ಎಣ್ಣೆ ಹೊಡೆದ್ರೆ ನಶೆ, ಶ್ರದ್ಧಾ ನೋಡ್ತಿದ್ರೆನೇ ಸುರ್​ ಅಂತ ಏರುತ್ತೆ ಕಿಕ್ಕು: ಕೋಟಿಗೊಬ್ಬ-3 ಚೆಲುವೆ ಸಖತ್​ ಹಾಟ್​ ಮಗಾ!

First Published Nov 27, 2023, 2:30 AM IST

ಬಹುಭಾಷಾ ನಟಿ ಶ್ರದ್ಧಾ ದಾಸ್‌ ಕನ್ನಡದಲ್ಲಿ ಬರೀ ಮೂರ್ನಾಲ್ಕು ಸಿನಿಮಾಗಳನ್ನು ಮಾಡಿದ್ದರೂ ಆಕೆ ಕನ್ನಡ ಸಿನಿ ರಸಿಕರಿಗೆ ಬಹಳ ಹತ್ತಿರವಾಗಿದ್ದಾರೆ. ನಟಿ ಶ್ರದ್ಧಾ ದಾಸ್‌ ಸೋಷಿಯಲ್‌ ಮಿಡಿಯಾದಲ್ಲಿ ಸಕ್ರಿಯವಾಗಿರುತ್ತಾರೆ. ಹಾಗೆಯೇ ಇದೀಗ ಸಖತ್‌ ಬೋಲ್ಡ್‌ ಪೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ.

ಶ್ರದ್ಧಾ ದಾಸ್ ಸೌತ್ ಫಿಲ್ಮ್ ಇಂಡಸ್ಟ್ರಿಯಲ್ಲಿ ಪ್ರಸಿದ್ಧ ನಟಿ. ಅವರು ತಮಿಳು-ತೆಲುಗು ಹೊರತುಪಡಿಸಿ, ಇತರ ಭಾಷೆಗಳ ಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ. ನಟಿ ತನ್ನ ಸ್ಟೈಲಿಶ್ ಮತ್ತು ಗ್ಲಾಮರಸ್ ಲುಕ್‌ಗೆ ಹೆಸರುವಾಸಿಯಾಗಿದ್ದಾರೆ. 

ಕೋಟಿಗೊಬ್ಬ 2 ಸಿನಿಮಾದ ಮೂಲಕ ನಟಿ ಶ್ರದ್ಧಾ ದಾಸ್‌ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ಸದ್ಯ ತೆಲುಗು ಸಿನಿರಂಗದಲ್ಲಿ ಈ ಸುಂದರಿಗೆ ಸಿನಿಮಾ ಅವಕಾಶಗಳು ಕಡಿಮೆಯಾಗಿದ್ದರೂ ಸಹ ಅವರ ಗ್ಲಾಮರ್ ಕ್ರೇಜ್‌ ಮಾತ್ರ ಕೊಂಚವೂ ತಗ್ಗಿಲ್ಲ. ಸದ್ಯ ಶ್ರದ್ಧಾ ಹಾಟ್ ಸ್ಟೈಲಿಶ್ ಫೋಟೋಶೂಟ್ ಎಲ್ಲರ ಗಮನ ಸೆಳೆಯುತ್ತಿದೆ.

Latest Videos


ಹೌದು! ಶ್ರದ್ಧಾ ದಾಸ್ ಟೈಟ್ ರೆಡ್‌ ಡ್ರೆಸ್‌ನಲ್ಲಿ ಕನ್ನಡಿ ಮುಂದೆ ನಿಂತು ವಿವಿಧ ಭಂಗಿಗಳಲ್ಲಿ ಸಖತ್ ಹಾಟ್ ಆಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶ್ರದ್ಧಾ ಸೌಂದರ್ಯ ನೋಡಿದ ಪಡ್ಡೆ ಹುಡುಗರು ಕಣ್ಣು ಪಿಳುಕಿಸದೆ ಅವರನ್ನೇ ನೋಡುತ್ತಿದ್ದಾರೆ. ಅಲ್ಲದೆ, ಕೆಲ ನೆಟ್ಟಿಗರು ಬ್ಯೂಟಿಫುಲ್, ಹಾಟ್ ಬ್ಯೂಟಿ, ದಿನೇ ದಿನೇ ನೀವು ಹಾಟ್ ಆಗುತ್ತಿದ್ದೀರಾ, ಚಂದ್ರನಿಗೂ ಬಿಸಿ ಏರಿಸುವಂತಿದೆ ನಿನ್ನ ಸೌಂದರ್ಯ, ಎಣ್ಣೆ ಹೊಡೆದ್ರೆ ನಶೆ ನಿಮ್ಮನ್ನ ನೋಡ್ತಿದ್ರೆನೇ ನಮಗೆ ನಶೆ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ.

ಮುಂಬೈ ಮೂಲದ ನಟಿ ಶ್ರದ್ಧಾ ದಾಸ್ ಸಿನಿಮಾಗಳು, ಶಾರ್ಟ್ ಮೂವಿಗಳು ಹಾಗೂ ವೆಬ್ ಸೀರಿಸ್ ಗಳ ಮೂಲಕ ಸಾಕಷ್ಟು ಬ್ಯುಸಿ ಇದ್ದಾರೆ. ನಟನೆ ಮೂಲಕ ಹೆಚ್ಚು ಗಮನ ಸೆಳೆಯದಿದ್ದರೂ, ತಮ್ಮ ಲುಕ್​ನಿಂದ ಸಾಕಷ್ಟು ಅಭಿಮಾನಿಗಳನ್ನು ಶ್ರದ್ಧಾ ದಾಸ್​ ಹೊಂದಿದ್ದಾರೆ.

ಸ್ಯಾಂಡಲ್‌ವುಡ್‌ನ ಸೂಪರ್​ ಹಿಟ್​ ಆದ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾದಲ್ಲಿ ನಟಿಸಿ ಶ್ರದ್ಧಾ ದಾಸ್​​ ಎಲ್ಲರ ಗಮನ ಸೆಳೆದಿದ್ದರು. ಚಿತ್ರದಲ್ಲಿ ಪೊಲೀಸ್​ ಆಫೀಸರ್​​ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಶ್ರದ್ಧಾ ದಾಸ್ ಸಿನಿಮಾಗಳ ವಿಷಯದಲ್ಲಿ ಸ್ಟಾರ್ ಸ್ಟೇಟಸ್ ಪಡೆಯದಿದ್ದರೂ ಪಡ್ಡೆಹೈಕ್ಳನ್ನು ತನ್ನತ್ತ ಸೆಳೆದಿದ್ದಾರೆ. ತಮ್ಮ ಮಾದಕ ಮೈಮಾಟದಿಂದಲೇ ಅವರು ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ.

ಈ ಮುಂಬೈ ಬೆಡಗಿ ಸಿಕ್ಕ ಅವಕಾಶಗಳಿಗೆ ಸಂಪೂರ್ಣ ನ್ಯಾಯ ಒದಗಿಸುತ್ತಾರೆ. ಗುಂಟೂರು ಟಾಕೀಸ್​ ಸಿನಿಮಾದಲ್ಲಿ ಸಖತ್​ ಬೋಲ್ಡ್​ ಪಾತ್ರದಲ್ಲಿ ಶ್ರದ್ಧಾ ದಾಸ್​ ನಟಿಸಿದ್ದರು. ಇದಾದ ಬಳಿಕ ಇವರ ಡಿಮ್ಯಾಂಡ್​ ಹೆಚ್ಚಿತ್ತು.

click me!