ಆ ರತಿಯೇ ಧರೆಗಿಳಿದಂತೆ.. ಪಡ್ಡೆಗಳ ಹೃದಯಕ್ಕೆ ಕನ್ನ ಹಾಕ್ತಿರೋ ಜಾನ್ವಿ ಹಾಟ್ ಫೋಟೋಸ್

First Published May 7, 2024, 1:34 PM IST

ಚಿನ್ನದ ಬಣ್ಣದ ಪಾರದರ್ಶಕ ಹೊಳೆಯುವ ಬಟ್ಟೆಯಲ್ಲಿ ತನ್ನ ಮೈ ಮಾಟದ ಸೊಬಗನ್ನು ಪ್ರದರ್ಶಿಸುತ್ತಿರೋ ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ ಫೋಟೋಗಳು ತಮ್ಮ ಹಾಟ್‌ನೆಸ್‌ನಿಂದಾಗಿ ಇಂಟರ್ನೆಟ್‌ಗೆ ಬೆಂಕಿ ಹಚ್ಚಿವೆ..

ಮೊದಲೇ ಬಾಲಿವುಡ್‌ನ ಹಾಟ್ ಬೆಡಗಿಯರಲ್ಲಿ ಮುಂಚೂಣಿಯಲ್ಲಿರುವ ಜಾನ್ವಿ ಕಪೂರ್, ಈ ಸ್ಪರ್ಧೆಯಲ್ಲಿ ನಂ 1 ಪಟ್ಟ ಬಿಟ್ಟುಕೊಡದ ಹಟಕ್ಕೆ ಬಿದ್ದಂತಿದೆ. 

ಚಿನ್ನದ ಬಣ್ಣದ ಪಾರದರ್ಶಕ ಹೊಳೆವ ಬಟ್ಟೆಯಲ್ಲಿ ಜಾನ್ವಿ ಕಪೂರ್‌ಳ ಹೊಸ ಫೋಟೋಶೂಟ್ ಬೇರೆಯದೇ ಲೆವೆಲ್ ಎಂದು ನೋಡಿದವರೆಲ್ಲರೂ ಒಪ್ಪುತ್ತಿದ್ದಾರೆ. 

ಕೂದಲನ್ನು ಇಳಿ ಬಿಟ್ಟು ಗೌನ್‌ಗೆ ಒಪ್ಪುವಂಥ ಕಿರೀಟ ಧರಿಸಿದ ಜಾನ್ವಿ ಕಪೂರ್, ದೇವಲೋಕದ ಅಪ್ಸರೆಯಂತೆ ಕಂಗೊಳಿಸುತ್ತಿದ್ದಾರೆ. 

ಆಕೆಯ ಸೌಂದರ್ಯ, ಮೈ ಮಾಟ, ಮಾದಕ ನೋಟ .. ಎಲ್ಲಕ್ಕೂ ಸರಿಸಾಟಿಯಾಗಿ ನಿಂತ ಹೊನ್ನ ಬಣ್ಣದ ಬ್ಯಾಕ್‌ಗ್ರೌಂಡ್ ಸೇರಿ ಜಾನ್ವಿಯ ಫೋಟೋಗಳು ಸೂಪರ್ ಸೆಕ್ಸೀ ಎನಿಸಿವೆ. 

ನಟಿಯ ಫೋಟೋಗಳಿಗೆ ಹಲವರು ಹೊಗಳಿ ಹಾಡುತ್ತಾ ಕಾಮೆಂಟ್ ಮಾಡಿದ್ದಾರೆ. ಪೋಟೋ ಈಗಾಗಲೇ 6 ಲಕ್ಷಕ್ಕೂ ಅಧಿಕ ಲೈಕ್ ಗಿಟ್ಟಿಸಿ ಮುಂದುವರಿದಿದೆ. 

ಈಕೆಯನ್ನು ಮೆಟ್ ಗಾಲಾಕ್ಕೆ ಕಳುಹಿಸಿದ್ದರೆ ಈ ಲುಕ್ ಸರಿ ಹೊಂದುತ್ತಿತ್ತು ಎಂದು ಸಾಕಷ್ಟು ಫ್ಯಾಶನ್ ಪ್ರಿಯರು ಹೊಗಳಿದ್ದಾರೆ. 

ಕೆಲಸದ ವಿಷಯಕ್ಕೆ ಬಂದರೆ, ಕಡೆಯದಾಗಿ ವರುಣ್ ಧವನ್ ಜೊತೆ ಬವಾಲ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ, ಅಭಿನಯಕ್ಕಾಗಿ ಬಹಳಷ್ಟು ಮೆಚ್ಚುಗೆ ಗಳಿಸಿದ್ದರು. 

ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿಯಲ್ಲಿ ಅವರು ವರುಣ್ ಜೊತೆ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ಶಶಾಂಕ್ ಖೈತಾನ್ ಅವರ ನಿರ್ದೇಶನದ ಈ ಚಿತ್ರವು ಏಪ್ರಿಲ್ 18, 2025 ರಂದು ಬಿಡುಗಡೆಯಾಗಲಿದೆ.

ಇದಲ್ಲದೇ ಜಾನ್ವಿ ಉಲಜ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ, ಜಾನ್ವಿ ವಿದೇಶದಲ್ಲಿ ಪಿತೂರಿಯಲ್ಲಿ ಸಿಕ್ಕಿಹಾಕಿಕೊಂಡ IFS ಅಧಿಕಾರಿಯ ಪಾತ್ರ ನಿರ್ವಹಿಸಿದ್ದಾರೆ. 

ರಾಜ್‌ಕುಮಾರ್ ರಾವ್ ಅವರೊಂದಿಗೆ ಮಿಸ್ಟರ್ ಅಂಡ್ ಮಿಸೆಸ್ ಮಹಿಯಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ ಮತ್ತು ಜ್ಯೂನಿಯರ್ ಎನ್‌ಟಿಆರ್ ಅವರೊಂದಿಗೆ ದೇವರಾ ಚಿತ್ರದ ಮೂಲಕ ದಕ್ಷಿಣಕ್ಕೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ.

click me!