ಸರ್ಕಾರಕ್ಕೆ ವನ್ಯಜೀವಿ ಅಂಗಾಂಗ ಒಪ್ಪಿಸಿದ 192 ಜನ..!

Published : May 17, 2024, 12:05 PM IST
ಸರ್ಕಾರಕ್ಕೆ ವನ್ಯಜೀವಿ ಅಂಗಾಂಗ ಒಪ್ಪಿಸಿದ 192 ಜನ..!

ಸಾರಾಂಶ

ವನ್ಯ ಜೀವಿ ಅಂಗಾಂಗಗಳನ್ನು ಹೊಂದಿರುವವರು ಅರಣ್ಯ ಇಲಾಖೆಗೆ ಅದನ್ನು ಒಪ್ಪಿಸುವುದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಜನವರಿಯಲ್ಲಿ ಅಧಿಸೂಚನೆ ಹೊರಡಿಸಿ ಏ.10ರ ಒಳಗೆ ಅನಧಿಕೃತವಾಗಿ ಸಂಗ್ರಹಿಸಿಡಲಾದ ವನ್ಯ ಜೀವಿ ಅಂಗಾಂಗಗಳನ್ನುಸಲ್ಲಿಸಬೇಕು ಎಂದು ತಿಳಿಸಲಾಗಿತ್ತು. ಅದರಂತೆ ಅರಣ್ಯ ಇಲಾಖೆಯ ಎಲ್ಲ 192 ಅರ್ಜಿಗಳು ಸಲ್ಲಿಕೆಯಾಗಿವೆ.

ಬೆಂಗಳೂರು(ಮೇ.17):  ಅನಧಿಕೃತವಾಗಿ ಸಂಗ್ರಹಿಸಿಟ್ಟುಕೊಂಡಿ ರುವ ವನ್ಯಜೀವಿಗಳ ಅಂಗಾಂಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸಲು ಅರಣ್ಯ ಇಲಾಖೆ ನೀಡಿದ್ದ ಮೂರು ತಿಂಗಳ ಗಡುವಿನಲ್ಲಿ ಕೇವಲ 192 ಅರ್ಜಿ ಸಲ್ಲಿಕೆಯಾಗಿದ್ದು, ಜನರು ಅನಧಿಕೃತವಾಗಿ ಇಟ್ಟುಕೊಂಡಿದ್ದ ವನ್ಯ ಜೀವಿಗಳ ಅಂಗಾಂಗಳನ್ನು ಒಪ್ಪಿಸಿದ್ದಾರೆ.

ವನ್ಯ ಜೀವಿ ಅಂಗಾಂಗಗಳನ್ನು ಹೊಂದಿರುವವರು ಅರಣ್ಯ ಇಲಾಖೆಗೆ ಅದನ್ನು ಒಪ್ಪಿಸುವುದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಜನವರಿಯಲ್ಲಿ ಅಧಿಸೂಚನೆ ಹೊರಡಿಸಿ ಏ.10ರ ಒಳಗೆ ಅನಧಿಕೃತವಾಗಿ ಸಂಗ್ರಹಿಸಿಡಲಾದ ವನ್ಯ ಜೀವಿ ಅಂಗಾಂಗಗಳನ್ನುಸಲ್ಲಿಸಬೇಕು ಎಂದು ತಿಳಿಸಲಾಗಿತ್ತು. ಅದರಂತೆ ಅರಣ್ಯ ಇಲಾಖೆಯ ಎಲ್ಲ 192 ಅರ್ಜಿಗಳು ಸಲ್ಲಿಕೆಯಾಗಿವೆ.

