ಬಿಗ್ ಬಾಸ್ ಚೈತ್ರಾಗೆ ಕಿಚ್ಚನ ಖಡಕ್ ಕ್ಲಾಸ್, ಕಳೆದ ಸೀಸನ್‌ ವರ್ತೂರು ಸಂತೋಷ್‌ ನೆನಪಿಸಿಕೊಂಡ ಸುದೀಪ್‌!

First Published | Nov 17, 2024, 1:07 AM IST

ಬಿಗ್ ಬಾಸ್ ಕನ್ನಡ 11ರಲ್ಲಿ ಚೈತ್ರಾ ಕುಂದಾಪುರ ಅವರು ಹೊರಗಿನ ಮಾಹಿತಿಯನ್ನು ಮನೆಯೊಳಗೆ ತಂದಿದ್ದಕ್ಕೆ ಕಿಚ್ಚ ಸುದೀಪ್ ಅವರಿಂದ ತೀವ್ರ ತರಾಟೆಗೆ ಒಳಗಾದರು. ಚೈತ್ರಾ ತಮ್ಮ ತಪ್ಪನ್ನು ಒಪ್ಪಿಕೊಳ್ಳದೆ ಸಮರ್ಥಿಸಿಕೊಳ್ಳಲು ಯತ್ನಿಸಿದರು, ಇದು ಕಿಚ್ಚನ ಕೋಪಕ್ಕೆ ಕಾರಣವಾಯಿತು.

ಬಿಗ್ ಬಾಸ್ ಕನ್ನಡ 11ರಲ್ಲಿ ಮೂರ್ಚೆ ಹೋಗಿ ಅನಾರೋಗ್ಯಕ್ಕೆ ಒಳಗಾದ ಚೈತ್ರಾ ಕುಂದಾಪುರ ಒಂದು ದಿನ ಆಸ್ಪತ್ರೆಯಲ್ಲಿದ್ದು, ಮನೆಗೆ ಬಂದಾಗ ಹೊರಗಡೆ ಯಾವ ಸ್ಪರ್ಧಿಗಳ ಬಗ್ಗೆ ಏನು ಒಪಿನಿಯನ್‌ ಇದೆ ಎಂದು ಪಂಚತಂತ್ರದ ಕಥೆ ಹೇಳುವ ಮೂಲಕ ಸ್ಪರ್ಧಿಗಳ ತಲೆಗೆ ಹುಳ ಬಿಟ್ಟಿದ್ದರು. ಇದರಲ್ಲಿ ಹನುಮಂತ ಮತ್ತು ಧನ್‌ರಾಜ್‌ ಜೋಡಿಯಾಗಿ ಇರಬೇಡಿ ಎಂದರು. ಉಗ್ರಂ ಮಂಜು ಅವರಿಗೆ ಅಜ್ಜಿ ಮತ್ತು ಕೋಳಿ ಸಾರು ಕಥೆ ಹೇಳಿದ್ರು ಅದು ಮಂಜು ಗ್ಯಾಂಗ್‌ ಕಥೆಯಾಗಿತ್ತು. ಇನ್ನು ತ್ರಿವಿಕ್ರಮ್‌ ಭವ್ಯಾ ಬಗ್ಗೆ ರಾಜನ ಬಗ್ಗೆ ಕಥೆ ಹೇಳಿದ್ರು. ಇದರಲ್ಲಿ ಶಿಶಿರ್‌ ಕೂಡ ಇದ್ದರು. ಶಿಶಿರ್‌ ಗೆ ನೀವು ಎವರೇಜ್ ಇದ್ದೀರಿ ಎಂದರು. ಅಂತು ಹೊರಗಡೆ ಹೋಗಿ ಬಂದ ಚೈತ್ರಾ ಕುಂದಾಪುರ  ಸ್ಪರ್ಧಿಗಳ ತಲೆಗೆ ಹುಳ ಬಿಟ್ಟಿದ್ದಂತೂ ಸುಳ್ಳಲ್ಲ.
 

