Cannes 2024: ಕೈ ಮುರ್ಕೊಂಡ್ರೂ ರೆಡ್ ಕಾರ್ಪೆಟ್ ಮೇಲೆ ಐಶ್ವರ್ಯಾ ರೈ ಮಾರ್ಜಾಲ ನಡಿಗೆ

First Published | May 17, 2024, 12:13 PM IST

ವಿಶ್ವವಿಖ್ಯಾತ ಕೇನ್ಸ್ ಚಲನಚಿತ್ರೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಬಚ್ಚನ್ ಸಹ ಬಾರಿಯ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪಾಲ್ಗೊಂಡಿದ್ದಾರೆ. ಕೈ ಮುರ್ಕೊಂಡ್ರೂ ರೆಡ್ ಕಾರ್ಪೆಟ್ ಮೇಲೆ ಐಶ್ವರ್ಯಾ ರೈ ಮಾರ್ಜಾಲ ನಡಿಗೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಬಚ್ಚನ್ ಸಹ ಬಾರಿಯ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪಾಲ್ಗೊಂಡಿದ್ದಾರೆ. ಕೈ ಮುರ್ಕೊಂಡ್ರೂ ರೆಡ್ ಕಾರ್ಪೆಟ್ ಮೇಲೆ ಐಶ್ವರ್ಯಾ ರೈ ಮಾರ್ಜಾಲ ನಡಿಗೆಯ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ.

ವಿಶ್ವವಿಖ್ಯಾತ ಕೇನ್ಸ್ ಚಲನಚಿತ್ರೋತ್ಸವವನ್ನು ವಾರ್ಷಿಕವಾಗಿ ನಡೆಸಲಾಗುತ್ತದೆ. ಅದರಂತೆ ಮೇ 17ರಿಂದ ಮೇ 25ರ ವರೆಗೆ ಇದರ 77ನೇ ವಾರ್ಷಿಕೋತ್ಸವ ನಡೆಯುತ್ತಿದೆ. ಹಲವು ದೇಶಗಳ ಸೆಲೆಬ್ರಿಟಿಗಳು ಇದರಲ್ಲಿ ಭಾಗವಹಿಸಲು ಫ್ರಾನ್ಸ್‌ಗೆ ಆಗಮಿಸಿದ್ದಾರೆ. ತಮ್ಮ ಸ್ಟೈಲಿಶ್ ಲುಕ್‌ನಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

Tap to resize

ಗೌನ್ ಉದ್ದವಾದ ಸ್ಟೈಲಿಶ್ ಮಾದರಿಯಲ್ಲಿದ್ದು, ಬೃಹತ್ ಚಿನ್ನದ ಹೂವುಗಳ ಡಿಸೈನ್‌ ಹೊಂದಿತ್ತು. ಇದು ಮೆಟ್ ಗಾಲಾ ಥೀಮ್ 'ದಿ ಗಾರ್ಡನ್ ಆಫ್ ಟೈಮ್‌'ಗೆ ಸೂಕ್ತವಾಗಿ ಒಪ್ಪುವಂತಿತ್ತು.

ಫಲ್ಗುಣಿ ಮತ್ತು ಶೇನ್ ವಿನ್ಯಾಸಗೊಳಿಸಿದ ಬೃಹತ್ ಗೌನ್ ರಫಲ್ಡ್ ಸ್ಲೀವ್ಸ್‌ ಮುಂಭಾಗದಲ್ಲಿ ಗೋಲ್ಡನ್ ಮಾದರಿಯನ್ನು ಹೊಂದಿದೆ. ಜೊತೆಗೆ ಐಶ್ವರ್ಯ ದೊಡ್ಡ ಗೋಲ್ಡನ್ ಕಿವಿಯೋಲೆಗಳನ್ನು ಧರಿಸಿ ರೆಟ್ರೋ ಫೀಲ್ ನೀಡಿದರು. 

2002ರಲ್ಲಿ ತಮ್ಮ ಚಿತ್ರ 'ದೇವದಾಸ್'ಗಾಗಿ ಕಾಣಿಸಿಕೊಂಡಾಗಿನಿಂದ ಐಶ್ವರ್ಯಾ ಕೇನ್ಸ್‌ನಲ್ಲಿ ನಿಯಮಿತವಾಗಿ ಭಾಗವಹಿಸುತ್ತಾರೆ. ಸಂಜಯ್ ಲೀಲಾ ಬನ್ಸಾಲಿ ಚಲನಚಿತ್ರವನ್ನು ಪ್ರತಿಷ್ಠಿತ ಉತ್ಸವದಲ್ಲಿ ಪ್ರದರ್ಶಿಸಲಾಯಿತು.

ನಂತರ ಐಶ್ವರ್ಯಾ ತಮ್ಮ ಸಹನಟ ಶಾರುಖ್ ಖಾನ್ ಅವರೊಂದಿಗೆ ರೆಡ್ ಕಾರ್ಪೆಟ್ ಮೇಲೆ ವಾಕ್‌ ಮಾಡಿದ್ದರು. ಈ ಸಂದರ್ಭದಲ್ಲಿ ನೀತಾ ಲುಲ್ಲಾ ವಿನ್ಯಾಸಗೊಳಿಸಿದ ಸುಂದರವಾದ ಗೋಲ್ಡನ್ ಸೀರೆಯನ್ನು ಅವಳು ಧರಿಸಿದ್ದರು.

ಆ ನಂತರ ಹಲವು ವರ್ಷಗಳ ಐಶ್ವರ್ಯಾ ತಮ್ಮ ಸ್ಟೈಲಿಶ್‌ ಡ್ರೆಸ್‌ನಿಂದ ಅಂತಾರಾಷ್ಟ್ರಿಯ ಸೆಲೆಬ್ರಿಟಿಗಳು ನಿಬ್ಬೆರಗಾಗುವಂತೆ ಮಾಡಿದ್ದರು. ಈ ಬಾರಿ ಐಶ್ವರ್ಯಾ ರೈ ಜೊತೆ ಮಗಳು ಆರಾಧ್ಯ ಬಚ್ಚನ್ ಸಹ ಕಾಣಿಸಿಕೊಂಡರು.

ನಟಿ ಐಶ್ವರ್ಯಾ ರೈ ಬಚ್ಚನ್ ಕೊನೆಯದಾಗಿ ತಮಿಳು ಚಿತ್ರ ಪೊನ್ನಿಸ್ ಸೆಲ್ವನ್ ನಲ್ಲಿ ಕಾಣಿಸಿಕೊಂಡಿದ್ದರು. ಮಣಿರತ್ನಂ ನಿರ್ದೇಶನದ ಚಿತ್ರದಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್, ನಂದಿನಿ ಮತ್ತು ಊಮೈರಾಣಿ ಪಾತ್ರಗಳನ್ನು ನಿರ್ವಹಿಸಿದ್ದಾರೆ.

Latest Videos

click me!