ಪಿಂಕ್ ಬಿಕಿನಿಯಲ್ಲಿ ರಂಗು ಚೆಲ್ಲಿ ಕುಳಿತಳು ಅಕ್ಷರಾ, ಬಿಸಿಲ ಬೇಗೆಯಲ್ಲಿ ಹೆಚ್ಚಿದ ಟೆಂಪರೇಚರ್!

First Published Mar 28, 2024, 6:26 PM IST

ಕನ್ನಡ, ತಮಿಳು ಸೇರಿದಂತೆ ದಕ್ಷಿಣ ಭಾರತದ ಚಿತ್ರಗಳಲ್ಲಿ ಮಿಂಚುತ್ತಿರುವ ಅಕ್ಷರ ಗೌಡ ಇದೀಗ ಪಿಂಕಿ ಮೊನೊಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಬಿಸಿಲ ಬೇಗೆಯಲ್ಲಿ ಅಕ್ಷರ ಗೌಡ ಫೋಟೋಗಳು ಮತ್ತಷ್ಟು ಬಿಸಿ ಏರಿಸಿದೆ.
 

ಮಾಡೆಲ್ ಕಮ್ ನಟಿ ಅಕ್ಷರಾ ಗೌಡ ಇದೀಗ ಪಿಂಕ್ ಮೊನೊಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕಡಲ ಕಿನಾರೆಯಲ್ಲಿ ಸಖತ್ ಪೋಸ್ ನೀಡಿರುವ ಅಕ್ಷರಾ ಫೋಟೋಗಳು ವೈರಲ್ ಆಗಿದೆ.
 

ಪಿಂಕ್ ಮೊನೊಕಿನಿ, ಕ್ಯಾಪ್ ಹಾಗೂ ಸನ್‌ಗ್ಲಾಸ್ ಧರಿಸಿ ಅಕ್ಷರಾ ಗೌಡ ಫೋಟೋಗೆ ಪೋಸ್ ನೀಡಿದ್ದಾರೆ.  ಸಮುದ್ರ ತೀರದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಅಕ್ಷರಾ ಫೋಟೋ ಭಾರಿ ಸಂಚಲನ ಸೃಷ್ಟಿಸಿದೆ.
 

ಸಮುದ್ರ ಕಿನಾರೆ ಜೊತೆಗೆ ಬಿವರೇಜ್ ಮುಂಭಾಗದಲ್ಲಿ ನಿಂತಿರುವ ಫೋಟೋ ಕೂಡ ಪೋಸ್ಟ್ ಮಾಡಿದ್ದಾರೆ. ಅಕ್ಷರಾ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
 

ಅಕ್ಷರಾ ಗೌಡ ಮೊನೊಕಿನಿ, ಬಿಕಿನಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈಗಾಗಲೇ ಬೋಲ್ಡ್ ಲುಕ್ ಮೂಲಕ ಅಪಾರ ಅಭಿಮಾನಿಗಳನ್ನು, ಬೆಂಬಲಿರನ್ನು ಪಡದುಕೊಂಡಿದ್ದಾರೆ.
 

ಮೂಲತಹ ಬೆಂಗಳೂರಿನವರಾಗಿರುವ ಅಕ್ಷರಾ ಗೌಡ, ತಮಿಳು ಚಿತ್ರದ ಮೂಲಕ ಸಿನಿ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಬಳಿಕ ಸಿಕ್ಕ ಪಾತ್ರಕ್ಕೆ ಜೀವ ತುಂಬಿ ಅಭಿಮಾನಿಗಳ ನೆಚ್ಚಿನ ನಟಿಯಾಗಿ ಹೊರಹೊಮ್ಮಿದ್ದಾರೆ.
 

ಕನ್ನಡತಿಯಾದರೂ ಅಕ್ಷರಾ ಗೌಡ ತಮಿಳು, ತೆಲುಗು ಸಿನಿಮಾಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ.ಇತ್ತೀಚೆಗೆ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ಅಕ್ಷರಾ ವಿರಳವಾಗಿದ್ದಾರೆ.
 

ತುಪಾಕಿ ತಮಿಳು ಚಿತ್ರದಲ್ಲಿ ತಾನು ಮಾಡಿದ ಪಾತ್ರ ಮಾಡಬಾರದಿತ್ತು ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಮೊದಲು ಕತೆ ಬೇರೆಯಾಗಿತ್ತು. ಆದರೆ ಒಪ್ಪಂದ ಬಳಿಕ ಕತೆಯಲ್ಲಿ ಕೆಲ ಬದಲಾವಣೆ ಮಾಡಲಾಗಿತ್ತು ಎಂದಿದ್ದರು.

ದಕ್ಷಿಣ ಭಾರತದ ಸಿನಿ ರಂಗದಲ್ಲಿ ತೊಡಗಿಸಿಕೊಂಡಿರುವ ಅಕ್ಷರಾ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿದ್ದಾರೆ. ತಮ್ಮ ವರ್ಕೌಟ್, ಬೋಲ್ಡ್ ಫೋಟೋಗಳನ್ನೂ ಹಂಚಿಕೊಂಡು ಸಂಚಲನ ಸೃಷ್ಟಿಸುತ್ತಿದ್ದಾರೆ.
 

click me!