ಕನ್ನಡದ 'ಕಥಾನಾಯಕ' ಸಿನಿಮಾದಲ್ಲೂ ಹಾಡಿದ್ದ ತಮಿಳು ಗಾಯಕಿ ಉಮಾ ರಮಣನ್ ನಿಧನ

By Shriram BhatFirst Published May 2, 2024, 12:23 PM IST
Highlights

ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಸಂಗೀತ ನಿರ್ದೇಶನದ ನೂರಕ್ಕೂ ಹೆಚ್ಚು ಹಾಡುಗಳಿಗೆ ಉಮಾ ರಮಣನ್ ಧ್ವನಿಯಾಗಿದ್ದಾರೆ. ತಮಿಳಿನಲ್ಲಿ ಬಹಳಷ್ಟು ಪ್ರಸಿದ್ಧ ಹಾಡುಗಳನ್ನು ಉಮಾ ರಮಣನ್‌ ಹಾಡಿದ್ದಾರೆ.

ತಮಿಳು ಪ್ಲೇ ಬ್ಯಾಕ್ ಸಿಂಗರ್ ಉಮಾ ರಮಣನ್ (Uma Ramanan) ಅವರು ನಿಧನರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ಗಾಯಕ ಪತಿ ಎವಿ ರಮಣನ್ (AV Ramanan) ಮತ್ತು ಮಗ ವಿಘ್ನೇಶ್ ರಮಣನ್ (Vignesh Ramanan) ಅವರನ್ನು ಗಾಯಕಿ ಉಮಾ ರಮಣನ್ ಅವರನ್ನು ಅಗಲಿದ್ದಾರೆ. ಚೆನ್ನೈನಲ್ಲಿ ನಿಧನರಾಗಿರುವ ಗಾಯಕಿ ಉಮಾ ರಮಣನ್ ಅವರು ಮುಖ್ಯವಾಗಿ ತಮಿಳು ಸಿನಿಮಾ ಗೀತೆಗಳನ್ನು ಹಾಡಿದ್ದಾರೆ. ತಮ್ಮ 35 ವರ್ಷಗಳ ಗಾಯನವೃತ್ತಿಯಲ್ಲಿ ಉಮಾ ರಮಣನ್ ಅವರು ಆರು ಸಾವಿರಕ್ಕೂ ಹೆಚ್ಚು ಸಂಗೀತ ಕಛೇರಿಗಳನ್ನು (6000) ನೀಡಿದ್ದಾರೆ. 

ತಮಿಳು ಸಿನಿಮಾ ನಿಝಲ್‌ಗಳ್ (Nizhalgal)ನಲ್ಲಿ ಉಮಾ ರಮಣನ್ ಅವರು ಹಾಡಿದ್ದ ಪೊಂಗಾತವೇ ತಾಳ್‌ತೀರವೈ  (Poongathave Thalthiravai)ಹಾಡಿನ ಮೂಲಕ ಗಾಯಕಿ ಉಮಾ ತುಂಬಾ ಖ್ಯಾತಿ ಪಡೆದರು. ಬಳಿಕ ಅವರಿಗೆ ತಮಿಳು ಸಿನಿಮಾ ಹಾಡುಗಳನ್ನು ಹಾಡುವ ಅವಕಾಶ ಬಹಳಷ್ಟು ಬಂತು. ಕನ್ನಡದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ನಟನೆಯ 'ಕಥಾ ನಾಯಕ' ಸಿನಿಮಾದಲ್ಲಿ 'ನೋಯುತ್ತಿದೆ..' ಎಂಬ ಹಾಡನ್ನು ಸಹ ಹಾಡಿರುವ ಉಮಾ ಅವರು, ಬಾಲಿವುಡ್ ಚಿತ್ರಗೀತೆಗಾಳನ್ನು ಸಹ ಹಾಡಿದ್ದಾರೆ. 

