ಗೋಲ್ಡ್ ಅಂಡ್ ಸಿಲ್ವರ್ ಡ್ರೆಸ್‌ನಲ್ಲಿ ಮಿರಮಿರ ಮಿಂಚಿದ ತಮನ್ನಾ; ಮಿಲ್ಕಿ ಬ್ಯೂಟಿಯ ಹಾಟ್ ಫೋಟೋ ವೈರಲ್

First Published Oct 2, 2022, 11:48 AM IST

ನಟಿ ತಮನ್ನಾ ಇತ್ತೀಚಿಗಷ್ಟೆ ಒಂದಿಷ್ಟು ಸುಂದರಫೋಟೋಗಳನ್ನುಸಾಮಾಜಿಕ ಜಾಲತಾಣದಲ್ಲಿ  ಶೇರ್ ಮಾಡಿದ್ದಾರೆ. ಮಿಲ್ಕಿ ಬ್ಯೂಟಿಯ ಬೋಲ್ಡ್ ಫೋಟೋಗಳು ಅಭಿಮಾನಿಗಳ ನಿದ್ದೆ ಗೆಡಿಸಿವೆ.    
 

ಬಹುಭಾಷಾ ನಟಿ ತಮನ್ನಾ ಭಾಟಿಯಾ ಸದ್ಯ ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಿಂದಿಯಲ್ಲಿ ಇತ್ತೀಚಿಗಷ್ಟೆ ತಮನ್ನಾ ಬಬ್ಲಿ ಬೌನ್ಸರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ. ವಿಭಿನ್ನ ಪಾತ್ರದ ಮೂಲಕ ತಮನ್ನಾ ಅಭಿಮಾನಿಗಳ ಗಮನ ಸೆಳೆದಿದ್ದರು. 
 

ಇದೀಗ ತಮನ್ನಾ ಪ್ಲಾನ್ ಎ ಪ್ಲಾನ್ ಬಿ ಸಿನಿಮಾ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ಸಿನಿಮಾದಲ್ಲಿ ತಮನ್ನಾ ರಿತೇಶ್ ದೇಶಮುಖ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಸದ್ಯ ಈ ಸಿನಿಮಾ ರಿಲೀಸ್ ಆಗಿದ್ದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ನಟಿ ತಮನ್ನಾ ಇತ್ತೀಚಿಗಷ್ಟೆ ಒಂದಿಷ್ಟು ಸುಂದರಫೋಟೋಗಳನ್ನುಸಾಮಾಜಿಕ ಜಾಲತಾಣದಲ್ಲಿ  ಶೇರ್ ಮಾಡಿದ್ದಾರೆ. ಮಿಲ್ಕಿ ಬ್ಯೂಟಿಯ ಬೋಲ್ಡ್ ಫೋಟೋಗಳು ಅಭಿಮಾನಿಗಳ ನಿದ್ದೆ ಗೆಡಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.    

ಗೋಲ್ಡ್ ಅಂಡ್ ಸಿಲ್ವರ್ ಡೆಸ್ರ್‌ನಲ್ಲಿ ತಮನ್ನಾ ಮಸ್ತ್ ಪೋಸ್ ನೀಡಿದ್ದಾರೆ. ಗೋಲ್ಡ್ ಇಯರ್‌ರಿಂಗ್ ಧರಿಸಿ ಕ್ಯಾಮರಾಗೆ ತರಹೇವಾರಿ ಪೋಸ್ ನೀಡಿರುವ ತಮನ್ನಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

ಫೋಟೋಗಳನ್ನು ಶೇರ್ ಮಾಡಿ, ಪ್ಲಾನ್ ಎ ಗೋಲ್ಡ್ ಧರಿಸಿ, ಪ್ಲಾನ್ ಬಿ ಸಿಲ್ವರ್ ಲೈನ್ ಹುಡುಕಿ ಎಂದು ಕ್ಯಾಪ್ಷನ್ನೀಡಿದ್ದಾರೆ. ತನ್ನದೆ ಸಿನಿಮಾದ ಹೆಸರನ್ನು ಡ್ರೆಸ್‌ಗೆ ಹೊಂದಿಕೆಯಾಗುವ ಹಾಗೆ ಕ್ಯಾಪ್ಷನ್ ನೀಡಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. 

ಇತ್ತೀಚಿಗೆ ತಮನ್ನಾ ಸಿನಿಮಾಗಳು ಹೇಳಿಕೊಳ್ಳುವಷ್ಟು ಯಶಸ್ಸು ಕಂಡಿಲ್ಲ. ಒಂದು ದೊಡ್ಡ ಹಿಟ್ ಗಾಗಿ ತಮನ್ನಾ ಕಾಯುತ್ತಿದ್ದಾರೆ. ತೆಲುಗು, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಬ್ಯುಸಿಯಾಗಿರುವ ತಮನ್ನಾ ಬಳಿ ಸಾಲು ಸಾಲು ಸಿನಿಮಾಗಳಿವೆ. 

ತೆಲುಗಿನಲ್ಲಿ ತಮನ್ನಾ `ಗುರ್ತುಂಡ ಸೀತಕಲ' ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ಈ ಸಿನಿಮಾಗೆ ಕನ್ನಡ ನಿರ್ದೇಶಕ ನಾಗಶೇಖರ್ ಆಕ್ಷನ್ ಕಟ್ ಹೇಳಿದ್ದಾರೆ. ಕನ್ನಡದ ಲವ್ ಮಾಕ್‌ಟೇಲ್ ಸಿನಿಮಾದ ರಿಮೇಕ್ ಇದಾಗಿದ್ದು ತಮನ್ನಾ ಜೊತೆ ದಕ್ಷಿಣದ ನಟ ಸತ್ಯ ದೇವ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.ಈ ಸಿನಿಮಾ ಜೊತೆಗೆ ಬೋಲಾ ಶಂಕರ್ ಸೇರಿದಂತೆ ಇನ್ನು ಅನೇಕ ಸಿನಿಮಾಗಳಿವೆ.

click me!