ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಲಯಾಳಂ ನಟಿ ಅಪರ್ಣಾ ದಾಸ್‌-ದೀಪಕ್‌ ಪರಂಬೆಲ್

First Published | Apr 24, 2024, 11:29 AM IST

ಮಲಯಾಳಂ ಚಿತ್ರರಂಗದ ನಟ ದೀಪಕ್ ಪರಂಬೆಲ್ ಮತ್ತು ನಟಿ ಅಪರ್ಣಾ ದಾಸ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರುವಾಯೂರು ದೇವಸ್ಥಾನದಲ್ಲಿ ಮದುವೆ ನೆರವೇರಿತು. ಅತ್ಯಂತ ಸರಳವಾಗಿ ನಡೆದ ಮದುವೆ ಸಮಾರಂಭದಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರು ಮಾತ್ರ ಭಾಗಿಯಾಗಿದ್ದರು.

ಮಲಯಾಳಂ ಚಿತ್ರರಂಗದ ನಟ ದೀಪಕ್ ಪರಂಬೆಲ್ ಮತ್ತು ನಟಿ ಅಪರ್ಣಾ ದಾಸ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರುವಾಯೂರು ದೇವಸ್ಥಾನದಲ್ಲಿ ಮದುವೆ ನೆರವೇರಿತು. .

ಅತ್ಯಂತ ಸರಳವಾಗಿ ನಡೆದ ಮದುವೆ ಸಮಾರಂಭದಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರು ಮಾತ್ರ ಭಾಗಿಯಾಗಿದ್ದರು. ಕೆಲವು ದಿನಗಳ ಹಿಂದೆ ಅಪರ್ಣಾ ಮತ್ತು ದೀಪಕ್ ಮದುವೆಯಾಗಲಿದ್ದಾರೆ ಎಂಬ ವರದಿಗಳು ಬಂದಿದ್ದವು.

Tap to resize

ಮದುವೆಯ ಆಮಂತ್ರಣ ಪತ್ರಿಕೆಯ ಫೋಟೋಗಳನ್ನೂ ಬಿಡುಗಡೆ ಮಾಡಲಾಗಿತ್ತು. ಇವತ್ತು ಇಬ್ಬರೂ ಅತ್ಯಂತ ಸರಳವಾಗಿ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ.

ಹಳದಿ, ಸಂಗೀತ್ ಫಂಕ್ಷನ್ ಗ್ರ್ಯಾಂಡ್ ಆಗಿ ನಡೆದಿದ್ದು, ನಟಿ ಅಪರ್ಣಾ ದಾಸ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಟೋಸ್‌ ಶೇರ್ ಮಾಡಿದ್ದಾರೆ.

2018ರಲ್ಲಿ ಅಪರ್ಣಾ ದಾಸ್, ಫಹಾದ್ ಫಾಸಿಲ್ ಅವರ 'ನಾನ್‌ ಪ್ರಕಾಶನ್‌' ಚಿತ್ರದೊಂದಿಗೆ ಅಭಿನಯ ಆರಂಭಿಸಿದರು. ನಂತರ ಅವರು ವಿನೀತ್ ಶ್ರೀನಿವಾಸನ್ ನಿರ್ದೇಶನದ 'ಮನೋಹರಂ' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದರು. ಇದರಲ್ಲಿ ದೀಪಕ್ ಕೂಡ ಪ್ರಮುಖ ಪಾತ್ರ ವಹಿಸಿದ್ದರು. 

2022 ರಲ್ಲಿ ಬಿಡುಗಡೆಯಾದ ವಿಜಯ್ ಅವರ ಚಿತ್ರ 'ಬೀಸ್ಟ್' ಮೂಲಕ ಅಪರ್ಣಾ ತಮಿಳಿಗೆ ಪಾದಾರ್ಪಣೆ ಮಾಡಿದರು. ನಟಿ ವೈಷ್ಣವ್ ತೇಜಾ ಅವರ ಆದಿಕೇಶವ ಜೊತೆಗೆ ತೆಲುಗಿನಲ್ಲೂ ನಟಿಸಿದ್ದಾರೆ. ಅಪರ್ಣಾ ಅಭಿನಯದ ದಾದಾ ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

ವಿನೀತ್ ಶ್ರೀನಿವಾಸನ್ ಅವರ ಮಲರ್ವಾಡಿ ಆರ್ಟ್ಸ್ ಕ್ಲಬ್ ಮೂಲಕ ದೀಪಕ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ, ಅವರು ಚಲನಚಿತ್ರಗಳಲ್ಲಿ ಅನೇಕ ಗಮನಾರ್ಹ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ದೀಪಕ್ ಅವರ ಪ್ರಮುಖ ಚಲನಚಿತ್ರಗಳೆಂದರೆ ತಟ್ಟತಿನ್ ಮರಯಾತ್, ಡಿ ಕಂಪನಿ, ಕುಂಞಿರಾಮಾಯಣಂ, ದಿ ಗ್ರೇಟ್ ಫಾದರ್, ಕ್ಯಾಪ್ಟನ್, ಲವ್ ಆಕ್ಷನ್ ಡ್ರಾಮಾ, ಮಲಯಂಕುಂಜು, ಕ್ರಿಸ್ಟೋಫರ್, ಕಾಸರಗೋಲ್ಡ್ ಮತ್ತು ಕಣ್ಣೂರು ಸ್ಕ್ವಾಡ್.

ಇತ್ತೀಚಿಗೆ ಎಲ್ಲೆಡೆ ಗಮನ ಸೆಳೆದಿರೋ ಮಲಯಾಳಂ ಸಿನಿಮಾ, 'ಮಂಜುಮಲೈ ಬಾಯ್ಸ್‌' ಸಿನಿಮಾದಲ್ಲಿಯೂ ದೀಪಕ್ ಪರಂಬೆಲ್ ನಟಿಸಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟಿರೋ ದೀಪಕ್-ಅಪರ್ಣಾ ಜೋಡಿಗೆ ಚಿತ್ರರಂಗದ ಗಣ್ಯರು ಶುಭ ಹಾರೈಸಿದ್ದಾರೆ.

Latest Videos

click me!