Mimi Chakraborty: ಅಯ್ಯೋ iPhoneನಲ್ಲಿದ್ದ 7000 ಫೋಟೋ ಡಿಲೀಟ್, Appleಗೆ ದೂರು ಕೊಟ್ಟ ಸಂಸದೆ

First Published Nov 18, 2021, 11:40 AM IST

ನಟಿ, ಸಂಸದೆ ಮಿಮಿ ಚಕ್ರವರ್ತಿ(Mimi Chakraborty) ಅವರ ಐಫೋನಲ್ಲಿದ್ದ(iPhone) ಬರೋಬ್ಬರಿ 7 ಸಾವಿರ ಫೋಟೋಗಳು ಡಿಲೀಟ್‌(Delete) ಆಗಿವೆ. ನಂಗೆ ಅಸಹ್ಯ ಅನಿಸ್ತಿದೆ ಎಂದಿದ್ದಾರೆ ಸಂಸದೆ. Appleಗೆ ದೂರು ಕೊಟ್ಟಿದ್ದಾರೆ.

ತೃಣಮೂಲ ಕಾಂಗ್ರೆಸ್(TMC) ಸಂಸದೆ(Member of Parliament) ಮಿಮಿ ಚಕ್ರವರ್ತಿ ತಮ್ಮ ಐಫೋನ್(iPhone) ಗ್ಯಾಲರಿಯಲ್ಲಿ(Gallery) ಫೋಟೋಗಳು ಡಿಲೀಸ್ ಆದ ನಂತರ ಅಳಬೇಕೋ ಅಥವಾ ಜೋರಾಗಿ ಅಳಬೇಕೋ ಎಂದು ತಿಳಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

32 ವರ್ಷ ನಟಿ-ರಾಜಕಾರಣಿ ತನ್ನ ಮೊಬೈಲ್‌ನಲ್ಲಿದ್ದ 7,000 ಫೋಟೋಗಳು ಮತ್ತು 500 ವೀಡಿಯೊಗಳು ಡಿಲೀಟ್ ಆದ ನಂತರ ಟ್ವಿಟರ್ ಮೂಲಕ ಸಹಾಯ ಕೇಳಿದ್ದಾರೆ.

ಸಹಾಯವನ್ನು ಕೋರುವ ಟ್ವೀಟ್‌ನಲ್ಲಿ Apple ಟ್ಯಾಗ್ ಮಾಡಿದ್ದಾರೆ. 7000 ಫೋಟೋ, 500 ವೀಡಿಯೊಗಳು. ಎಲ್ಲವನ್ನೂ ಗ್ಯಾಲರಿಯಿಂದ ಅಳಿಸಲಾಗಿದೆ. ಏನು ಮಾಡಬೇಕೆಂದು ನನಗೆ ಗೊತ್ತಿಲ್ಲ ಎಂದಿದ್ದಾರೆ ನಟಿ.

ಅಳುವುದೋ ಅಥವಾ ಜೋರಾಗಿ ಅಳುವುದೋ ಎಂದು ಬಂಗಾಳದ ಜಾದವ್‌ಪುರದ ಲೋಕಸಭೆಯ ಸಂಸದೆ ಮಿಮಿ ಚಕ್ರವರ್ತಿ(Mimi Chakraborty) ಆಪಲ್(Apple), ಐಫೋನ್ ನ್ಯೂಸ್ ಟ್ಯಾಗ್ ಮಾಡುವ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. 

ಮಿಮಿ ಚಕ್ರವರ್ತಿ ಅವರು ಡೇಟಾವನ್ನು ಹಿಂಪಡೆಯಲು ಹಲವಾರು ರೀತಿಯಲ್ಲಿ ಪ್ರಯತ್ನಿಸಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಎಂಬುದನ್ನೂ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಫೋಟೋ ವಿಡಿಯೋ ರಿಕವರಿ ಮಾಡುವ ಎಲ್ಲಾ ವಿಧಾನಗಳು ಪ್ರಯತ್ನಿಸಿದೆ. ಆದರೆ ಯಾವುದೇ ವಿಧಾನ ವರ್ಕೌಟ್ ಆಗಿಲ್ಲ. ನನಗೆ ಅಸಹ್ಯವಾಗುತ್ತಿದೆ ಅವರು ಬರೆದಿದ್ದಾರೆ.

ಬಹಳಷ್ಟು ಜನರು ಐಫೋನ್ ಫೋಟೋ ರಿಕವರಿ ವಿಧಾನಗಳನ್ನು ಟ್ವೀಟ್ ಮಾಡಿದ್ದಾರೆ. ಒಂದಷ್ಟು ಜನರು ಫೋಟೋಗಳನ್ನು ಐಕ್ಲೌಡ್‌ನಲ್ಲಿ ಹುಡುಕುವಂತೆ ಹೇಳಿದ್ದಾರೆ.

ಆದರೂ ಚುನಾಯಿತ ಪ್ರತಿನಿಧಿಯಿಂದ ಬಂದ ಟ್ವೀಟ್‌ಗೆ ಕೆಲವರು ಟೀಕೆ ವ್ಯಕ್ತಪಡಿಸಿದ್ದಾರೆ. ಸಂಸದೆಯಾಗಿ ಇದುವೇ ಟೆನ್ಶನ್ ಮಾಡೋ ವಿಚಾರ ಅಂತ ಕಾಲೆಳೆದಿದ್ದಾರೆ.

ಸಾವಿರಾರು ಮಂದಿ ಶಾಲೆಯಿಂದ ಹೊರಗುಳಿದಿದ್ದಾರೆ. ಕೆಲಸ ಕಳೆದುಕೊಂಡಿದ್ದಾರೆ, ಹಸಿವಿನಿಂದ ಬಳಲುತ್ತಿದ್ದಾರೆ. ಆದರೆ ಸಂಸದೆ ಅವರ ಫೋಟೋಸ್ ಮತ್ತು ವೀಡಿಯೊಗಳ ಬಗ್ಗೆ ಮಾತ್ರ ತಲೆಕೆಡಿಸಿಕೊಂಡಿದ್ದಾರೆ ಎಂದು ಟ್ವಿಟರ್ ಬಳಕೆದಾರರು ಟೀಕಿಸಿದ್ದಾರೆ

ಮಿಮಿ ಚಕ್ರವರ್ತಿ ಜಾದವ್‌ಪುರದ ಸಂಸದೆ ಮತ್ತು ಪಶ್ಚಿಮ ಬಂಗಾಳದ ಜನಪ್ರಿಯ ನಟಿ. ಜೂನ್‌ನಲ್ಲಿ ಐಎಎಸ್ ಅಧಿಕಾರಿಯಂತೆ ಪೋಸ್ ಕೊಟ್ಟ ವ್ಯಕ್ತಿಯಿಂದ ನಕಲಿ ಕೋವಿಡ್ ಲಸಿಕೆಯನ್ನು ತೆಗೆದುಕೊಂಡು ಅವರು ಮೋಸ ಹೋಗಿದ್ದರು. ನಂತರ ಅನಾರೋಗ್ಯಕ್ಕೆ ಒಳಗಾದರು.

click me!