ಬಹಳ ಕಷ್ಟದಿಂದ ಬದುಕಲ್ಲಿ ಮೇಲೆ ಬಂದ ಯಶ್ ಇಂದು ಜಗತ್ತೇ ತಿರುಗಿ ನೋಡುತ್ತಿರುವ ಹೀರೋ. ಅವರ ಇಂದಿನ ಲೈಫಿಗೆ ಅಂದು ಮೆಜೆಸ್ಟಿಕ್‌ನಲ್ಲಿ ನಡೆದ ಆ ಘಟನೆಯೇ ಕಾರಣ..
ಯಶ್ ಇಂದು ಜನಪ್ರಿಯತೆಯ ಉತ್ತುಂಗದಲ್ಲಿದ್ದಾರೆ. ಇವರ ಹವಾ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಬಾಲಿವುಡ್ನಲ್ಲೂ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿದೆ. ಈಗ ಅವರು ‘ಟಾಕ್ಸಿಕ್’ ಸಿನಿಮಾ ಶೂಟಿಂಗ್ ಮಾಡುತ್ತಿದ್ದಾರೆ. ಅವರು ಬೇಗ ಬೇಗ ಸಿನಿಮಾ ಮಾಡಲಿ ಎಂಬುದು ಫ್ಯಾನ್ಸ್ ಕೋರಿಕೆ. ಬಾಲಿವುಡ್ ಬಾದಷಾ ಶಾರುಖ್ ಖಾನ್ ಕೂಡ ಮೊನ್ನೆ ಮೊನ್ನೆ ಇದೇ ರೀತಿಯ ಬೇಡಿಕೆ ಇಟ್ಟಿದ್ದರು. ಶಾರುಖ್ ಖಾನ್ ಇತ್ತೀಚೆಗೆ ಬರ್ತ್ಡೇ ಆಚರಿಸಿಕೊಂಡಿದ್ದಾರೆ. ಇದನ್ನು ‘ಎಸ್ಆರ್ಕೆ ಡೇ’ ಎಂದು ಆಚರಿಸಲಾಗಿದೆ. ಈ ವೇಳೆ ಯಶ್ ಅವರಿಗೆ ಶಾರುಖ್ ಖಾನ್ ಒಂದು ಕಿವಿ ಮಾತು ಹೇಳಿದ್ದರು. ಶಾರುಖ್ ಖಾನ್ ಅವರಿಗೆ ಫ್ಯಾನ್ಸ್ ಕಡೆಯಿಂದ ಪ್ರಶ್ನೆ ಮಾಡಲಾಗಿದೆ. ಇದಕ್ಕೆ ಉತ್ತರ ನೀಡಿದ್ದಾರೆ ಅವರು. ‘ಯಶ್ ಬೇಗ ಬೇಗ ಸಿನಿಮಾ ಮಾಡಿ. ನಾವು ಕಾಯುತ್ತಿದ್ದೇವೆ’ ಎಂದು ಶಾರುಖ್ ಖಾನ್ ಹೇಳಿದ್ದಾರೆ. ಈ ಮೂಲಕ ಯಶ್ ಸಿನಿಮಾಗಳ ಮೇಲೆ ಶಾರುಖ್ ಖಾನ್ಗೂ ನಿರೀಕ್ಷೆ ಇದೆ ಅನ್ನೋದು ಸ್ಪಷ್ಟವಾಗಿದೆ.
ಇಷ್ಟೆಲ್ಲ ಬಿಲ್ಡಪ್ ಯಾಕೆ ಅಂದರೆ ಒಂದು ಕಾಲದಲ್ಲಿ ಯಶ್ ಹೇಗಿದ್ದರು ಎಂಬುದನ್ನು ನೋಡಿದಾಗ ಈಗ ಅವರ ಲೆವೆಲ್ ಯಾವ ಮಟ್ಟಕ್ಕೆ ಹೋಗಿದೆ ಅನ್ನೋದನ್ನ ಕಂಡಾಗ ಶಾರೂಕ್ ಅವರ ಈ ಮಾತು ತುಂಬ ಮಹತ್ವದ್ದಾಗಿ ಕಾಣುತ್ತೆ. ಯಾಕೆಂದರೆ ಯಶ್ ತೀರಾ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಇವರ ತಂದೆ ಕೆಎಸ್‌ಆರ್‌ಟಿಸಿ ಡ್ರೈವರ್ ಆಗಿದ್ದವರು.
undefined
ರಾಜವೈಭೋಗ, ಐಷಾರಾಮಿ ಜೀವನ ಕಡೆಗಣಿಸಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ 66 ವರ್ಷದ ನಟ
ಯಶ್ ಪಿಯುಸಿಗಿಂತ ಮುಂದೆ ಓದಲೇ ಇಲ್ಲ. ಊರಲ್ಲೆ ಕಿರಾಣಿ ಅಂಗಡಿ ಇಟ್ಟಿದ್ದರು. ಆರ್ಕೆಸ್ಟ್ರಾಗಳಲ್ಲಿ ಹಾಡುತ್ತಿದ್ದರು, ಕುಣಿಯುತ್ತಿದ್ದರು. ಹಾಗಂತ ಇಂಡಸ್ಟ್ರಿಗೆ ಬಂದು ಶಾರೂಕ್ ಖಾನ್‌ನಂಥ ನಟರೂ ಇವರ ಸಿನಿಮಾಕ್ಕಾಗಿ ಎದುರು ನೋಡುವಂಥಾ ದೊಡ್ಡ ನಟ ಆಗ್ತಾರೆ ಅಂತ ಯಾರೊಬ್ಬರೂ ಕನಸು ಮನಸಲ್ಲೂ ಊಹಿಸಿರಲಿಲ್ಲ.
