ಇಂಟರ್ನೆಟ್‌ಗೆ ಬೆಂಕಿ ಹಚ್ಚಿದ ಇಶಾ ಗುಪ್ತಾ ಬೋಲ್ಡ್‌ ಟೂ ಪೀಸ್‌ ಲುಕ್‌

First Published Sep 21, 2022, 3:33 PM IST

ಹಿಂದಿ ಸಿಮಾ ರಂಗದ ಬೋಲ್ಡ್‌ ಮತ್ತು ಹಾಟ್‌ ನಟಿಯರ ಪಟ್ಟಿಯಲ್ಲಿ ಇಶಾ ಗುಪ್ತಾ (Esha Gupta) ಅವರು ಒಬ್ಬರು.  ತನ್ನ ಮನಮೋಹಕ ಮತ್ತು ಬೋಲ್ಡ್‌ ಲುಕ್‌ಗಾಗಿ ಇಶಾ ಆಗಾಗ ಸದ್ದು ಮಾಡುತ್ತಿರುತ್ತಾರೆ. ಹೆಚ್ಚಾಗಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ  ಹಾಟ್‌ ಫೋಟೋಗಳನ್ನು ಹಂಚಿಕೊಳ್ಳುವ ನಟಿ ಮತ್ತೊಮ್ಮೆ ತಮ್ಮ ಬಿಕಿನಿ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇಶಾ ಅವರ ಫೋಟೋ ಸಖತ್‌ ವೈರಲ್‌ ಆಗಿದೆ.

ಇಶಾ ಗುಪ್ತಾ ಅವರು ಸ್ಪೇನ್‌ನಲ್ಲಿ ತ್ಮಮ ಜೀವನದ ಬೆಸ್ಟ್‌ ಟೈಮ್‌ ಕಳೆಯುತ್ತಿದ್ದಾರೆ ಎನ್ನಲು ಅವರ  ಈ ಫೋಟೋಗಳು  ಸಾಕ್ಷಿಗಳಾಗಿವೆ. ನಟಿ, ಈ ದಿನಗಳಲ್ಲಿ ತನ್ನ ಬಾಯ್‌ಫ್ರೆಂಡ್‌ ಚೆಲುವೆ ಮ್ಯಾನುಯೆಲ್ ಕ್ಯಾಂಪೋಸ್ ಗುವಾಲರ್‌ನೊಂದಿಗೆ ಸ್ಪ್ಯಾನಿಷ್ ಹಾಲಿಡೇ ಎಂಜಾಯ್‌ ಮಾಡುತ್ತಿದ್ದಾರೆ.

ಇಶಾ ತಮ್ಮ ಹಾಲಿಡೇ ಸಮಯದ  ಪೋಟೋವನ್ನು ಹಂಚಿಕೊಂಡಿದ್ದಾರೆ. ಅವರು ನ್ಯೂಡ್‌ ಟೋನ್ ಬಿಕಿನಿಯಲ್ಲಿರುವ ಫೋಟೋ ಶೇರ್‌ ಮಾಡಿದ್ದು 'Still summer somewhere' ಎಂದು ಶೀರ್ಷಿಕೆ ನೀಡಿದ್ದಾರೆ.

ಇಶಾರ ಹಾಟ್‌ ಲುಕ್‌ಗೆ ಅಭಿಮಾನಿಗಳ ಜೊತೆ ಸೀಮಾ ಸಜ್ದೇಹ್, ಸಿದ್ದಾಂತ್ ಕಪೂರ್ ಮತ್ತು ಇತರ ಹಲವಾರು ಬಾಲಿವುಡ್ ಸೆಲೆಬ್ರೆಟಿಗಳು ಸಹ  ಫೈರ್‌ಬಾಲ್ ಎಮೋಜಿಗಳನ್ನು ಕಾಮೆಂಟ್‌ ಮಾಡಿದ್ದಾರೆ.

ಶ್ರದ್ಧಾ ಕಪೂರ್ ಅವರ ಸಹೋದರ, ಸಿದ್ಧಾಂತ್ ಈಶಾ ಅವರನ್ನು ಏಂಜಲೀನಾ ಜೋಲಿಗೆ ಹೋಲಿಸಿ  ' @angelinajolie in her 20s' ಎಂದು ಕಾಮೆಂಟ್‌ ಮಾಡಿದ್ದಾರೆ.

ಇಶಾ ಗುಪ್ತಾ ಅವರು ಈ ರೀತಿಯ ಬೋಲ್ಡ್‌ (Bold)  ಅವತಾರದಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. ನಟಿ ಹೆಚ್ಚಾಗಿ ಬಿಕಿನಿಯಲ್ಲಿ (Bikini) ತನ್ನ ಮನಮೋಹಕ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ. 

ಎಮ್ರಾನ್ ಹಶ್ಮಿ ಜೊತೆ ನಟಿಸಿರುವ 'ಜನ್ನತ್ 2' ಚಿತ್ರದೊಂದಿಗೆ 2012 ರಲ್ಲಿ ಇಶಾ ಗುಪ್ತಾ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಕ್ಜ ನಂತರ ಇಶಾ ಗುಪ್ತಾ ಅನೇಕ ದೊಡ್ಡ-ಬಜೆಟ್ ಬಾಲಿವುಡ್ ಚಿತ್ರಗಳಾದ ಬಡ್ಶಾಹೊ, ಟೋಟಲ್  ಧಮಾಲ್, ರಾಜ್ 3, ಕಮಾಂಡೋ 2 ಮತ್ತು ರುಸ್ಟೊಮ್, ಮುಂತಾದ ಸಿನಿಮಾಗಳಲ್ಲಿ ಕಾಣಿಸಿಕೊಂಡರು.

ಸಿನಿಮಾದ ನಂತರ. ಇಶಾ ಗುಪ್ತಾ ಇತ್ತೀಚೆಗೆ ಒಟಿಟಿಯಲ್ಲೂ (OTT) ತನ್ನ ಅದ್ಭುತ ನಟನಾ ಪ್ರದರ್ಶನವನ್ನು ತೋರಿಸಿದ್ದಾರೆ. ಬಾಬಿ ಡಿಯೋಲ್ ಅವರ ಹಿಟ್ ವೆಬ್ ಸರಣಿ 'ಆಶ್ರಮ್ 3' ನಲ್ಲಿ ಅವರು ಕೊನೆಯ ಬಾರಿಗೆ ಕಾಣಿಸಿಕೊಂಡರು.

click me!