ಇಂದಿನ ಕಿಚ್ಚನ ಪಂಚಾಯತಿಯಲ್ಲಿ ಎಪಿಸೋಡ್ ನಲ್ಲಿ  ಮುಕ್ಕಾಲು ಭಾಗ ಚೈತ್ರಾ ಅವರ ಪಂಚತಂತ್ರದ ಕಥೆಯನ್ನೇ ಕಿಚ್ಚ ಸುದೀಪ್ ಮಾತನಾಡಿದರು. ಚೈತ್ರಾ ಅವರಿಗೆ ಸರಿಯಾಗೇ ಕ್ಲಾಸ್‌ ತೆಗೆದುಕೊಂಡರು. ಹೊರಗಿನ ವಿಚಾರವನ್ನು ಮನೆಯೊಳಗೆ ತಂದ ಚೈತ್ರಾ ಮೇಲೆ ಸಖತ್ ಸಿಟ್ಟಾ ಕಿಚ್ಚ ಖಡಕ್ ಆಗಿ ಕ್ಲಾಸ್ ತೆಗೆದುಕೊಂಡರು. ಸುದೀಪ್‌ ಅವರು ಅದೆಷ್ಟೇ ಅರ್ಥ ಮಾಡಿಸಲು ಪ್ರಯತ್ನಪಟ್ಟರು ಚೈತ್ರಾ ಎದುರುತ್ತರ ಕೊಡುವುದನ್ನು ನಿಲ್ಲಿಸಲೇ ಇಲ್ಲ. 
 

Tap to resize

ಪ್ರತಿ ಶನಿವಾರ ಕಿಚ್ಚನ ಪಂಚಾಯಿತಿಯಲ್ಲಿ ಒಂದಷ್ಟು ಜನರಿಗೆ ಕ್ಲಾಸ್ ತೆಗೆದುಕೊಳ್ಳುವುದು, ತಪ್ಪನ್ನು ಅರ್ಥ ಮಾಡಿಸಿ ಹೇಳುವುದು ಸರ್ವೇ ಸಾಮಾನ್ಯ. ಆದರೆ ಇಂದಿನ ಎಪಿಸೋಡ್‌ ನಲ್ಲಿ ಚೈತ್ರಾ ಕುಂದಾಪುರಗೆ ಕಿಚ್ಚ ತೆಗೆದುಕೊಂಡ ಕ್ಲಾಸ್‌ ಲಿಮಿಟ್ ದಾಟಿ ಹೋಗಿದೆ. ಯಾಕೆಂದರೆ ನಿಯಮಗಳನ್ನು ಮುರಿದ ಚೈತ್ರಾ ತನ್ನ ತಪ್ಪುಗಳನ್ನು ಒಪ್ಪಿಕೊಳ್ಳಲೇ ಇಲ್ಲ. ಮಾತ್ರವಲ್ಲದೆ ಸಮಜಾಯಿಷಿಕೆ ನೀಡಲು ಪ್ರಯತ್ನಿಸಿದ್ದಾರೆ.

ಮನೆಯ ಪ್ರತಿಯೊಬ್ಬರ ಬಳಿ ಕಿಚ್ಚ ಈ ಬಗ್ಗೆ ಕ್ಲಾರಿಟಿ ತೆಗೆದುಕೊಳ್ಳುವಾಗ ಚೈತ್ರಾ ಕುಂದಾಪುರ ಮಧ್ಯೆ ಬಾಯಿ ಹಾಕಿ ನಾನು ಹಾಗೆ ಹೇಳಿಲ್ಲ ಎನ್ನುತ್ತಿದ್ದರು. ಅದಕ್ಕೆ ಕಿಚ್ಚ ಶ್..... ಚೈತ್ರಾ.... ಶ್.... ಎಂದರು. ಆದರೆ ಮತ್ತೆ ಮತ್ತೆ ಚೈತ್ರಾ ತನ್ನ ಮಾತನ್ನು ಅಲ್ಲಗಳೆಯಲು ಮುಂದಾಗ  ಕಿಚ್ಚ ವರ್ತೂರು ಅನ್ನೋರು ಕಳೆದ ಸೀಸನ್‌ ನಲ್ಲಿ 1 ವಾರ ಹೊರಗಡೆ ಹೋಗ್ತಾರೆ. ಜೈಲಿಗೆ ಹೋಗ್ತಾರೆ ಅವರು. ಮತ್ತೆ ವಾಪಾಸ್ ಮನೆಗೆ ಬರ್ತಾರೆ. ಬಂದ ಮೇಲೆ ಒಬ್ಬರೊಟ್ಟಿಗೆ ಒಂದು ಮಾತೂ ಈ ಬಗ್ಗೆ ಆಡಿಲ್ಲ. ಇದಕ್ಕೆ ಹೇಳುವುದು ಸಿಂಪಲ್‌  ಪ್ರೋಟೋ ಕಾಲ್‌,  ಬಾರ್ಡರ್‌ ಲೈನ್ ಪ್ರೋಟೋ ಕಾಲ್‌ ಅಂತ ವರ್ತೂರ್ ಸಂತೋಷ್ ಅವರ ಪ್ರಾಮಾಣಿಕತೆಯನ್ನು ನೆನಪಿಸಿಕೊಂಡರು.

