ನನ್ನ ಅಕ್ಕನಿಗೆ ಬೆಂಕಿ ಹಚ್ಚಿ ಕೊಲ್ಲಲು ನೋಡಿದ್ರು: ಜಯಪ್ರದಾ ಕುಟುಂಬದ ಶಾಕಿಂಗ್ ವಿಷ್ಯ ಬಿಚ್ಚಿಟ್ಟ ನಟಿ ವಿಜಯಲಕ್ಷ್ಮಿ

By Suchethana D  |  First Published Nov 17, 2024, 2:32 PM IST

ನಟಿ ವಿಜಯಲಕ್ಷ್ಮಿ ಅವರು ನಟಿ ಜಯಪ್ರದಾ ಮತ್ತು ಅವರ ಕುಟುಂಬದವರ ದೌರ್ಜನ್ಯದ ಬಗ್ಗೆ ಶಾಕಿಂಗ್​ ವಿಷಯಗಳನ್ನು ರಿವೀಲ್​ ಮಾಡಿದ್ದಾರೆ.
 


ತಮ್ಮ ಸಹಜ ಸೌಂದರ್ಯದಿಂದಲೇ ಕನ್ನಡ ಸೇರಿದಂತೆ ಹಲವು ಚಿತ್ರರಂಗದಲ್ಲಿ ಗುರುತಿಸಿಕೊಂಡವರು ನಟಿ ವಿಜಯಲಕ್ಷ್ಮಿ. ಆದರೆ ಇತ್ತೀಚಿನ ದಿನಗಳಲ್ಲಿ ಅವರ ಬದುಕು ಅಲ್ಲೋಲ ಕಲ್ಲೋಲವಾಗಿದೆ. ಈಗ ಸಿನಿಮಾಗಳಲ್ಲಿ ಅವಕಾಶ ಸಿಗುತ್ತಿಲ್ಲವಾದರೂ, ಇವರ ಬದುಕಿನಲ್ಲಿ ಬಂದಿರುವ ಬಿರುಗಾಳಿಯಿಂದಲೇ ಸುದ್ದಿಯಾಗುತ್ತಿದ್ದಾರೆ. ಒಂದು ಕಾಲದಲ್ಲಿ ರಾಣಿಯಂತೆ ಮೆರೆಯುತ್ತಿದ್ದ ನಟಿ ವಿಜಯಲಕ್ಷ್ಮಿ ಅವರಿಗೆ ಸದ್ಯ ಯಾವುದೇ ಚಾನ್ಸ್​ ಸಿಗುತ್ತಿಲ್ಲ.  ತಮಿಳು ಚಿತ್ರರಂಗಕ್ಕೆ ಅದಾಗಲೇ ಗುಡ್ ಬೈ ಹೇಳಿ ಬಂದಿದ್ದಾರೆ. ಇದರ ನಡುವೆಯೇ ತಮ್ಮ ಬದುಕು ಹಾಗೂ ಅಕ್ಕನ ಬದುಕಿನ ಬಗ್ಗೆ ಹಲವಾರು ವಿಡಿಯೋ ರಿಲೀಸ್​ ಮಾಡುತ್ತಲೇ ಕಳೆದೆರಡು ವರ್ಷಗಳಿಂದ ಭಾರಿ ಸದ್ದು ಮಾಡುತ್ತಿದ್ದಾರೆ.

