ಹನಿಮೂನೋ, ಆಫೀಸ್​ ಟೂರೋ? ಮಧುಚಂದ್ರಕ್ಕೂ ಸೂಟು ಬೂಟು ಬೇಕಾ? ಗೌತಮ್​ ಕಾಲೆಳೆದ ಫ್ಯಾನ್ಸ್​

By Suchethana D  |  First Published May 17, 2024, 12:05 PM IST

ಹನಿಮೂನ್​ಗೆ ಹೋಗುವ ಸಮಯದಲ್ಲಿ ಗೌತಮ್​ ಸಿಂಪಲ್​ ಡ್ರೆಸ್​ ಬದಲು ಸೂಟು-ಬೂಟು ಧರಿಸಿದ್ದರಿಂದ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.
 


ಗೌತಮ್​ ಮತ್ತು ಭೂಮಿಕಾ ಹನಿಮೂನ್​ ಮೂಡ್​ನಲ್ಲಿ ಇದ್ದಾರೆ. ಚಿಕ್ಕಮಗಳೂರಿನ ಮಲೆನಾಡಿನ ಸೌಂದರ್ಯವನ್ನು ಅವರು ಸವಿಯುತ್ತಿದ್ದಾರೆ. ಸದಾ ಜಗಳವಾಡುತ್ತಲೇ ಮದುವೆಯಾಗಿ, ಇದೀಗ ಒಬ್ಬರನ್ನೊಬ್ಬರು ಸಕತ್​ ಲವ್​ ಮಾಡ್ತಿರೋ ಜೋಡಿ ಇದು.  ಸದಾ ಕಿತ್ತಾಡುತ್ತಲೇ ಇದ್ದ ಈ ದಂಪತಿ ಈಗ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಅನ್ಯೋನ್ಯವಾಗಿದ್ದಾರೆ. ಇದುವರೆಗೂ ಪರಸ್ಪರ ಪ್ರೀತಿಯ ವಿಷಯವನ್ನು ಹಂಚಿಕೊಳ್ಳದಿದ್ದರೂ, ನೇರವಾಗಿ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳದಿದ್ದರೂ, ಇವರ ಪ್ರೀತಿಗೆ ಇವರೇ ಸಾಟಿ. ಇದೀಗ ಈ ಜೋಡಿ ಹನಿಮೂನ್​ಗೆ ಹೋಗಲು ರೆಡಿಯಾಗಿದೆ. ನಾಚಿಕೊಳ್ಳುತ್ತಲೇ ಮಧುಚಂದ್ರಕ್ಕೆ ಹೋಗಲು ರೆಡಿಯಾಗಿದ್ದಾರೆ. ಇದೇ ವೇಳೆ ಮದುವೆಯಾಗಿ ಇಷ್ಟು ದಿನವಾದರೂ, ಭೂಮಿಕಾರಿಗೆ ತಾನು ಏನೂ ಗಿಫ್ಟ್​ ಕೊಟ್ಟಿಲ್ಲ ಎಂದು ಅಜ್ಜಿಯ ಬಳಿ ಹೇಳಿಕೊಂಡ ಗೌತಮ್​, ಚಿಕ್ಕಮಗಳೂರಿನಲ್ಲಿರುವ ಎಸ್ಟೇಟ್​ ಅನ್ನು ಭೂಮಿಕಾ ಹೆಸರಿಗೆ ಬರೆದು ಕೊಡುವುದಾಗಿ ಹೇಳಿದ್ದಾನೆ.  