ತಮ್ಮ ಆ ದಿನಗಳ ಬಗ್ಗೆ ಯಶ್ ಮಾತನಾಡಿರುವ ವೀಡಿಯೋವೊಂದು ಸೋಷಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಅವರು ರಮೇಶ್ ಅರವಿಂದ್ ಜೊತೆಗೆ ಮಾತನಾಡಿದ ವೀಡಿಯೋ ಅದು. ಬಹುಶಃ ಅದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ. ಇದರಲ್ಲಿ ಎಲ್ಲ ಸೆಲೆಬ್ರಿಟಿಗಳೂ ತಮ್ಮ ಆಂತರ್ಯವನ್ನು ತೆರೆದಿಡ್ತಾರೆ. ಅದೇ ಥರ ಯಶ್ ಕೂಡ ತನ್ನ ಆ ದಿನಗಳನ್ನು ಜನರ ಜೊತೆ ಹಂಚಿಕೊಂಡಿದ್ದರು. ಆ ವೇಳೆಗೆ ಯಶ್ ಅವರ ತಾಯಿ ಸಭಿಕರ ಸಾಲಲ್ಲಿ ಕೂತು ಕಣ್ಣೀರು ಹಾಕ್ತಿದ್ದರು. ಇದರಲ್ಲಿ ಯಶ್ ತಾನು ಆ ದಿನ ಮೆಜೆಸ್ಟಿಕ್‌ನಲ್ಲಿ ಮಲಗಿದ್ದೆ. ಹತ್ತು ನಿಮಿಷಕ್ಕೊಂದು ಮೈಸೂರಿಗೆ ಹೋಗುವ ಬಸ್ ಬರ್ತಿತ್ತು. ಮೆಜೆಸ್ಟಿಕ್‌ಗೆ ಸ್ವಲ್ಪ ದೂರದಲ್ಲೇ ಗಾಂಧೀನಗರ ಇತ್ತು. ಅವತ್ತು ರಾತ್ರಿ ಮೆಜೆಸ್ಟಿಕ್ ಬಸ್‌ಸ್ಟಾಂಡಿನಲ್ಲೇ ಮಲಗಿದ್ದೆ. ಯಾವ್ಯಾವುದೋ ಊರಿಂದ ಸಾವಿರಾರು ಜನ ಬಂದಿಳೀತಾ ಇದ್ರು. ಅವರನ್ನೆಲ್ಲ ನೋಡ್ತಾ ನೋಡ್ತಾ ನಾನು ಗಾಂಧೀ ನಗರದತ್ತಲೇ ಹೋಗಬೇಕು. ಈ ಜನರ ಕಣ್ಣಲ್ಲಿ ದೊಡ್ಡ ಸ್ಟಾರ್ ಆಗಿ ಮಿಂಚಬೇಕು ಎಂಬ ಕನಸು ಮೊಳಕೆ ಒಡೆಯಿತು' ಅಂದಿದ್ದಾರೆ.
ನನ್ನ ತಾಯಿ ತೀರಿಕೊಂಡಾಗ ಬಿಟ್ರೆ.. ಸಿನಿಮಾ ಮಾಡ್ತೀನಿ ಅಂದಾಗ ತಂದೆ ಅತ್ತಿದ್ರು: ನಾಗಾರ್ಜುನ ಹೀರೋ ಎಂಟ್ರಿ ಹಿಂದಿನ ಕಥೆ
ಯಶ್ ಅವರ ಈ ವೀಡಿಯೋ ಇದೀಗ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಏಕೆಂದರೆ ಅವರು ಈ ಕಾರ್ಯಕ್ರಮದಲ್ಲಿ ಹೇಳಿದ ಮಾತನ್ನು ಅಕ್ಷರಶಃ ನಿಜವಾಗಿಸಿದ್ದಾರೆ. ಇವತ್ತು ಜಗತ್ತಿನ ಯಾವ ಮೂಲೆಗೆ ಹೋದರೂ ಅಲ್ಲಿ ಯಶ್ ಅವರನ್ನು ಗುರುತಿಸುವ ಅಭಿಮಾನಿ ಸಿಕ್ತಾರೆ. ಇಂಥಾ ಮಹಾನ್ ನಟನಾಗಿ ಬೆಳೆಯುವುದಕ್ಕೆ ಇವರ ಡೆಡಿಕೇಶನ್ ದೊಡ್ಡದು. ಇದನ್ನೆಲ್ಲ ನೋಡಿದಾಗ ಇವರು ಎಂಥವರಿಗೂ ಸ್ಫೂರ್ತಿಯಾಗಿ ನಿಲ್ಲುತ್ತಾರೆ. ದೊಡ್ಡ ಕನಸು, ಅದಕ್ಕೆ ತಕ್ಕ ಡೆಡಿಕೇಶನ್ ಇದ್ದರೆ ವ್ಯಕ್ತಿಯೊಬ್ಬ ಯಾವ ಮಟ್ಟಕ್ಕೆ ಬೇಕಾದರೂ ಏರಬಹುದು ಅನ್ನೋದಕ್ಕೆ ಯಶ್ ದೊಡ್ಡ ಉದಾಹರಣೆಯಾಗಿ ನಿಲ್ಲುತ್ತಾರೆ. ಸದ್ಯ ಹಾಲಿವುಡ್ ನಟಿಯೊಬ್ಬರೂ ಯಶ್ ಜೊತೆಗಿನ ವೀಡಿಯೋ ಹಂಚಿಕೊಂಡಿದ್ದಾರೆ.