UPSC: 10 ಸಲ ರೇಪ್ ಆದ್ರೂ ಸಾಕ್ಷಿ ಇಲ್ಲ, ಆರೋಪಿಯನ್ನು ಗುಂಡಿಟ್ಟು ಕೊಲ್ತೀರಾ? ಹೀಗಿತ್ತು ಉತ್ತರ!

First Published Aug 12, 2021, 5:00 PM IST

ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳು ಸಾಮಾನ್ಯವಾಗಿ ಭಾರೀ ಚರ್ಚೆ ಹುಟ್ಟಿಸುತ್ತವೆ. ಇಲ್ಲಿ ಊಹಿಸಲೂ ಸಾಧ್ಯವಿಲ್ಲದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೌದು ಯುಪಿಎಸ್‌ಸಿಯ ಪ್ರೀ ಹಾಗೂ ಮೇನ್ಸ್‌ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳಷ್ಟೇ ಸಂದರ್ಶನಕ್ಕೆ ಹಾಜರಾಗಲು ಅವಕಾಶ ಪಡೆಯುತ್ತಾರೆ. ನಿಮಗೂ ಐಎಎಸ್ ಆಗುವ ಕನಸಿದ್ದರೆ, ಇದಕ್ಕೆ ಬಹಳಷ್ಟು ತಯಾರಿ ನಡೆಸುವ ಅಗತ್ಯವಿದೆ. ಅದರಲ್ಲೂ ಸಂದರ್ಶನಕ್ಕಾಗಿ ಹೆಚ್ಚಿನ ಸಿದ್ಧತೆಯ ಅಗತ್ಯವಿರುತ್ತದೆ. ಹೀಗಿರುವಾಗ ಅಣಕು ಪರೀಕ್ಷೆ ಮೂಲಕ ಕೆಲ ಪ್ರಶ್ನೆಗಳನ್ನು ನಾವು ಕೇಳುತ್ತೇವೆ, ಇದು ನಿಮಗೆ ಪರೀಕ್ಷೆ ಹೇಗಿರುತ್ತದೆ? ಯಾವ ರೀತಿಯ ಸಿದ್ಧತೆ ನಡೆಸಬೇಕೆಂಬ ಐಡಿಯಾ ಕೊಡುತ್ತದೆ.

ಪ್ರಶ್ನೆ- ಉದ್ಯೋಗಿಯೊಬ್ಬರು ನಿಮ್ಮ ಅಧಿಕಾರಿಯೊಬ್ಬರ ವಿರುದ್ಧ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ದಾಖಲಿಸಿದರೆ ನೀವೇನು ಮಾಡುತ್ತೀರಿ?


ಉತ್ತರ- ಮೊಟ್ಟ ಮೊದಲು ಪಗ್ರಕರಣ ದಾಖಲಿಸಲು ಹೇಳುತ್ತೇನೆ. ನಂತರ ನಾನು ಈ ದೂರನ್ನು ಸಮಿತಿಗೆ ತಲುಪಿಸುತ್ತೇನೆ. ನಾನು ಈ ಪ್ರಕರಣವನ್ನು ಸಂಪೂರ್ಣ ನಿಷ್ಪಕ್ಷಪಾತದಿಂದ ತನಿಖೆ ಮಾಡುತ್ತೇನೆ, ಇದರಲ್ಲಿ ಹಿರಿಯ ಅಧಿಕಾರಿಗಳು ತಪ್ಪಿತಸ್ಥರೆಂದು ಕಂಡುಬಂದಲ್ಲಿ, ನಾನು ಕ್ರಮ ಕೈಗೊಳ್ಳುತ್ತೇನೆ.

ಪ್ರಶ್ನೆ- DMಗೆ ಇರುವ ನ್ಯಾಯಾಂಗ ಶಕ್ತಿ ಯಾವುದು?

ಉತ್ತರ- ಸರ್, ಜಿಲ್ಲೆಯಲ್ಲಿ ಸೆಕ್ಷನ್ 144 ಅನ್ನು ಜಾರಿಗೊಳಿಸುವ ಹಕ್ಕಿದೆ.
 

ಪ್ರಶ್ನೆ- ಐಪಿಎಲ್‌ನಲ್ಲಿ ನಡೆಯುವ ಬೆಟ್ಟಿಂಗ್ ಅಂದರೆ ಏನು?

ಉತ್ತರ- ಪಂದ್ಯ ನಡೆಯುವ ಮೊದಲು ಇದೇ ತಂಡ ಗೆಲ್ಲುತ್ತದೆ ಎಂದು ಆಯಾ ತಂಡಗಳ ಮೇಲೆ ಹಣ ಹೂಡಲಾಗುತ್ತದೆ.

ಪ್ರಶ್ನೆ- ಕುಂಭದಲ್ಲಿ ನಡೆಯುವ ಪವಿತ್ರ ಸ್ನಾನ(ಶಾಹಿ ಸ್ನಾನ)ದ ಅರ್ಥವೇನು, ಇದನ್ನು ಮೊಘಲರು ಆರಂಭಿಸಿದರೇ?

