ರೀಲ್ಸ್‌ ಮಾಡಿ ಲಕ್ಷ ಗಳಿಸುವ ಅವಕಾಶ ! ಎಲ್ಲಿ? ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ

By Roopa Hegde  |  First Published Nov 16, 2024, 12:12 PM IST

ಉತ್ತಮ ಕಂಟೆಂಟ್ ಕ್ರಿಯೇಟರ್ ನೀವು, ಒಳ್ಳೊಳ್ಳೆ ರೀಲ್ಸ್ ಮಾಡ್ತೀರಾ ಅಂದ್ರೆ ಈಗ್ಲೇ ಆಕ್ಟೀವ್ ಆಗಿ. ಒಂದೇ ಹೊಡೆತಕ್ಕೆ 1.5 ಲಕ್ಷ ಬಹುಮಾನ ಗಳಿಸುವ ಅವಕಾಶ ನಿಮಗೆ ಸಿಗ್ತಿದೆ.   


ಇನ್ಸ್ಟಾಗ್ರಾಮ್ (Instagram) ನಲ್ಲಿ ರೀಲ್ಸ್ (Reels) ಮಾಡಿ, ಯುಟ್ಯೂಬ್ (Youtube) ನಲ್ಲಿ ವಿಡಿಯೋ ಮಾಡಿ ಹಣ ಗಳಿಸ್ತಿರುವ ಜನರಿಗೆ ಇಲ್ಲೊಂದು ಭರ್ಜರಿ ಆಫರ್ ಇದೆ. ನಿಮ್ಮ ಕಂಟೆಂಟ್ ಸ್ವಲ್ಪ ಡಿಫರೆಂಟ್ ಆಗಿದೆ, ಎಲ್ಲರ ಮೆಚ್ಚುಗೆ ಗಳಿಸ್ತಿದೆ ಎಂದಾದ್ರೆ ನೀವು ಈ ಸುದ್ದಿ ಅವಶ್ಯಕವಾಗಿ ಓದಿ. ನೀವು ಮಾಡುವ ಒಂದು ಕಂಟೆಂಟ್ (Content) ಗೆ ಲಕ್ಷಾಂತರ ರೂಪಾಯಿ ಬಹುಮಾನ ಪಡೆಯವ ಅವಕಾಶ ನಿಮಗೆ ಸಿಗ್ತಿದೆ. ಹೌದು, ಅದಕ್ಕೆ ಯಾವುದೇ ವಿಶೇಷ ರೂಲ್ಸ್ ಗಳಿಲ್ಲ. ನೀವು ನಮೋ ಭಾರತ್ ಗೆ ಸಂಬಂಧಿಸಿದ ಕಿರು ಚಿತ್ರವೊಂದನ್ನು ತಯಾರಿಸಬೇಕು. ನಿಮ್ಮ ಕಿರುಚಿತ್ರ ಪ್ರಶಸ್ತಿ ಪಡೆಯಲು ಯೋಗ್ತವಾಗಿದ್ದರೆ ರಾಷ್ಟ್ರೀಯ ರಾಜಧಾನಿ ಪ್ರದೇಶ ಸಾರಿಗೆ ಸಂಸ್ಥೆ (NCRTC) ನಿಮಗೆ ಬಹುಮಾನ ನೀಡಲಿದೆ. ಒಂದು, ಎರಡು ಸಾವಿರವಲ್ಲ, ಬರೋಬ್ಬರಿ 1.5 ಲಕ್ಷ ರೂಪಾಯಿ ನಗದು ಬಹುಮಾನ ನಿಮಗೆ ಸಿಗಲಿದೆ.

ನಮೋ ಭಾರತ್ ಕಿರುಚಿತ್ರ (Namo Bharat Short Film) ನಿರ್ಮಾಣ ಸ್ಪರ್ಧೆ ಇದಾಗಿದೆ. ಇದರಲ್ಲಿ ಚಲನಚಿತ್ರ ಮತ್ತು ಕಂಟೆಂಟ್ ರಚನೆಕಾರರು ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಲು ಅವಕಾಶ ನೀಡಲಾಗ್ತಿದೆ.  ಈ ಸ್ಪರ್ಧೆಯಲ್ಲಿ ಯಾರು ಬೇಕಾದ್ರೂ ಪಾಲ್ಗೊಳ್ಳಬಹುದು. ನೀವು ಕಾಲೇಜು ವಿದ್ಯಾರ್ಥಿಯಾಗಿರಲಿ, ಚಲನಚಿತ್ರ ನಿರ್ಮಾಪಕರಾಗಿರಲಿ ಅಥವಾ ಕಂಟೆಂಟ್ ಕ್ರಿಯೇಟರ್ ಆಗಿರಲಿ  ನೀವು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಈ ಸ್ಪರ್ಧೆಯಲ್ಲಿ ನೀವು ಕಿರುಚಿತ್ರ ಅಥವಾ ರೀಲ್  ಮಾಡಬೇಕಾಗುತ್ತದೆ. 

Latest Videos

undefined

ಸತ್ತ ವ್ಯಕ್ತಿ ಎಟಿಎಂ ಕಾರ್ಡ್‌ ನಿಂದ ಹಣ ಪಡೆಯಬಹುದಾ?