BBK11

ಇನ್ನು ಸುದೀಪ್‌ ಮಾತನಾಡಿ ನಿಲ್ಲಿಸುವ ಮುನ್ನ ಚೈತ್ರಾ ಕೈ ಎತ್ತಿದರು. ಇದಕ್ಕೆ ಅಲ್ಲೇ ಕಿಚ್ಚ ಉಗಿದರು. ಬಳಿಕ ಮಾತನಾಡಿ ಎಂದು ಸಿಟ್ಟಿನಿಂದಲೇ ಹೇಳಿದರು. ಆದರೆ ಆಗಲೂ ಅದೇ ರಾಗ ಅದೇ ಹಾಡು ಅನ್ನುವಂತೆ ಚೈತ್ರಾ ಮಾತನಾಡಿದಾಗ ನನ್ನ ಮಾತಿಗೆ ಬೆಲೆ ಇಲ್ವಾ ಅಂತ ಕೇಳಿದರು. ಹೇಗೂ ಮನೆಯವರಿಗೆ ಹೇಳಿದ್ದೀರಿ. ಕಥೆ ಮೂಲಕ ಯಾಕೆ ಹೇಳಬೇಕು ಅದೇನು? ಡಾಕ್ಟರ್ ನಿಮಗೆ ಕಥೆ ಹೇಳಿದ್ರಾ? ನೀವು ಕಥೆ ಮೂಲಕ, ಮೈಕ್ ಹಿಡಿದುಕೊಂಡು ಮನೆಯವರಿಗೆ ಹೇಳಿದರ ಉದ್ದೇಶವೇನು ಚೈತ್ರಾ ಅವರೇ? ದಯವಿಟ್ಟು ಹೇಳಿ ಇಲ್ಲವಾದರೆ ನಾನು ಈ ವೇದಿಕೆಯಲ್ಲಿ ನಡೆದಿರುವುದಕ್ಕೆ ನಿಮ್ಮ ಕ್ಷಮೆ ಕೇಳಬೇಕಾ? ಕೇಳ್ತಿನಿ ನನ್ನ ಕಡೆಯಿಂದ ಆದ ತಪ್ಪಾದರೆ ಇಷ್ಟು ಕೋಟಿ ಜನಗಳ ಮುಂದೆ ಕೇಳ್ತೇನೆ. ನಾನು ಅದಕ್ಕೆ ಹಿಂಜರಿಯುವುದಿಲ್ಲ. ನನಗೆ ಅರ್ಥ ಆಗಬೇಕು ನಾನೆಲ್ಲಿ ತಪ್ಪು ಮಾಡುತ್ತಿದ್ದೇನೆಂದು ಅಂತ ಕಿಚ್ಚ ಹೇಳಿದರು.

ಅದಕ್ಕೆ ಚೈತ್ರಾ, ನಾನು ಕ್ಷಮೆ ನಿರೀಕ್ಷೆ ಮಾಡುವ ಉದ್ದೇಶದಿಂದ ಹೇಳಿಲ್ಲ ಸರ್ ಎಂದರು. ಅದಕ್ಕೆ ಕಿಚ್ಚ ನಾನು ಯಾವತ್ತೂ ಕ್ಷಮೆ ಯಾರೂ ನಿರೀಕ್ಷೆ ಮಾಡಲ್ಲ. ನನ್ನ ಆತ್ಮಕ್ಕೆ ನಾನು ಕರೆಕ್ಟ್ ಆಗಿ ಇರುವವನು ಎಂದರು. ಇಷ್ಟೇಲ್ಲ ಆದಾಗ ಕಿಚ್ಚ ಮನೆಯವರ ಬಳಿ ಒಪಿನಿಯನ್‌ ಕೇಳಿದರು. ಮತ್ತೆ ಚೈತ್ರಾ ಕೈ ಎತ್ತದೆ ಮಧ್ಯದಲ್ಲಿ ಮಾತನಾಡಿದರು. ಇದು ಕಿಚ್ಚನಿಗೆ ಸಿಟ್ಟು ತರಿಸಿ ನಾನು ಮೋಕ್ಷಿತಾ ಬಳಿ ಮಾತನಾಡುತ್ತಿದ್ದೇನೆ. ಮಧ್ಯದಲ್ಲಿ ಮಾತನಾಡಿದ್ರಾ? ಹಾಗಾದರೆ ಕೈ ಎತ್ತಬೇಕು ಎಂದು ನಾನು ಹೇಳಿದ್ದು ಬುಲ್‌ಶಿಟ್‌, ಟೋಟಲ್ ಡಿಸ್ ರೆಸ್ಪೆಕ್ಟ್, ಕೈ ಎತ್ತಿ ಎಂದು ಏರು ಧ್ವನಿಯಲ್ಲಿ ಚೈತ್ರಾಗೆ ಹೇಳಿದರು. ಒಂದೆರಡು ನಿಮಿಷ ಇಡೀ ಶೂಟಿಂಗ್ ಸೆಟ್‌ ಮತ್ತು ಬಿಗ್‌ಬಾಸ್‌ ಮನೆ ಮೌನ ತಾಳಿತು. 