ಉತ್ತರ- ಇದನ್ನು ಪವಿತ್ರ ಎಂದು ಏಕೆ ಕರೆಯುತ್ತಾರೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಆದರೆ ಪವಿತ್ರ ಸ್ನಾನ ಎಂದರೆ ರಾಜರ ಶೈಲಿಯಲ್ಲಿ ಸ್ನಾನ ಮಾಡಲು ಹೋಗುವುದು.

ಪ್ರಶ್ನೆ- ಒಂದು ವೇಳೆ ನೀವು ಪ್ರೇಯಸಿ ಹಾಗೂ ಪೋಷಕರ ನಡುವೆ ಒಬ್ಬರನ್ನು ಆಯ್ಕೆ ಮಾಡಬೇಕಾದರೆ, ನೀವು ಯಾರನ್ನು ಆರಿಸುತ್ತೀರಿ?

ಉತ್ತರ- ನಾನು ಇಬ್ಬರ ನಡುವೆ ಸಮತೋಲನ ಸಾಧಿಸಲು ಪ್ರಯತ್ನಿಸುತ್ತೇನೆ ಆದರೆ ಅದು ಆಗದಿದ್ದರೆ ನಾನು ನನ್ನ ಹೆತ್ತವರನ್ನು ಆರಿಸುತ್ತೇನೆ.
 

child marriage

ಪ್ರಶ್ನೆ- ನಿಮ್ಮ ಜಿಲ್ಲೆಯಲ್ಲಿ 300 ಬಾಲ್ಯವಿವಾಹಗಳು ನಡೆಯುತ್ತಿವೆ. ಆದರೆ ನೀವಿದನ್ನು ನಿಲ್ಲಿಸಬಾರದೆಂದು ಸಿಎಂ ಒತ್ತಡವಿರುತ್ತದೆ, ಆಗ ನೀವವೇನು ಮಾಡುತ್ತೀರಿ?

ಉತ್ತರ- ಎಷ್ಟೇ ಒತ್ತಡವಿದ್ದರೂ ನಾನು ನನ್ನ ಅಧಿಕಾರದಿಂದ ನನ್ನ ಕರ್ತವ್ಯ ನಿಭಾಯಿಸುತ್ತೇನೆ. ಇಂತಹ ಪರಿಸ್ಥಿತಿಯಲ್ಲಿ, ನಾನು ಮೊದಲು ಎಲ್ಲ ಸಮುದಾಯಗಳ ಧಾರ್ಮಿಕ ಮುಖಂಡರೊಂದಿಗೆ ಮಾತನಾಡುತ್ತೇನೆ ಮತ್ತು ಅವರ ಮೂಲಕ ನಾನು ಬಾಲ್ಯ ವಿವಾಹ ತಪ್ಪು ಎಂದು ಅರ್ಥೈಸುತ್ತೇನೆ. ನಾನು ಪ್ರತಿ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಹೇಳುತ್ತೇನೆ.

rape

ಪ್ರಶ್ನೆ-  ದುಷ್ಕರ್ಮಿಯೊಬ್ಬ 10 ಬಾರಿ ಅತ್ಯಾಚಾರ ಮಾಡಿರುತ್ತಾನೆ. ಆದರೆ ಸಾಕ್ಷ್ಯಾಧಾರವಿಲ್ಲದೆ ಬದುಕಿರುತ್ತಾನೆ, ನೀವು ಆತನನ್ನು ಗುಂಡಿಕ್ಕಿ ಕೊಲ್ಲುತ್ತೀರಾ?

ಉತ್ತರ- ಅಂತಹ ಸಮಸ್ಯೆಗಳಲ್ಲಿ ಭಾವುಕರಾಗುವ ಅಂಶವಿರುತ್ತದೆ. ಆದರೆ ಅದೇನೇ ಆದರೂ ನಾನು ಆತನನ್ನು ಶೂಟ್ ಮಾಡಲು ಸಾಧ್ಯವಿಲ್ಲ ಏಕೆಂದರೆ ನ್ಯಾಯಾಲಯವು ಅವನನ್ನು ಶಿಕ್ಷಿಸುವವರೆಗೂ ನಾನು ಆತನ ವಿರುದ್ಧ ಸಾಕ್ಷ್ಯವಿಲ್ಲದೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ.

ಪ್ರಶ್ನೆ- ಹೊರಗೆ ಉಚಿತವಾಗಿ ಸಿಗುವ ಆದರೆ ಆಸ್ಪತ್ರೆಯಲ್ಲಿ ಹಣ ಕೊಟ್ಟು ಪಡೆಯಬೇಕಾದ ಸೌಲಭ್ಯವೇನು?

ಉತ್ತರ: ಆಮ್ಲಜನಕ

click me!