ಬೇಸಿಗೆ (Summer) ಕಾಲದಲ್ಲಿ, ಚರ್ಮದ ಬಗ್ಗೆ ವಿಶೇಷ ಕೇರ್ ತೆಗೆದುಕೊಳ್ಳಬೇಕು. ಸುಡುವ ಬಿಸಿಲು ಮತ್ತು ಹೆಚ್ಚಿನ ತಾಪಮಾನದಿಂದಾಗಿ ಹೆಚ್ಚು ಹೆಚ್ಚು ಬೆವರುತ್ತೆ ಮತ್ತು ಚರ್ಮ ಸಹ ಎಣ್ಣೆಯುಕ್ತವಾಗುತ್ತದೆ. ಬೇಸಿಗೆಯಲ್ಲಿ ಚರ್ಮದ ಸಮಸ್ಯೆಗಳು (Skin Problem) ತುಂಬಾ ಸಾಮಾನ್ಯ. ಸನ್ ಬರ್ನ್ (Sun Burn), ಮೊಡವೆ, ಸೋಂಕು ಇತ್ಯಾದಿಗಳ ಅಪಾಯವು ಹೆಚ್ಚಾಗುತ್ತವೆ. ಈಗಾಗಲೇ ಮೊಡವೆ ಚರ್ಮದ ಸಮಸ್ಯೆ ಅಥವಾ ಆಯ್ಲಿ ಸ್ಕಿನ್ ಇರೋರಿಗೆ ಬೇಸಿಗೆಯಲ್ಲಿ ಸಮಸ್ಯೆ ಮತ್ತಷ್ಟು ಹೆಚ್ಚುತ್ತೆ. ಇದನ್ನು ತಪ್ಪಿಸಲು, ಜನರು ಆಗಾಗ್ಗೆ ಮುಖ ತೊಳೆಯುತ್ತಾರೆ ಇದು ಸರೀನಾ?
ಬೇಸಿಗೆಯಲ್ಲಿ ಪದೇ ಪದೇ ಮುಖ ತೊಳೆಯೋದು ಅಥವಾ ಕ್ಲೆನ್ಸರ್‌ನಿಂದ ಚರ್ಮವನ್ನು ಪದೇ ಪದೇ ಸ್ವಚ್ಛಗೊಳಿಸುವುದು ಸರಿಯಲ್ಲ. ಚರ್ಮದ ಮೇಲೆ ಪದೇ ಪದೇ ಫೇಸ್ ವಾಶ್ (face wash) ಅಥವಾ ಕ್ಲೆನ್ಸರ್ ಬಳಸುವುದರಿಂದ ಚರ್ಮಕ್ಕೆ ಹಾನಿಯಾಗಬಹುದು ಅನ್ನೋದೆ ಜನರಿಗೆ ತಿಳಿಸಿಲ್ಲ. ಇದು ಅವರ ಮೊಡವೆ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸಬಹುದು.
210
ಆಗಾಗ್ಗೆ ಮುಖವನ್ನು ತೊಳೆಯುವುದು ಎಷ್ಟು ಡೇಂಜರಸ್ ಗೊತ್ತಾ?
ಪದೇ ಪದೇ ಮುಖವನ್ನು ತೊಳೆಯುವ (washing face) ಮೂಲಕ, ನಿಮ್ಮ ಮುಖದ ಮೇಲೆ ವಯಸ್ಸಾಗುವಿಕೆಯ ಲಕ್ಷಣ ಎದ್ದು ಕಾಣುತ್ತದೆ. ಒರಟುತನದಿಂದಾಗಿ, ಚರ್ಮದಲ್ಲಿ ಹಿಗ್ಗುವಿಕೆ ಹೆಚ್ಚಾಗುತ್ತದೆ, ಇದು ಸುಕ್ಕುಗಳು ಕಾಣಿಸಿಕೊಳ್ಳುವಂತೆ ಮಾಡುತ್ತದೆ. ಆದುದರಿಂದ ಪದೇ ಪದೇ ಮುಖ ತೊಳೆಯಬೇಡಿ.