ಏನ್ರಿ ಗೊತ್ತು ನಿಮಗೆ ನನ್ನ ಬಗ್ಗೆ? ಮೊದಲನೆಯದಾಗಿ ಮನುಷತ್ವ ಮಾನವೀಯತೆ ಹೃದಯ ಈ ಮೂರರ ಮಧ್ಯೆ ಬಾಳಿ ಬದುಕುತ್ತಿರುವವನು ನಾನು. ದಯಮಾಡಿ ನಾನೊಬ್ಬ ಹ್ಯೂಮನ್‌ ಆಗಿರಲು ಬಿಡಿ. ನಿಮಗೆ ನಾನು ಪ್ರತಿಯೊಬ್ಬರಿಗೂ ಮರ್ಯಾದೆ ಕೊಟ್ಟು ಪ್ರೀತಿಯಿಂದ ಗೌರವದಿಂದ ಮಾತನಾಡುತ್ತಿದ್ದೇನೆ ಎಂದಾಗ ಪ್ಲೀಸ್‌ ನನ್ನನ್ನು ಡಿಸ್‌ ರೆಸ್ಪೆಕ್ಟ್ ಮಾಡಬೇಡಿ. ಯಾಕೆಂದರೆ ಪ್ರಪಂಚದಲ್ಲಿ, "ಸಮಾಜದಲ್ಲಿ ನಾನು ಡಿಮ್ಯಾಂಡ್‌ ಮಾಡಿ ಸಂಪಾದಿಸಿರುವ ಗೌರವ ಮರ್ಯಾದೆ ಅಲ್ಲ. ಕಮಾಂಡ್‌ ಮಾಡಿ ಸಂಪಾದಿಸಿರೋದು". ಅದನ್ನು ಹಾಳು ಮಾಡಲು ಯಾರಿಗೂ ಅಧಿಕಾರ ಇಲ್ಲ. ಬೇಕಾದ್ರೆ ಬಂದು ಹಂಚಿಕೊಳ್ಳಿ. 

ನಾನು ನಿಮ್ಮಲ್ಲಿ ಮೊದಲೇ ಹೇಳಿದ್ದೆ ಅಲ್ವಾ ಕೈ ಎತ್ತಿ ಅಂತ. ಮತ್ಯಾಕೆ? ಚೈತ್ರಾ ಈ ವೇದಿಕೆ ಮೇಲೆ 10 ಸೆಕೆಂಡ್‌ ಹಿಂದೆ ನಾನೇನು ಧ್ವನಿ ಏರಿಸಿ ಮಾತನಾಡಿದೆ. ನಾನು ಅದಕ್ಕೆ ಕ್ಷಮೆ ಕೇಳುತ್ತಿದ್ದೇನೆ. ನಾನು ಯಾರತ್ರನೂ ಈ ಥರ ಮಾತನಾಡಲು ಇಷ್ಟಪಡೋದಿಲ್ಲಮ್ಮ. ಆ ಜಾಗಕ್ಕೆ ಹೋಗೋದು ಬೇಡ. ಸಹಾಯ ಮಾಡಿ ಸಹಾಯ ಮಾಡ್ತೇನೆ ಎಂದರು.

