗೆ ಹಾನಿ ಮಾಡುತ್ತಿದ್ದೀರಿ, ಪರಿಹಾರವೆಂದರೆ ನಿಮ್ಮ ಮಿತಿಗಳನ್ನು ನಿಗದಿಪಡಿಸುವುದು. ನಿಮ್ಮ ಸಾಮರ್ಥ್ಯವನ್ನು ಮೀರಿ ಹೋಗಬೇಡಿ ಮತ್ತು ನಿಮಗೆ ನೋವುಂಟು ಮಾಡುವ ಯಾವುದೇ ಕೆಲಸವನ್ನು ಮಾಡಬೇಡಿ.
ಎಲ್ಲರನ್ನೂ ಸಂತೋಷವಾಗಿಡುವುದು ಅಸಾಧ್ಯ: ಇದನ್ನು ಅರ್ಥಮಾಡಿಕೊಳ್ಳಿ. ನಿಮ್ಮ ಅಗತ್ಯಗಳು ಮತ್ತು ಇತರ ವ್ಯಕ್ತಿಯ ಅಗತ್ಯಗಳು ವಿಭಿನ್ನವಾಗಿರಬಹುದು, ನಿಮ್ಮ ಭಾವನೆಗಳನ್ನು ಕಡೆಗಣಿಸಿ ಇನ್ನೊಬ್ಬ ವ್ಯಕ್ತಿಯ ಆಧ್ಯತೆಗೆ ನೀವು ಒತ್ತು ನೀಡಿದರೆ, ಅದು ಅವನಿಗೆ ಸಂತೋಷವನ್ನು ನೀಡಬಹುದು, ಆದರೆ ನೀವು ಅತೃಪ್ತರಾಗಿದ್ದರೆ, ಅದಕ್ಕೆ ಯಾವುದೇ ಅರ್ಥವಿಲ್ಲ. ಕೊನೆಯಲ್ಲಿ, ನೀವು ನಿಮ್ಮ ಸಂತೋಷದೊಂದಿಗೆ ರಾಜಿ ಮಾಡಿಕೊಳ್ಳುತ್ತಿದ್ದೀರಿ. ಎಲ್ಲರನ್ನೂ ಸಂತೋಷವಾಗಿಡೋದು ನಮ್ಮಿಂದ ಅಸಾಧ್ಯ ಹಾಗಾಗಿ, ನಿಮಗೆ ನೀವು ಆದ್ಯತೆ ನೀಡೋದು ಮುಖ್ಯ.