ಕ್ಷೇತ್ರದ ಅಭಿವೃದ್ಧಿಗೆ ಜೋಶಿ ಕೊಡುಗೆ ಶೂನ್ಯ: ವಿನಯ್ ಕುಲಕರ್ಣಿ ವಾಗ್ದಾಳಿ

By Ravi JanekalFirst Published May 2, 2024, 3:15 PM IST
Highlights

ಧಾರವಾಡ ಅಭಿವೃದ್ಧಿಯಲ್ಲಿ ಜೋಶಿ ಅವರ ಕೊಡುಗೆ ಶೂನ್ಯವಾಗಿದೆ. ಯಾವುದೇ ಅಭಿವೃದ್ಧಿ ಮಾಡದೇ ಹಿಂದಿನಿಂದಲೂ ಸೇಡಿನ ರಾಜಕಾರಣ ಮಾಡುತ್ತಾ ಬಂದಿದ್ದಾರೆ. ಇದರಿಂದ ಬೇಸತ್ತಿರುವ ಕ್ಷೇತ್ರದ ಜನರು ಈ ಬಾರಿ ಬದಲಾವಣೆಯನ್ನ ಬಯಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ಶಾಸಕ ವಿನಯ ಕುಲಕರ್ಣಿ ವಾಗ್ದಾಳಿ ನಡೆಸಿದರು.

ಧಾರವಾಡ (ಮೇ.2): ಧಾರವಾಡ ಅಭಿವೃದ್ಧಿಯಲ್ಲಿ ಜೋಶಿ ಅವರ ಕೊಡುಗೆ ಶೂನ್ಯವಾಗಿದೆ. ಯಾವುದೇ ಅಭಿವೃದ್ಧಿ ಮಾಡದೇ ಹಿಂದಿನಿಂದಲೂ ಸೇಡಿನ ರಾಜಕಾರಣ ಮಾಡುತ್ತಾ ಬಂದಿದ್ದಾರೆ. ಇದರಿಂದ ಬೇಸತ್ತಿರುವ ಕ್ಷೇತ್ರದ ಜನರು ಈ ಬಾರಿ ಬದಲಾವಣೆಯನ್ನ ಬಯಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ಶಾಸಕ ವಿನಯ ಕುಲಕರ್ಣಿ ವಾಗ್ದಾಳಿ ನಡೆಸಿದರು.

ಇಂದು ಬೆಳಗಾವಿಯ ಕಿತ್ತೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, ಮಾಧ್ಯಮಗಳು ಜೋಶಿ ಅವರಿಗೆ ಜೋರಾಗಿ ಪ್ರಶ್ನೆ ಮಾಡಿದರೆ ಚಾನಲ್ ಬಂದ್ ಆಗಿಬಿಡುತ್ತೆ ಎಂದರು.

ಧಾರವಾಡ ಕ್ಷೇತ್ರದಲ್ಲಿ ಜನರು ನಮ್ಮ ಪರವಾಗಿದ್ದಾರೆ. ನಾವು ಮಾಡುವ ಕೆಲಸದಲ್ಲಿ ಜನರಲ್ಲಿ ವಿಶ್ವಾಸವಿದೆ. ಸಾಕಷ್ಟು ಬಿಜೆಪಿ ನಾಯಕರು ಜೋಶಿಯವರನ್ನ ಸೋಲಿಸಲು ನಮ್ಮ‌ಜೊತೆ ಸಾಥ್ ಕೊಟ್ಟಿದ್ದಾರೆ. ಜೋಶಿ ಲಿಂಗಾಯತ ಸಮುದಾಯವನ್ನ ತುಳಿದಿದ್ದಾರೆ. ಯಡಿಯೂರಪ್ಪ ಅವರನ್ನ ತುಳಿದಿದ್ದು ಇದೇ ಜೋಶಿ. ಜಗದೀಶ್ ಶೆಟ್ಟರ್, ಚಿಕ್ಕನಗೌಡ್ರ.. ಹೀಗೆ ಲಿಂಗಾಯತ ನಾಯಕರನ್ನು ತುಳಿಯುತ್ತಾ ಬಂದಿದ್ದಾರೆ ಎಂದು ಕಿಡಿಕಾರಿದರು.

