
ಅಮಿತಾಭ್ ಬಚ್ಚನ್ (Amitabh Bachchan) ಬಾಲಿವುಡ್ ಕಂಡ ಅಪರೂಪದ ನಟ. ಬ್ಲ್ಯಾಕ್ ಆ್ಯಂಡ್ ವೈಟ್ ಚಿತ್ರದಿಂದ ಹಿಡಿದು ಈ 82ರ ಹರೆಯದಲ್ಲಿಯೂ ಅಷ್ಟೇ ಉತ್ಸಾಹದ ಚಿಲುಮೆಯಾಗಿ, ನಗೆಯ ಬುಗ್ಗೆಯಾಗಿ ಚಿಮ್ಮುತ್ತಿದ್ದಾರೆ. ಹಿರಿತೆರೆ, ಕಿರುತೆರೆ, ನಿರ್ದೇಶನ, ನಿರ್ಮಾಣ ಎಲ್ಲದರಲ್ಲಿಯೂ ಇವರದ್ದು ಎತ್ತಿದ ಕೈ. 1970ರ ದಶಕದಲ್ಲಿ ಜಂಜೀರ್, ದೀವಾರ್, ಆನಂದ್, ರೋಟಿ ಕಪಾಡಾ ಮತ್ತು ಮಕಾನ್ ಚಿತ್ರಗಳ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅಮಿತಾಭ್ ಬಚ್ಚನ್ ಅವರಿಗೆ ಈ ವಯಸ್ಸಿನಲ್ಲಿಯೂ ಉತ್ಸಾಹ ಬತ್ತಿಲ್ಲ. ಅವರ ಎನರ್ಜಿ ಇನ್ನೂ ಹಾಗೆಯೇ ಇದೆ. ವಯಸ್ಸೆನ್ನುವುದು ಮನಸ್ಸಿಗಲ್ಲ ಎನ್ನುವ ಮಾತು ಅಕ್ಷರಶಃ ಇವರಿಗೆ ಅನ್ವಯ ಆಗುತ್ತದೆ. 80ರ ಹರೆಯದಲ್ಲಿ ಬಿಗ್ ಬಿ ಫುಲ್ ಎನರ್ಜಿಯಿಂದ ಕಾಣಿಸಿಕೊಳ್ಳುತ್ತಿದ್ದಾರೆ. ಕೂಲಿ ಚಿತ್ರದಲ್ಲಿ ಮಾರಣಾಂತಿಕ ಗಾಯಗಳಿಂದ ಬದುಕಿ ಬಂದಿದ್ದ ಅಮಿತಾಭ್ ಅವರು ಇತ್ತೀಚೆಗೆ ಪ್ರಾಜೆಕ್ಟ್ ಕೆ ಚಿತ್ರದ ಚಿತ್ರೀಕರಣದ ವೇಳೆಯಲ್ಲಿಯೂ ಗಂಭೀರ ಗಾಯಗಳಾಗಿದ್ದವು. ಇವೆಲ್ಲವುಗಳ ಹೊರತಾಗಿಯೂ ಅಮಿತಾಭ್ ಬಚ್ಚನ್ ಇಂದಿಗೂ ಅದೇ ಎನರ್ಜಿಯನ್ನು ಉಳಿಸಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿ ಕೌನ್ ಬನೇಗಾ ಕರೋರ್ಪತಿ.
ಕಳೆದ 24 ವರ್ಷಗಳಿಂದ ಈ ಕಾರ್ಯಕ್ರಮದ 15 ಕಂತುಗಳನ್ನು ಪೂರೈಸಿರುವ ನಟ ಈಗ 16ನೇ ಕಂತಿಗೆ ಬಂದಿದ್ದಾರೆ. ಇದು ಕೇವಲ ಪ್ರಶ್ನೋತ್ತರದ ವೇದಿಕೆ ಆಗಿರದೇ ನಟ ಕೆಲವು ಸಲ ಬುದ್ಧಿಮಾತುಗಳನ್ನೂ ಹೇಳುವುದು ಇದೆ. ಸಾಕಷ್ಟು ಫನ್ ಮಾಡುವುದೂ ಇದೆ. ಜೊತೆಗೆ ಬಂದಿರುವ ಸ್ಪರ್ಧಿಗಳಿಂದ ಒಂದಿಷ್ಟು ಕಲಿತುಕೊಳ್ಳುವುದೂ ಇದೆ. ಇದೀಗ ಟೇಕ್ವಾಂಡೋ ಪ್ರವೀಣೆ ಬಾಲಕಿಯೊಬ್ಬಳಿಂದ ಟೇಕ್ವಾಂಡೋ ಕಿಕ್ ಕಲಿತುಕೊಂಡ ನಟ ಅಮಿತಾಭ್ ಅದನ್ನು ವೇದಿಕೆಯ ಮೇಲೆ ಪ್ರದರ್ಶಿಸುವ ಮೂಲಕ ಚಪ್ಪಾಳೆಗಳ ಸುರಿಮಳೆಯನ್ನೇ ಪಡೆದುಕೊಂಡಿದ್ದಾರೆ. 82 ವರ್ಷದಲ್ಲಿನ ಈ ಎನರ್ಜಿಗೆ ಪ್ರೇಕ್ಷಕರು ಫಿದಾ ಆಗಿದ್ದರೆ, ಅದರ ವಿಡಿಯೋ ನೋಡಿ ನೆಟ್ಟಿಗರಿಂದ ಶ್ಲಾಘನೆಗಳ ಮಹಾಪೂರವೇ ಹರಿದು ಬರುತ್ತಿದೆ. ಅಂದಹಾಗೆ ಟೇಕ್ವಾಂಡೋ 1940 ಮತ್ತು 1950 ರ ದಶಕದಲ್ಲಿ ಕರಾಟೆ ಮತ್ತು ಚೀನೀ ಸಮರ ಕಲೆಗಳಂತಹ ಸಮರ ಕಲೆಗಳಲ್ಲಿ ಅನುಭವ ಹೊಂದಿರುವ ಕೊರಿಯನ್ ಸಮರ ಕಲಾವಿದರು ಅಭಿವೃದ್ಧಿಪಡಿಸಿದ ಯುದ್ಧ ಕ್ರೀಡೆಯಾಗಿದೆ. ಕಾಲನ್ನು ಮೇಲಕ್ಕೆತ್ತಿ ಕಿಕ್ ಮಾಡುವ ಕಲೆ ಇದಾಗಿದೆ.
