ಮಾವಿನ ಹಣ್ಣಲ್ಲ, ಬೀಜದ ಪ್ರಯೋಜನ ತಿಳಿದ್ರೆ ಅಚ್ಚರಿಯಾಗೋದು ಖಂಡಿತಾ
First Published | Apr 27, 2022, 3:39 PM ISTHealth benefits of Mango seed: ಇದು ಬೇಸಿಗೆ ಕಾಲ,ಅಂದರೆ ಇದು ಮಾವಿನ ಸೀಸನ್ ಕೂಡ ಹೌದು. ಈ ರುಚಿಕರವಾದ ಹಣ್ಣಿಗಾಗಿ ಎಲ್ಲರೂ ಕಾತುರದಿಂದ ಕಾಯುತ್ತಾರೆ. ಮಾವು ರುಚಿಕರ ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಮಾವಿನ ಹಣ್ಣಿನಲ್ಲಿ ವಿಟಮಿನ್ ಗಳು, ಕ್ಯಾಲ್ಸಿಯಂ, ಉತ್ಕರ್ಷಣ ನಿರೋಧಕಗಳು, ಕಬ್ಬಿಣ, ನಾರಿನಂಶ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ರಂಜಕ ಮತ್ತು ಸೋಡಿಯಂನಂತಹ ಪೋಷಕಾಂಶಗಳಿವೆ. ದೇಹದ ಉತ್ತಮ ಕಾರ್ಯನಿರ್ವಹಣೆಗೆ ಈ ಎಲ್ಲಾ ಅಂಶಗಳು ಅತ್ಯಗತ್ಯ.