ಸತ್ತು ಹೋಗಿರುವುದಾಗಿ ಸುದ್ದಿ ಮಾಡಿ ಹಲ್ಚಲ್ ಸೃಷ್ಟಿಸಿದ್ದ ಬಾಲಿವುಡ್ ನಟಿ ಪೂನಂ ಪಾಂಡೆಯ ಹೊಸ ವಿಡಿಯೋ ವೈರಲ್ ಆಗಿದ್ದು, ಸಕತ್ ಟ್ರೋಲ್ ಆಗುತ್ತಿದೆ.
ಎರಡು ತಿಂಗಳ ಹಿಂದೆ ಎಲ್ಲೆಲ್ಲೂ ಬಾಲಿವುಡ್ ನಟಿ ಪೂನಂ ಪಾಂಡೆಯ ವಿಷಯ ಸದ್ದು ಮಾಡಿತ್ತು. ಈಕೆ ಸತ್ತರೆಂಬ ಸುದ್ದಿ ಇಂಡಸ್ಟ್ರಿಗೆ ಬರಸಿಡಿಲು ಬಡಿದಿತ್ತು. ಹಾಟೆಸ್ಟ್ ನಟಿ, ಮಾದಕ ತಾರೆ ಎಂದೇ ಖ್ಯಾತಿ ಪಡೆದ, ಸದಾ ತಮ್ಮ ಬಟ್ಟೆಗಳಿಂದಲೇ ವಿವಾದದಲ್ಲಿಯೂ ಇದ್ದ ಪೂನಂ ಪಾಂಡೆ ಸಾವಿನ ಸುದ್ದಿ ಅಭಿಮಾನಿಗಳನ್ನು ಇನ್ನಿಲ್ಲದಂತೆ ಕಾಡಿತು. ಉತ್ತರ ಪ್ರದೇಶದಲ್ಲಿರುವ ಅವರ ನಿವಾಸದಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ ಎಂಬ ಸುದ್ದಿ ಬಂತು. ಗರ್ಭಕಂಠದ ಕ್ಯಾನ್ಸರ್ ಅವರನ್ನು ಬಲಿ ತೆಗೆದುಕೊಂಡಿತು ಎನ್ನಲಾಗಿತ್ತು. ಇದಕ್ಕೆ ಕಾರಣ, ಪೂನಂ ತಂಗಿ ಹೇಳಿದ ಮಾತು. ಅಕ್ಕ ಗರ್ಭಕಂಠ ಕ್ಯಾನ್ಸರ್ ಸತ್ತಿದ್ದಾಗಿ ಹೇಳಿದ್ದರು. ಆದರೆ ಆಕೆಯ ಮೃತದೇಹ ಸಿಗದ ಕಾರಣ ಹಾಗೂ ಕುಟುಂಬಸ್ಥರ ಫೋನ್ಗಳು ಸ್ವಿಚ್ ಆಫ್ ಆಗಿದ್ದರಿಂದ ಅನುಮಾನ ಹುಟ್ಟಿದ ಬೆನ್ನಲ್ಲೇ ನಟಿ ಖುದ್ದು ವಿಡಿಯೋ ಮೂಲಕ ತಾನು ಸತ್ತಿಲ್ಲ ಎಂದು ಹೇಳಿದರು.
ನಟ-ನಟಿ ಸೇರಿದಂತೆ ಸೆಲೆಬ್ರಿಟಿಗಳ ಸಾವಿನ ಸುದ್ದಿ ಕೆಲವು ವೇಳೆ ಬರುವುದು ಉಂಟು. ಆದರೆ ಅಂಥ ಕೃತ್ಯವನ್ನು ಯಾರೋ ಕಿಡಿಗೇಡಿಗಳು ಹರಿಯಬಿಡುತ್ತಾರೆ. ಆದರೆ ಇಲ್ಲಿ ಹಾಗಲ್ಲ. ಖುದ್ದು ಪೂನಂ ಪಾಂಡೆಯೇ ಅಂಥ ಕೃತ್ಯ ಮಾಡಿದ್ದಾರೆ. ತಮ್ಮ ಸಾವಿನ ಸುದ್ದಿಯನ್ನು ತಮ್ಮ ಕುಟುಂಬಸ್ಥರಿಂದ ಹರಿಬಿಟ್ಟಿದ್ದಾರೆ. ಈಕೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಹಲವರು ಕಂಬನಿ ಮಿಡಿದಿದ್ದರು. ಆದರೆ ಕೊನೆಗೆ ತಾವು ಗರ್ಭಕಂಠ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಹೀಗೆ ಮಾಡಿರುವುದಾಗಿ ವಿಡಿಯೋ ಮೂಲಕ ಹೇಳಿದ್ದರು. ಇದರಿಂದ ನಟಿಗೆ ಎಲ್ಲರೂ ಛೀಮಾರಿ ಹಾಕಿದ್ದರು. ಇದೀಗ ನಟಿ ಅಶ್ಲೀಲತೆಯ ಪರಮಾವಧಿ ಎನ್ನುವ ರೂಪದಲ್ಲಿ ಕಾಣಿಸಿಕೊಂಡಿದ್ದು ಅದರ ವಿಡಿಯೋ ವೈರಲ್ ಆಗಿದೆ. ದೇಹ ಪ್ರದರ್ಶನವಂತೂ ಇದೀಗ ನಟಿಯರಲ್ಲಿ ಮಾಮೂಲಾಗಿ ಬಿಟ್ಟಿದೆ. ಸಾಧ್ಯವಾದಷ್ಟು ಮಟ್ಟಿಗೆ ಅಂಗಾಂಗ ಪ್ರದರ್ಶನ ಮಾಡುತ್ತಿರುವ ದೊಡ್ಡ ನಟಿಯರ ಪಟ್ಟಿಯೇ ಇದೆ. ಆದರೆ ಅದೆಷ್ಟೇ ಮಾಡಿದರೂ ಕೊನೆಗೆ ಒಂದು ಹಂತದಲ್ಲಿ ಇರುತ್ತಾರೆ. ಆದರೆ ನಟಿ ಪೂನಂ ಪಾಂಡೆ ಆ ಹಂತವನ್ನೂ ಮೀರಿ ಪ್ರಚಾರಕ್ಕೆ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ಇದರಿಂದ ಸಾಕಷ್ಟು ಟ್ರೋಲ್ಗೆ ಒಳಗಾಗುತ್ತಿದ್ದಾರೆ.
