ಚಿಕನ್ ಜೊತೆ ಮೊಸರು ತಿನ್ನೋ ಅಭ್ಯಾಸ ಇದೆಯೇ? ಮತ್ತೊಮ್ಮೆ ಯೋಚ್ನೆ ಮಾಡಿ

First Published | Jun 6, 2022, 6:51 PM IST

ಮೊಸರನ್ನು ಸಾಮಾನ್ಯವಾಗಿ ಎಲ್ಲಾ ಜನರು ಇಷ್ಟಪಟ್ಟು ತಿನ್ನುತ್ತಾರೆ.. ಹಾಗೆ ತಿನ್ನುವುದರ ಜೊತೆಗೆ, ಮೊಸರಿನ ರೈಥಾವನ್ನು ಸಹ ಹೆಚ್ಚಿನ ಜನರ ಮನೆಗಳಲ್ಲಿ ಪ್ರತಿದಿನ ತಯಾರಿಸಲಾಗುತ್ತದೆ. ಇದರಲ್ಲಿರುವ ಪೋಷಕಾಂಶಗಳಿಂದಾಗಿ, ಮೊಸರನ್ನು ಸೂಪರ್ ಫುಡ್ ಎನ್ನಲಾಗುತ್ತೆ. ಮೊಸರಿನಲ್ಲಿ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿವೆ. ಇದು ಪ್ರೋಟೀನ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ವಿಟಮಿನ್ ಬಿ 12, ಲಿನೋಲಿಕ್ ಆಮ್ಲಗಳಿಂದ ಸಮೃದ್ಧವಾಗಿದೆ.
 

ಮೊಸರು(Curd) ಎಲ್ಲಾ ಸೀಸನ್ ಗಳಲ್ಲೂ ನೀವು ಸೇವಿಸಬಹುದಾದ ಆಹಾರವಾಗಿದೆ. ಹೊರಗಡೆ ಟೆಂಪರೇಚರ್ ಹೆಚ್ಚಾದಾಗ, ಮನೆಗಳಲ್ಲಿ ರೈಥಾ  ಮಾತ್ರವಲ್ಲದೆ, ಬೆಳಿಗ್ಗೆ ಮತ್ತು ಸಂಜೆ ಲಸ್ಸಿಯನ್ನು ಸಹ ಮಾಡಿ ಸೇವಿಸಲಾಗುತ್ತೆ. ಅಷ್ಟೇ ಅಲ್ಲ, ಸುಂದರವಾದ ಚರ್ಮ, ಹೊಳಪಿನ ಮತ್ತು ತಲೆಹೊಟ್ಟು ಮುಕ್ತ ಕೂದಲನ್ನು ಪಡೆಯಲು ಸಹ ಮೊಸರನ್ನು ಬಳಸಲಾಗುತ್ತೆ. 

ಮೊಸರನ್ನು ಸಾಮಾನ್ಯವಾಗಿ ನಾವು ಬಯಸುವ ಇತರ ಯಾವುದೇ ಆಹಾರಗಳೊಂದಿಗೆ ಕಾಂಬಿನೇಶನ್ ಮಾಡಿ ತಿನ್ನುತ್ತೇವೆ. ಆದರೆ ನಿಮಗೆ ಗೊತ್ತಾ? ಹೀಗೆ ಮಾಡುವುದರಿಂದ ಆರೋಗ್ಯಕ್ಕೆ ಹಾನಿಯಾಗಬಹುದು. ಹೌದು ಆಯುರ್ವೇದದಲ್ಲಿ(Ayurveda), ಮೊಸರು ತಿನ್ನುವ ಕೆಲವು ಆರೋಗ್ಯಕರ ವಿಧಾನಗಳು ಮತ್ತು ಸಮಯಗಳನ್ನು ಹೇಳಲಾಗಿದೆ. ಈ ಬಗ್ಗೆ ಆಯುರ್ವೇದ ವೈದ್ಯರು ಏನು ಹೇಳುತ್ತಾರೆಂದು ತಿಳಿಯೋಣ

