ಹಸಿರು ಬಾಡಿಕಾನ್ ಬಟ್ಟೆಯಲ್ಲಿ ಪ್ರಿಯಾಂಕಾ ಮಿಂಚಿಂಗ್; ಪತಿ ನಿಕ್ ಜೊತೆ ಹಾಟ್ ಪೋಸ್

First Published Apr 23, 2023, 2:15 PM IST

ಪ್ರಿಯಾಂಕಾ ಚೋಪ್ರಾ ಹಸಿರು ಬಣ್ಣದ ಬಾಡಿಕಾನ್ ಬಟ್ಟೆಯಲ್ಲಿ ಮಿಂಚಿದ್ದಾರೆ. ಪತಿ ನಿಕ್ ಜೋನಸ್ ಜೊತೆ ಪೋಸ್ ನೀಡಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.  

ಪ್ರಿಯಾಂಕಾ ಚೋಪ್ರಾ ಸದ್ಯ ಬಹುನಿರೀಕ್ಷೆಯ ಸಿಟಾಡೆಲ್' ಸರಣಿಯ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಈಗಾಗಲೇ ಪ್ರಿಯಾಂಕಾ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಪ್ರಪಂಚದ ಅನೇಕ ದೇಶಗಳಿಗೆ ಭೇಟಿ ಮಾಡುವ ಮೂಲಕ ಸಿಟಾಡೆಲ್ ಪ್ರಚಾರ ಮಾಡುತ್ತಿದ್ದಾರೆ. 

ಸದ್ಯ ಪ್ರಿಯಾಂಕಾ ಚೋಪ್ರಾ ರೋಮ್‌ನಲ್ಲಿದ್ದಾರೆ. ಪ್ರಿಯಾಂಕಾ ಜೊತೆ ಪತಿ ನಿಕ್ ಜೋನಸ್ ಕೂಡ ಭೇಟಿ ನೀಡಿದ್ದಾರೆ. ಸಿನಿಮಾ ಪ್ರಚಾರದ ನಡುವೆಯೂ ಪ್ರಿಯಾಂಕಾ ಪತಿ ನಿಕ್ ಜೋಸನ್ ಜೊತೆ ಮಸ್ತ್ ಎಂಜಾಯ್ ಮಾಡುತ್ತಿದ್ದಾರೆ. 

Latest Videos


ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ಪ್ರಿಯಾಂಕಾ ಸದಾ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಸದ್ಯ ಪ್ರಿಯಾಂಕಾ ಶೇರ್ ಮಾಡಿರುವ ಫೋಟೋಗಳ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸಿಟಾಡೆಲ್ ಪ್ರಚಾರಕ್ಕೆ ಭರ್ಜರಿಯಾಗಿ ತಯಾರಾಗಿದ್ದ ಪ್ರಿಯಾಂಕಾ ಅದೇ ಡ್ರೆಸ್ ನಲ್ಲಿ ಕ್ಯಾಮರಾಗೆ ಮಸ್ತ್ ಪೋಸ್ ನೀಡಿದ್ದಾರೆ. 

ಫೋಟೋಗಳನ್ನು ಶೇರ್ ಮಾಡಿ ರೋಮ್ ಹಾಲಿಡೇ ಎಂದು ಕ್ಯಾಪ್ಷನ್ ನೀಡಿದ್ದಾರೆ. ಹಸಿರು ಬಣ್ಣದ ಬಾಡಿಕಾನ್ ಬಟ್ಟೆಯಲ್ಲಿ ಪ್ರಿಯಾಂಕಾ ಮಿಂಚಿದ್ದಾರೆ. ಹಾಟ್ ಆಗಿ ಕಾಣಿಸಿಂಡಿರುವ ಪ್ರಿಯಾಂಕಾ ಪತಿ ನಿಕ್ ಜೊತೆ ರೊಮ್ಯಾಂಟಿಕ್ ಪೋಸ್ ನೀಡಿದ್ದಾರೆ. 

ಪ್ರಿಯಾಂಕಾ ಫೋಟೋಗಳಿಗೆ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿವೆ. ಅಭಿಮಾನಿಗಳು ಹಾರ್ಟ್ ಇಮೋಜಿ ಇರಿಸಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೇ ಅನೇಕ ಗಣ್ಯರು ಸಹ ಕಾಮೆಂಟ್ ಮಾಡುತ್ತಿದ್ದಾರೆ. 

ದಿ ರುಸ್ಸೋ ಬ್ರದರ್ಸ್ ನಿರ್ಮಾಣದ 'ಸಿಟಾಡೆಲ್' ಏಪ್ರಿಲ್ 28 ರಂದು ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಪ್ರತಿ ಶುಕ್ರವಾರ ವಾರಕ್ಕೊಮ್ಮೆ ಹೊಸ ಸಂಚಿಕೆ ಬಿಡುಗಡೆಯಾಗುತ್ತದೆ.

click me!