 ಜೀಪ್​ನಲ್ಲಿ ಜೋಡಿ ಚಿಕ್ಕಮಗಳೂರಿಗೆ ಹೊರಟಿದೆ. ಈ ಜೋಡಿಯನ್ನು ನೋಡಿ ನೆಟ್ಟಿಗರು ಸೂಪರ್​ ಎಂದು ಹೇಳುತ್ತಿದ್ದರೂ ಹನಿಮೂನ್​ಗೆ ಹೋಗುವಾಗ್ಲೂ ಗೌತಮ್​ ಸಿಂಪಲ್ಲಾಗಿ ಹೋಗೋದನ್ನು ಬಿಟ್ಟು ಒಳ್ಳೆ ಆಫೀಸ್​ ಟೂರ್​ಗೆ ಹೋದ ರೀತಿಯಲ್ಲಿ ಸೂಟು ಬೂಟು ಹಾಕಿಕೊಂಡಿರೋದು ಯಾಕೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಹನಿಮೂನ್​ಗೆ ಹೋಗುವಾಗ ಮೂಡು ಬೇರೆಯದ್ದೇ ರೀತಿ ಇರುತ್ತದೆ. ಅಂಥ ಸಂದರ್ಭದಲ್ಲಿಯೂ ಸೂಟು ಬೂಟು ಧರಿಸಿ ಹೋಗಿರುವುದಕ್ಕೆ ನೆಟ್ಟಿಗರು ಗೌತಮ್​ ಬಗ್ಗೆ ಮುನಿಸು ತೋರಿಸುತ್ತಿದ್ದಾರೆ. ಅದೇ ಇನ್ನೊಂದೆಡೆ,  ಗೌತಮ್​ ಚಿಕ್ಕಮ್ಮ ಈ ಜೋಡಿಯ ಕೊಲೆ ಮಾಡಿಸುವ ಪ್ಲ್ಯಾನ್​ ಮಾಡಿದ್ದರಿಂದ ಇನ್ನೇನು ಆಗಬಹುದು ಎನ್ನುವ ಆತಂಕವೂ ಅಮೃತಧಾರೆ ಅಭಿಮಾನಿಗಳನ್ನು ಕಾಡುತ್ತಿದೆ.  ಮಗ ಗೌತಮ್​ ಮತ್ತು ಸೊಸೆ ಭೂಮಿಕಾ ಎಂದಿಗೂ ಒಂದಾಗಬಾರದು ಎಂದು ಬಯಸ್ತಿರೋ, ಸದಾ ಕುತಂತ್ರ ರೂಪಿಸುತ್ತಿರುವ ಅತ್ತೆ ಶಕುಂತಲಾ ದೇವಿ ಈಗ ಇಬ್ಬರನ್ನೂ ಹನಿಮೂನ್​ಗೆ ಕಳಿಸುವ ಪ್ಲ್ಯಾನ್​ ಮಾಡಿದ್ದಾಳೆ.   ಜಮೀನೊಂದರ ವಿವಾದಕ್ಕೆ ಸಂಬಂಧಿಸಿದಂತೆ ಕೆಲವರು ಬಂದು ಧಮ್ಕಿ ಹಾಕಿ ಹೋಗಿದ್ದಾರೆ. ಆ ಜಮೀನು ಇರುವುದು ಚಿಕ್ಕಮಗಳೂರಿನಲ್ಲಿ. ಆ ಜಮೀನಿನ ವಿವಾದದ ಬಗ್ಗೆ ಗೌತಮ್​ಗೆ ಯಾವುದೇ ಮಾಹಿತಿ ಇಲ್ಲ. ಇದನ್ನು ತಿಳಿಸದಂತೆ ಭೂಮಿಕಾಗೂ ಮನೆಯವರು ಹೇಳಿದ್ದಾರೆ. ಇದನ್ನೇ ದಾಳವಾಗಿಸಿಕೊಂಡ ಶಕುಂತಲಾ ಇಬ್ಬರನ್ನೂ ಹನಿಮೂನ್​ ನೆಪದಲ್ಲಿ ಚಿಕ್ಕಮಗಳೂರಿಗೆ ಕಳಿಸುವ ಪ್ಲ್ಯಾನ್​ ಮಾಡಿದ್ದಾಳೆ. ಅಲ್ಲಿ ಹೋದರೆ ಇಬ್ಬರ ಸಾವು ಖಂಡಿತ ಎನ್ನುವುದು ಆಕೆಯ ಪ್ಲ್ಯಾನ್​. 