Belagavi: ವನ್ಯಜೀವಿಗಳ ಅಂಗಾಂಗ ಸಾಗಾಟ : ಓರ್ವನ ಬಂಧನ

ಬೆಂಗಳೂರು ನಗರ ವ್ಯಾಪ್ತಿಯಲ್ಲಿಯೇ ಹೆಚ್ಚು: 

ಬೆಂಗಳೂರು ನಗರ ವಿಭಾಗ ವ್ಯಾಪ್ತಿಯಲ್ಲೇ ಅತಿಹೆಚ್ಚು ವನ್ಯಜೀವಿ ಪರಿಕರಗಳು ಸಲ್ಲಿಕೆಯಾಗಿವೆ.192ರ ಪೈಕಿ ಬೆಂಗಳೂರುನಗರ ವಿಭಾಗವ್ಯಾಪ್ತಿಯಲ್ಲಿ 110, 5 2 13, ವಿಭಾಗ ೨. ಧಾರವಾಡ ವಿಭಾಗ 8, ಹಾಸನ, ಶಿವಮೊಗ್ಗ ವನ್ಯಜೀವಿ ವಿಭಾಗ ತಲಾ 6, ಮೈಸೂರು, ತುಮಕೂರು, ಬೆಳಗಾವಿ ತಲಾ 5, ಹೊನ್ನಾವರ4, ಹುಣಸೂರು, ಮಂಗಳೂರು ತಲಾ, ಬನ್ನೇರಘಟ್ಟ ರಾಷ್ಟ್ರೀಯ ಉದ್ಯಾನ, ಚಿತ್ರದುರ್ಗ ತಲಾ 2, ಬಾಗಲಕೋಟೆ, ಚಿಕ್ಕಮಗಳೂರು, ಚಿತ್ರದುರ್ಗಭದ್ರಾವನ್ಯ ಜೀವಿ, ಹಾವೇರಿ, ಕಾರವಾರ ಸಲ್ಲಿಸಿ, ಸಾರ್ವಜನಿಕರು ತಮ್ಮಲ್ಲಿನ ವನ್ಯಜೀವಿ ಅಂಗಾಂಗಗಳನ್ನು ಅರಣ್ಯ ಇಲಾಖೆಗೆ ಸಲ್ಲಿಸಿದ್ದಾರೆ. 

ಪರಿಶೀಲನೆ ನಂತರ ಸ್ವೀಕಾರ: 

ಅನಧಿಕೃತ ವನ್ಯಜೀವಿ ಅಂಗಾಂಗಗಳನ್ನು ನೀಡುವ ಸಂದರ್ಭದಲ್ಲಿ ನಿಗದಿತ ಅರಣ್ಯಾಧಿಕಾರಿಗಳು ಹಾಗೂವನ್ಯ ಜೀವಿವಾರ್ಡನ್ ಗಳು ಆ ಅಂಗಾಂಗಳನ್ನು ಪ್ರಾಣಿ ಬೇಟೆಯಿಂದ ಪಡೆದಿದ್ದಲ್ಲ ಎಂಬುದನ್ನು ಖಚಿತ ಪಡಿಸಿಕೊಂಡ ನಂತರವೇ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಅಂಗಾಂಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪರಿಶೀಲನೆ ವೇಳೆ ಅಂಗಾಂಗದ ಸಂಪೂರ್ಣ ವಿವರವನ್ನು ಪಡೆದುಕೊಳ್ಳಲಾಗಿದೆ. ಯಾವ ಪ್ರಾಣಿಯ ಯಾವ ವಸ್ತುವನ್ನು ವಶಕ್ಕೆ ಪಡೆಯಲಾಗಿದೆ. ಅದರ ಉದ್ದ, ಅಗಲ, ತೂಕ ಎಷ್ಟೆಂಬುದನ್ನು ಅಳತೆ ಮಾಡಿದ ನಂತರ ಅದನ್ನು ಪಡೆಯಲಾಗಿದೆ. ಜತೆಗೆ ಆ ಬಗ್ಗೆ ದಾಖಲೆಗಳಲ್ಲಿ ನಮೂದಿಸಲಾಗಿದೆ. ಅಂಗಾಂಗ ನೀಡಿದವರ ಪ್ರತಿ ಮಾಹಿತಿಯನ್ನೂ ಪಡೆಯಲಾಗಿದೆ.  ಮುಂದಿನ ದಿನಗಳಲ್ಲಿ ಅವರು ನೀಡಿದ ವನ್ಯ ಜೀವಿಗಳ ಅಂಗಾಂಗ ಬೇಟೆ ಅಥವಾ ಬೇರೆ ಮಾರ್ಗದಿಂದ ಪಡೆದಿದ್ದು ಎಂಬುದು ಸಾಬೀತಾದರೆ ಅವರ ವಿರುದ್ದ ಕ್ರಮ ಕೈಗೊಳ್ಳಲು ಸಹಕಾರಿಯಾಗುವಂತೆ ಮಾಡಲಾಗಿದೆ. 

