ಶಾರುಖ್‌ ಖಾನ್‌ ಪುತ್ರಿ ಆವತಾರ ಸಖತ್‌ ಟ್ರೋಲ್‌; ಹೇಗೆ ಕಾಮೆಂಟ್‌ ಮಾಡಿದ್ದಾರೆ ನೋಡಿ ನೆಟಿಜನ್ಸ್!

First Published Dec 21, 2022, 5:58 PM IST

ನಿರ್ದೇಶಕಿ ಜೋಯಾ ಅಖ್ತರ್ ಅವರ ದಿ ಆರ್ಚೀಸ್ ಚಿತ್ರದ ಪಾರ್ಟಿ ನಿನ್ನೆ ರಾತ್ರಿ ನಡೆಯಿತು. ಶಾರುಖ್ ಖಾನ್ (Shahrukh Khan) ಪುತ್ರಿ ಸುಹಾನಾ ಖಾನ್ (Suhana Khan) ಕೂಡ ಈ ಪಾರ್ಟಿಗೆ ಆಗಮಿಸಿದ್ದರು. ದಿ ಆರ್ಚೀಸ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿರುವ ಸುಹಾನಾ, ಈ ಸಂದರ್ಭದಲ್ಲಿ ತುಂಬಾ ಹಾಟ್ ಮತ್ತು ಮಾದಕ ಕೆಂಪು ಒನ್ ಪೀಸ್ ಡ್ರೆಸ್‌ನಲ್ಲಿ ಕಾಣಿಸಿಕೊಂಡರು. ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರು ಅವರನ್ನು ಟ್ರೋಲ್ ಮಾಡಲು ಪ್ರಾರಂಭಿಸಿದರು. ಜನರು ಹೇಗೆ ಕಾಮೆಂಟ್ ಮಾಡಿದ್ದಾರೆ ನೋಡಿ.

ಕೆಲವರು ಸುಹಾನಾ ಅವರನ್ನು 'ಮೇಲ್ ಎಸ್‌ಆರ್‌ಕೆ (Male SRK)' ಎಂದು ಕರೆಯುವುದಿದೆ. ಕೆಲವರು ಅವರನ್ನು 'ಮನೆ ಕೆಲಸದವಳು' ಎಂದೂ ಕರೆದಿದ್ದಾರೆ.  ..

ದಿ ಆರ್ಚೀಸ್ ಚಿತ್ರದ ವ್ರ್ಯಾಪ್-ಅಪ್ ಪಾರ್ಟಿಗೆ ಹೋದ ಸುಹಾನಾ ಖಾನ್ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾಗಿ ಟ್ರೋಲ್ ಮಾಡಲಾಗುತ್ತಿದೆ. 'ಇದು ವಿಭಿನ್ನ ಸೌಂದರ್ಯ ಆದ್ದರಿಂದ ನಾನು ಕಣ್ಣು ಮುಚ್ಚಿಕೊಂಡೆ' ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ.

'ಇದಕ್ಕೆ ಬಾಲಿವುಡ್‌ನಲ್ಲಿ ಭವಿಷ್ಯವಿದೆಯೇ?' ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. 'ಮಲೈಕಾ ಅರೋರಾ ಅವರ ಮಿನಿ ವರ್ಷನ್‌' ಎಂದು ಕೆಲವರು ಹೇಳಿದರೆ, 'ಸುಹಾನಾ ದೇಹ ಹೇಗೆ ವಕ್ರವಾಯಿತು' ಎಂದು ಮಗದೊಬ್ಬರು ಕೆಟ್ಟದಾಗಿ ಮತಾನಾಡಿದ್ದಾರೆ. 

'ತಂದೆಯ ಕಾರಣದಿಂದ ಜನರು ಇವಳನ್ನು ಮಾತನಾಡಿಸುತ್ತಾರೆ. ಇಲ್ಲದಿದ್ದರೆ ಸೌಂದರ್ಯ ಅಥವಾ ಪ್ರತಿಭೆ ಇಲ್ಲ' ಎಂದು ಮತ್ತೊಬ್ಬರು ಟ್ರೋಲ್‌ ಮಾಡಿದ್ದಾರೆ. 'ಅನ್ಯ ಗ್ರಹದ ಜೀವಿ ಭೂಮಿಯ ಮೇಲಿರುವಂತೆ ಆಕೆಯನ್ನು ನೋಡಲು ವರದಿಗಾರರು ವರ್ತಿಸುತ್ತಿದ್ದಾರೆ,' ಎಂದೂ ಕಾಮೆಂಟ್‌ ಮಾಡಿದ್ದಾರೆ.

ಜೋಯಾ ಅಖ್ತರ್ ಮತ್ತು ನಿರ್ಮಾಪಕಿ ರೀಮಾ ಕಾಗ್ತಿ ಅವರ ಚಿತ್ರ ದಿ ಆರ್ಚಿಸ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದಿಲ್ಲ ಆದರೆ OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತದೆ. ಸುಹಾನಾ ಖಾನ್, ಅಗಸ್ತ್ಯ ನಂದಾ, ಖುಷಿ ಕಪೂರ್, ಮಿಹಿರ್ ಅಹುಜಾ, ವೇದಾಂಗ್ ರೈನಾ, ಅದಿತಿ ಡಾಟ್, ಯುವರಾಜ್ ಮೊಂಡಾ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಸುಹಾನಾ ಜೊತೆಗೆ ಶ್ರೀದೇವಿ ಪುತ್ರಿ ಖುಷಿ ಕಪೂರ್ ಕೂಡ ಬಾಲಿವುಡ್ ಗೆ ಕಾಲಿಡಲಿದ್ದಾರೆ. ಈ ಸಂದರ್ಭದಲ್ಲಿ ಬೋಲ್ಡ್ ಬ್ಯಾಕ್ ಲೆಸ್ ಡ್ರೆಸ್ ನಲ್ಲಿ ಖುಷಿ ಕಾಣಿಸಿಕೊಂಡಿದ್ದಾರೆ.

click me!