ಮತ್ತೆ ಮಾತನಾಡಿದ ಚೈತ್ರಾ ಅದೇ ಹಳೆಯ ವಿಷ್ಯ ತೆಗೆದರು. ಅದಕ್ಕೆ ಕಿಚ್ಚ ಚೈತ್ರಾ ನಾನು 5 ನಿಮಿಷಗಳ ಕಾಲ ನನ್ನ ವೈಯಕ್ತಿಕ ಏನೋ ಮಾತನಾಡಿದೆ. ಆದರೆ ನಿಮ್ಮ ತಲೆ ಇನ್ನೂ ಅಲ್ಲೇ ಇದೆ ನನ್ನ ಕ್ಷಮೆಗೆ ನೀವು ಸ್ಪಂದಿಸಲಿಲ್ಲ. ಇವತ್ತಿನಿಂದ ಎಷ್ಟು ಮಾತನಾಡಬೇಕೋ ಅಷ್ಟೇ ಮಾತನಾಡ್ತೇನೆ ನಿಮ್ಮತ್ರ. ಇದು ತಲೇಲಿ ಇಟ್ಟುಕೊಳ್ಳಿ. ನಾನು ಸಾರಿ ಕೇಳಿದಾಗ ನನಗೆ ನೀವು ನನ್ನ ಜೊತೆಗೆ ಇಲ್ಲ. ಅವರ ಪದ ಬಳಕೆ ಬಗ್ಗೆಯೇ ನಿಮ್ಮ ಯೋಚನೆ ಇದೆ. ನನ್ನ ಸಾರಿ ಬಗ್ಗೆ ನಿಮ್ಮ ಗಮನ ಇಲ್ಲ. ನಿಮ್ಮ ಬಗ್ಗೆ ನನಗೆ ಬೇಸರ ಆಗುತ್ತಿದೆ. ಚೆನ್ನಾಗಿ ಬೆಳೆಯಿರಿ ಚೈತ್ರಾ ಅದುವೇ ನಿಮಗೆ ಒಳ್ಳೆಯದು. ಮನೆಯಲ್ಲಿ ಎಷ್ಟು ಕಷ್ಟಪಟ್ಟು ಬೆಳೆದು ಬಂದೆ ಎನ್ನುವುದು ಒಂದು ಕಥೆ ಆಗಬೇಕೆ ಹೊರತು. ಇದು ಬಾಣ ಆಗಬಾರದು. 
 

ಇನ್ನು ಮನೆಯಲ್ಲಿ ಎಲ್ಲರ ಅಭಿಪ್ರಾಯ ಕೇಳಿದಾಗ ತ್ರಿವಿಕ್ರಮ್ ಅವರಿಗೆ ಹೇಗೆ ಬೇಕೋ ಹಾಗೆ ನಂಬಿಕೆ ಇರೋರ ಹತ್ರ ನಂಬುವವರತ್ರ ಅವರು ಆಟ ಆಡಿದ್ರು ಅಂದರು. ಹನುಮಂತ ಮಾತ್ರ ನನಗೆ ಏನೂ ಅರ್ಥ ಆಗಿಲ್ಲಾರಿ ಅವರು ಹುಳ ಬಿಟ್ರು ರೀ, ಇವರೆಲ್ಲ ಹುಳ ಬಿಡಿಸ್‌ಕೊಂಡ್ರು ರೀ, ನಾನು ಹುಳ ಬಿಡಿಸ್‌ ಕೊಳ್ಳಿಲ್ಲ ರೀ ನನಗೇನು ಇಲ್ಲ ಸರ್‌ ಎಂದರು. 

ಬಳಿಕ ಕಿಚ್ಚ ಮುಂದಕ್ಕೆ ಹೋಗೋಣ ಚೈತ್ರಾ ಎಂದಾಗ ಹೇಳಿದ ಮಾತಿಗೆ ಕ್ಷಮೆ ಕೇಳ್ತಿನಿ ಸರ್ ಎಂದರು, ಇದಕ್ಕೆ ಕಿಚ್ಚ ನಾನ್ಯಾಕಮ್ಮ ಕ್ಷಮೆ ಕೇಳ್ತೀರಿ. ನಾನು ಕ್ಷಮೆ ಕೇಳಿದಾಗ ನೀವು ಸ್ಪಂದಿಸಿಲ್ಲ. ನಿಮ್ಮ ಕ್ಷಮೆಗೆ ನಾನ್ಯಾಕೆ ಸ್ಪಂದಿಸಲಿ. ಅಯ್ಯೋ  ತಲೆ ಕೆಟ್   ಮಗ ನಾನು. ಹುಚ್ಚ ಇಂದ ಕರಿಯರ್ ಶುರು ಮಾಡಿದವನು ನಾನು. 28 ವರ್ಷ ಹುಚ್ಚ ಆಗಿ ಬಾಳ್ ಬದುಕಿದೀನಿ. ಈಗ್ಯಾಕೆ ಸರಿ ಹೋಗ್ತೀನಿ,  ನಾನು ಕ್ಷಮೆ ಕೇಳಿದಾಗ ಸ್ಪಂದಿಸಿದರೆ ಒಳ್ಳೆ ಮನುಷ್ಯ. ಇಲ್ಲ ಎಂದರೆ ನನ್ನಂತ ತಲೆಕೆಟ್ಟವರು ಯಾರೂ ಇಲ್ಲ’ ನಂಗೆ ಬೇಡ ಸಿಂಪಲ್‌ ಎಂದಿದ್ದಾರೆ ಸುದೀಪ್.

Latest Videos

click me!