Summer ಬಂತೆಂದರೆ ಸೊಳ್ಳೆ ಕಾಟ, ರಾಸಾಯನಿಕಗಳಿಲ್ಲದೇ ಹೀಗ್ ಓಡಿಸಿ

Published : Apr 28, 2022, 05:42 PM IST

ಸೊಳ್ಳೆಯ ಹಾವಳಿಯು ವರ್ಷದಲ್ಲಿ ಸುಮಾರು 8 ತಿಂಗಳು ಇರುತ್ತದೆ. ಅವು ಶಾಂತಿಯುತವಾಗಿ ಮಲಗಲು ಅಥವಾ ಉದ್ಯಾನವನಗಳಂತಹ ವಿಶ್ರಾಂತಿ ಸ್ಥಳಗಳಲ್ಲಿ ಕುಳಿತುಕೊಳ್ಳಲು ಬಿಡೋದಿಲ್ಲ. ಸೊಳ್ಳೆಗಳು ಸಂಜೆ ಮತ್ತು ರಾತ್ರಿ ಮಾತ್ರವಲ್ಲದೆ ಹಗಲಿನಲ್ಲಿಯೂ ತೊಂದರೆ ನೀಡುತ್ತವೆ. ಇವುಗಳ ಕಾಟದಿಂದ ಮುಕ್ತಿ ಪಡೆಯಲು ನೀವು ಏನೇನೊ ಮಾಡಿರಬಹುದು ಅಲ್ವಾ? ಈ ಕೆಮಿಕಲ್ ಮುಕ್ತ ಸೊಳ್ಳೆ ನಿವಾರಕಗಳು ಹಲವು ರೋಗಗಳನ್ನು ತರಬಹುದು. ಅದರ ಬದಕಾಗಿ, ಈ ನೈಸರ್ಗಿಕ ವಸ್ತುಗಳ (Naturla Products) ಬಳಸಬಹುದು.

PREV
110
Summer ಬಂತೆಂದರೆ ಸೊಳ್ಳೆ ಕಾಟ, ರಾಸಾಯನಿಕಗಳಿಲ್ಲದೇ ಹೀಗ್ ಓಡಿಸಿ

ಸೊಳ್ಳೆಗಳನ್ನು(Mosquitos) ನಮ್ಮಿಂದ ದೂರವಿಡಲು ಮತ್ತು ಈ ಬಿಡುವಿಲ್ಲದ ಜೀವನದಲ್ಲಿ ನಾವು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಲು ಏನು ಮಾಡಬೇಕು? ಇಂದು, ನಾವು ಈ ಪ್ರಶ್ನೆಗೆ ಕೆಲವು ಸರಳ ಮತ್ತು ಆಸಕ್ತಿದಾಯಕ ಉತ್ತರಗಳನ್ನು ಇಲ್ಲಿ ತಂದಿದ್ದೇವೆ. ಈ ವಿಧಾನಗಳು ಸಂಪೂರ್ಣವಾಗಿ ಗಿಡಮೂಲಿಕೆಗಳಿಂದಾಗಿವೆ ಮತ್ತು ತ್ವಚಾ (Skin) ಸ್ನೇಹಿಯಾಗಿವೆ. ಈ ವಿಧಾನಗಳನ್ನು ಅಳವಡಿಸಿಕೊಳ್ಳುವುದರಿಂದ ಉಸಿರಾಟದ ಸಮಸ್ಯೆಯೂ ಉಂಟಾಗುವುದಿಲ್ಲ...

210
ಅತ್ಯಂತ ಮುಖ್ಯವಾದ ವಿಷಯ

ಸಾಮಾನ್ಯವಾಗಿ ನಮ್ಮಲ್ಲಿ ಹೆಚ್ಚಿನವರು ಸೊಳ್ಳೆಗಳು ಬೆಳಕನ್ನು ನೋಡಲು ಆಕರ್ಷಿತವಾಗುತ್ತವೆ ಎಂದು ಭಾವಿಸುತ್ತೇವೆ ಮತ್ತು ಇದಕ್ಕಾಗಿಯೇ ರಾತ್ರಿಯಲ್ಲಿ ನಾವು ಮಲಗುವ ಕೋಣೆಯ(Bed Room) ದೀಪಗಳನ್ನು ಆನ್ ಮಾಡಲು ಇಷ್ಟಪಡುವುದಿಲ್ಲ. ಇದರಿಂದ ಸೊಳ್ಳೆಗಳು ಕೋಣೆಯಿಂದ ದೂರವಿರುತ್ತವೆ. ಆದರೂ, ನಾವು ಮಲಗಿದಾಗ, ಇಡೀ ಸೊಳ್ಳೆಗಳ ಸೈನ್ಯ ನಮ್ಮ ಕೋಣೆಗೆ ಬಂದಂತೆ ಭಾಸವಾಗುತ್ತದೆ!

