ಸನ್ನಿ ಲಿಯೋನ್ ರೆಡ್ ಹಾಟ್ ಲುಕ್‌ನಲ್ಲಿ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದು, ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಡ್ರಾಪ್ ಶೋಲ್ಡರ್ ಪ್ಯಾಟರ್ನ್ ಹೊಂದಿರುವ ಕೆಂಪು ಬಾಡಿಕಾನ್ ಡ್ರೆಸ್ ಧರಿಸಿರುವ ಸನ್ನಿ ಲುಕ್ ನೆಟ್ಟಿಗರನ್ನು ಬಾಯ್ತೆರೆದು ನೋಡುವಂತೆ ಮಾಡಿದೆ. ಟೈಟ್ ಡ್ರೆಸ್‌ನಲ್ಲಿ ಸನ್ನಿ ದೇಹದ ವಕ್ರಾಕೃತಿಗಳು ಎದ್ದುಕಾಣುತ್ತಿದ್ದು, ಪಡ್ಡೆ ಹೈಕ್ಳಿಗೆ ನಿದ್ದೆ ಗೆಡಿಸುವಂತಿವೆ.
ಲೈಟ್ ಮೇಕಪ್ ಮತ್ತು ನೀಲಿಬಣ್ಣದ ಲಿಪ್‌ಸ್ಟಿಕ್‌ನೊಂದಿಗೆ ಮಾದಕ ನೋಟ ಬೀರಿರುವ ಚೆಲುವೆ ಅಂದ ಅಮೋಘವಾಗಿದೆ. ಅಲ್ಲದೆ, ಸನ್ನಿ ಕೂದಲನ್ನು ಮೃದುವಾದ ಸುರುಳಿ ಆಕಾರದಲ್ಲಿ ವಿನ್ಯಾಸಗೊಳಿಸಿದ್ದು, ಚಿನ್ನದ ಆಭರಣಗಳಿಂದ ಅಲಂಕರಿಸಿದ್ದಾಳೆ.
ಫೋಟೋಸ್ ಶೇರ್ ಮಾಡಿರುವ ಸನ್ನಿ, 'ಇದು AI ಅಲ್ಲ, ಇದು ನಿಜ!' ಅಂತ ಶೀರ್ಷಿಕೆ ನೀಡಿದ್ದಾರೆ. ಸದ್ಯ ಸನ್ನಿ ಲಿಯೋನ್ ಫೋಟೋಸ್ ಸೋಷಿಯಲ್ ಮೀಡಿಯಲ್ ವೈರಲ್ ಆಗುತ್ತಿದ್ದು, ಹೆಚ್ಚು ಲೈಕ್ಸ್ ಪಡೆಯುತ್ತಿವೆ.
ಸನ್ನಿ ಲಿಯೋನ್ ಉಡುಗೆ ನೋಡಿ ಫ್ಯಾಷನ್ ಪ್ರಿಯರು ವಾಹ್ ಎಂದಿದ್ದಾರೆ. ಇದೇ ಸಮಯದಲ್ಲಿ ರೆಡ್ ಬಾಡಿಕಾನ್ ತೊಟ್ಟ ಸನ್ನಿ ಲಿಯೋನ್ ನೋಡಿ ಅಭಿಮಾನಿಗಳ ಮುಖವೂ ಕೆಂಪಾಗಿದೆ. ಮಾರ್ವಲೆಸ್, ಬ್ಯೂಟಿಫುಲ್, ಕಾಶ್ಮೀರಿ ಆ್ಯಪಲ್ ಎಂದೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ.
ನಟಿಯಾಗಿ ಮಾತ್ರ ಗುರುತಿಸಿಕೊಳ್ಳದ ಸನ್ನಿ ಲಿಯೋನ್, ಆಗಾಗ ತಮಗಾದಷ್ಟು ಸಾಮಾಜಿಕ ಸೇವೆಗಳಲ್ಲಿ ಕೂಡ ತೊಡಗಿಸಿಕೊಂಡು ಭಾರತೀಯರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ. ಅನಾಥ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಮೂಲಕ ತಮ್ಮ ಸಾಮಾಜಿಕ ಕಳಕಳಿಯನ್ನು ಸಹ ಸನ್ನಿ ಲಿಯೋನ್ ಜಗಜ್ಜಾಹೀರು ಮಾಡಿದ್ದಾರೆ.
ಸನ್ನಿ ಲಿಯೋನ್ ಈಗಾಗಲೇ ಕನ್ನಡದಲ್ಲಿ ಕೆಲವು ವರ್ಷಗಳ ಹಿಂದೆಯೇ 'ಲವ್ ಯು ಆಲಿಯಾ' ಹಾಗೂ ಡಿಕೆ ಸಿನಿಮಾದಲ್ಲಿ ಸ್ಪೆಷಲ್ ಹಾಡಿಗೆ ನೃತ್ಯ ಮಾಡುವ ಮೂಲಕ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.