ಆಂಟಿ ಎಂದವರಿಗೆ ಚಾಟಿ ಬೀಸಿದ ಪ್ರಿಯಾಮಣಿ; 'ಐಯಾಮ್ ಸಖತ್‌ ಹಾಟ್, ಫಿಗರ್ ನೋಡಿದ್ದೀರಾ' ಎಂದ ನಟಿ!

First Published Sep 15, 2023, 3:04 PM IST

ಪ್ರಿಯಾಮಣಿ ಮೊದಲ ಚಿತ್ರಕ್ಕೆ ಶ್ರೇಷ್ಟ ನಟಿ ರಾಷ್ಟ್ರ ಪ್ರಶಸ್ತಿ ಪಡೆದ ನಟಿ. ಅಭಿನಯಕ್ಕೂ ಸೈ-ಗ್ಲಾಮರ್‌ಗೂ ಜೈ ಎನ್ನುವರರು. ಆದರೆ ಇತ್ತೀಚಿನ ದಿನಗಳಲ್ಲಿ, ಅವರು ತಮ್ಮ ದೇಹಕ್ಕೆ ಸಂಬಂಧಿಸಿದಂತೆ ನಿರಂತರವಾದ ಕಾಮೆಂಟ್‌ಗಳು ಮತ್ತು ಟೀಕೆಗಳನ್ನು ಎದುರಿಸುತ್ತಿದ್ದಾರೆ.  ಆದರೆ ಈ ಬಾರಿ ಆಂಟಿ ಎಂದು ಕರೆದ ಮಂದಿಗೆ ಪಿಲ್ಲುಮಣಿ ಖಡಕ್ ಆಗಿ ಉತ್ತರ ನೀಡಿದ್ದಾರೆ.

ದಕ್ಷಿಣಭಾರತದ ಖ್ಯಾತ ನಟಿ ಪ್ರಿಯಾಮಣಿ. ತೆಲುಗು, ತಮಿಳು, ಮಲಯಾಳಂ, ಕನ್ನಡ ಹೀಗೆ ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಶಾರೂಕ್ ಖಾನ್‌ ಜೊತೆ ಇವರು ಅಭಿನಯಿಸಿರುವ ಜವಾನ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಇದೆಲ್ಲದರ ಅಭಿಮಾನಿಯೊಬ್ಬ ಪ್ರಿಯಾಮಣಿಗೆ ಬಾಡಿ ಶೇಮಿಂಗ್ ಮಾಡಿದ್ದು, ನಟಿಗೆ ಅದಕ್ಕೆ ಸರಿಯಾಗಿ ಪ್ರತ್ಯುತ್ತರ ನೀಡಿದ್ದಾರೆ.

ಪ್ರಿಯಾಮಣಿ ಮೊದಲ ಚಿತ್ರಕ್ಕೆ ಶ್ರೇಷ್ಟ ನಟಿ ರಾಷ್ಟ್ರ ಪ್ರಶಸ್ತಿ ಪಡೆದ ನಟಿ. ಅಭಿನಯಕ್ಕೂ ಸೈ-ಗ್ಲಾಮರ್‌ಗೂ ಜೈ ಎನ್ನುವರರು. ಆದರೆ ಇತ್ತೀಚಿನ ದಿನಗಳಲ್ಲಿ, ಅವರು ತಮ್ಮ ದೇಹಕ್ಕೆ ಸಂಬಂಧಿಸಿದಂತೆ ನಿರಂತರವಾದ ಕಾಮೆಂಟ್‌ಗಳು ಮತ್ತು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಪ್ರಿಯಾಮಣಿ ಮುಸ್ಲಿಂ ವ್ಯಕ್ತಿ ಮತ್ತು  ಡಿವೋರ್ಸಿಯನ್ನು ಮದುವೆಯಾಗಿದ್ದು ಈ ಹಿಂದೆಯೇ ಸುದ್ದಿಯಾಗಿತ್ತು. ಲವ್ ಜಿಹಾದ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು.

