ಜೈ ಶ್ರೀರಾಮ್ ಎಂದವರಿಗೆ ನಡುರಸ್ತೆಯಲ್ಲೇ ಪೊಲೀಸರು ಬೂಟುಗಾಲಲ್ಲಿ ಒದೆಯಬೇಕು ಎಂದ ಕಾಂಗ್ರೆಸ್ ಮುಖಂಡ ಬಷಿರುದ್ದೀನ್, 'ಕೈ' ಮುಖಂಡನ ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ಕಾರ್ಯಕರ್ತರು ಫುಲ್ ಗರಂ
ರಾಯಚೂರು(ಮೇ.03): ಜೈ ಶ್ರೀರಾಮ್ ಎಂದವರಿಗೆ ಪೊಲೀಸರು ಬೂಟುಗಾಲಲ್ಲಿ ಒದ್ದು ಒಳಗೆಹಾಕಬೇಕು ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳುವ ಮೂಲಕ ಉದ್ಧಟತನದ ಹೇಳಿಕೆಯನ್ನ ನೀಡಿದ್ದಾರೆ. ಈ ಘಟನೆ ನಡೆದಿರೋದು ರಾಯಚೂರಿನಲ್ಲಿ.
ಕಾಂಗ್ರೆಸ್ ಮುಖಂಡ ಬಷಿರುದ್ದೀನ್ ಎಂಬುಬರು ಉದ್ಧಟತನದ ಹೇಳಿಯನ್ನ ನೀಡಿದ್ದಾರೆ. ಅದೂ ಕೂಡ ರಾಯಚೂರು ನಗರಸಭೆ ಕಮಿಷನರ್ ಮುಂದೆಯೇ ಇಂತಹ ಹೇಳಿಕೆಯನ್ನ ನೀಡಿದ್ದಾರೆ. ಬಷಿರುದ್ದೀನ್ ಹೇಳಿಕೆ ಸದ್ಯ ಸಾಮಾಜಿಲ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
undefined
ದರ್ಗಾದ ಬಳಿ ಬೈಕ್ ನಿಲ್ಲಿಸಿ ಜೈಶ್ರೀರಾಮ್ ಘೋಷಣೆ;ಕಿಡಿಗೇಡಿಗಳ ಬಂಧನಕ್ಕೆ ಮುಸ್ಲಿಂ ಸಮುದಾಯ ಆಗ್ರಹ
ಜೈ ಶ್ರೀರಾಮ್ ಎಂದವರಿಗೆ ನಡುರಸ್ತೆಯಲ್ಲೇ ಪೊಲೀಸರು ಬೂಟುಗಾಲಲ್ಲಿ ಒದೆಯಬೇಕು ಎಂದು ಹೇಳಿದ್ದಾರೆ. ಬಷಿರುದ್ದೀನ್ ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ಕಾರ್ಯಕರ್ತರು ಫುಲ್ ಗರಂ ಆಗಿದ್ದಾರೆ.