Tap to resize

ಸಾಮಾನ್ಯವಾಗಿ ಮೊಸರನ್ನ ಮಲಬದ್ಧತೆಗೆ(Constipation) ರಾಮಬಾಣ ಎಂದು ಜನರು ನಂಬಿದ್ದಾರೆ. ಇದು ನಿಜಾನೆ ಇರಬಹುದು, ಆದರೆ ಅದನ್ನು ಪ್ರತಿದಿನ ಸೇವಿಸಬಾರದು ಎನ್ನುತ್ತಾರೆ ಆಯುರ್ವೇದ ವೈದ್ಯರು. ಇದನ್ನು ನಾಲ್ಕು ದಿನಗಳಿಗೊಮ್ಮೆ ಸೇವಿಸುವುದು ಆರೋಗ್ಯಕ್ಕೆ ಉತ್ತಮ. ಮೊಸರನ್ನು ಸರಿಯಾದ ರೀತಿಯಲ್ಲಿ, ಸರಿಯಾದ ಸಮಯದಲ್ಲಿ ತಿನ್ನದಿದ್ದರೆ ಆರೋಗ್ಯಕ್ಕೆ ಹಾನಿಯಾಗಬಹುದು.

ಮೊಸರು ಸೇವನೆಯ ಕುರಿತು ಆಯುರ್ವೇದದಲ್ಲಿ ಏನು ಹೇಳ್ತಾರೆ ನೋಡೋಣ… 
ರಾತ್ರಿಯಲ್ಲಿ(Night) ಮೊಸರನ್ನು ತಿನ್ನಬಹುದೇ?
ಡಾಕ್ಟರ್ ಪ್ರಕಾರ, ಮೊಸರನ್ನು ರಾತ್ರಿಯಲ್ಲಿ ತಿನ್ನಬಾರದು.  ರಾತ್ರಿಯಲ್ಲಿ ಮೊಸರು ತಿಂದ್ರೆ, ದೇಹದಲ್ಲಿ ಹೆಚ್ಚಿನ ಪ್ರಮಾಣದ ಲೋಳೆ ರೂಪುಗೊಳ್ಳಲು ಪ್ರಾರಂಭಿಸುತ್ತದೆ, ಇದರಿಂದಾಗಿ ಎದೆಯ ಸೋಂಕು ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳ ಅಪಾಯವು ಹೆಚ್ಚಾಗುತ್ತದೆ. ಆದ್ದರಿಂದ ರಾತ್ರಿ ಮೊಸರು ತಿನ್ನೋದನ್ನು ತಪ್ಪಿಸಿ. 

ಮೊಸರಿನೊಂದಿಗೆ ಚಿಕನ್ (Chicken) ಬೇಡ್ವೇ ಬೇಡ 
ನೀವು ನಾನ್-ವೆಜ್ ತಿನ್ನಲು ಇಷ್ಟಪಡುತ್ತಿದ್ದರೆ,  ಈ ತಪ್ಪನ್ನು ಸಹ ಮಾಡುತ್ತಿರಬಹುದು. ಅದು ಚಿಕನ್ ಆಗಿರಲಿ ಅಥವಾ ಚಿಕನ್ ಬಿರಿಯಾನಿಯಾಗಿರಲಿ, ಅದರೊಂದಿಗೆ ರೈಥಾದ ರುಚಿಯು ನಿಮ್ಮ ಆರೋಗ್ಯವನ್ನು ಹಾಳುಮಾಡಬಹುದು. ನೀವು ಈ ತಪ್ಪನ್ನು ಮಾಡುತ್ತಿದ್ದರೆ, ಯಾವುದೇ ಸಮಯದಲ್ಲಿ ನೀವು ಸೋರಿಯಾಸಿಸ್, ಸಂಧಿವಾತ ಮತ್ತು ಗುಳ್ಳೆಗಳಂತಹ ಸಮಸ್ಯೆಗಳಿಗೆ ಗುರಿಯಾಗಬಹುದು.