310
- ಕಣ್ಣುಗಳ ಕೆಳಗೆ ಕಪ್ಪು ವರ್ತುಲಗಳು ಅಂದ್ರೆ ಡಾರ್ಕ್ ಸರ್ಕಲ್ (Dark Circle) ಕಾಣಿಸಿಕೊಳ್ಳುವುದು ಸಹ ಇದೇ ಕಾರಣದಿಂದಾಗಿ. ಹೌದು ನೀವು ಹೆಚ್ಚು ಹೆಚ್ಚು ಮುಖ ವಾಶ್ ಮಾಡಿದಷ್ಟು ಮುಖದ ತೇವಾಂಶ ಕಡಿಮೆಯಾಗಿ ಮುಖ ಡ್ರೈ ಆಗುತ್ತೆ, ಜೊತೆಗೆ ಕಣ್ಣಿನ ಸುತ್ತಲೂ ಡಾರ್ಕ್ ಸರ್ಕಲ್ ಕಾಣಿಸಿಕೊಳ್ಳುತ್ತದೆ.
410
ಆಗಾಗ್ಗೆ ಮುಖ ತೊಳೆಯುವುದರಿಂದ ಚರ್ಮದಲ್ಲಿ ಒರಟುತನ (Dry Skin) ಹೆಚ್ಚಾಗುತ್ತದೆ, ಇದು ಚರ್ಮದ ಹೊಳಪನ್ನು ಮಸುಕಾಗಿಸುತ್ತದೆ. ಇದರಿಂದ ನೀವು ಡಲ್ ಆಗಿ ಕಾಣುವ ಚಾನ್ಸಸ್ ಕೂಡ ಜಾಸ್ತಿ ಇದೆ. ಆದುದರಿಂದ ಹೆಚ್ಚು ಫೇಸ್ ವಾಶ್ ಮಾಡೋ ಮುನ್ನ ಇರಲಿ ಎಚ್ಚರ.
510
ಆಗಾಗ್ಗೆ ಫೇಸ್ ವಾಶ್ ಮಾಡುವುದರಿಂದ ಈ ಮೈಕ್ರೋಫ್ಲೋರಾ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಮತ್ತು ಚರ್ಮ ತನ್ನ ನೈಸರ್ಗಿಕ ಹೊಳಪನ್ನು ಕಳೆದುಕೊಳ್ಳುತ್ತದೆ. ಪ್ರತಿ ಬಾರಿಯೂ ಕೆಮಿಕಲ್ ಫೇಸ್ ವಾಶ್ ಬಳಸೋದ್ರಿಂದ ಚರ್ಮದಲ್ಲಿ ಕಿರಿಕಿರಿ ಮತ್ತು ತುರಿಕೆ ಉಂಟಾಗಬಹುದು.
610
ಚರ್ಮದ ತೇವಾಂಶವು (Moisturiser) ಕಳೆದುಹೋಗುತ್ತದೆ, ಇದು ಚರ್ಮವನ್ನು ಡ್ರೈ ಆಗಿ ಕಾಣುವಂತೆ ಮಾಡುತ್ತದೆ. ಆಗಾಗ್ಗೆ ಮುಖವನ್ನು ತೊಳೆಯುವ ಮೂಲಕ, ಚರ್ಮದ ಮೇಲಿರುವ ಸೆಬಮ್ ಅನ್ನು ತೆಗೆದುಹಾಕಬಹುದು, ಇದರಿಂದ ಸಿಕ್ ಡ್ರೈ ಆಗುತ್ತೆ.
710
ಶುಷ್ಕ ಚರ್ಮದಿಂದ (dry skin) ಮೊಡವೆಗಳು ಮತ್ತು ಚರ್ಮದಲ್ಲಿ ಸೋಂಕುಗಳು ಬರುವ ಸಾಧ್ಯತೆ ಹೆಚ್ಚಾಗುತ್ತವೆ. ಅಲ್ಲದೇ ನಿಮ್ಮ ಚರ್ಮದ ಪಿಎಚ್ ಮಟ್ಟವನ್ನು ಹದಗೆಡಿಸುತ್ತದೆ. ದೀರ್ಘಕಾಲದವರೆಗೆ ಈ ಅಭ್ಯಾಸದಿಂದಾಗಿ, ನಿಮ್ಮ ಚರ್ಮವು ವಯಸ್ಸಾದಂತೆ ಕಾಣಲು ಪ್ರಾರಂಭಿಸುತ್ತದೆ. ಆದುದರಿಂದ ಪದೇ ಪದೇ ಮುಖ ವಾಶ್ ಮಾಡೋದನ್ನು ತಪ್ಪಿಸಿ, ಸ್ಕಿನ್‌ನಲ್ಲಿ ತೇವಾಂಶ ಉಳಿಸಿ.
