ಹಾಟ್ ಗರ್ಲ್‌ಫ್ರೆಂಡ್ ಇದ್ರೂ ವರ್ಜಿನ್ ಅಂತೆ ಟೈಗರ್ ಶ್ರಾಫ್

First Published Aug 4, 2021, 9:37 AM IST
  • ಸಲ್ಮಾನ್ ಖಾನ್‌ನಂತೆ ನಾನೂ ಕೂಡಾ ವರ್ಜಿನ್ ಎಂದ ಟೈಗರ್ ಶ್ರಾಫ್
  • ಹಾಟ್ ಗೆಳತಿ ದಿಶಾ ಪಠಾನಿ ಜೊತೆಗಿದ್ರೂ ನಟ ವರ್ಜಿನಾ ಅಂತಿದ್ದಾರೆ ನೆಟ್ಟಿಗರು

ಬಾಲಿವುಡ್ ನಟ ಅರ್ಬಾಝ್ ಖಾನ್ ನಡೆಸಿಕೊಡೋ ಕ್ವಿಕ್ ಹೀಲ್ ಪಿಂಚ್ ಬಯ್ ಅರ್ಬಾಝ್ ಖಾನ್ ಸದ್ಯ ಎಲ್ಲೆಡೆ ಸುದ್ದಿಯಲ್ಲಿರುವ ಶೋ.

ಮಲೈಕಾ ಅರೋರ ಅವರ ಮಾಜಿ ಪತಿ ನಡೆಸಿಕೊಡ್ತಿರೋ ಈ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಅತಿಥಿಯಾಗಿದ್ದು ಟೈಗರ್ ಶ್ರಾರ್ಫ. ಸಲ್ಮಾನ್ ಖಾನ್, ಆಯುಷ್ಮಾನ್ ಖುರಾನ ಅವರಂತಹ ನಟ ಭಾಗಿಯಾದ ಈ ಶೋದಲ್ಲಿ ಸದ್ಯ ಭಾಗಿಯಾಗಿರೋದು ಟೈಗರ್.

ಶೋದಲ್ಲಿ ಭಾಗಿಯಾದ ನಂತರ ಈಗ ನಟನೂ ಸುದ್ದಿಯಲ್ಲಿದ್ದಾರೆ. ಹಿರಿಯ ನಟ ಜಾಕಿ ಶ್ರಾಫ್ ಅವರ ಪುತ್ರ ಟೈಗರ್ ಶ್ರಾಫ್ ಹಾಸ್ಯಭರಿತ ಉತ್ತರ ಹಾಗೂ ಕಮೆಂಟ್‌ಗಳನ್ನು ಮಾಡಿ ಸುದ್ದಿಯಾಗಿದ್ದಾರೆ.

ಶೋವಿನ ಮೂರನೇ ಎಪಿಸೋಡ್‌ನ ಪ್ರೊಮೋ ವೈರಲ್ ಆಗಿದ್ದು ಇಂಡಸ್ಟ್ರಿಗೆ ಕಾಲಿಟ್ಟ ನಂತರ ತನ್ನ ಲುಕ್‌ಗಾಗಿ ಟ್ರೋಲ್ ಆದ ಬಗ್ಗೆ ನಟ ಮಾತನಾಡಿದ್ದಾರೆ.

ಹಿರೋಪಂತಿ ಸಿನಿಮಾ ಮೂಲಕ ಕೃತಿ ಸನೋನ್ ಜೊತೆ ಡಿಬಟ್ ಮಾಡಿದ್ದರು ಟೈಗರ್.

ಇಂಡಸ್ಟ್ರಿಯ ಆರಂಭದ ವರ್ಷಗಳಲ್ಲಿ ಹಿರೋಯಿನ್ ಥರ ಕಾಣ್ತೀಯ ಎಂದೇ ನಟನನ್ನು ಟ್ರೋಲ್ ಮಾಡಲಾಗಿತ್ತು.

ಆದರೆ ತಮ್ಮ ಸೂಪರ್ ಆಕ್ಷನ್ ಸಿನಿಮಾ, ರೊಮ್ಯಾಂಟಿಕ್ ನಟನೆಯಿಂದ ಎಲ್ಲ ಟ್ರೋಲ್ ಬಾಯಿ ಮುಚ್ಚಿಸಿದ್ದಾರೆ ನಟ.

ಸಿನಿಮಾ ನಟನೆಗೂ ಮುನ್ನವೇ ನನ್ನ ಲುಕ್ಸ್‌ಗಾಗಿ ಟ್ರೋಲ್ ಮಾಡುತ್ತಿದ್ದರು.

ಇವನು ಹಿರೋನಾ ಅಥವಾ ಹಿರೋಯಿನ್ ಹಾ ಎಂದು ಜನ ಪ್ರಶ್ನಿಸುತ್ತಿದ್ದರು ಎಂದಿದ್ದಾರೆ ನಟ.

ಅವನು ಜಾಕಿ ಅವರ ಮಗನಂತೆಯೇ ಕಾಣಿಸುವುದಿಲ್ಲ ಎಂದೂ ಜನ ತಮಾಷೆ ಮಾಡುತ್ತಿದ್ದರು ಎನ್ನಲಾಗಿದೆ. 

ಟೈಗರ್ ಶ್ರಾಫ್ ಅವರಲ್ಲಿ ನೀವಿನ್ನೂ ವರ್ಜಿನ್ ಹಾ ಎಂದು ಕೇಳಿದಾಗ ಸಲ್ಮಾನ್ ಖಾನ್ ಅವರಂತೆ ನಾನು ವರ್ಜಿನ್ ಎಂದಿದ್ದಾರೆ ನಟ.

ನಟ ಸದ್ಯ ಭಾಗಿ 4, ಗಣಪತ್, ಹಿರೋಪಂತಿ 2 ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

click me!