310

ಆದರೆ ನಿಮಗೆ ಗೊತ್ತಾ? ಸೊಳ್ಳೆಗಳು ಬೆಳಕಿಗೆ (Light) ಆಕರ್ಷಿತವಾಗುವುದಕ್ಕಿಂತ ಹೆಚ್ಚಾಗಿ ನಮ್ಮ ದೇಹದ ವಾಸನೆಗೆ ಆಕರ್ಷಿತವಾಗುತ್ತವೆ. ಅದಕ್ಕಾಗಿಯೇ ನಾವು ಕತ್ತಲೆಯಲ್ಲಿ ಮಲಗಿದರೂ, ಸೊಳ್ಳೆಗಳು ನಮ್ಮನ್ನು ಹುಡುಕುತ್ತವೆ. ಅವು ದೇಹದ ಶಾಖ ಮತ್ತು ವಾಸನೆಯಿಂದ ಆಕರ್ಷಿಸುತ್ತವೆ. ಆದ್ದರಿಂದ ಕೇವಲ ಬೆಳಗಿದ ದೀಪಗಳು ಮತ್ತು ತೆರೆದ ಬಾಗಿಲುಗಳನ್ನು ಮಾತ್ರ ದೂಷಿಸಬೇಡಿ.

410
ಸೊಳ್ಳೆಗಳು ಈ ಪರಿಮಳಗಳಿಂದ ದೂರವಿರುತ್ತವೆ.

ಎರಡು ವಿಶೇಷ ರೀತಿಯ ಸುಗಂಧ ದ್ರವ್ಯಗಳಿವೆ, ಇವು ಮನುಷ್ಯರಿಗೆ ತುಂಬಾನೆ ಇಷ್ಟವಾಗುತ್ತವೆ, ಆದರೆ  ಮತ್ತು ಸೊಳ್ಳೆಗಳು ಈ ಪರಿಮಳದಿಂದ ತುಂಬಾ ಭಯಾನಕವಾಗಿ ಹೆದರುತ್ತವೆ. ಅವುಗಳು ಯಾವುವೆಂದರೆ ನಿಂಬೆಯ (Lemon) ಪರಿಮಳ ಮತ್ತು ಲ್ಯಾವೆಂಡರ್ ನ ಪರಿಮಳ. ನಿಮ್ಮ ಮಲಗುವ ಕೋಣೆಯಿಂದ ಸೊಳ್ಳೆಗಳನ್ನು ಓಡಿಸಲು ನೀವು ಈ ಎರಡೂ ವಸ್ತುಗಳನ್ನು ಬಳಸಬಹುದು. 
 

510

ಈ ಪರಿಮಳವನ್ನು ಹೊಂದಿರುವ ಎಸೆನ್ಸಿಯಲ್ ಆಯಿಲ್ ನ್ನು(Essential oil) ನೀವು ಖರೀದಿಸಬಹುದು ಮತ್ತು ಸಂಗ್ರಹಿಸಬಹುದು ಮತ್ತು ಆಯಿಲ್ ಡಿಫ್ಯೂಸರ್ ಗಳ ಸಹಾಯದಿಂದ, ನೀವು ನಿಮ್ಮ ಮನೆಯನ್ನು ಅವುಗಳ ಪರಿಮಳಗಳಿಂದ ಹರಡುವಂತೆ ಮಾಡಬಹುದು. ಇದರಿಂದ ಮನೆಯ ವಾತಾವರಣವು ಸಹ ಶುದ್ಧವಾಗಿರುತ್ತದೆ ಮತ್ತು ಸೊಳ್ಳೆಗಳು ಕಚ್ಚುವುದಿಲ್ಲ.

610

ನೀವು ಉದ್ಯಾನವನದಲ್ಲಿ ಕುಳಿತಿದ್ದರೆ, ನೀವು ಈ ಪರಿಮಳಗಳನ್ನು ಸಿಂಪಡಿಸಬಹುದು ಮತ್ತು ಪಾರ್ಕ್ ನಲ್ಲಿ ಸೊಳ್ಳೆಗಳ ಕಾಟವಿಲ್ಲದೇ ಆರಾಮವಾಗಿರಬಹುದು. ಮತ್ತೊಂದು ಸುಲಭ ಮಾರ್ಗವೆಂದರೆ ಈ ಪರಿಮಳಗಳಲ್ಲಿ ಲಭ್ಯವಿರುವ ಮೇಣದ ಬತ್ತಿಗಳನ್ನು(Candles) ನಿಮ್ಮ ಬಳಿ ಬೆಳಗಿಸಬಹುದು. ಮಲಗುವ ಕೋಣೆಯಲ್ಲಿ ಮೇಣದ ಬತ್ತಿ ಹಚ್ಚಿಡುವುದು ತುಂಬಾ ಉಪಯುಕ್ತವಾಗಿರುತ್ತದೆ.