Tap to resize

Latest Videos

ಶಾರುಖ್​ ಖಾನ್​ ಸಾಯಲ್ಲ... ನಾವು ಮಾತ್ರ ಸಾಯ್ತೇವಾ ಎಂದ ಮಕ್ಕಳು! ಶಾಕಿಂಗ್​ ವಿಡಿಯೋ ವೈರಲ್​

ಅದೇ ಇನ್ನೊಂದೆಡೆ, ಗೌತಮ್​ ಮತ್ತು ಭೂಮಿಕಾ ಇಲ್ಲದ ವೇಳೆ ಏನೋ ಪ್ಲ್ಯಾನ್​ ಮಾಡಿದ್ದಾನೆ. ತನ್ನನ್ನು ಅಪಹರಿಸಿರುವಂತೆ ನಾಟಕವಾಡಿ, ಅದನ್ನು ಪತ್ನಿಯ ಮೊಬೈಲ್​ಗೆ ವಿಡಿಯೋ ಕಳಿಸಿದ್ದಾನೆ. ಇದನ್ನು ನೋಡಿ ಮಲ್ಲಿ ಗಾಬರಿಯಾಗಿದ್ದಾಳೆ. ಕೊನೆಗೆ ಜೈದೇವ್​ ಕಪಾಟಿನಲ್ಲಿ ಇಟ್ಟಿರೋ ಫೈಲ್​ ಒಂದನ್ನು ತಂದುಕೊಡುವಂತೆ  ಮಲ್ಲಿಗೆ ಹೇಳಿದ್ದಾರೆ. ಇದು ಮೋಸದಾಟ ಎಂದು ಅರಿಯದ ಮಲ್ಲಿ ಫೈಲ್​ ತೆಗೆದಿದ್ದಾಳೆ. ಅದೇ ವೇಳೆ ಭೂಮಿಕಾ ಹೇಳಿದಮಾತು ಅವಳಿಗೆ ನೆನಪಾಗಿದೆ. ಹನಿಮೂನ್​ಗೆ ಹೋಗುವ ಸಂದರ್ಭದಲ್ಲಿ ಭೂಮಿಕಾ ಮಲ್ಲಿಗೆ, ನೀನು ತುಂಬಾ ಎಚ್ಚರದಿಂದ ಇರು. ಏನೇ ಒಂದು ನಿರ್ಧಾರ ತೆಗೆದುಕೊಳ್ಳುವುದಿದ್ದರೂ ನನ್ನನ್ನು ಒಂದು ಮಾತು ಕೇಳು ಎಂದಿರುತ್ತಾಳೆ. ಅದು ನೆನಪಾಗಿದೆ.

ಆದರೆ ಮಲ್ಲಿ ಏನು ಮಾಡುತ್ತಾಳೋ ಗೊತ್ತಿಲ್ಲ. ಮಲ್ಲಿ ಭೂಮಿಕಾಗೆ ಫೋನ್​ ಮಾಡಿದ್ದರೂ ಅಲ್ಲಿ ನೆಟ್​ವರ್ಕ್​ ಸಿಗದೇ ಇರಬಹುದು, ಆದ್ದರಿಂದ ಮಲ್ಲಿ ಫೈಲ್​ ಕೊಟ್ಟು ಮೋಸದ ಬಲೆಗೆ ಬೀಳಬಹುದು ಎಂದು ನೆಟ್ಟಿಗರು ತಾವೇ ಕಥೆ ನಿರ್ದೇಶನ ಮಾಡುತ್ತಿದ್ದಾರೆ. ಅದೇ ಇನ್ನೊಂದೆಡೆ, ಭೂಮಿಕಾ ಮತ್ತು ಗೌತಮ್​ ಅವರನ್ನು ಒಂದು ಮಾಡಲು ಗೌತಮ್​ಗೆ ಆನಂದ್​ ದಂಪತಿ ಸೋಮರಸ ಕುಡಿಸಿದ್ದಾರೆ. ಇದನ್ನು ಕುಡಿದ ಗೌತಮ್​ ರೊಮ್ಯಾಂಟಿಕ್​ ಆಗಿ ಹಾಡು ಹೇಳಿದ್ದಾನೆ. ಮುಂದೇನಾಗುತ್ತದೆಯೋ ಕಾದು ನೋಡಬೇಕಿದೆ. 

ನಟಿ ಜಾಹ್ನವಿ ಕಪೂರ್​ ಕೈಯಲ್ಲಿ ಬಾಲ್​: ಮೈಮೇಲಿದ್ದದ್ದು ಕೈಯಲ್ಯಾಕೆ ಬಂತು ಪ್ರಶ್ನಿಸ್ತಿದ್ದಾರೆ ನೆಟ್ಟಿಗರು!

click me!