ಬಾಲಿವುಡ್‌ಗಿಂತ ಜಾಸ್ತಿ ಆಯ್ತು; ಬಿಕಿನಿ ಫೋಟೋ ಶೇರ್ ಮಾಡಿದ ನಟಿ ಸಂಯುಕ್ತಾ ಸಖತ್ ಟ್ರೋಲ್

First Published Jan 2, 2023, 4:55 PM IST

ನಟಿ ಸಂಯುಕ್ತಾ ಹೆಗ್ಡೆ ಬಿಕಿನಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 

ನಟಿ ಸಂಯುಕ್ತಾ ಸದಾ ಪ್ರವಾಸ ಮಾಡುತ್ತಿರುತ್ತಾರೆ. ದೇಶ ಸುತ್ತಾಡುತ್ತಿರುವ ನಟಿ ಸಮಂತಾ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಾರೆ. ಆಗಾಗ ಬಿಕಿನಿಯಲ್ಲಿ ಮಿಂಚುವ ನಟಿ ಸಂಯುಕ್ತಾ ಹೊಸ ವರ್ಷವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಕೆಂಪು ಬಣ್ಣದ ಬಿಕಿನಿ ಟಾಪ್ ಧರಿಸಿರುವ ಫೋಟೋಗಳನ್ನು ಶೇರ್ ಮಾಡಿ ಎಲ್ಲರಿಗೂ ನ್ಯೂ ಇಯರ್ ವಿಶ್ ಮಾಡಿದ್ದಾರೆ. 

ಸ್ನೇಹಿತರ ಗ್ಯಾಂಗ್ ಜೊತೆ ಹೊಸ ವರ್ಷ ಆಚರಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸಂಯುಕ್ತಾ ಫೋಟೋಗಳಿಗೆ ನೆಟ್ಟಿಗರು ಬಗೆಬಗೆಯ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಪ್ರೀತಿ ವ್ಯಕ್ತ ಪಡಿಸುತ್ತಿದ್ದಾರೆ ಇನ್ನು ಕೆಲವರು ಟ್ರೋಲ್ ಮಾಡಿ ಸಂಯುಕ್ತಾ ಕಾಲೆಳೆಯುತ್ತಿದ್ದಾರೆ. 'ಬಾಲಿವುಡ್ ಗಿಂತ ಜಾಸ್ತಿ ಆಯ್ತು ಇದು' ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ, ಇನ್ನೂ ಏನೇನು ನೋಡಬೇಕೋ' ಎಂದು ಕೇಳುತ್ತಿದ್ದಾರೆ.   

ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಬೆಳ್ಳಿ ಪರದೆ ಮೇಲೆ ಮಿಂಚಿದ ನಟಿ ಸಂಯುಕ್ತ ಬಳಿಕ ಕನ್ನಡದಲ್ಲಿ ಕಾಣಿಸಿಕೊಂಡಿದ್ದು ತುಂಬಾ ಕಡಿಮೆ. ಮೊದಲ ಸಿನಿಮಾದಲ್ಲೇ ದೊಡ್ಡ ಮಟ್ಟದ ಸಕ್ಸಸ್ ಕಂಡ ಸಂಯುಕ್ತ ಬಳಿಕ ಬೇರೆ ಭಾಷೆಯ ಸಿನಿಮಾಗಳಲ್ಲೂ ಕಾಣಿಸಿಕೊಂಡರು. ಆದರೆ ಕಿರಿಕ್ ಪಾರ್ಟಿ ತಂದು ಕೊಟ್ಟ ಸಕ್ಸಸ್ ಯಾವುದು ನೀಡಿಲ್ಲ. 
 

ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ಸಂಯುಕ್ತ ಸದಾ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇತ್ತೀಚಿಗಷ್ಟೆ ಥೈಲ್ಯಾಂಡ್ ಪ್ರವಾಸದ ಫೋಟೋಗಳನ್ನು ಹಂಚಿಕೊಂಡಿದ್ದರು. ಬಿಕಿನಿ ಧರಿಸಿ ಬೀಚ್ ನಲ್ಲಿ ಎಂಜಾಯ್ ಮಾಡಿರುವ ಸಂಯುಕ್ತ ಫೋಟೋಗಳನ್ನು ಶೇರ್ ಮಾಡಿ ಖುಷಿ ಪಟ್ಟಿದ್ದರು.  
 

ಸಂಯುಕ್ತಾ  ಹೆಗ್ಡೆ ಕನ್ನಡ ಬಳಿಕ ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ತಮಿಳಿನ ಅನೇಕ ಸಿನಿಮಾಗಳಲ್ಲಿ ಸಂಯುಕ್ತ ಮಿಂಚಿದ್ದಾರೆ. ಕನ್ನಡದಲ್ಲಿ ಕೊನೆಯದಾಗಿ ತುರ್ತು ನಿರ್ಗಮನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. 

ಸದ್ಯ ಸಂಯುಕ್ತ ಕನ್ನಡದದ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಾಣಾ ಮತ್ತು ಕ್ರೀಮ್. 2019ರ ಬಳಿಕ ಸಂಯುಕ್ತ ಮತ್ತೆ ಕನ್ನಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಿರಿಕ್ ಪಾರ್ಟಿ ಬಳಿಕ ಸಂಯುಕ್ತಾ ಒಂದಿಷ್ಟು ವಿವಾದಗಳನ್ನು ಮಾಡಿಕೊಂಡಿದ್ದರು. ವಿವಾದಗಳ ಬಳಿಕ ಕನ್ನಡ ಸಿನಿಮಾರಂಗದಿಂದ ದೂರ ಆದರು. ಇದೀಗ ಮತ್ತೆ ಕನ್ನಡ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ. 

click me!