ಮಕ್ಕಳ ಜೊತೆ ಚೆನ್ನಾಗಿರದೇ ಮೊಮ್ಮಕ್ಕಳನ್ನ ಪ್ರೀತಿಸ್ತಾರೆ; ಸಮಾಜದ ಹುಳುಕು ಹೇಳಿದ ನಟಿ ನೀತೂ!

ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಸಂಗೀತ ನಿರ್ದೇಶನದ ನೂರಕ್ಕೂ ಹೆಚ್ಚು ಹಾಡುಗಳಿಗೆ ಉಮಾ ರಮಣನ್ ಧ್ವನಿಯಾಗಿದ್ದಾರೆ. ತಮಿಳಿನಲ್ಲಿ ಬಹಳಷ್ಟು ಪ್ರಸಿದ್ಧ ಹಾಡುಗಳನ್ನು ಉಮಾ ರಮಣನ್‌ ಹಾಡಿದ್ದಾರೆ. 'ತೂರಲ್ ನಿನ್ನ ಪೊಚ್ಚು' ಸಿನಿಮಾದ 'ಭೂಪಾಲಂ ಇಸೈಕ್ಕುಮ್', 'ಆನಂದ ರಾಗಂ' 'ಪನ್ನರ್ ಪುಷ್ಪಂಗಳ' 'ಕಣ್ಮಣಿ ನೀ ವರ' 'ತೆಂಡ್ರಾಲೆ ಎನ್ನೈ ತೋಡು', 'ಒರು ಕೈದಿಯಿನ್ ದೈರ್ ಕೈದಿ'ಯ 'ಪೊನ್ ಮಾನೇ'. , 'ಅರಂಗೇತ್ರ ವೇಲೈ' ಚಿತ್ರದ 'ಆಗಾಯ ವೆನ್ನಿಲವೆ' ಮತ್ತು 'ಮಹಾನದಿ' ಸಿನಿಮಾದ 'ಶ್ರೀ ರಂಗ ರಂಗನಾಥನಿನ್' ಹಾಡು ಸೇರಿದಂತೆ ಹಲವು ಹಾಡುಗಳು ಹೆಚ್ಚು ಜನಪ್ರಿಯತೆ ಪಡೆದಿವೆ.

ಲವ್ ಬಗ್ಗೆ ಅದಿನ್ನೆಂಥಾ ಸ್ಟಡಿ ಮಾಡಿದಾರೋ ಏನೋ, ಮೃಣಾಲ್ ಠಾಕೂರ್ ಮಾತಿಗೆ ನೆಟ್ಟಿಗರು ಫಿದಾ!

ಉಮಾ ರಮಣನ್ ಅವರು ಕೊನೆಯದಾಗಿ ವಿಜಯ್ 'ತಿರುಪಾಚಿ (Thirupaachi)' ಸಿನಿಮಾಕ್ಕೆ 'ಕಣ್ಣುಂ ಕಣ್ಣುಮ್ತನ್ ಕಾಲಂದಾಚು' ಹಾಡನ್ನು ಹಾಡಿದ್ದರು. ಉಮಾ ರಮಣನ್‌ ಸಾವಿನಿಂದ ಗಾಯನ ಕ್ಷೇತ್ರಕ್ಕೆ, ಅದರಲ್ಲೂ ಮುಖ್ಯವಾಗಿ ತಮಿಳು ಸಿನಿಮಾರಂಗಕ್ಕೆ ಅಪಾರ ನಷ್ಟವಾಗಿದೆ. 

ಭಾರೀ ಟ್ರೆಂಡಿಂಗ್‌ನಲ್ಲಿ 'ನಿರ್ಗತಿಕ' ಪದ.., ಬಿಸಿಬಿಸಿ ಚರ್ಚೆ; ಫುಲ್ ಟ್ರೋಲ್ ಆಗುತ್ತಿರುವ ಪ್ರಕಾಶ್ ರಾಜ್!

click me!