ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ, ಸೇತುವೆ, ಸುರಂಗ ಮಾರ್ಗಗಳ ನಿರ್ವಹಣೆಗೆ ಟೋಲ್ ಹಣ ಬಳಸಲಾಗುತ್ತದೆ. ರಸ್ತೆ, ಹೈವೇಗಳ ರಿಪೇರಿಗೂ ಈ ಹಣವೇ ಮೂಲ ಆಧಾರ. ರಾಷ್ಟ್ರೀಯ ಹೆದ್ದಾರಿ ಕಾಯ್ದೆ ಪ್ರಕಾರ ಕೆಲವರು ಟೋಲ್ ಕಟ್ಟೋ ಅಗತ್ಯ ಇಲ್ಲ. ಯಾಕಂದ್ರೆ ಅವರು ಸಾಮಾನ್ಯ ಜನರಿಗಿಂತ ಮುಖ್ಯ ವ್ಯಕ್ತಿಗಳು. ಅವರ್ಯಾರು ಅಂತ ಈಗ ನೋಡೋಣ.
NHAI ಟೋಲ್ ವಸೂಲಿ ಬಗ್ಗೆ ಕೆಲವು ನಿಯಮ, ವಿನಾಯಿತಿಗಳನ್ನು ಹೊರಡಿಸಿದೆ. ವಾಹನದ ಪ್ರಕಾರ, ದೂರದ ಆಧಾರದ ಮೇಲೆ ಟೋಲ್ ಬದಲಾಗುತ್ತೆ. ಟ್ರಕ್, ಬಸ್‌ಗಳಿಗೆ ಕಾರುಗಳಿಗಿಂತ ದುಬಾರಿ. ಟೋಲ್ ಗೇಟ್‌ನ 20 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವವರಿಗೆ ಲೋಕಲ್ ಪಾಸ್ ಸಿಗುತ್ತೆ. ಇದನ್ನ ತಿಂಗಳಿಗೊಮ್ಮೆ ರೀಚಾರ್ಜ್ ಮಾಡಿಕೊಳ್ಳಬೇಕು. ಟೋಲ್ ಪ್ಲಾಜಾ ಹತ್ತಿರ ಇರೋರು ಆಗಾಗ ಅದನ್ನ ದಾಟಿ ಹೋಗ್ಬೇಕಾಗುತ್ತೆ. ಪ್ರತಿ ಸಲ ಟೋಲ್ ಕಟ್ಟೋದು ದುಬಾರಿ. ಅದಕ್ಕೆ ಮಾಸಿಕ ಪಾಸ್ ಕೊಡಲಾಗುತ್ತದೆ.
ವಾಹನ ಎಷ್ಟು ದೂರ ಹೋಗುತ್ತೋ ಅಷ್ಟಕ್ಕೆ ಮಾತ್ರ ಟೋಲ್ ಕಟ್ಟುವಂತೆ ಕೇಂದ್ರ ಸರ್ಕಾರ, NHAI ಪ್ಲಾನ್ ಮಾಡ್ತಿದೆ. ಜಿಪಿಎಸ್, ಇಂಟರ್ನೆಟ್ ಬಳಸಿ ಈ ವ್ಯವಸ್ಥೆ ರೂಪಿಸಲು ಪ್ರಯತ್ನ ನಡೀತಿದೆ. ಹೀಗಾದಲ್ಲಿ ಟೋಲ್ ವಸೂಲಿ ಪಾರದರ್ಶಕವಾಗಿರುತ್ತೆ. 2 ಕಿ.ಮೀ ಹೋದ್ರೆ ಅಷ್ಟಕ್ಕೆ ಮಾತ್ರ ಟೋಲ್ ಆಟೋಮ್ಯಾಟಿಕ್ ಆಗಿ ಕಟ್ ಆಗುತ್ತೆ. 200 ಕಿ.ಮೀ ಹೋದ್ರೆ ಅದಕ್ಕೆ ತಕ್ಕ ಟೋಲ್ ಕಟ್ ಆಗುತ್ತೆ. ಫಾಸ್ಟ್‌ಟ್ಯಾಗ್ ಬಂದ್ಮೇಲೆ ಟೋಲ್ ವಸೂಲಿ ಪಾರದರ್ಶಕವಾಗಿದೆ.
ಕೇಂದ್ರ ಸರ್ಕಾರದ ನಿಯಮದ ಪ್ರಕಾರ ಕೆಲವು ವಾಹನಗಳಿಗೆ ಟೋಲ್ ಇಲ್ಲ. ದ್ವಿಚಕ್ರ ವಾಹನ, ಆಂಬ್ಯುಲೆನ್ಸ್, ಅಗ್ನಿಶಾಮಕದಂತಹ ವಾಹನಗಳಿಗೆ ಟೋಲ್ ಇಲ್ಲ. ಸೇನಾ ವಾಹನ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ, ಸಂಸದರು, ಹೈಕೋರ್ಟ್ ನ್ಯಾಯಾಧೀಶರ ವಾಹನಗಳಿಗೆ ಟೋಲ್ ಇಲ್ಲ. ಪರಮವೀರ ಚಕ್ರ, ಅಶೋಕ ಚಕ್ರ ಪುರಸ್ಕೃತರು, ಸರ್ಕಾರಿ ಬಸ್‌ಗಳಿಗೂ ಟೋಲ್ ಇಲ್ಲ. ಸರ್ಕಾರವೇ ನಡೆಸುವ ಬಸ್ ಸಂಸ್ಥೆಗಳು ಅಂದರೆ, ಕೆಎಸ್‌ಆರ್‌ಟಿಸಿಯಂಥ ಬಸ್‌ಗಳಿಗೆ ಟೋಲ್ ಇರೋದಿಲ್ಲ.
ಪ್ರತಿ ತಿಂಗಳು 5500 ರೂಪಾಯಿ ಸಿಗುವ ಪೋಸ್ಟ್ ಆಫೀಸ್ ಯೋಜನೆಯಿದು!
24 ಗಂಟೆಯಲ್ಲಿ ಒಂದೇ ಟೋಲ್ ಪ್ಲಾಜಾನ ಎರಡು ಸಲ ದಾಟಿದ್ರೆ 1.5 ಪಟ್ಟು ಮಾತ್ರ ಟೋಲ್ ಕಟ್ಟಬೇಕು. ಎರಡಕ್ಕಿಂತ ಹೆಚ್ಚು ಸಲ ದಾಟಿದ್ರೆ ಮೂರನೇ ಎರಡರಷ್ಟು ಟೋಲ್ ಕಟ್ಟಿದ್ರೆ ಸಾಕು. ಹೈವೇಯಲ್ಲಿ ಸ್ವಂತ ವಾಹನದಲ್ಲಿ ಆಗಾಗ ಓಡಾಡೋರಿಗೆ ಮಾಸಿಕ ಪಾಸ್ ಇದೆ. ಅಗತ್ಯವಿದ್ರೆ ತೆಗೆದುಕೊಳ್ಳಿ. ನೀವು ಈ ಕೆಟಗರಿಯಲ್ಲಿದ್ರೆ ಫ್ರೀ ಟೋಲ್ ಸೌಲಭ್ಯ ಪಡ್ಕೊಳ್ಳಿ.
ಪಿಎಫ್ ಖಾತೆ ಇದ್ದರೆ ಸಿಗುತ್ತೆ 50 ಸಾವಿರ ಬೋನಸ್, ಆದರೆ ಷರತ್ತು ಅನ್ವಯ!