710
ಕಿಚನ್ ಮಸಾಲೆಗಳು

ಅಡುಗೆಮನೆಯಲ್ಲಿ ಬಳಸುವ ಎರಡು ಮಸಾಲೆಗಳ ವಾಸನೆಯನ್ನು ಸೊಳ್ಳೆಗಳು ಇಷ್ಟಪಡುವುದಿಲ್ಲ. ಮೊದಲನೆಯದು ಶುಂಠಿ (Ginger) ಮತ್ತು ಎರಡನೆಯದು ಲವಂಗ (Clove). ನೀವು ಲವಂಗವನ್ನು ನಿಮ್ಮ ಕೋಣೆಯಲ್ಲಿ ಅಥವಾ ಸುತ್ತಲೂ ನೀರಿನಲ್ಲಿ ನೆನೆಸಿಡಬಹುದು ಮತ್ತು ಅದನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಬಹುದು. ಲವಂಗವು ತಾಜಾ ಮತ್ತು ಸುವಾಸನೆಯುಕ್ತವಾಗಿರಬೇಕು ಎಂಬುದನ್ನು ನೆನಪಿನಲ್ಲಿಡಿ.  

810

ನೀವು ಶುಂಠಿಯನ್ನು(Ginger) ಅಗಿಯಬಹುದು ಅಥವಾ ಅದನ್ನು ತುರಿದುಕೊಳ್ಳುವ ಮೂಲಕ ನಿಮ್ಮ ಸುತ್ತಲೂ ಹಾಕಬಹುದು. ಅದರ ಪರಿಮಳದಿಂದ ಕೂಡ, ಸೊಳ್ಳೆಗಳು ನಿಮ್ಮಿಂದ ದೂರವಿರುತ್ತವೆ. ಶುಂಟಿ ರಸವನ್ನು ಮೈಗೆ ಹಚ್ಚಬಹುದು ಅಥವಾ ನಿಮ್ಮ ಬಳಿ ಇಟ್ಟುಕೊಳ್ಳಬಹುದು.                       

910
ಡ್ರೈಯರ್ ಶೀಟ್ ಕೂಡ ಅದ್ಭುತವಾಗಿದೆ

ಡ್ರೈಯರ್ ಶೀಟ್ ಗಳನ್ನು ಮನೆಯಲ್ಲಿ ಅನೇಕ ರೀತಿಯಲ್ಲಿ ಬಳಸಲಾಗುತ್ತದೆ. ಅಲ್ಮೇರಾದಲ್ಲಿ ಇಟ್ಟ ಬಟ್ಟೆಗಳನ್ನು ಕಲ್ಲು-ಮುಕ್ತವಾಗಿ ಇಡುವುದರಿಂದ ಹಿಡಿದು ಬಟ್ಟೆಗಳನ್ನು ಒಗೆಯುವವರೆಗೆ, ಬಟ್ಟೆಗಳನ್ನು ಒಗೆಯುವಾಗ ಈ ಹಾಳೆಗಳನ್ನು ವಾಷಿಂಗ್ ಮಶೀನ್ ನಲ್ಲಿ(Washing machine) ಸಹ ಹಾಕಲಾಗುತ್ತದೆ. ಇದರಿಂದ ಬಟ್ಟೆಗಳು ಒದ್ದೆಯಾದ ಎಸ್ಟಿಯ ವಾಸನೆಯನ್ನು ಬೀರುತ್ತವೆ. 

1010

ಪಾರ್ಕ್ ಅಥವಾ ಗಾರ್ಡನ್ ನಲ್ಲಿ(Garden) ಕುಳಿತಿರುವಾಗ, ಡ್ರೈಯರ್ ಶೀಟ್ ಅನ್ನು ನಿಮ್ಮ ಬೆಲ್ಟ್, ಪಾಕೆಟ್ ಅಥವಾ ಮಣಿಕಟ್ಟಿನ ಮೇಲೆ ನೇತುಹಾಕಿ. ಅದರ ಪರಿಮಳದಿಂದ ಕೂಡ, ಸೊಳ್ಳೆಗಳು ನಿಮ್ಮಿಂದ ದೂರವಿರುತ್ತವೆ. ಇದರಿಂದ ಸೊಳ್ಳೆಗಳ ಯಾವುದೇ ಕಾಟವಿಲ್ಲದೆ ನೀವು ಅರಾಮವಾಗಿ ಎಂಜಾಯ್ ಮಾಡಬಹುದು, 

Read more Photos on
click me!

Recommended Stories