ಶ್ರೀದೇವಿ ಪುತ್ರಿಯ ಮಾದಕ ನೋಟ; ಜಾನ್ವಿ ಬೋಲ್ಡ್ ಫೋಟೋ ವೈರಲ್

First Published Jun 24, 2022, 12:54 PM IST

ಆಗಾಗ ಬೋಲ್ಡ್ ಫೋಟೋಶೂಟ್ ಮೂಲಕ ಮಿಂಚುವ ನಟಿ ಜಾನ್ವಿ ಇದೀಗ ಮತ್ತೊಂದು ಹಾಟ್ ಫೋಟೋಶೂಟ್ ಮೂಲಕ ಮಿಂಚುತ್ತಿರುತ್ತಾರೆ. ಮಿರ ಮಿರ ಮಿಂಚುತ್ತಿರುವ ಜಾನ್ವಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. 
 

ಬಾಲಿವುಡ್ ನಟಿ ಜಾನ್ವಿ ಕಪೂರ್ ಒಂದಲ್ಲೊಂದು ವಿಚಾರಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಸಿನಿಮಾಗಿಂತ ಹೆಚ್ಚಾಗಿ ಜಾನ್ವಿ ಫೋಟೋ ಶೂಟ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಜಾನ್ವಿ ಆಗಾಗ ಸುಂದರ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. 
 

ಖ್ಯಾತ ನಟಿ ಶ್ರೀದೇವಿ ಪುತ್ರಿ ಜಾನ್ವಿ ಧಡಕ್ ಸಿನಿಮಾ ಮೂಲಕ ಮೊದಲ ಬಾರಿಗೆ  ದೊಡ್ಡ ಪರದೆ ಮೇಲೆ ಮಿಂಚಿದರು. 2018ರಲ್ಲಿ ಜಾನ್ವಿ ಸಿನಿಮಾರಂಗ ಪ್ರವೇಶ ಪಡೆದರು. ತಾಯಿಯ ನಿಧನದ ಬಳಿಕ ಬಣ್ಣ ಹಚ್ಚಿದ ಜಾನ್ವಿಯನ್ನು ಅಭಿಮಾನಿಗಳು ಪ್ರೀತಿಯಿಂದ ಸ್ವಾಗತಿಸಿದರು. 

ಆಗಾಗ ಬೋಲ್ಡ್ ಫೋಟೋಶೂಟ್ ಮೂಲಕ ಮಿಂಚುವ ನಟಿ ಜಾನ್ವಿ ಇದೀಗ ಮತ್ತೊಂದು ಹಾಟ್ ಫೋಟೋಶೂಟ್ ಮೂಲಕ ಮಿಂಚುತ್ತಿರುತ್ತಾರೆ. ಮಿರ ಮಿರ ಮಿಂಚುತ್ತಿರುವ ಜಾನ್ವಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. 

ಸಿನಿಮಾ ಜೊತೆಗೆ ಫಿಟ್ನೆಸ್, ಡಯಟ್, ಯೋಗ, ವರ್ಕೌಟ್ ಅಂತ ಬ್ಯುಸಿ ಇರುವ ಜಾನ್ವಿ ಎಲ್ಲಾ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜಾನ್ವಿ ಹಾಟ್ ಫೋಟೋಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಹರದುಬಂದಿದೆ. ಹಾರ್ಟ್ ಇಮೋಜಿ ಹಾಕುತ್ತಿದ್ದಾರೆ.

ಖ್ಯಾತ ನಟಿ ಶ್ರೀದೇವಿ ಪುತ್ರಿ ಜಾನ್ವಿ ಸದ್ಯ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಜಾನ್ವಿ ಸಹೋದರಿ ಖುಷಿ ಕೂಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ವೆಬ್ ಸೀರಿಸ್ ನಲ್ಲಿ ಖುಷಿ ನಟಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಫಸ್ಟ್ ಲುಕ್ ರಿಲೀಸ್ ಆಗಿದ್ದು ಜಾಹ್ನವಿ ಸಂತಸ ಹಂಚಿಕೊಂಡಿದ್ದರು.

ಜಾನ್ವಿ ಕಪೂರ್ ಬಳಿ ಸಾಲು ಸಾಲು ಸಿನಿಮಾಗಳಿವೆ. ಕೊನೆಯದಾಗಿ ಜಾನ್ವಿ ರಾಜ್ ಕುಮಾರ್ ರಾವ್ ಜೊತೆ ರೂಹಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ ಮತ್ತೆ ರಾಜ್ ಕುಮಾರ್ ರಾವ್ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ

ಜಾನ್ವಿ ಕಪೂರ್ ಬಳಿ ಸದ್ಯ ರಾಜ್ ಕುಮಾರ್ ರಾವ್ ಜೊತೆ ಮಿಸ್ಟರ್ ಅಂಡ್ ಮಿಸೆಸ್ ಮಹಿ ಸಿನಿಮಾದಲ್ಲಿ ಇಬ್ಬರು ಒಟ್ಟಿಗೆ ನಟಿಸುತ್ತಿದ್ದಾರೆ. ಗುಡ್ ಲಕ್ ಜೆರ್ರಿ, ಬವಾಲ್, ಮಿಲಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಜಾಹ್ನವಿ ಬ್ಯುಸಿಯಾಗಿದ್ದಾರೆ.

click me!