ಬಿಗ್ಬಾಸ್ನಲ್ಲಿ ಅವಕಾಶ ಕೊಡ್ತೆನಂದ, ವಿಡಿಯೋ ಕಳಿಸಿದೆ, ಮಧ್ಯರಾತ್ರಿ ಕರೆದ.. ಆಮೇಲೆ.. ಮನಿಷಾ ಕಹಿ ನೆನಪು
ಸಾವಿನ ಸುಳ್ಳು ಸುದ್ದಿ ಹರಡಿದ್ದ ಈಕೆಯ ವಿರುದ್ಧ ಇದಾಗಲೇ ಹಲವಾರು ಕೇಸ್ ದಾಖಲಾಗಿದೆ. 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆಯೂ ದಾಖಲಾಗಿದೆ. ಆದರೆ ಸದ್ಯ ಯಾವ ಕೇಸ್ಗಳದ್ದೂ ಸುದ್ದಿ ಇಲ್ಲ. ಎಲ್ಲವೂ ಸೈಲೆಂಟ್ ಆಗಿದೆ. ಪೂನಂ ಸುಳ್ಳು ಸುದ್ದಿ ಹರಡಿದ್ದು ಗೊತ್ತಾಗುತ್ತಿದ್ದಂತೆಯೇ ಚಿತ್ರನಿರ್ಮಾಪಕ ಅಶೋಕ್ ಪಂಡಿತ್ ಅವರು ವಿಡಿಯೋ ಮೂಲಕ ನಟಿಯ ವಿರುದ್ಧ ಕೇಸ್ ದಾಖಲು ಮಾಡಿ ಈಕೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಭಾರತೀಯ ದಂಡ ಸಂಹಿತೆಯ 63ನೇ ಕಲಮಿನ ಪ್ರಕಾರ, ಯಾವುದೇ ವ್ಯಕ್ತಿ ಉದ್ದೇಶಪೂರ್ವಕವಾಗಿ ಅಥವಾ ದುರುದ್ದೇಶಪೂರ್ವಕವಾಗಿ ತಪ್ಪು ಮಾಹಿತಿಯನ್ನು ನೀಡಿದರೆ, ಅದು ಅಪರಾಧವೆಂದು ಸಾಬೀತಾದರೆ ಅಂಥವರಿಗೆ ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಗೆ ಅಥವಾ ಐವತ್ತು ಸಾವಿರದವರೆಗೆ ವಿಸ್ತರಿಸಬಹುದಾದ ದಂಡ ಹಾಗೂ ಎರಡೂ ವಿಧಿಸುವ ಅವಕಾಶವಿದೆ. ಇದೇ ಹಿನ್ನೆಲೆಯಲ್ಲಿ ಕೇಸ್ ದಾಖಲಾಗಿದ್ದರೂ ಇದುವರೆಗೆ ಏನೂ ಸುದ್ದಿಯಿಲ್ಲ.
ಆದರೆ ನಟಿಯ ವರ್ಚಸ್ಸಿಗೆ ಏನೂ ಕಡಿಮೆ ಇಲ್ಲ. ಇವೆಲ್ಲಾ ಸುದ್ದಿಗಳ ಬಳಿಕವೂ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇದ್ದಾರೆ. ಜಾಹೀರಾತು ಕಂಪೆನಿಗಳಿಂದಲೂ ಒಳ್ಳೆಯ ಆಫರ್ಗಳು ಬರುತ್ತಲೇ ಇವೆ. ಇದೀಗ ಹುಟ್ಟುಹಬ್ಬದ ಮುನ್ನಾ ದಿನ ಹಾಸಿಗೆಯ ಮೇಲೆ ಹಾಟ್ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಇದು ಮಂಚದ ಅವೇರ್ನೆಸ್ಸಾ, ಬೆಡ್ಷೀಟ್ ಅವೇರ್ನೆಸ್ಸಾ ಎಂದು ಕಮೆಂಟಿಗರು ಪ್ರಶ್ನಿಸುತ್ತಿದ್ದಾರೆ
ತಾಯಿಯಿಂದ ಕಿಡ್ನಿ ದಾನ, ಬೇರೆಯವರಿಗೆ ಕೊಟ್ಟರು ದೃಷ್ಟಿದಾನ: ಇದು ರಾಣಾ ದುಗ್ಗುಬಾಟಿ ಸೀಕ್ರೇಟ್!