ರಾಮನಗರ: ನೀರಿಗೆ ತತ್ವಾರ: ವನ್ಯಜೀವಿಗಳ ಜೀವಕ್ಕೆ ಸಂಚಕಾರ

ಶೇ.60ರಷ್ಟು ಹುಲಿ ಉಗುರು: 

ಸಲ್ಲಿಕೆಯಾಗಿರುವ ಅಂಗಾಂಗಗಳಪೈಕಿ ಬೆಂಗಳೂರುನಗರ ವ್ಯಾಪ್ತಿಯಲ್ಲಿ ಹುಲಿ ಉಗುರು ಹೆಚ್ಚಿನ ಪ್ರಮಾಣದಲ್ಲಿವೆ. ಶೇ. 60ಕ್ಕಿಂತ ಹೆಚ್ಚು ಹುಲಿ ಉಗುರಾಗಿದ್ದು, ಅದರ ಜತೆಗೆ ಜಿಂಕೆಯ ಕೊಂಬು, ಚರ್ಮಗಳನ್ನೂ ನೀಡಲಾಗಿದೆ. ಬೆಂಗಳೂರು ಹೊರತುಪಡಿಸಿ ಉಳಿದ ವಿಭಾಗ ವ್ಯಾಪ್ತಿಯಲ್ಲಿ ಹುಲಿ ಉಗುರಿಗಿಂತ ಜಿಂಕೆ, ಕಾಡೆಮ್ಮ ಸೇರಿದಂತೆ ಇನ್ನಿತರ ವನ್ಯಜೀವಿಗಳ ಕೊಂಬು. ಚರ್ಮಗಳನ್ನು ಜನರು ಅರಣ್ಯ ಇಲಾಖೆಗೆ ನೀಡಿದ್ದಾರೆ.

ಅನಧಿಕೃತ ಪತ್ತೆಯಾದರೆ ಕಠಿಣ ಕ್ರಮಕ್ಕೆ ನಿರ್ಧಾರ

ಅರಣ್ಯ ಇಲಾಖೆ ನೀಡಿರುವ ಗಡುವು ಇದೀಗ ಮುಕ್ತಾಯವಾಗಿದ್ದು, ಒಂದುವೇಳೆ ಯಾವುದೇ ದಾಖಲೆಗಳಿಲ್ಲದೆ, ಪೂರ್ವಜರಿಂದ ಬಳುವಳಿ ಯಾಗಿ ಬರದೆ ಬೇರೆ ಮೂಲದಿಂದ ಪಡೆದಿರುವ ವನ್ಯ ಜೀವಿಅಂಗಾಂಗಪತ್ತೆಯಾದರೆ ಅಂತಹವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಯಲ್ಲಿ ಪ್ರಕರಣ ದಾಖಲಿಸಲು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ.ಸದ್ಯಕ್ಕೆ ಯಾವು ದೇ ಪರಿಶೀಲನಾ ಕಾರ್ಯ ಮಾಡದಿದ್ದರೂ, ಮುಂದಿನ ದಿನಗಳಲ್ಲಿ ಆ ಕುರಿತು ಅಭಿಯಾನ ನಡೆಸುವ ಬಗ್ಗೆ ಚಿಂತನೆ ನಡೆಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ
ಬಿಡಿಎ ಸೈಟ್ ತಗೊಂಡ್ರೆ ಚಿಪ್ಪೇ ಗತಿ; ಕೆಂಪೇಗೌಡ ಲೇಔಟ್ ಸೈಟ್ ತಗೊಂಡು 10 ವರ್ಷವಾದ್ರೂ ಸೈಟೂ ಇಲ್ಲ, ಸಾಲನೂ ಸಿಗ್ತಿಲ್ಲ!