 ಇದೀಗ ಅವರು ರಾಜೇಶ್​ ಗೌಡ ಅವರ ಯೂಟ್ಯೂಬ್​ ಚಾನೆಲ್​ನಲ್ಲಿ ತಮ್ಮ ಬದುಕಿನ ಹಲವು ದುರಂತಗಳ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ಅಕ್ಕ ಉಷಾ ಅವರ ಬಗ್ಗೆ ನೋವು ತೋಡಿಕೊಂಡಿದ್ದಾರೆ.  ವಿಜಯಲಕ್ಷ್ಮಿ ಸಹೋದರಿ ಉಷಾ ಮದುವೆ ಆಗಿರುವುದು ನಟಿ ಜಯಪ್ರದ ಸಹೋದರ ರಾಜ ಬಾಬು ಅವರನ್ನು. ಆದರೆ ಅವರ ಅಕ್ಕನ ಸಂಸಾರ ಕೂಡ ಸುಖವಾಗಿಲ್ಲ.  ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಗಂಡನ ಮನೆಯಿಂದ ಹೊರಕ್ಕೆ ಬಂದಿದ್ದಾರೆ. ಈ ಕುರಿತು ವಿಸ್ತಾರವಾಗಿ ರಾಜೇಶ್​ ಗೌಡ ಚಾನೆಲ್​ನಲ್ಲಿ ನಟಿ ಈಗ ಹೇಳಿಕೊಂಡಿದ್ದಾರೆ. ಜಯಪ್ರದಾ ಮತ್ತು ಅವರ ಕುಟುಂಬಸ್ಥರು ನೀಡಿರುವ ಕಿರುಕುಳಗಳ ಬಗ್ಗೆ ಮಾತನಾಡಿದ್ದಾರೆ.

Tap to resize

Latest Videos

undefined

ಅಪ್ಪಾಜಿಯನ್ನು ನಾನು ಎಂದಿಗೂ ಅನುಕರಿಸಲ್ಲ... ಆದರೆ... ಶಿವರಾಜ್​ಕುಮಾರ್​ ಓಪನ್​ ಮಾತು

ಅವರ ಮಾತಿನಲ್ಲೇ ಕೇಳುವುದಾದರೆ: ಹಬ್ಬ ಶೂಟಿಂಗ್​ ಸಮಯದಲ್ಲಿ ನನಗೂ, ಜಯಪ್ರದಾ ಅವರಿಗೂ ಫ್ರೆಂಡ್​ಷಿಪ್​ ಆಯಿತು. ಆ ಸಮಯದಲ್ಲಿ ಜಯಪ್ರದಾ ಅವರು ನನ್ನ ಅಣ್ಣನಿಗೆ ಇನ್ನೂ ಮದ್ವೆಯಾಗಿಲ್ಲ, ಅಕ್ಕನ ಕೊಡಬಹುದಾ ಎಂದು ಕೇಳಿದ್ರು. ವಿಷ್ಣು ಸರ್​ ಅವರಿಗೂ ಈ ವಿಷಯ ತಿಳಿಯಿತು. ಅವರು ಹುಡುಗಿ ತುಂಬಾ ಒಳ್ಳೆಯವರು ಎಂದು ಹೇಳಿದ್ರು. ಅಪ್ಪನ ಬಳಿ ಮಾತನಾಡಿ ಎಂದೆ. ಜಯಪ್ರದಾ ಅವರು ಬಂದು ಮಾತನಾಡಿದರು. ಅಪ್ಪ ಓಕೆ ಅಂದ್ರು. ನಮ್ಮಿಬ್ಬರದ್ದೂ ಜಾತಿ ಬೇರೆಯಾಗಿತ್ತು. ಆದರೂ ಪರವಾಗಿಲ್ಲ ಎಂದು ಒಪ್ಪಿಕೊಂಡರು. ತುಂಬಾ ಖರ್ಚು ಮಾಡಿ, ಅವರು ಹೇಳಿದಂತೆ ಮದುವೆಯನ್ನೂ ಗ್ರ್ಯಾಂಡ್​ ಆಗಿಯೇ ಮಾಡಿಕೊಟ್ವಿ. ಚೆನ್ನೈನಲ್ಲಿನಲ್ಲಿ ಅಕ್ಕ ಇದ್ರು. ಮೊದಲಿಗೆ ಎಲ್ಲವೂ ಚೆನ್ನಾಗಿಯೇ ಇತ್ತು. ಆಮೇಲೆ ಏನಾಯ್ತೋ ಗೊತ್ತಿಲ್ಲ. ಜಯಪ್ರದಾ ಮತ್ತು ಅವರ ಕುಟುಂಬದವರು ಗಲಾಟೆ ಶುರು ಮಾಡಿದ್ರು. ಭಾವ ಕುಡಿದು ತುಂಬಾ ಅಕ್ಕನ ಮೇಲೆ ಟಾರ್ಚರ್​ ಮಾಡಿದ್ರು. ಸಾಯಿಸಲು ಹೋದರು. ನಟ ಶಿಂಭು ಮನೆಯವರು ಹತ್ತಿರವೇ ಇದ್ದರು. ಅವರು ಬಂದು ಅಕ್ಕನ ಸೇವ್​ ಮಾಡಿದ್ರು ಎಂದು ಅಂದು ನಡೆದ ಘಟನೆಯನ್ನು ವಿಜಯಲಕ್ಷ್ಮಿ ವಿವರಿಸಿದ್ದಾರೆ.