2017ರಲ್ಲಿ ಮುಸ್ತಫಾ ರಾಜ್ ಅವರೊಂದಿಗೆ ವಿವಾಹವಾದ ಮತ್ತು ಎರಡು ಮಕ್ಕಳ ತಾಯಿಯಾಗಿರುವ ಪ್ರಿಯಾಮಣಿ, ಬಾಡಿ ಶೇಮಿಂಗ್‌ನ ಅನುಭವಗಳ ಬಗ್ಗೆ ಮಾತನಾಡಿದ್ದಾರೆ. ಸೆಲೆಬ್ರಿಟಿಗಳು, ವಿಶೇಷವಾಗಿ ಮಹಿಳೆಯರು ತಮ್ಮ ಸೌಂದರ್ಯದ ವಿಚಾರಕ್ಕೆ ಬಂದಾಗ ಅವರು ಎದುರಿಸುವ ಸಮಸ್ಯೆಯನ್ನು ಅವರು ಒಪ್ಪಿಕೊಳ್ಳುತ್ತಾರೆ. 

ತನ್ನ ಪ್ರತಿಭೆಯಿಂದ ಬೆಳ್ಳಿತೆರೆಯನ್ನು ಬೆರಗುಗೊಳಿಸಿರುವ ನಟಿ, ತನ್ನ ದೇಹದ ಬಗ್ಗೆ ಬಂದಿರೋ ಕಮೆಂಟ್‌ಗಳು ಕಡಿಮೆಯಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಮನರಂಜನಾ ಉದ್ಯಮದಲ್ಲಿ ಮಹಿಳೆಯರಿಗೆ ಬಾಡಿ ಶೇಮಿಂಗ್ ಅನ್ನೋದು ತುಂಬಾ ಸಾಮಾನ್ಯವಾಗಿದೆ ಎಂದಿದ್ದಾರೆ.

ಮಾತ್ರವಲ್ಲ, ಪಾತ್ರಕ್ಕಾಗಿ ತೂಕವನ್ನು ಕಳೆದುಕೊಂಡರೆ, ಅವರು ತುಂಬಾ ತೂಕ ಕಳೆದುಕೊಂಡರು ಎಂದು ಟೀಕಿಸುತ್ತಾರೆ. ಮತ್ತೊಂದೆಡೆ, ತೂಕ ಹೆಚ್ಚಾದರೆ ವಿಪರೀತ ದಪ್ಪವಾಗಿದ್ದೀರಿ' ಎಂದು ಟೀಕಿಸುತ್ತಾರೆ ಎಂದು ಪ್ರಿಯಾಮಣಿ ಹೇಳಿದರು.

ಬಾಡಿ ಶೇಮಿಂಗ್‌ ಕುರಿತಾದ ಈ ಎಲ್ಲಾ ಕಾಮೆಂಟ್‌ಗಳನ್ನು ನಾನು ಓದುತ್ತೇನೆ ಎಂದು ಪ್ರಿಯಾಮಣಿ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಆದರೆ 'ಪ್ರತಿಕ್ರಿಯಿಸುವ ಮೂಲಕ ಅವರಿಗೆ ಪ್ರೋತ್ಸಾಹ ನೀಡಲು ಬಯಸುವುದಿಲ್ಲ. ಕೇವಲ ಕೆಲಸ ಇಲ್ಲದವರು ಇಂಥಾ ಕಾಮೆಂಟ್‌ಗಳನ್ನು ಮಾಡುತ್ತಾ ಕೂರುತ್ತಾರೆ. ಉಳಿದವರು ತಮ್ಮ ಜೀವನದಲ್ಲಿ ಬಿಝಿಯಾಗಿರುತ್ತಾರೆ' ಎಂದು ಪ್ರಿಯಾಮಣಿ ತಿಳಿಸಿದರು.

ಆಂಟಿ ಎಂದು ಕರೆಯುವವರಿಗೆ ಪ್ರಿಯಾಮಣಿ ಖಡಕ್ ಆಗಿ ಉತ್ತರ ನೀಡಿದ್ದಾರೆ. 'ವಯಸ್ಸಾಗುವುದರಲ್ಲಿ ಯಾವುದೇ ಅವಮಾನವಿಲ್ಲ, ಮತ್ತು ಇದು ನಾವೆಲ್ಲರೂ ಹಾದುಹೋಗುವ ನೈಸರ್ಗಿಕ ಪ್ರಕ್ರಿಯೆಯಾಗಿದೆ. ತನಗೆ 39 ವರ್ಷ ವಯಸ್ಸಾಗಿದೆ ಮತ್ತು ಶೀಘ್ರದಲ್ಲೇ ತನ್ನ 40 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದೇನೆ' ಎಂದು ಪ್ರಿಯಾಮಣಿ ಸ್ಪಷ್ಟವಾಗಿ ತಿಳಿಸಿದ್ದಾರೆ.

