ನಿಮ್ಮನ್ನ ನೀವು ಸ್ಪೈಡರ್ ವುಮನ್ ಅಂದುಕೊಂಡಿದ್ದೀರಾ?: ಶ್ರೀಲೀಲಾ ಗೋಡೆ ಹತ್ತುವ ಪೋಸ್ ನೋಡಿ ಕಾಲೆಳೆದ ಫ್ಯಾನ್ಸ್‌!

First Published Feb 18, 2024, 1:00 AM IST

ದಕ್ಷಿಣದ ಜನಪ್ರಿಯ ನಟಿ ಶ್ರೀಲೀಲಾ ಅಂದಕ್ಕೆ ಮರುಳಾಗದವರಿಲ್ಲ. ಕನ್ನಡದ 'ಕಿಸ್' ಸಿನಿಮಾ ಖ್ಯಾತಿಯ ಶ್ರೀಲೀಲಾ ಟಾಲಿವುಡ್‌ನ ಹಾಟ್ ಬೆಡಗಿಯರಲ್ಲಿ ಒಬ್ಬರು. ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಶ್ರೀಲೀಲಾ ಇದೀಗ ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ.

ಕನ್ನಡದ 'ಕಿಸ್' ಸಿನಿಮಾದಿಂದ ಸಿನಿ ಜರ್ನಿ ಆರಂಭಿಸಿದ ನಟಿ ಶ್ರೀಲೀಲಾ ಈಗ ತೆಲುಗುಪಿಲ್ಲ ಆಗಿ ಬದಲಾಗಿದ್ದಾರೆ. ಸಾಲು ಸಾಲು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ನಟಿ ಶ್ರೀಲೀಲಾ ಅವರು ಕನ್ನಡತಿಯಾಗಿದ್ದರೂ ಕೂಡಾ ಈಗ ಟಾಲಿವುಡ್ ನಟಿ ಎಂದೇ ಗುರುತಿಸಿಕೊಂಡಿದ್ದಾರೆ. ನಟಿ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದು ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ನಟಿ ಇತ್ತೀಚೆಗೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ಆಕರ್ಷಕವಾದ ಬ್ರಾಡ್ ನೆಕ್​ಸ್ಟೈಲ್​ ಇರುವಂತಹ ಕೆಂಬಣ್ಣದ ಸಲ್ವಾರ್ ಸೂಟ್​​ ಧರಿಸಿಕೊಂಡು ಶ್ರೀಲೀಲಾ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಇದರಲ್ಲಿ ಅವರು ಹೆಚ್ಚು ಆಭರಣವನ್ನು ಧರಿಸಿರಲಿಲ್ಲ. ಆದರೂ ಅವರು ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ.

ಹೇರ್​ಸ್ಟೈಲ್ ವಿಶೇಷವಾಗಿ ಮಾಡಿಸದಿದ್ದರೂ ಫ್ರೀ ಹೇರ್ ಬಿಟ್ಟುಕೊಂಡು ನೆಕ್ ಟೈಟ್ ನೆಕ್ಲೆಸ್ ಧರಿಸಿಕೊಂಡು ನಟಿ ಕ್ಯಾಮೆರಾಗೆ ಸಖತ್ತಾಗಿ ಸ್ಮೈಲ್ ಕೊಟ್ಟಿದ್ದಾರೆ. ಫೊಟೋಗಳು ಅದ್ಭುತವಾಗಿ ಮೂಡಿಬಂದರೂ ನೆಟ್ಟಿಗರು ಶ್ರೀಲೀಲಾರ ಕಾಲೆಳೆದಿದ್ದಾರೆ.

ಶ್ರೀಲೀಲಾ ಗೋಡೆಗೆ ಒರಗಿ ಪೋಸ್ ಕೊಟ್ಟಿದ್ದು, ಇದನ್ನು ನೋಡಿದ ನೆಟ್ಟಿಗರು ಇದೇನು ನೀವು ಗೋಡೆ ಹತ್ತುತ್ತಿದ್ದೀರಾ, ನಿಮ್ಮನ್ನ ನೀವು ಸ್ಪೈಡರ್ ವುಮನ್ ಅಂದುಕೊಂಡಿದ್ದೀರಾ ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.

ಇತ್ತೀಚೆಗೆ ನಟಿ ಶ್ರೀಲೀಲಾ ನಟ ಮಹೇಶ್ ಬಾಬು ಜೊತೆಗೆ ತೆರೆ ಹಂಚಿಕೊಂಡಿದ್ದರು. ಗುಂಟೂರು ಖಾರಂ ಸಿನಿಮಾದಲ್ಲಿನ ಅವರ ಅಭಿನಯ ಮತ್ತು ಡ್ಯಾನ್ಸ್ ನೋಡಿ ಅಭಿಮಾನಿಗಳಂತೂ ಶಾಕ್ ಆಗಿದ್ದರು. ಮಹೇಶ್ ಬಾಬುಗೆ ಟಕ್ಕರ್ ಕೊಡುವಂತೆ ಶ್ರೀಲೀಲಾ ಡ್ಯಾನ್ಸ್ ಮಾಡಿದ್ದರು.

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ನಟಿ ಶ್ರೀಲೀಲಾ 'ಉಸ್ತಾದ್ ಭಗತ್ ಸಿಂಗ್' ಚಿತ್ರದಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ. ಅಲ್ಲದೇ ಡೇಟ್ಸ್ ಕಾರಣದಿಂದಾಗಿ ಹಲವು ಸಿನಿಮಾ ಆಫರ್‌ಗಳನ್ನು ಬಿಟ್ಟಿದ್ದಾರೆ. ಅದರಲ್ಲಿ ವಿಜಯ್ ದೇವರಕೊಂಡ ಅವರ ಸಿನಿಮಾ ಕೂಡ ಒಂದು.

click me!