ಹಾಲಿನೊಂದಿಗೆ ಮೊಸರನ್ನು ತಪ್ಪಿಯೂ ಸೇವಿಸಬೇಡಿ 
ಮೊಸರನ್ನು ಹಾಲಿನಿಂದ(Milk) ತಯಾರಿಸಲಾಗಿದ್ದೆ, ಆದರೂ ಅವುಗಳನ್ನು ಒಟ್ಟಿಗೆ ತಿನ್ನುವುದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಏಕೆಂದರೆ ಅದರ ಅಂಶಗಳು ಒಂದಕ್ಕಿಂತ ಒಂದು ಸಂಪೂರ್ಣವಾಗಿ ಭಿನ್ನವಾಗಿವೆ. ನೀವು ಒಟ್ಟಿಗೆ ಅಥವಾ ತಕ್ಷಣವೇ ಎರಡನ್ನೂ ಸೇವಿಸಿದರೆ, ಜಾಗರೂಕರಾಗಿರಿ, ಅದು ಹೊಟ್ಟೆಯ ಸಮಸ್ಯೆಗೆ ಕಾರಣವಾಗಬಹುದು ಮತ್ತು ಕೀಲುಗಳಲ್ಲಿ ನೋವಿನಿಂದ ಕೂಡಿದ ಗಾಯಗಳನ್ನು ಉಂಟುಮಾಡಬಹುದು.

ಮೊಸರು ಮತ್ತು ಹಣ್ಣಿನ ಸ್ಮೂಥಿ(Smoothie)
ಯೂಟ್ಯೂಬ್ ಅನ್ನು ನೋಡಿ, ವಿಭಿನ್ನ ರೆಸಿಪಿಗಳನ್ನು ಟ್ರೈ ಮಾಡುತ್ತಿದ್ದರೆ, ಈ ಸಮಯದಲ್ಲಿ ಮೊಸರು ಮತ್ತು ಹಣ್ಣಿನ ಸ್ಮೂಥಿಗಳನ್ನು ಜೊತೆಯಾಗಿ ಸೇರಿಸುವ ಯಾವುದೇ ರೆಸಿಪಿ ಮಾಡಬೇಡಿ. ಇದು ನಿಮ್ಮ ಮುಖದ ಮೇಲೆ ಗುಳ್ಳೆಗಳೊಂದಿಗೆ ಎದೆಯ ಸೋಂಕುಗಳಿಗೆ ಕಾರಣವಾಗಬಹುದು.

ಪ್ರತಿದಿನ ಮೊಸರನ್ನು ತಿನ್ನುವುದು ಪ್ರಯೋಜನಕಾರಿಯೇ ಅಥವಾ ಅಲ್ಲವೇ?
ಆಯುರ್ವೇದ ತಜ್ಞರ ಪ್ರಕಾರ, ಮೊಸರಿನಲ್ಲಿ ಅನೇಕ ಪೋಷಕಾಂಶಗಳಿದ್ದರೂ, ಅದನ್ನು ಪ್ರತಿದಿನ ಸೇವಿಸುವುದು ಆರೋಗ್ಯಕ್ಕೆ ಪ್ರಯೋಜನಕಾರಿಯಲ್ಲ. ಇದಕ್ಕೆ ಕಾರಣ, ಅದು ಹೆವಿ ಫುಡ್ ಆಗಿದೆ ಮತ್ತು ಯೀಸ್ಟಿನಿಂದ ಕೂಡಿದೆ. ಲ್ಯಾಕ್ಟೋಸ್ ಅಲರ್ಜಿ(Allergy) ಹೊಂದಿರುವಂತಹ ಜನರು, ಪ್ರತಿದಿನ ಮೊಸರನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡಬಹುದು.
 

ಪ್ರತಿದಿನ ಮೊಸರನ್ನು ಈ ರೀತಿ ಸೇವಿಸಿ 
 ಮೊಸರು ಉತ್ತಮ ಬ್ಯಾಕ್ಟೀರಿಯಾವನ್ನು ಹೊಂದಿರುವುದರಿಂದ ಜೀರ್ಣಾಂಗ ವ್ಯವಸ್ಥೆಯು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಆದ್ದರಿಂದ, ಇದನ್ನು ಸೇವಿಸುವುದು ಜೀರ್ಣಕ್ರಿಯೆಗೆ(Digestion) ಒಳ್ಳೆಯದು. ಆದರೆ ಮೊಸರನ್ನು ಆಹಾರದೊಂದಿಗೆ ಮಜ್ಜಿಗೆಯಾಗಿ ಸೇವಿಸಿ. ಇದು ಆರೋಗ್ಯಕ್ಕೆ ಉತ್ತಮವಾಗಿದೆ. 

Latest Videos

click me!