ದೇವೇಗೌಡರ ಕುಟುಂಬ ಸದಸ್ಯರು ಹಾಸನಷ್ಟೇ ಅಲ್ಲ, ಕರ್ನಾಟಕದ ಹೆಸರು ಕೆಡಿಸಿದ್ದಾರೆ: ಮೊಯ್ಲಿ ಆಕ್ರೋಶ

200% ನಾನು ದಾಖಲೆ ಬಿಡುಗಡೆ ಮಾಡುತ್ತೇನೆ. ಎಲ್ಲ ಸ್ವಾಮೀಜಿಗಳಿಗೆ ಪ್ಯಾಕೆಟ್ ಕೊಡುವ ವ್ಯವಸ್ಥೆಯನ್ನ ಜೋಶಿ ಮಾಡಿದ್ದಾರೆ. ನಮ್ಮ ಪಕ್ಷದ ಪಾಲಿಕೆ ಸದಸ್ಯರುಗಳಿಗೆ ಪ್ರಲ್ಹಾದ್ ಜೋಶಿ ದುಡ್ಡು ಹಂಚುತ್ತಿದ್ದಾರೆ. ಸದ್ಯ ಅವರಿಗೆ ಈ ಬಾರಿ ಸೋಲಿನ ಭಯವಿದೆ. ಯಾರಿಗೆ ಎಷ್ಟೇ ಹಣ ಆಮಿಷೆ ತೋರಿಸಿದರೂ ನಮ್ಮ ಮತಗಳು ಎಲ್ಲಿಯೂ ಹೋಗಲ್ಲ. ಬೇಕಾದರೆ ಇಬ್ಬರು ಪಕ್ಷೇತರರಾಗಿ ಸ್ಪರ್ಧೆ ಮಾಡೋಣ ಯಾರ ಗೆಲ್ಲುತ್ತಾರೆ ನೋಡೋಣ ಎಂದು ಪ್ರಲ್ಹಾದ್ ಜೋಶಿಗೆ ಸವಾಲು ಹಾಕಿದರು.

ಸಿಎಂಗೆ ಗಂಡಸ್ತನ ಅನ್ನೋದು ಇದ್ರೆ ರಾಮನಗರ ಎಂಎಲ್ಎ ವಿರುದ್ಧ ಕ್ರಮ ಕೈಗೊಳ್ಳಲಿ: ಅರವಿಂದ ಬೆಲ್ಲದ್ ಕಿಡಿ

ನಾನು ಊರಲ್ಲಿ ಇಲ್ಲ ಅಂತಾ ಹಿಂದಿ ಪ್ರಚಾರ ಸಭೆಯನ್ನ ಕಸಿದುಕೊಂಡರು. ಹಿಂದಿ ಪ್ರಚಾರ ಸಭೆಯನ್ನ ಜೋಶಿ ಅವರ ಅಪ್ಪ ಕಟ್ಟಿಲ್ಲ, ಅದನ್ನ ಕಟ್ಟಿದ್ದು ನಾವು. ನನ್ನ ಬೇಕು ಅಂತಾನೆ‌ ಜಿಲ್ಲೆಯಿಂದ ಹೊರಗಡೆ ಇಟ್ಟಿದ್ದಾರೆ. ಈ ಚುನಾವಣೆಯಲ್ಲಿ ಜೋಶಿ ಅವರನ್ನ ಸೋಲಿಸಲೇಬೇಕು ಎಂದು ಲಿಂಗಾಯತ ನಾಯಕರುಗಳಿಗೆ ಕರೆಕೊಟ್ಟರು. ಇದೇ ವೇಳೆ ಜೋಶಿ ಜೊತೆ ಇರುವ ಲಿಂಗಾಯತ ನಾಯಕರನ್ನು ಮುರ್ಖರು ಎಂದ ವಿನಯ್ ಕುಲಕರ್ಣಿ, ಲಿಂಗಾಯತರನ್ನು ತುಳಿಯುವ ಕೆಲಸ ಮಾಡುತ್ತಿರುವ ಜೋಶಿಯವರ ಹಿಂದೆ ಇರುವ ಲಿಂಗಾಯತರು ಮೂರ್ಖರು ಎಂದರು.

click me!