ಯೂನಿಯನ್ ಬ್ಯಾಂಕ್‌ನಲ್ಲಿ 85 ಸಾವಿರ ಸಂಬಳದ 1500 ಹುದ್ದೆಗಳಿಗೆ ಅರ್ಜಿ ಆಹ್ವಾನ; ಕನ್ನಡ ಬರುತ್ತಾ ನೀವು ಅಪ್ಲೈ ಮಾಡಿ

By Mahmad Rafik  |  First Published Nov 9, 2024, 12:43 PM IST

ಯೂನಿಯನ್ ಬ್ಯಾಂಕ್ 1,500 ಲೋಕಲ್ ಬ್ಯಾಂಕ್ ಆಫಿಸರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಸಂಬಳ, ಅರ್ಜಿ ಶುಲ್ಕ, ಪ್ರಮುಖ ದಿನಾಂಕದ ಮಾಹಿತಿ ಈ ಲೇಖನದಲ್ಲಿದೆ.


ಮುಂಬೈ: ಯೂನಿಯನ್ ಬ್ಯಾಂಕ್‌ನಲ್ಲಿ 1,500 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವವರು ತಮ್ಮ ಅರ್ಜಿಯನ್ನು ಮುಂಬರುವ 13ನೇ ತಾರೀಖಿನೊಳಗೆ ಸಲ್ಲಿಕೆ ಮಾಡಬೇಕು. ಅಕ್ಟೋಬರ್ 24ರಂದು ಅಧಿಸೂಚನೆ ಪ್ರಕಟನೆಯಾಗಿದೆ. ಲೋಕಲ್ ಬ್ಯಾಂಕ್ ಆಫಿಸರ್‌ ಹುದ್ದೆಗೆ (Local Bank Officer) (LBO) (JMGS -I) ಅರ್ಜಿ ಆಹ್ವಾನಿಸಲಾಗಿದೆ. 24ನೇ ಅಕ್ಟೋಬರ್ 2024ರಿಂದಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಯಾವುದೇ ಪದವಿ ಪಡೆದವರು ಅರ್ಜಿ ಸಲ್ಲಿಕೆಗೆ ಅರ್ಹರಾಗಿರುತ್ತಾರೆ. 

ಅಭ್ಯರ್ಥಿಗಳು 20 ರಿಂದ 30 ವರ್ಷದೊಳಗಿರಬೇಕು. ಸರ್ಕಾರಿ ನಿಯಮಗಳ ಪ್ರಕಾರ, ಹಿಂದುಳಿದ ವರ್ಗದವರಿಗೆ 3 ವರ್ಷ ಹಾಗೂ ಅಂಗವಿಕಲರಿಗೆ 10 ವರ್ಷ ವಿನಾಯಿತಿ ನೀಡಲಾಗುವುದು. ಯಾವ ರಾಜ್ಯಕ್ಕೆ ಸಲ್ಲಿಸುತ್ತಾರೋ ಅಲ್ಲಿಯ ಪ್ರಾದೇಶಿಕ ಭಾಷೆಯನ್ನು ತಿಳಿದವರಾಗಿರಬೇಕು. 

Tap to resize

Latest Videos

undefined

ಅರ್ಜಿ ಸಲ್ಲಿಕೆ ಶುಲ್ಕ 
General/ EWS/OBC ಅಭ್ಯರ್ಥಿಗಳಿಗೆ 850 ರೂಪಾಯಿ ಜೊತೆಗೆ ಜಿಎಸ್‌ಟಿ 
SC/ST/PwBD ಅಭ್ಯರ್ಥಿಗಳಿಗೆ 175 ರೂಪಾಯಿ ಜೊತೆಗೆ ಜಿಎಸ್‌ಟಿ
ಅಭ್ಯರ್ಥಿಗಳು ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್/ಇಂಟರ್‌ನೆಟ್ ಬ್ಯಾಂಕಿಂಗ್/ಎಂಪಿಎಸ್/ ಕ್ಯಾಶ್ ಕಾರ್ಡ್/ಮೊಬೈಲ್ ವ್ಯಾಲೆಟ್/ಯುಪಿಐ ಮೂಲಕ ಶುಲ್ಕ ಪಾವತಿಸಬೇಕು.

ವಯೋಮಿತಿ
ಕನಿಷ್ಠ: 20 ವರ್ಷ
ಗರಿಷ್ಠ: 30 ವರ್ಷ 

ಸಂಬಳ
JMGS -I ಸ್ಕೇಲ್ ಹುದ್ದೆ ಇದಾಗಿದ್ದು, 48480-2000/7-62480-2340/2-67160-2680/7-85920 ರೂಪಾಯಿ ಆಗಿದೆ.

ಇದನ್ನೂ ಓದಿ:ಬ್ಯಾಂಕಿಂಗ್ ಉದ್ಯೋಗ ಹುಡುಕುತ್ತಿರುವವರಿಗೆ ಸಿಹಿ ಸುದ್ದಿ, ಐಡಿಬಿಐ ಬ್ಯಾಂಕ್‌ನಲ್ಲಿ 1000 ಉದ್ಯೋಗಗಳು!

ಭಾರತ ಸರ್ಕಾರ ಅಥವಾ ಅದರ ಮೂಲಕ ಗುರುತಿಸಲ್ಪಟ್ಟ ನಿಯಂತ್ರಣ ಸಂಸ್ಥೆಗಳಿಂದ ಯಾವುದಾದರೂ ಒಂದು ಪೂರ್ಣಾವಧಿ/ರೆಗ್ಯೂಲರ್ ಬ್ಯಾಚುಲರ್ ಪದವಿ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಪಡೆದುಕೊಂಡಿರಬೇಕು. ಅಭ್ಯರ್ಥಿಯು ಮಾನ್ಯವಾದ ಮಾರ್ಕ್-ಶೀಟ್ ಮತ್ತು  ಪದವೀಧರ ಎಂಬ ಪದವಿ ಪ್ರಮಾಣಪತ್ರ ಹೊಂದಿರಬೇಕು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಅಂಕಗಳನ್ನು ನಮೂದಿಸಬೇಕು.

ಯಾವ ರಾಜ್ಯದಲ್ಲಿ ಎಷ್ಟು ಹುದ್ದೆ?

ರಾಜ್ಯ ಹುದ್ದೆಯ ಸಂಖ್ಯೆ
ಆಂಧ್ರ ಪ್ರದೇಶ 200
ಗುಜರಾತ್  200
ಅಸ್ಸಾಂ 50
ಕರ್ನಾಟಕ 300
ಕೇರಳ 100
ಮಹಾರಾಷ್ಟ್ರ 50
ಓಡಿಶಾ 100
ತಮಿಳನಾಡು  200
ತೆಲಂಗಾಣ 200
ಪಶ್ಚಿಮ ಬಂಗಾಳ 100

ಅರ್ಜಿ ಸಲ್ಲಿಸುವ ಆಸಕ್ತರು ಈ ಲಿಂಕ್ ಮೂಲಕ https://ibpsonline.ibps.in/ubilbooct24/ ಮಾಡಬಹುದು.

ಇದನ್ನೂ ಓದಿ: ಪಿಎಸ್‌ಐ 2024ರ ಪರೀಕ್ಷೆ: 42,933 ಅಭ್ಯರ್ಥಿಗಳ ಅಂಕಪಟ್ಟಿ ಬಿಡುಗಡೆ ಮಾಡಿದ ಕೆಇಎ

click me!