810
ನಿಮ್ಮ ಚರ್ಮದ ಮೇಲೆ ಮೊಡವೆಗಳು ಅಥವಾ ದದ್ದುಗಳಿದ್ದರೆ, ನೀವು ನಿಮ್ಮ ಮುಖವನ್ನು ದಿನಕ್ಕೆ 2 ರಿಂದ 3 ಬಾರಿಗಿಂತ ಹೆಚ್ಚು ಬಾರಿ ತೊಳೆಯಬಾರದು. ನೀವು ಎಣ್ಣೆಯುಕ್ತ ಚರ್ಮ (oily skin), ಬ್ಲ್ಯಾಕ್ ಹೆಡ್ಸ್ ಅಥವಾ ವೈಟ್ ಹೆಡ್‌ಗಳನ್ನು ಹೊಂದಿದ್ದರೂ ಮತ್ತು ನಿಮಗೆ ಜಿಗುಟಾದ ಅನುಭವವಾಗಿದ್ದರೂ, ನೀವು ಹೆವೀ ಫೇಸ್ ವಾಶ್ ಬಳಕೆಯನ್ನು ತಪ್ಪಿಸಬೇಕು.
910
ಅಷ್ಟೇ ಅಲ್ಲ ಚರ್ಮವನ್ನು ಎಕ್ಸ್ಫೋಲಿಯೇಟ್ ಮಾಡಬೇಡಿ ಅಥವಾ ಹೆಚ್ಚು ಕ್ಲೆನ್ಸಿಂಗ್ ಮಾಡಬೇಡಿ. ಏಕೆಂದರೆ ಇದು ಚರ್ಮದ ರಕ್ಷಣಾತ್ಮಕ ತಡೆಗೋಡೆಯನ್ನು ಹಾನಿಗೊಳಿಸುತ್ತದೆ ಮತ್ತು ನೀವು ಸೋಂಕು, ಅಲರ್ಜಿ, ದದ್ದು ಮತ್ತು ಮೊದಲಿಗಿಂತ ಹೆಚ್ಚು ಮೊಡವೆ ಸಮಸ್ಯೆಗಳನ್ನು (pimple) ಎದುರಿಸುವ ಸಾಧ್ಯತೆ ಹೆಚ್ಚಾಗಿರುತ್ತೆ.
1010
ನೀವು ಚರ್ಮದ ಮೇಲೆ ಹೆಚ್ಚು ಕೊಳೆ, ಬೆವರುವಿಕೆ ಮತ್ತು ಎಣ್ಣೆಯುಕ್ತ ಸ್ಕಿನ್ ಹೊಂದಿದ್ದರೆ, ಚರ್ಮವನ್ನು ಮತ್ತೆ ಫೇಸ್ ವಾಶ್‌ನಿಂದ ತೊಳೆಯುವ ಬದಲು ಅಥವಾ ಕ್ಲೆನ್ಸರ್‌ನಿಂದ ಸ್ವಚ್ಛಗೊಳಿಸುವ ಬದಲು, ನೀವು ಥರ್ಮಲ್ ವಾಟರ್ ಮಿಸ್ಟ್ ಬಳಸಬಹುದು ಮತ್ತು ದಿನವಿಡೀ ಬೆವರಿದ ನಂತರ ಚರ್ಮದ ಮೇಲೆ ಇದನ್ನು ಟ್ರೈ ಮಾಡಬಹುದು. ಇದು ಬೆವರು, ಎಣ್ಣೆ ಮತ್ತು ಕೊಳೆಯನ್ನು ತೊಡೆದುಹಾಕುತ್ತದೆ.