ಷರತ್ತು ಏನು? : ನೀವು ಕಿರುಚಿತ್ರ ಅಥವಾ ರೀಲ್ ಮಾಡ್ತಿದ್ದರೆ ಹೊಸ ಮತ್ತು ಆಧುನಿಕ ನಮೋ ಭಾರತ್ ರೈಲು ಮತ್ತು ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (RRTS) ನಿಲ್ದಾಣವನ್ನು ಬಳಸಿಕೊಳ್ಳಬೇಕು. ನಿಮ್ಮ ರೀಲ್ ನಲ್ಲಿ ನಮೋ ಭಾರತ್ ರೈಲು ಮತ್ತು ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ ನಿಲ್ದಾಣದ ದೃಶ್ಯ ಕಾಣ್ಲೇಬೇಕು. ಆದ್ರೆ ಇದಕ್ಕೆ ಯಾವುದೇ ನಿಶ್ಚಿತ ಶೈಲಿ ಮತ್ತು ಕಥೆ ಇಲ್ಲ. ಈ ವೀಡಿಯೊದಲ್ಲಿ ನಿಮ್ಮ ಅನನ್ಯ ಸೃಜನಶೀಲತೆಯನ್ನು ನೀವು ತೋರಿಸಬಹುದು.

ಶೂಟಿಂಗ್ ಉಚಿತ : ಆರ್‌ಆರ್‌ಟಿಎಸ್ ನಿಲ್ದಾಣಗಳು ಮತ್ತು ನಮೋ ಭಾರತ್ ರೈಲುಗಳ ಚಿತ್ರೀಕರಣಕ್ಕೆ, ರೀಲ್ ಮಾಡಲು ನೀವು ಯಾವುದೇ ಹಣವನ್ನು ಪಾವತಿಸಬೇಕಾಗಿಲ್ಲ. ಇದು ಸಂಪೂರ್ಣ ಉಚಿತವಾಗಿರುತ್ತದೆ.  

ವಿಡಿಯೋ ಹೇಗಿರಬೇಕು? : ಈ ಸ್ಪರ್ಧೆಯಲ್ಲಿ ಭಾಗವಹಿಸಲು ನೀವು ಬಯಸಿದ್ರೆ  ಐಚ್ಛಿಕ ಉಪಶೀರ್ಷಿಕೆಗಳೊಂದಿಗೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ನಿಮ್ಮ ಚಲನಚಿತ್ರ ಅಥವಾ ರೀಲ್ ಹಂಚಿಕೊಳ್ಳಬಹುದು. ಈ ವೀಡಿಯೊ MP4 ಅಥವಾ MOV ಸ್ವರೂಪದಲ್ಲಿರಬೇಕು. ಅದರ ರೆಸಲ್ಯೂಶನ್ 1080p ಆಗಿರಬೇಕು. ಡಿಸೆಂಬರ್ 20, 2024ರವರೆಗೆ ವಿಡಿಯೋ ಶೂಟ್ ಮಾಡಲು ನಿಮಗೆ ಅವಕಾಶವಿದೆ. 

IRCTC ಮಾತ್ರವಲ್ಲ ಈ ಅಪ್ಲಿಕೇಷನ್ ಮೂಲಕವೂ ರೈಲ್ವೆ ಟಿಕೆಟ್ ಬುಕ್ ಮಾಡ್ಬಹುದು

ಎಲ್ಲಿ ವಿಡಿಯೋ ಹಂಚಿಕೊಳ್ಳಬೇಕು? : ನಮೋ ಭಾರತ್ ಕಿರುಚಿತ್ರ ನಿರ್ಮಾಣ ಸ್ಪರ್ಧೆಗೆ ಅರ್ಜಿ, ವಿಷಯದೊಂದಿಗೆ ನೀವು ವಿಡಿಯೋ ಹಂಚಿಕೊಳ್ಳಬೇಕು. ನೀವು pr@ncrtc.in  ಗೆ ಇಮೇಲ್ ಕಳುಹಿಸಬೇಕು. ಇಮೇಲ್‌ನಲ್ಲಿ ನಿಮ್ಮ ಪೂರ್ಣ ಹೆಸರು, ಸಂಕ್ಷಿಪ್ತ ಸಾರಾಂಶ ಮತ್ತು ನಿಮ್ಮ ಚಲನಚಿತ್ರದ ಸಮಯವನ್ನು ಸಹ ನೀವು ಬರೆಯಬೇಕಾಗುತ್ತದೆ. ಈ ಸ್ಪರ್ಧೆಯಲ್ಲಿ ಮೂರು ವಿಜೇತರ ಆಯ್ಕೆ ನಡೆಯಲಿದೆ.  ಪ್ರಥಮ ಸ್ಥಾನ ಪಡೆದವರಿಗೆ 1,50,000 ರೂಪಾಯಿ ನಗದು ಬಹುಮಾನ ನೀಡಲಾಗುವುದು.  ದ್ವಿತೀಯ ಸ್ಥಾನ ಪಡೆದವರಿಗೆ 1,00,000 ರೂಪಾಯಿ ಮತ್ತು ಮೂರನೇ ಸ್ಥಾನ ಪಡೆದವರಿಗೆ 50,000 ರೂಪಾಯಿ ನಗದು ಸಿಗಲಿದೆ.   

click me!