ನೀವ್ ಬೇಡ, ಅವ್ಳೇ ಬೇಕು ಅಂತ ಹೊರಟೇ ಹೋದ, ಈಗ ನೋಡಿ... 'ಮುಖ್ಯಮಂತ್ರಿ' ಚಂದ್ರು ಪತ್ನಿ ಮನದ ಮಾತು...
ಇದನ್ನು ಕಲಿತ ಬಾಲಕಿಯೊಬ್ಬಳ ಹಾಟ್ ಸೀಟ್ಗೆ ಆಯ್ಕೆಯಾಗಿದ್ದಳು. ಆಗ ಅಮಿತಾಭ್ ಅವರು, ತಮಗೂ ಇದನ್ನು ಕಲಿಸಿಕೊಡುವಂತೆ ಕೇಳಿದರು. ಬಾಲಕಿ ಅಂಜಿ ಇಲ್ಲ ಸರ್, ಬೇಡ ಎಂದು ಕೈಮುಗಿದಳು. ಬಹುಶಃ ಅಮಿತಾಭ್ ಅಂಥವರಿಗೆ ನಾನು ಹೇಳಿಕೊಡುವುದಾ ಎನ್ನುವುದರ ಜೊತೆಗೆ, ಇಷ್ಟು ವಯಸ್ಸಿನವರು ಇದನ್ನು ಮಾಡಲು ಸಾಧ್ಯನಾ ಎನ್ನುವ ಪ್ರಶ್ನೆ ಬಾಲಕಿಯಲ್ಲಿ ಮಾತ್ರವಲ್ಲದೇ ಅಲ್ಲಿದ್ದ ಪ್ರೇಕ್ಷಕರಲ್ಲಿಯೂ ಇದ್ದ ಹಾಗಿತ್ತು. ಅಮಿತಾಭ್ ಅವರು ಒತ್ತಾಯ ಮಾಡಿದ ಬಳಿಕ ಬಾಲಕಿ ಕಾಲೆತ್ತಿ ಕಿಕ್ ಮಾಡಿದಳು. ಅದನ್ನು ಹೇಗೆ ಮಾಡಬೇಕು ಎಂದು ಅಮಿತಾಭ್ ಕೇಳಿದರು.
ಆಗ ಬಾಲಕಿ, ಮೊದಲು ಮೊಣಕಾಲು ಹಿಡಿದು ನಂತರ ಒದೆಯಬೇಕು ಎಂದು ತೋರಿಸಿದಳು. ಅಮಿತಾಭ್ ತಕ್ಷಣವೇ ಅದೇ ಶರವೇಗದಲ್ಲಿ ಕಿಕ್ ಮಾಡುತ್ತಿದ್ದಂತೆಯೇ ಅಲ್ಲಿದ್ದ ಪ್ರೇಕ್ಷಕರು ಬೆರಗಾಗಿ ಹೋದರು. ಚಪ್ಪಾಳೆಗಳ ಸುರಿಮಳೆಯೇ ಆಯಿತು. ಅದರ ವಿಡಿಯೋ ವೈರಲ್ ಆಗಿದೆ. ವಯಸ್ಸು ಎನ್ನುವುದು ಕೆಲವರಿಗೆ ಲೆಕ್ಕ ಮಾತ್ರ. ಅದರ ಅರಿವೇ ಇಲ್ಲದೇ ಇಂಥ ಫಿಟ್ ಆಗಿರೋ ನಟನಿಗೆ ಸಲಾಂ ಎನ್ನುತ್ತಿದ್ದಾರೆ.
ಗಂಡನ ಜೊತೆ ವರ್ಷದಲ್ಲಿ 10 ದಿನ ಇರೋದೇ ಕಷ್ಟವಾಗಿದೆ: ಸಂಸಾರದ ಸುಖ-ದುಃಖ ಬಿಚ್ಚಿಟ್ಟ ನಟಿ ಛಾಯಾ ಸಿಂಗ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.