ಬಿಕಿನಿಯಲ್ಲಿ ಮಾಲ್ಡೀವ್ಸ್ ಬೀಚಿನ ಮಾದಕತೆ ಹೆಚ್ಚಿಸಿದ ಸನ್ನಿ!

First Published Sep 15, 2022, 4:43 PM IST

ಬಾಲಿವುಡ್‌ನ ಬೋಲ್ಡ್ ಮತ್ತು ಹಾಟ್ ನಟಿಯರಾದ ಸನ್ನಿ ಲಿಯೋನ್ (Sunny Leone) ಶೀಘ್ರದಲ್ಲೇ ದಕ್ಷಿಣಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಇತ್ತೀಚೆಗಷ್ಟೇ ಅವರ ಚೊಚ್ಚಲ ತಮಿಳು ಚಿತ್ರ 'ಓ ಮೈ ಘೋಸ್ಟ್' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಈ ಕಾರಣದಿಂದ ಅವರು ಈಗಾಗಲೇ ಸುದ್ದಿಯಲ್ಲಿದ್ದಾರೆ. ಈ ಮಧ್ಯೆ, ಸನ್ನಿ ಮಾಲ್ಡೀವ್ಸ್ ಬೀಚ್‌ನ ಕೆಲವು ಹಾಟ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
 

ಸನ್ನಿ ಲಿಯೋನ್‌ ಮಾದಕ ಗುಲಾಬಿ ಬಿಕಿನಿಯನ್ನು ಧರಿಸಿದ್ದರು. ಬೀಚ್‌ನಲ್ಲಿ ನಡೆದ ಈ ಹಾಟ್ ಫೋಟೋಶೂಟ್‌ನ ಕೆಲವು ಫೋಟೋಗಳನ್ನು ಹಂಚಿಕೊಂಡ ಸನ್ನಿ, ಈ ಬಿಕಿನಿಯನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿದ್ದಾರೆ. 

ಈ ಫೋಟೋಗಳಲ್ಲಿ, ಏಂಜೆಲ್ ಕೊರ್ಸೆಟ್‌ನ ಫ್ಲೋರಲ್‌ ಎರಡು ತುಂಡುಗಳ ಬಿಕಿನಿಯಲ್ಲಿ ಸನ್ನಿ ಲಿಯೋನ್‌ ಕಾಣಿಸಿಕೊಂಡಿದ್ದಾರೆ. ಈ ಫೋಟೋಶೂಟ್‌ಗೆ ನಟಿಯ ಸ್ಟೈಲಿಂಗ್ ಅನ್ನು ಹಿತೇಂದ್ರ ಕಪೋಪಾರ ಮಾಡಿದ್ದಾರೆ.ಸನ್ನಿಯ ಹಾಟ್ನೆಸ್‌ಗೆ ಫ್ಯಾನ್ಸ್ ಫುಲ್‌ ಫಿದಾ ಆಗಿದ್ದಾರೆ.  

ಈ ಫೋಟೋಶೂಟ್ ನಲ್ಲಿ ಸನ್ನಿ ಸಮುದ್ರ ತೀರದ ಮರಳಿನ ಮೇಲೆ ಮಲಗಿ ಹಲವು ಕಿಲ್ಲರ್ ಪೋಸ್‌ಗಳನ್ನು ನೀಡಿದ್ದಾರೆ. ಅವರು  ಸನ್ ಗ್ಲಾಸ್‌ಗಳನ್ನು ಸಹ ಧರಿಸಿ ಪೊಶ್‌ ನೀಡಿರುವುದು ಕಾಣಬಹುದು.
 

ಸನ್ನಿ ಲಿಯೋನ್‌ ಅವರು  ಶೀಘ್ರದಲ್ಲೇ ಸೌತ್ ಚಿತ್ರಗಳಲ್ಲಿ ತನ್ನ ಹವಾ  ತೋರಿಸುತ್ತಾರೆ. ನಿರ್ದೇಶಕ ಯುವನ್ ಅವರ ಮುಂಬರುವ ಹಾರರ್ ಕಾಮಿಡಿ 'ಓ ಮೈ ಘೋಸ್ಟ್' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಚಿತ್ರದ ಟ್ರೇಲರ್ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿತ್ತು. ಚಿತ್ರದಲ್ಲಿ ಸನ್ನಿ ‘ಮಾಯಸೇನಾ’ ಎಂಬ ರಾಣಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೇ ಸನ್ನಿ ತೆಲುಗು ಇಂಡಸ್ಟ್ರಿಗೆ 'ಜಿನ್ನಾ' ಚಿತ್ರದ ಮೂಲಕ ಪಾದಾರ್ಪಣೆ ಮಾಡಲಿದ್ದಾರೆ ಮತ್ತು ಈ ಚಿತ್ರದಲ್ಲಿ ನಟಿ ಎನ್‌ಆರ್‌ಐ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

click me!