ಸಿಕ್ಕಾಪಟ್ಟೆ ಭಯಾನಕ ಫ್ಯಾಮಿಲಿ ಜಯಪ್ರದಾ ಅವರದ್ದು. ಕಮಿಷನರ್​ ಅವರಿಗೂ ದೂರು ಕೊಟ್ವಿ. ಎಲ್ಲರೂ ಅಕ್ಕನನ್ನು ವಾಪಸ್​ ಕರೆದುಕೊಂಡು ಹೋಗಿ ಎಂದು ಅಕ್ಕಪಕ್ಕದವರು ಹೋದ್ರು. ಎಂಟು ವರ್ಷದ ಮಗು ಸಮ್ರಾಟ್​ನನ್ನು ಕರ್ಕೊಂಡು ಉಟ್ಟ ಸೀರೆಯಲ್ಲಿಯೇ ಬಂದರು. ಏನು ಸಮಸ್ಯೆ ಎನ್ನೋದು ಗೊತ್ತಾಗಲಿಲ್ಲ. ವರದಕ್ಷಿಣೆ ಕಿರುಕುಳನೋ ಗೊತ್ತಿಲ್ಲ. ಜಯಪ್ರದಾ ಅವರನ್ನೂ ಕೇಳಿದ್ರೂ ಅವರು ಏನೂ ರಿಸ್​ಪಾನ್ಸ್ ಮಾಡಲಿಲ್ಲ. ಅಕ್ಕ ಬಂದ ಮೇಲೆ ಮಗು ತೋರಿಸು ಎಂದು ಅಕ್ಕನನ್ನು ಹೊಡೆಯಲು ಶುರು ಮಾಡಿದ್ರು. ಒಂದು ದಿನ ಅಕ್ಕ ಮಗುವನ್ನು ಕೊಟ್ಟರು. ಆದ್ರೆ ಮಗುವನ್ನು ವಾಪಸ್​ ಕರ್ಕೊಂಡು ಬರಲೇ ಇಲ್ಲ. ಊರಿಂದ ಊರಿಗೆ ಹೋದ್ರು. 14 ವರ್ಷ ಆಯ್ತು ಇನ್ನೂ ನೋಡಲಿಲ್ಲ. ಜಯಪ್ರದಾ ತನ್ನ ಮಗ ಎಂದುಕೊಂಡು ತಿರುಗುತ್ತಾರೆ. ಕೋರ್ಟ್​ ಎಲ್ಲಾ ಅಲೆದಾಯ್ತು. ಆದ್ರೆ ಏನೂ ಪ್ರಯೋಜನ ಆಗಲಿಲ್ಲ ಎಂದಿದ್ದಾರೆ ನಟಿ. 

ಒಂದು ಮಿಲಿಯನ್​ ಮಂದಿಗೆ ಉದ್ಯೋಗ ನೀಡ್ತಿರೋ ಸೋಮಾರಿಗಳು! ಇವರಿಂದ್ಲೇ 35 ಸಾವಿರ ಕೋಟಿ ಲಾಭ

click me!