ಅಷ್ಟೇ ಅಲ್ಲ 'ನಂಗಿನ್ನೂ 38 ವರ್ಷ. ಆದ್ರೂ ನಾನಿನ್ನೂ ಹಾಟ್ ಹಾಟ್ ಆಗಿದ್ದೀನಿ ಬಾಯ್ ಮುಚ್ಕೊಳ್ಳಿ' ಎಂದು ಪ್ರಿಯಾಮಣಿ ತಿರುಗೇಟು ನೀಡಿದ್ದಾರೆ. ಪ್ರಿಯಾ ಕೊಟ್ಟ ಉತ್ತರಕ್ಕೆ ನೆಟ್ಟಿಗರು ಸಹ ಭೇಷ್‌ ಎಂದಿದ್ದಾರೆ. ನಿಜವಾಗ್ಲೂ ನೀವು ಸಖತ್‌ ಹಾಟ್ ಆಂಡ್ ಕ್ಯೂಟ್ ಎಂದು ಕಾಮೆಂಟ್ ಮಾಡಿದ್ದಾರೆ.

ಪುನೀತ್ ರಾಜ್‌ಕುಮಾರ್‌ಗೆ ಜೋಡಿಯಾಗಿ 2009ರಲ್ಲಿ ರಾಮ್ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಎಂಟ್ರಿ ಕೊಟ್ಟ ಪ್ರಿಯಾಮಣಿ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಹಿಟ್ ಸಿನಿಮಾಗಳಲ್ಲಿ ನೀಡಿರುವ ನಟಿ 2017ರಲ್ಲಿ ಮುಸ್ತಫಾ ರಾಜ್‌ರನ್ನು ಪ್ರೀತಿಸಿ ಮದುವೆ ಮಾಡಿಕೊಂಡರು. ಆ ಸಮಯದಲ್ಲಿ ಪ್ರಿಯಾಮಣಿ ಸಾಕಷ್ಟು ಟ್ರೋಲ್ ಮತ್ತು ಬಾಡಿ ಶೇಮಿಂಗ್ ಎದುರಿಸಿದ್ದರು.

'ಕೊರೋನಾ ಆದ್ಮೇಲೆ ನಾನು ತುಂಬಾ ಸಣ್ಣಗಾಗಿರುವೆ ಅದಿಕ್ಕೆ ಎಲ್ಲರೂ ದಪ್ಪ ಇರುವಾಗ ಚೆನ್ನಾಗಿದ್ದೆ ಈಗ ಯಾಕೆ ಮತ್ತೆ ದಪ್ಪ ಆಗಬಾರದು  ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈಗ ನಾನು ಇರುವುದು ನನ್ನ ಆರೋಗ್ಯಕ್ಕೆ ಪರ್ಫೆಕ್ಟ್‌ ಸೈಜ್ ಎಂದರು.

ಗೊತ್ತಿರದ ನಂಬರ್‌ಗಳಿಂದ ರಾತ್ರಿ ಕರೆ ಮಾಡುತ್ತಾರೆ ಬಾಡಿ ಶೇಮಿಂಗ್ ಮಾಡುತ್ತಾರೆ ಫ್ಯಾಮಿಲಿ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಅವರು ಬಳಸುವ ಪದಗಳನ್ನು ಹೇಳುವುದಕ್ಕೆ ಬೇಸರವಾಗುತ್ತದೆ. ಕಾಲ್ ಮೆಸೇಜ್‌ಗಳನ್ನು ಮೊದಲು ಡಿಲೀಟ್ ಮಾಡುವ ಅದರ ಬಗ್ಗೆ ಯೋಚನೆ ಮಾಡಲು ಸಮಯವಿಲ್ಲ' ಎಂದು ಪ್ರಿಯಾಮಣಿ ಈ ಹಿಂದೆ ಹೇಳಿದ್ದರು.

click me!